ಪೂಜಾ ಬ್ಯಾನರ್ಜಿ ಬಾಲಿವುಡ್‌ ನಲ್ಲಿ ಮಾತ್ರವಲ್ಲದೆ, ಟಿವಿಯ ಶೈನಿಂಗ್‌ ಸ್ಟಾರ್‌ ಕೂಡ. ರಾಷ್ಟ್ರೀಯ ಮಟ್ಟದ ಈಜು ಪಟು ಎನಿಸಿರುವ ಈಕೆಯದು ಬಹುಮುಖ ಪ್ರತಿಭೆ. ಎಂ ಟಿವಿಯ `ರೋಡೀಸ್‌ ಸೀಸನ್‌’ (ಬಿಗ್‌ ಬಾಸ್‌ ತರಹ ಗ್ಲಾಮರಸ್‌) ನಲ್ಲಿ ಈಕೆ ಫೈನಲಿಸ್ಟ್ ಆಗಿದ್ದಳು. `ಸ್ವಿಮ್ ಟೀಮ್, ನಾಗುರ್ಜುನ ಏಕ್‌ ಯೋದ್ಧಾ, ಚಂದ್ರನಂದಿನಿ, ಚಂದ್ರಕಾಂತಾ, ದಿಲ್ ‌ಹೀ ತೋ ಹೈ’ ಮುಂತಾದ ಧಾರಾವಾಹಿಗಳಲ್ಲಿ ಮಿಂಚಿದ್ದಾಳೆ.

`ಕಸೌಟಿ ಝಿಂದಗಿ ಕೀ’ ಧಾರಾವಾಹಿಯಲ್ಲಿ ವಿಶಿಷ್ಟ ಗ್ಲಾಮರಸ್‌ ಪಾತ್ರ ಇವಳದು.ಆಡಲ್ಟ್ ಬಾಲಾಜಿ ವೆಬ್‌ ಸೀರೀಸ್‌ನ `ಕಹನೆ ಕೋ ಹಂ ಸಫರ್‌ ಹೈ ಸೀಸನ್‌-2’ನಲ್ಲಿ ನಟಿಸುತ್ತಿದ್ದಾಳೆ. ಇತ್ತೀಚೆಗೆ ಶೂಟಿಂಗ್‌ ಮಧ್ಯೆ ಬಿಡುವು ಮಾಡಿಕೊಂಡು ಅವಳು ಗೃಹಶೋಭಾ ಜೊತೆ ಹರಟಿದ್ದು ಹೀಗೆ.

ಬನ್ನಿ, ಅವಳು ತನ್ನ ಫಿಟ್‌ ನೆಸ್‌ ಕುರಿತು ಏನು ಹೇಳಿದ್ದಾಳೆ ಮತ್ತು ಅಭಿಮಾನಿಗಳಿಗೆ ಏನು ತಿಳಿಸಬಯಸುತ್ತಾಳೆ ಎಂದು ವಿವರವಾಗಿ ನೋಡೋಣ :

ನಿಮ್ಮನ್ನು ಮೊದಲು ಗಮನಿಸಿ

pooja-banerjeehd-wallpapers-desktop-background-android-iphone-1080p-4k-fjrpf
ಹೆಂಗಸರಾದ ನಮಗೆ ಮನೆ, ಪರಿವಾರದ ಮಧ್ಯೆ ನಮ್ಮನ್ನು ನಾವು ಗಮನಿಸಿಕೊಳ್ಳಲು ಸಮಯವೇ ಇರುವುದಿಲ್ಲ. ಹೀಗಾಗಿ ನಮ್ಮನ್ನು ನಾವು ಬಹಳ ನಿರ್ಲಕ್ಷಿಸುತ್ತೇವೆ, ಇದು ತಪ್ಪು. ಹೀಗೆ ಮಾಡುವ ಬದಲು 24 ಗಂಟೆಗಳಲ್ಲಿ ನಮಗಾಗಿ 1 ಗಂಟೆ ಕಾಲ ಮೀಸಲಿಟ್ಟು ಫಿಟ್ನೆಸ್‌ ಕಡೆ ಗಮನಹರಿಸಲೇಬೇಕು. ಇದು ನಮ್ಮ ದೈಹಿಕ ಹಾಗೂ ಮಾನಸಿಕ ಶಾಂತಿಗೆ ಅತ್ಯವಶ್ಯಕ. ನಾನು ನನ್ನನ್ನು ಪ್ರೀತಿಸುವುದರಿಂದ ಕನಿಷ್ಠ 1 ಗಂಟೆ ನನಗಾಗಿ ಮೀಸಲಿಡುತ್ತೇನೆ, ದಿನವಿಡೀ ಎಷ್ಟೇ ಬಿಝಿ ಇದ್ದರೂ ಇದನ್ನು ತಪ್ಪಿಸುವುದಿಲ್ಲ.

ನಮಗಾಗಿ ನಾವು ಫಿಟ್ನೆಸ್‌ ಕಾಯ್ದುಕೊಂಡು ಹೋಗಲೇಬೇಕು. ಆಗ ಮಾತ್ರ ಕುಟುಂಬದ ಇನ್ನಿತರ ಸದಸ್ಯರ ಆರೋಗ್ಯದ ಬಗ್ಗೆ ಚಿಂತಿಸಲು ಸಾಧ್ಯ. ಅವರಿಗೆ ಸಹಾಯ ಮಾಡಲು ಸಾಧ್ಯ. ನಾವು ಸದಾ ಫಿಟ್‌ ಆಗಿರಬೇಕೆಂಬ ಜಾಗೃತಿ ನಮ್ಮಲ್ಲಿರಬೇಕು.

ನಮಗಾಗಿ ನಾವು 1 ಗಂಟೆ ಇರಿಸಿಕೊಂಡ ಮೇಲೆ ಅದು ಫಲಪ್ರದ ಆಗುವಂತೆ ವರ್ಕ್‌ ಔಟ್‌ ಮಾಡಬೇಕು, ಫಿಟ್ನೆಸ್ ಕಾಯ್ದುಕೊಳ್ಳಬೇಕು. ನಮಗೆ ವಿಶೇಷ ಹಾಬಿ ಇದ್ದರೆ, ಅದನ್ನು ಈ ಟೈಮಿನಲ್ಲಿ ಪೂರೈಸಿಕೊಳ್ಳಬಹುದು. ಸ್ವಿಮ್ಮಿಂಗ್‌, ಡ್ಯಾನ್ಸಿಂಗ್‌, ಪೇಂಟಿಂಗ್‌, ಸಿಂಗಿಂಗ್‌…… ಯಾರಿಗೆ ಯಾವುದು ಇಷ್ಟವೋ ಅದೇ! ಇದೇನು ಬೇಡವೆನಿಸಿದರೆ ಧಾರಾಳ ವ್ಯಾಯಾಮ, ಜಾಗಿಂಗ್ ಮಾಡಿ. ಒಟ್ಟಾರೆ ದೇಹದಿಂದ ಚೆನ್ನಾಗಿ ಬೆವರು ಹರಿಸಿ, ರಕ್ತ ಸಂಚಾರ ತೀವ್ರಗೊಳ್ಳುವಂತೆ ಮಾಡಿ ದೇಹವನ್ನು ಚುರುಕಾಗಿಸಿ. ಪ್ರತಿಯೊಬ್ಬ ಹೆಂಗಸರೂ ಇದನ್ನು ಮಾಡಲೇಬೇಕು. ಏಕೆಂದರೆ ತಮ್ಮ ಫಿಟ್ನೆಸ್‌ ಕುರಿತಾಗಿ ಹೆಂಗಸರು ತುಂಬಾ ನಿರ್ಲಕ್ಷ್ಯ ವಹಿಸುತ್ತಾರೆ. ನಗರಗಳಲ್ಲಿ ಈಗೀಗ ಎಲ್ಲೆಲ್ಲೂ ಜಾಗೃತಿ ಮೂಡುತ್ತಿದೆ.

ಆದರೆ ಸಣ್ಣ ತಾಲ್ಲೂಕು, ಹಳ್ಳಿಗಳಲ್ಲಿ ಈಗಲೂ ಹೆಂಗಸರು ಈ ವಿಷಯವನ್ನು ಸೂಕ್ಷ್ಮವಾಗಿ ತೆಗೆದುಕೊಳ್ಳುವುದೇ ಇಲ್ಲ. ಅವರು ವ್ಯಾಯಾಮ ಮಾಡುವುದು ಎಷ್ಟು ಮುಖ್ಯ ಎಂದು ಗಮನಹರಿಸುವುದೇ ಇಲ್ಲ. ನಾನಂತೂ ಪ್ರತಿದಿನ ವ್ಯಾಯಾಮದಿಂದಲೇ ದಿನ ಆರಂಭಿಸುತ್ತೇನೆ.

ಡಯೆಟ್‌ ಕಡೆ ಗಮನವಿರಲಿ

pooja-banerjeehd-wallpapers-desktop-background-android-iphone-1080p-4k-7tzfj

ಇಂದು ನಗರಗಳಲ್ಲಿ ಬಹುತೇಕ ಎಲ್ಲಾ ಹೆಗಸರೂ ಉದ್ಯೋಗಸ್ಥೆಯರೇ ಆಗಿರುತ್ತಾರೆ. ಹೀಗಾಗಿ ಅವರಿಗೆ ಹೊರಗಿನ ಊಟ ತಿಂಡಿಗೆ ಹೆಚ್ಚಿನ ಅವಕಾಶವಿದೆ. ಆದರೆ ಸಾಧ್ಯವಾದಷ್ಟೂ ಹೊರಗಿನ ಆಹಾರ ಸೇವಿಸುವುದನ್ನು ಕಡಿಮೆ ಮಾಡಿ. ಆದ್ದರಿಂದ ಪ್ರತಿ ದಿನ ಮನೆಯಿಂದಲೇ ಟಿಫನ್‌ ಬಾಕ್ಸ್ ತುಂಬಿಸಿಕೊಂಡು ಹೋಗಿ. ನಾನು ಹೊರಗಡೆ ಇರುವಾಗಲೂ ಸದಾ ಮನೆಯ ಆಹಾರವನ್ನೇ ಸೇವಿಸುತ್ತೇನೆ. ಪ್ರತಿ ದಿನ ನಾನೇ ಅಡುಗೆ ತಯಾರಿಸಿ ಎಲ್ಲರಿಗೂ ಟಿಫನ್‌ ಬಾಕ್ಸ್ ರೆಡಿ ಮಾಡುತ್ತೇನೆ.

ಹೀಗಾಗಿ ಮ್ಯಾಗ್ಸಿಮಮ್ ಮನೆಯ ಆಹಾರಕ್ಕೆ ಪ್ರಾಧಾನ್ಯತೆ ಕೊಡಿ. ಪ್ರತಿ ದಿನ ಅಡುಗೆಗೆ ಮನೆಯಲ್ಲೀ ಬೆಣ್ಣೆ ಕಾಯಿಸಿದ ತುಪ್ಪವನ್ನು ಮಾತ್ರ ಬಳಸುತ್ತೇನೆ. ಬೇರೆ ನಗರಕ್ಕೆ ಶೂಟಿಂಗ್‌ಗೆ ಹೋದಾಗ ಮಾತ್ರ ಅನಿವಾರ್ಯ ಅಲ್ಲಿನ ಊಟ ಮಾಡುತ್ತೇನೆ. ಆದರೆ ಮುಂಬೈನಲ್ಲೇ ಉಳಿದಾಗ ಮನೆಯಿಂದಲೇ ಕೊಂಡುಹೋದ ಊಟವನ್ನು ಸೆಟ್‌ ನಲ್ಲಿ ಸವಿಯುತ್ತೇನೆ.

ಆಹಾರದ ಕುರಿತಾಗಿ ನಾನು ಎಲ್ಲಕ್ಕೂ ಮುಖ್ಯವಾಗಿ, ಯಾವುದನ್ನು ಯಾವಾಗ ಎಷ್ಟು ಪ್ರಮಾಣದಲ್ಲಿ ಎಂಥದ್ದನ್ನು ಸವಿಯುತ್ತೇನೆ ಎಂಬುದು.

ಫಿಟ್ನೆಸ್‌ ಮೂಲ : ಸ್ವಿಮ್ಮಿಂಗ್‌ ನಟಿ ಆಗಿರುವುದರ ಜೊತೆ ನಾನು ರಾಷ್ಟ್ರೀಯ ಮಟ್ಟದ ಈಜು ಪಟು ಸಹ ಹೌದು. ಸ್ವಿಮ್ಮಿಂಗ್ ಕಾರಣದಿಂದಲೇ ನನ್ನ ದೇಹ ಬಹು ಫಿಟ್‌ ಆಗಿದೆ. ಬಾಲ್ಯದಿಂದಲೇ ಈಜು ನನಗೆ ಬಹಳ ನೆರವಾಗುತ್ತಿದೆ. ಈಜು ಕೊಳಕ್ಕೆ ಇಳಿದಾಕ್ಷಣ ನನ್ನ ಮೈಕೈ ನೋವು, ಸುಸ್ತು ಸಂಕಟ ಎಲ್ಲವೂ ದೂರವಾಗುತ್ತದೆ. ಅದರಿಂದ ನನ್ನನ್ನು ನಾನು ಬಹಳ ಫ್ರೆಶ್‌ ಎಂದು ಭಾವಿಸುತ್ತೇನೆ.

ಇದಕ್ಕಾಗಿಯೇ ನಾನು ಒಂದು ಶೋ ಮಾಡಿದ್ದೆ  `ಸ್ವಿಮ್ ಟೀಮ್.’ ಈ ಶೋ ಮಾಡುವಾಗ ನನಗ ಬಹಳ ಮಜಾ ಎನಿಸಿತ್ತು. ಅದರಲ್ಲಿ ನಾನು ಬಹಳಷ್ಟು ಈಜಾಡಿದ್ದೆ. ಶೂಟಿಂಗ್‌ ಜೊತೆ ನನ್ನ ವ್ಯಾಯಾಮ ಆಗಿಹೋಗುತ್ತಿತ್ತು. ಯಾರಿಗೆ ಈಜಿನಲ್ಲಿ ಆಸಕ್ತಿ ಇದೆಯೋ ಅವರು ಹೆಚ್ಚು ಹೆಚ್ಚಾಗಿ ಅದರಲ್ಲಿ ತೊಡಗಿಕೊಳ್ಳಬೇಕು. ಯಾರಿಗೆ ಕಲಿಯಲು ಆಸಕ್ತಿ ಇದೆಯೋ ಅದನ್ನು ಮಿಸ್ ಮಾಡಬೇಡಿ. ಏಕೆಂದರೆ ಜಾಗಿಂಗ್‌ ತರಹ ಸ್ವಿಮ್ಮಿಂಗ್‌ ಅತ್ಯುತ್ತಮ ವ್ಯಾಯಾಮ ಎನಿಸಿದೆ.

ಎಲ್ಲಿ ತಮ್ಮ ಸ್ಕಿನ್‌ ಟ್ಯಾನ್‌ ಆಗಿಬಿಡುತ್ತದೋ ಎಂದು ಅನೇಕ ಹುಡುಗಿಯರು ಈಜಿನಿಂದ ದೂರ ಉಳಿಯುತ್ತಾರೆ. ಈಜು ತಮ್ಮನ್ನು ಕಪ್ಪಾಗಿಸಿಬಿಡುತ್ತದೆ ಎಂದು ಇವರುಗಳು ಹೆದರುತ್ತಾರೆ. ಆದರೆ ಹಾಗೇನೂ ಹೆದರಬೇಕಾದ ಅಗತ್ಯವಿಲ್ಲ. ನೀವು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ಟ್ಯಾನಿಂಗ್‌ ಸಮಸ್ಯೆಯಿಂದ ಸುಲಭವಾಗಿ ಬಚಾವಾಗಬಹುದು. ನೀವು ಆದಷ್ಟೂ ಬೆಳಗಿನ ಹೊತ್ತು ಅಥವಾ ಸಂಜೆ 5 ಗಂಟೆ ನಂತರ ಸ್ವಿಮ್ಮಿಂಗ್‌ ಮಾಡಿದರೆ ಲೇಸು. ಸಾಧ್ಯವಾದಷ್ಟೂ ಸ್ವಿಮ್ಮಿಂಗ್‌ ಇನ್‌ ಡೋರ್‌ ಪೂಲಿನಲ್ಲೇ ಇರಲಿ. ಈಜಿಗೆ ಮೊದಲು ಮತ್ತು ನಂತರ ಅಗತ್ಯವಾಗಿ ಸನ್‌ ಸ್ಕ್ರೀನ್‌ ಲೋಶನ್‌ ಯಾ ಆ್ಯಲೋವೇರಾ ಜೆಲ್ ‌ಯಾ ಕ್ರೀಂ ಹಚ್ಚಿಕೊಳ್ಳಿ. ಇವೆಲ್ಲ ನಿಮ್ಮನ್ನು ಟ್ಯಾನಿಂಗ್‌ ನಿಂದ ರಕ್ಷಿಸುತ್ತದೆ.

ನಿದ್ದೆ ಪರಿಪೂರ್ಣ ಆಗಿರಲಿ

Pooja-Banerjee

ಉತ್ತಮ ನಿದ್ದೆ ಒಳ್ಳೆಯ ಆರೋಗ್ಯದ ಸಂಕೇತ. ಹೀಗಾಗಿ ಪ್ರತಿ ದಿನ 8 ಗಂಟೆ ಕಾಲ ನಿದ್ರೆ ಮಾಡಿ. ಟೆನ್ಶನ್‌ ಮರೆತು ಆರಾಮವಾಗಿ ನಿದ್ದೆ ಮಾಡಿ. ಯಾವುದೇ ಕಾರಣದಿಂದ ನಿದ್ದೆ ಅಪೂರ್ಣವಾದರೆ, ಹಗಲಿನಲ್ಲಿ ಸ್ವಲ್ಪ ಹೊತ್ತು ನಿದ್ದೆ ಮಾಡಿ. ನಮ್ಮಂಥ ಕಲಾವಿದರು ಮುಂಜಾನೆ ಬಹು ಬೇಗ ಎದ್ದು, ತಯಾರಾಗಿ, ಸೆಟ್‌ ಗೆ ಹೊರಡಬೇಕಿರುವುದರಿಂದ, ನಾನು ಪ್ರಯಾಣದ ಮಧ್ಯೆ ಕಾರಿನಲ್ಲಿ ಹೋಗುವಾಗಲೇ ತುಸು ಕೋಳಿ ನಿದ್ದೆ ಮಾಡಿಬಿಡ್ತೀನಿ! ರಾತ್ರಿ ಮಲಗುವ ಮೊದಲು ಅಗತ್ಯ ನಾನು ಡೇಲಿ ಸ್ಟ್ರೆಚಿಂಗ್‌ ಎಕ್ಸರ್‌ ಸೈಜ್‌ ಮಾಡ್ತೀನಿ. ಇದರಿಂದ ದಿನವಿಡಿಯ ಸುಸ್ತು ದೂರವಾಗುತ್ತದೆ. ದೇಹ ಬಳಕುವಂತಾಗುತ್ತದೆ, ಚೆನ್ನಾಗಿ ನಿದ್ದೆಯೂ ಬರುತ್ತದೆ.

ಡ್ಯಾನ್ಸ್ ಮಾಡುತ್ತಿರಿ

ನನಗೆ ಫ್ರೀ ಟೈಂ ಸಿಕ್ಕಾಗೆಲ್ಲ ಮ್ಯೂಸಿಕ್‌ ಆನ್‌ ಮಾಡಿ ಡ್ಯಾನ್ಸ್ ಪ್ರಾಕ್ಟೀಸ್‌ ಮಾಡ್ತೀನಿ. ಆನ್‌ ಲೈನ್‌ ವಿಡಿಯೋದಿಂದ ಡ್ಯಾನ್ಸ್ ಸ್ಟೆಪ್ಸ್ ಕಲಿತಿರುವೆ. ಉಳಿದದ್ದನ್ನು ನನಗೆ ಬಂದಂತೆ ನಿಭಾಯಿಸುವೆ. ಡ್ಯಾನ್ಸ್ ಮಾಡಿದಷ್ಟೂ ಬೆವರು ಹರಿಯುತ್ತದೆ, ಇದು ಫಿಟ್‌ ನೆಸ್‌ಪೂರಕ. ಜಿಮ್ ಗೆ ಹೋಗಿಯೂ ನಾವು ಇದನ್ನೇ ಮಾಡುತ್ತೇವೆ, ಅದನ್ನು ಮನೆಯಲ್ಲೇ ಹೀಗೆ ಮಾಡಿಕೊಳ್ಳಬಹುದಲ್ಲವೇ? ಜಿಮ್ ಗೆ ಹೋಗಲಾಗದಿದ್ದರೆ ಅಥವಾ ಅದರ ಹಣ ಉಳಿಸ ಬಯಸಿದರೆ ಅಗತ್ಯ ಮನೆಯಲ್ಲೇ ಡ್ಯಾನ್ಸ್ ಪ್ರಾಕ್ಟೀಸ್‌ ಮಾಡಿ ಹಗುರವಾಗಿ!

– ರೇಣುಕಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ