ಮದುವೆ ಎನ್ನುವುದು ಗಂಡು ಹೆಣ್ಣನ್ನು ಒಂದಾಗಿಸುತ್ತದೆ. ಅದೇ ಸಂಬಂಧ ಮತ್ತೊಬ್ಬರ ಜೊತೆಗೂ ನಮ್ಮ ನಂಟು ಬೆಳೆಸುತ್ತದೆ. ಅದೇ ಅತ್ತೆ ಸೊಸೆಯ ಸಂಬಂಧ. ಅದೊಂದು ಕಾಲವಿತ್ತು, ಆಗ ಸಿನಿಮಾದಲ್ಲಿ ಅತ್ತೆಯ ಪಾತ್ರ ನಿಭಾಯಿಸಲು ನಿರ್ದಯಿ ಇಮೇಜ್ ಹೊಂದಿರುವ ರಮಾದೇವಿ, ಬಡ್ಡಿ ಬಂಗಾರಮ್ಮರಂತಹ ವ್ಯಕ್ತಿಯನ್ನೇ ಆಯ್ಕೆ ಮಾಡಲಾಗುತ್ತಿತ್ತು. ಜೀವನವೇ ಆಗಿರಬಹುದು ಅಥವಾ ಪರದೆ ಎರಡರಲ್ಲೂ ಅತ್ತೆ ಸೊಸೆಯ ಸಂಬಂಧ ಕಹಿಯಿಂದ ತುಂಬಿರುತ್ತಿತ್ತು. ಆದರೆ ಅದೀಗ ಕಳೆದುಹೋದ ದಿನಗಳು. ಇಂದಿನ ದಿನಗಳಲ್ಲಿ ಸೊಸೆಯಂದಿರು ಸಾಕಷ್ಟು ಓದಿದವರಾಗಿದ್ದಾರೆ. ನೌಕರಿ ಕೂಡ ಮಾಡುತ್ತಿದ್ದಾರೆ, ಫ್ಯಾಷನ್ ಪ್ರಿಯರಾಗುತ್ತಿದ್ದಾರೆ. ಈ ಎಲ್ಲ ನಿಟ್ಟಿನಲ್ಲೂ ಅವರೀಗ ಸ್ಮಾರ್ಟ್‌ ಆಗುತ್ತಿದ್ದಾರೆ. ಅತ್ತೆಯರು ಕೂಡ ಹಿಂದೆ ಬಿದ್ದಿಲ್ಲ, ಇಂದಿನ ಅತ್ತೆಯರು ತಮ್ಮ ಹಳೆಯ ವ್ಯಕ್ತಿತ್ವವನ್ನು ಕಿತ್ತೆಸೆದಿದ್ದಾರೆ. ಏಕೆಂದರೆ ಮಗನ ಜೊತೆಗೆ ಜೀವನಪೂರ್ತಿ ಒಳ್ಳೆಯ ಸಂಬಂಧ ಕಾಯ್ದುಕೊಂಡು ಹೋಗಲು ಸೊಸೆಯ ಜೊತೆಗೂ ಒಳ್ಳೆಯವಳಾಗಿರುವುದು ಅತ್ಯವಶ್ಯ ಎನ್ನುವುದು ಆಕೆಗೆ ಗೊತ್ತಿದೆ.

ಪರಸ್ಪರರ ಸಂಬಂಧವನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರೇ ಸ್ಮಾರ್ಟ್‌ ಅತ್ತೆ ಸೊಸೆ. ಅತ್ತೆಯೊಂದಿಗಿನ ಕಿತ್ತಾಟ ತನ್ನ ಸಂಸಾರದಲ್ಲಿ ಕ್ಲೇಶವುಂಟು ಮಾಡುತ್ತದೆ ಎನ್ನುವುದು ಸೊಸೆಗೆ ಗೊತ್ತು. ಸೊಸೆಯ ಜೊತೆಗೆ ಚೆನ್ನಾಗಿ ಹೊಂದಿಕೊಂಡು ಹೋದರೆ ಇಡೀ ಕುಟುಂಬ ಖುಷಿಯಿಂದಿರುತ್ತದೆ. ಅದರಿಂದ ವೃದ್ಧಾಪ್ಯದಲ್ಲಿ ಆಸರೆ ಸಿಗುತ್ತದೆ ಎನ್ನುವುದು ಅತ್ತೆಗೂ ತಿಳಿದಿದೆ. ಇಬ್ಬರ ನಡುವಿನ ಸಂಬಂಧ ಮಾಧುರ್ಯದಿಂದ ಕೂಡಿದ್ದರೆ, ಸೊಸೆಯನ್ನು ಮಗಳಂತೆ ಕಂಡರೆ ಸೊಸೆಗೆ ಅದಕ್ಕಿಂತ ಖುಷಿ ಮತ್ತೊಂದಿರಲಾರದು. ಆದರೆ ಇದಕ್ಕಾಗಿ ತಕ್ಕಡಿಯ ಎರಡೂ ಪಟ್ಟಿಯಲ್ಲಿ `ಸ್ಮಾರ್ಟ್‌ ನೆಸ್‌' ಅನ್ನುವುದು ಇರಬೇಕು. ಈ ಅತ್ಯಮೂಲ್ಯ ಸಂಬಂಧದ ಮಹತ್ವವನ್ನು ಅರಿತು ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುವವರೇ ನಿಜವಾದ ಸ್ಮಾರ್ಟ್ ಅತ್ತೆ ಸೊಸೆಯಂದಿರಾಗಿದ್ದಾರೆ.

ಆ್ಯನಿ ಚಾಪ್‌ ಮೆನ್‌ ಹೆಸರಾಂತ ಸಂಗೀತಗಾರ್ತಿ ಹಾಗೂ ಭಾಷಣಗಾರ್ತಿ. ಅವರು ಅತ್ತೆ ಸೊಸೆಯ ಸಂಬಂಧ ಕುರಿತಂತೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ. `ದಿ ಮದರ್‌ ಇನ್‌ ಡ್ಯಾನ್ಸ್,' `ಓವರ್‌ ಕಮಿಂಗ್‌ ನೆಗೆಟಿವ್ ‌ಡ್ಯಾನ್ಸ್,' `10 ಲೇಸ್‌ ಟೂ ಪ್ರಿಪೇರ್ ಡಾಟರ್‌ ಫಾರ್‌ ಲೈಫ್‌' ಇವು ಅವರ ಶೀರ್ಷಿಕೆಗಳು. ಅವರು ಇಬ್ಬರ ನಡುವಿನ ಸಂಬಂಧ ಸುಧಾರಣೆಗೆ ಹಲವಾರು ನಿಯಮಗಳನ್ನು ಹೇಳಿಕೊಟ್ಟಿದ್ದಾರೆ. ಅತ್ತೆಯಾದವಳು ತನ್ನ ಸೊಸೆಯನ್ನು ಮಗಳಿಗೆ ಹೋಲಿಸಬಾರದು ಹಾಗೂ ಸೊಸೆ ತನ್ನ ಅತ್ತೆಯನ್ನು ಅಮ್ಮನಿಗೆ ಹೋಲಿಸಬಾರದು. ಪರಸ್ಪರರ ವ್ಯಕ್ತಿತ್ವವನ್ನು ಅರಿಯಲು ಇಬ್ಬರೂ ಪ್ರಯತ್ನಿಸಬೇಕು. ಒಂದು ವೇಳೆ ಒಬ್ಬರು ಹಠಮಾರಿ ಸ್ವಭಾವದವರಾಗಿದ್ದರೆ, ಅವರು ಅದನ್ನು ಬಿಟ್ಟು ನಮ್ರ ಸ್ವಭಾವ ಮೈಗೂಡಿಸಿಕೊಳ್ಳಲು ಪ್ರಯತ್ನಿಸಬೇಕು. ಹೊಸ ಸೊಸೆ ಹೊಸ ಅತ್ತೆ

ಸೊಸೆ ಆ ಮನೆಗೆ ಹೇಗೆ ಹೊಸಬಳಾಗಿರುತ್ತಾಳೊ, ಅದೇ ರೀತಿ ಅತ್ತೆಯಾದವಳಿಗೂ ತಾನು ಅತ್ತೆ ಆಗಿರುವುದು ಹೊಸ ಅನುಭವವಾಗಿರುತ್ತದೆ. ಇಬ್ಬರಿಗೂ ಹೊಸ ಸಂಬಂಧದ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿರುತ್ತದೆ. ಹೀಗಾಗಿ ಇಬ್ಬರಿಗೂ ಸಾಕಷ್ಟು ಸಮಯಾವಕಾಶ ದೊರಕಬೇಕು. ಅಂಗೈಯಲ್ಲಿ ಸಸಿ ಹುಟ್ಟುವುದಿಲ್ಲ. ಈ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಒಬ್ಬರು ಮತ್ತೊಬ್ಬರಿಗೆ ಸಾಕಷ್ಟು ಸಮಯ ಹಾಗೂ ಸ್ಪೇಸ್‌ ಕೊಡಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ