ರಾತ್ರಿ 10 ಗಂಟೆಯಾಗಿತ್ತು. ಮಾಯಾಳ ಮನೆಯ ಮುಂದೆ ಒಂದು ದೊಡ್ಡ ಕಾರು ಬಂದು ನಿಂತಿತು. ಸ್ಲೀವ್ ಲೆ‌ಸ್‌ ಟಾಪ್‌ ಹಾಗೂ ಜೀನ್ಸ್ ಧರಿಸಿದ್ದ ಮಾಯಾ ಮೆಟ್ಟಿಲುಗಳನ್ನು ಇಳಿಯುತ್ತ ಹೊರಗೆ ಬಂದಳು. ಅಷ್ಟರಲ್ಲಿ ಎದುರು ಮನೆಯ ಶರ್ಮಿಳಾ ಆಂಟಿ ಎದುರಿಗೆ ಬಂದರು. ಅವರು ಅಮ್ಮನ ಆಪ್ತ ಸ್ನೇಹಿತೆ. ಅವರು ತಮ್ಮ ಜವಾಬ್ದಾರಿ ಅರಿಯುವತ್ತ ಮಾಯಾಳನ್ನು ಕೇಳಿದರು, ``ಮಾಯಾ, ಇಷ್ಟೊತ್ತಿನಲ್ಲಿ ಎಲ್ಲಿಗೆ ಹೋಗ್ತಿದೀಯಮ್ಮ? ಜನ ಏನು ಮಾತನಾಡಬಹುದು ಅನ್ನುವುದು ನಿನಗೆ ಗೊತ್ತಾ?''

ಮಾಯಾ ನಗುತ್ತಲೇ ಅವರ ಕೈಯನ್ನು ತನ್ನ ಕೈಯಲ್ಲಿಟ್ಟುಕೊಂಡು, ``ಆಂಟಿ ನಾನು ಆಫೀಸ್‌ಗೆ ಹೋಗ್ತಿದೀನಿ. ನನ್ನ ಕನಸು ನನಸು ಮಾಡಿಕೊಳ್ಳಲು, ಪತ್ರಕರ್ತೆಯ ಜವಾಬ್ದಾರಿ ನಿಭಾಯಿಸಲು. ಜನ ಏನು ಹೇಳುತ್ತಾರೆ ಎಂಬ ಗೊಡವೆ ನನಗೆ ಬೇಕಿಲ್ಲ. ನನ್ನದೇ ಆದ ಆದ್ಯತೆಗಳಿವೆ, ನನ್ನದೇ ಆದ ಜೀವನವಿದೆ. ಅದನ್ನು ಜೀವಿಸುವ ಹಕ್ಕು ನನಗಿದೆ. ಇದಕ್ಕೂ ಜನರಿಗೂ ಏನು ಸಂಬಂಧ? ಬೇರೆಯವರು ಎಲ್ಲಿ ಏನು ಮಾಡುತ್ತಾರೆ ಎಂದು ನಾನೆಂದಾದರೂ ಕೇಳಿದ್ದೀನಾ?''

ಶರ್ಮಿಳಾ ಆಂಟಿ ಮಾಯಾಳಿಂದ ಈ ತೆರನಾದ ಉತ್ತರ ಅಪೇಕ್ಷಿಸಿರಲಿಲ್ಲ. ಅವರು ಸ್ವಲ್ಪ ಹೊತ್ತು ನಿಂತಲ್ಲಿಯೇ ನಿಂತಿದ್ದರು. ಮಾಯಾ ತನ್ನ ಜೀವನಕ್ಕೆ ಹೊಸ ಹುರುಪು ತುಂಬಲು ಮುಂದೆ ಸಾಗಿದಳು.

32 ವರ್ಷದ ಮಾಯಾ ಬೆಂಗಳೂರಿನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಳು. ಕೆಲಸದ ನಿಮಿತ್ತ ಅವಳು ರಾತ್ರಿ ಕೂಡ ಹೊರಗೆ ಹೋಗಬೇಕಾಗಿ ಬರುತ್ತಿತ್ತು. ಶರ್ಮಿಳಾ ಆಂಟಿ ಇತ್ತೀಚಿಗಷ್ಟೇ ಮಾಯಾ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗಿದ್ದರು.

ಮೇಲಿಂದ ಮೇಲೆ ಟೀಕೆ

ಸಾಮಾನ್ಯವಾಗಿ ಹಿರಿಯರು ಮಾಯಾಳಂತಹ ಹುಡುಗಿಯರಿಗೆ ಬಗೆಬಗೆಯ ಬುದ್ಧಿಮಾತು ಹೇಳುತ್ತಿರುತ್ತಾರೆ. ಉದಾಹರಣೆಗೆ, ``ಇಂತಹ ಬಟ್ಟೆ ಧರಿಸಿ ಹೋಗುವುದಾ? ಜನ ಏನು ಹೇಳಬಹುದು ಅನ್ನುವ ಕಲ್ಪನೆ ನಿನಗಿದೆಯಾ?'' ``ಅಷ್ಟೊಂದು ಹುಡುಗರ ನಡುವೆ ನೀನು ಏಕಾಂಗಿಯಾಗಿ ಹೇಗಿರ್ತೀಯಾ?'' ``ಕ್ಲಬ್‌ ನಲ್ಲಿ ಹುಡುಗರ ಜೊತೆ ಡ್ಯಾನ್ಸ್ ಮಾಡಲು ನಿನಗೆ ಸ್ವಲ್ಪ ಸಂಕೋಚ ಆಗುವುದಿಲ್ಲವೇ? ಜನ ಏನು ಅನ್ನಬಹುದು ಎಂದು ಕಿಂಚಿತ್ತೂ ಕಲ್ಪನೆ ಕೂಡ ನಿನಗಿಲ್ಲವೇ?'' ``ಇಷ್ಟು ಅಪರಾತ್ರಿಯಲ್ಲಿ ಮನೆಯಿಂದ ಹೊರಗೆ ಹೋಗ್ತಿದೀಯಾ? ತಲೆಯ ಮೇಲೆ ಸೆರಗನ್ನಾದರೂ ಹಾಕಿಕೊ, ಹೀಗೆಯೇ ಹೋದರೆ ಜನ ನಿನ್ನ ಬಗ್ಗೆ ಏನನ್ನಬಹುದು?'' ``ಹುಡುಗಿಯರು ಇಷ್ಟು ಜೋರು ಜೋರಾಗಿ ನಗುವುದು ಶೋಭಿಸುವಂತಹ ಸಂಗತಿಯಲ್ಲ.''

ಜನರ ಬಾಯಿಗೆ ಲಂಗುಲಗಾಮು ಇಲ್ಲ. ಹುಡುಗಿ ಏಕಾಂಗಿಯಾಗಿದ್ದರೂ ಮಾತನಾಡುತ್ತಾರೆ, ಲಿವ್ ಇನ್‌ನಲ್ಲಿ ಇದ್ದರೂ ಏನಾದರೂ ಹೇಳುತ್ತಾರೆ. ಮಗು ಆಗದಿದ್ದರೂ ಟೀಕಿಸುತ್ತಾರೆ. ಉದ್ಯೋಗಕ್ಕೆ ಹೋದರೂ ಮಾತನಾಡುತ್ತಾರೆ. ಹುಡುಗರ ಜೊತೆ ನಗುತ್ತಾ ಮಾತನಾಡಿದರೂ ಹಂಗಿಸುತ್ತಾರೆ. ರಾತ್ರಿ ಮನೆಯಿಂದ ಹೊರಗೆ ಹೋದರೆ ಏನಾದರೂ ಹೇಳುತ್ತಾರೆ.

ಸಮಾಜದ ಚಿಂತೆ ಏಕೆ?

ಜನರ ಮಾತುಗಳಿಗೆ ಚಿಂತಿಸಬೇಡಿ. ಏಕೆಂದರೆ ನಾವು ಪ್ರಾಣಿಗಳಲ್ಲ, ಮನುಷ್ಯರು. ನಾವು ನಮ್ಮದೇ ಆದ ವಿಶೇಷತೆಗಳೊಂದಿಗೆ ವಿಚಾರಗಳೊಂದಿಗೆ ಜನಿಸಿದ್ದೇವೆ. ನಾವು ಬೇರೊಬ್ಬರ ನಕಲು ಮಾಡುವುದಿಲ್ಲ. ಅದಕ್ಕಾಗಿ ನಾವು ಪ್ರತಿಯೊಬ್ಬರೂ ವಿಭಿನ್ನ ರೀತಿಯ ಕನಸು ಕಾಣುತ್ತೇವೆ. ಅವನ್ನು ಈಡೇರಿಸಿಕೊಳ್ಳುತ್ತ ನಾವು ಸದಾ ಹೆಜ್ಜೆ ಹಾಕುತ್ತಿರುತ್ತೇವೆ. ಅದರ ಹಕ್ಕು ಕೂಡ ನಮಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ