ಫ್ಲರ್ಟಿಂಗ್‌ ಬಗ್ಗೆ ಸಾಮಾನ್ಯವಾಗಿ ಪುರುಷರು ಹೆಸರು ಕೆಡಿಸಿಕೊಂಡಿರುತ್ತಾರೆ. ಹುಡುಗಿಯರು ಕಣ್ಣಿಗೆ ಬೀಳುತ್ತಿದ್ದಂತೆ ಕೆಲವು ಪರುಷರು ಅವರ ಕುರಿತಂತೆ ಕನಸು ಕಾಣುತ್ತಾರೆ. ಅವರನ್ನು ಒಲಿಸಿಕೊಳ್ಳಲು ಬಗೆಬಗೆಯ ಪ್ರಯತ್ನ ಮಾಡುತ್ತಾರೆ. ಆದರೆ ಅದು ಹಾಗಲ್ಲ. ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರು 5 ಬಗೆಯ ಎಂತಹ ಕೆಲವು ಸೆಕ್ಸಿ ಬಾಡಿ ಸಿಗ್ನಲ್ಸ್ ಕೊಡುತ್ತಾರೆಂದರೆ, ಅವಳು ತನ್ನನ್ನು ಇಷ್ಟಪಡುತ್ತಾಳೆ ಎಂಬ ಸಂಕೇತ ಪುರುಷರಿಗೆ ದೊರಕುತ್ತದೆ.

ಫ್ಲರ್ಟ್‌ ಮಾಡುವುದರಲ್ಲಿ ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರು ಮುಂದಿದ್ದಾರೆ ಎಂಬುದನ್ನು ವಿಜ್ಞಾನಿಗಳು ಸಂಶೋಧನೆಗಳಿಂದ ಕಂಡುಕೊಂಡಿದ್ದಾರೆ. ಒಬ್ಬ ಜೀವಶಾಸ್ತ್ರಜ್ಞ ಕೂಡ ತನ್ನ ಸಂಶೋಧನೆಯಿಂದ ಕಂಡುಕೊಂಡ ಸತ್ಯಾಂಶವೆಂದರೆ ಮಹಿಳೆಯರು ಪುರುಷರಿಗಿಂತ ಹೆಚ್ಚಿಗೆ ಫ್ಲರ್ಟ್‌ ಮಾಡುತ್ತಾರೆ.

ಹೆಲನ್‌ ಫಿಶರ್‌ ಹೆಸರಿನ ವಿಜ್ಞಾನಿ, `ಅನಾಟಮಿ ಲವ್' ನಲ್ಲಿ ಹೀಗೆ ಉಲ್ಲೇಖಿಸಿದ್ದಾರೆ. ಮಹಿಳೆ ತನ್ನ ಎಕ್ಸ್ ಪ್ರೆಶನ್‌ನಿಂದ ತಾನು ಪುರುಷನ ಬಗ್ಗೆ ಆಸಕ್ತನಾಗಿದ್ದೇನೆ ಅಥವಾ ಇಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಾಳೆ. ಅದನ್ನು ಒಬ್ಬ ಮಹಿಳೆಯ ನಗು ಹಾಗೂ ಕಣ್ಣುಗಳ ಸನ್ನೆಯಿಂದ ಪತ್ತೆ ಹಚ್ಚಬಹುದು. ಈ ಪರಿಪೂರ್ಣ ರಹಸ್ಯವನ್ನು ತಿಳಿದುಕೊಳ್ಳಲು ವಾಷಿಂಗ್ಟನ್‌ನ ಮಾನಶಾಸ್ತ್ರಜ್ಞ ಡೇವಿಡ್ ಗಿನ್ಸ್ ಹಾಗೂ ಸೆಕ್ಸಾಲಜಿಸ್ಟ್ ತಿಮೋಥಿ ಪರ್ಪರ್‌ ಹಲವು `ಬಾರ್‌' ಹಾಗೂ `ಕ್ಲಬ್‌'ಗಳಲ್ಲಿ ನೂರಾರು ಗಂಟೆಗಳ ಕಾಲ ಕುಳಿತು ಜೋಡಿಗಳ ಮೊದಲ ಭೇಟಿಯ ಸನ್ನಿವೇಶವನ್ನು ಕಂಡುಕೊಂಡರು.

ಈ ಸಂಶೋಧನೆಯ ಮೂಲಕ ಹೊರಬಂದ ಪರಿಣಾಮ ಸಾಕಷ್ಟು ಅಚ್ಚರಿ ಹುಟ್ಟಿಸುವಂತಿತ್ತು. ಏಕೆಂದರೆ ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಮಹಿಳೆಯರೇ ಮೊದಲು ಪ್ರೀತಿಯ ಪ್ರಸ್ತಾಪ ಮಾಡಿದ್ದರು. ಹೆಲನ್‌ ಫಿಶರ್‌ 2010ರಲ್ಲಿ 25,000 ಹುಡುಗ-ಹುಡುಗಿಯರ ಬಗ್ಗೆ ಸಿಂಗಲ್ ಆಗಿ ಅಧ್ಯಯನ ಮಾಡಿದರು. ಈ ಅಧ್ಯಯನದಿಂದ ಎಲ್ಲ ವಯಸ್ಸಿನ, ವರ್ಣದ ಮಹಿಳೆಯರು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುತ್ತಾರೆ ಎಂಬುದು ಖಚಿತಗೊಂಡಿದೆ.

ಆ ಬಳಿಕ 2012ರಲ್ಲಿ ಸುಮಾರು 50,000 ಪುರುಷರು ತಮಗೆ ಮಹಿಳೆಯರಿಂದ ಹೊರಗೆ ಭೇಟಿಯಾಗಲು ಆಹ್ವಾನ ಕೊಟ್ಟಿದ್ದರು. ಶೇ.95 ರಷ್ಟು ಪುರುಷರು ಈ ಬಗ್ಗೆ ಖುಷಿ ವ್ಯಕ್ತಪಡಿಸುತ್ತಾರೆ. ಮಹಿಳೆ ಹಾಗೂ ಪುರುಷರು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಇದರಲ್ಲಿ ಒಬ್ಬರು `ಹಿಂಟ್‌' ಮಿಸ್‌ ಮಾಡಿಕೊಂಡರೆ ಇಡೀ ಆಟವೇ ಕೊನೆಗೊಂಡುಬಿಡುತ್ತದೆ.

ಫ್ಲರ್ಟಿಂಗ್‌ನ ಸಂಕೇತಗಳು

ಕೆಲವು ಮಹಿಳೆಯರು ಫ್ಲರ್ಟ್‌ ಮಾಡಲು ಬಳಸುವ ಸಂಕೇತಗಳು ಹೇಗಿರುತ್ತವೆಂದರೆ, ಅವು ಪುರುಷರಿಗೆ ಸರಿಯಾಗಿ ಅರ್ಥವಾಗುತ್ತದೆ.

ಯಾವುದೇ ಒಬ್ಬ ಮಹಿಳೆ ಮಾತುಕತೆಯ ಸಂದರ್ಭದಲ್ಲಿ ಪುರುಷನಿಗೆ ತೀರಾ ನಿಕಟ ಬರುವ ಪ್ರಯತ್ನ ಮಾಡಿದಳೆಂದರೆ, ಆಕೆ ಆ ಪುರುಷನನ್ನು ಇಷ್ಟಪಡುತ್ತಾಳೆಂದು ಅರ್ಥ.

ಅಂದಹಾಗೆ ಮಹಿಳೆಯರು ಪುರುಷರಿಂದ ಅಂತರ ಕಾಪಾಡಿಕೊಳ್ಳಲು ಪ್ರಯತ್ನ ಪಡುತ್ತಾರೆ. ಆದರೆ ಫ್ಲರ್ಟ್‌ ಸಂದರ್ಭದಲ್ಲಿ ಅವರು ನಿಮಗೆ ಅತ್ಯಂತ ನಿಕಟವಾಗಿರಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಅವರು ನಿಮ್ಮಿಂದ `ಸಾರಿ' ಕೇಳುತ್ತಾರೆ. ಆ ನಿಕಟತೆಯಿಂದಲೇ ನಿಮಗೆ ಅದು ಫ್ಲರ್ಟ್‌ ಎಂದು ಅರ್ಥವಾಗುತ್ತದೆ.

ಯಾವುದೇ ಒಬ್ಬ ಮಹಿಳೆ ಮೇಲಿಂದ ಮೇಲೆ ತನ್ನ ಕೂದಲನ್ನು ತನ್ನ ಕಿವಿಗಳ ಹಿಂದೆ ಒಯ್ಯುತ್ತಾಳೆ ಹಾಗೂ ತನ್ನ ಕೈ ಬೆರಳುಗಳನ್ನು ತಿರುಗಿಸುತ್ತಾಳೆಂದರೆ, ಅದರ ನೇರ ಅರ್ಥ ಆಕೆ ಪುರುಷನ ಕಡೆ ಆಕರ್ಷಿತಳಾಗುತ್ತಿದ್ದಾಳೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ