ಪ್ರ : ನನ್ನ ವಯಸ್ಸು 26, ಪತಿಗೆ 29 ವರ್ಷ. ನಮ್ಮ ಮದುವೆಯಾಗಿ 3 ವರ್ಷಗಳಾಗಿದೆ. ನಮ್ಮಿಬ್ಬರ ದಾಂಪತ್ಯ ಜೀವನ ಈವರೆಗೆ ಸುಖಕರವಾಗಿಯೇ ಇದೆ. ಪ್ರತಿ ರಾತ್ರಿ ನಾವು ಸಮಾಗಮದ ಆನಂದ ಪಡೆಯುತ್ತಿದ್ದೆವು. ಇತ್ತೀಚೆಗೆ ಒಂದು ದುರ್ಘಟನೆ ನಡೆಯಿತು. ಸಮಾಗಮದ ಸಮಯದಲ್ಲಿ ಅದೇನಾಯಿತೋ ಏನೋ, ನನ್ನ ಪತಿಯ ಗುಪ್ತಾಂಗಕ್ಕೆ ಪೆಟ್ಟಾಯಿತು. ಜನನೇಂದ್ರಿಯಕ್ಕೆ ಫ್ರಾಕ್ಚರ್‌ಆಗಿದೆ ಎನ್ನಲಾಗುತ್ತಿದೆ. ಇದಕ್ಕೆ ಏನು ಕಾರಣ ಇರಬಹುದು? ಅದರ ಚಿಕಿತ್ಸೆಗೆ ನಾವು ಏನು ಮಾಡಬೇಕು ಹೇಳಿ. ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆ ಬರದಿರಲು ನಾವೇನು ಮುಂಜಾಗ್ರತೆ ವಹಿಸಬೇಕು ತಿಳಿಸಿ.
ಉ : ಒಂದುವೇಳೆ ಸಮಸ್ಯೆ ನಿಜವಾಗಿಯೂ ಜನನೇಂದ್ರಿಯದ ಫ್ರಾಕ್ಚರ್ ನದಾಗಿದ್ದರೆ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಿ. ನಿಮ್ಮ ಪತಿ ಶೀಘ್ರ ಯಾರಾದರೂ ತಜ್ಞ ಯೂರಾಲಜಿಸ್ಟ್ ರ ಅಪಾಯಿಂಟ್ ಮೆಂಟ್ ಪಡೆದು ಅವರ ಸಲಹೆ ಪಡೆಯಲಿ. ಈ ಗಂಭೀರ ಸಮಸ್ಯೆ ಹಲವು ರೀತಿಗಳಲ್ಲಿ ಉಂಟಾಗಬಹುದು. ಆದರೆ ಹೆಚ್ಚಿನ ಪ್ರಕರಣಗಳಲ್ಲಿ ಸಮಾಗಮ ನಡೆಸುವಾಗ ಅನಾವಶ್ಯಕ ವೇಗ, ಅತಿಯಾದ ಒತ್ತಡ ಉಂಟಾಗುವುದರಿಂದ ಹೀಗಾಗುತ್ತದೆ. ಯಾವ ಸಮಯದಲ್ಲಿ ಗುಪ್ತಾಂಗ ಉತ್ತೇಜನ ಸ್ಥಿತಿಯಲ್ಲಿರುತ್ತದೋ, ಆಗ ಅದರ ಮೇಲೆ ಒತ್ತಡ ಉಂಟಾಗುವಿಕೆ ಹಾಗೂ ಅದನ್ನು ಜೋರಾಗಿ ತಿರುಚಾಡುವುದರಿಂದ ಅದರ ಒಳಭಾಗದಲ್ಲಿ ಏಟು ತಗುಲಿರಬಹುದು. ಬಹುಶಃ `ಕಾರ್ಪರಾ ಕಾವೆರ್ನೊಸಾ’ ಎಂಬ ಸಿಲಿಂಡರಿನಂತಹ ಊತಕಕ್ಕೆ ಗಾಯವಾಗಿರಬಹುದು. ಲೈಂಗಿಕ ಉತ್ತುಂಗದ ಸಮಯದಲ್ಲಿ ರಕ್ತದ ಹರಿವು ಜಾಸ್ತಿ ಇರುವುದರಿಂದ ಗುಪ್ತಾಂಗ ಒತ್ತಡದ ಸ್ಥಿತಿಗೆ ತಲುಪುತ್ತದೆ. ಒಮ್ಮೊಮ್ಮೆ `ಕಾರ್ಪೆರಾ ಕಾವೆರ್ನೊಸಾ’ವನ್ನು ಸುರಕ್ಷಿತವಾಗಿ ಕಾಪಾಡುವ ಊತಕ ಟ್ಯೂನಿಕ್ ತುಂಡರಿಸುವುದರಿಂದ ಈ ಗಾಯ ಉಂಟಾಗಬಹುದು.
ಸಮಸ್ಯೆಯ ಮೂಲಕ್ಕೆ ಹೋಗುವ ಮೊದಲು ಸಾಮಾನ್ಯವಾಗಿ ಕಂಡುಬರುವುದೇನೆಂದರೆ ಗುಪ್ತಾಂಗ ಪ್ರವೇಶಿಸುವ ಸಮಯದಲ್ಲಿ ಒಂದು ವೇಳೆ ಅಧಿಕ ಉತ್ತೇಜನದಿಂದಾಗಿ ಪುರುಷ ಜನನೇಂದ್ರಿಯ ಸ್ತ್ರೀಯ ಸಿಫಿಸಿಸ್ ಫ್ಯೂಬಿಸ್ ಅಥವಾ ಗಟ್ಟಿ ಊತಕದೊಂದಿಗೆ ಜೋರಾಗಿ ಘರ್ಷಿಸುವುದರಿಂದ ಈ ಗಂಭೀರ ಸ್ಥಿತಿ ಉಂಟಾಗಬಹುದು. ನೋವಿನ ಹೊಡೆತದಿಂದ ಪುರುಷ ಜನನೇಂದ್ರಿಯ ಒಮ್ಮೆಲೆ ನೋವಿನಿಂದ ತತ್ತರಿಸಿ ಹೋಗುತ್ತದೆ. ಅಷ್ಟೇ ಅಲ್ಲ, ಗುಪ್ತಾಂಗ ತನ್ನ ಬಿಗುವು ಕಳೆದುಕೊಳುತ್ತದೆ. ನೋವು ತೀವ್ರವಾಗಿರುವಾಗ ಪುರುಷ ಜನನೇಂದ್ರಿಯದ ಮುಖಾಂತರ ಹಾಯ್ದು ಹೋಗುವ ಮೂತ್ರ ನಾಳಕ್ಕೂ ಗಾಯವಾಗುತ್ತದೆ. ಜನನೇಂದ್ರಿಯದಲ್ಲೂ ಊತ ಉಂಟಾಗುತ್ತದೆ.
ಪುರುಷ ಜನನೇಂದ್ರಿಯದ ಫ್ರಾಕ್ಚರನ ಚಿಕಿತ್ಸೆಗಾಗಿ ಯಾರಾದರೂ ತಜ್ಞ ಯೂರಾಲಜಿಸ್ಟರನ್ನು ಭೇಟಿ ಆಗುವುದು ಅತ್ಯವಶ್ಯಕ. ಸಂಕೋಚದಿಂದ ಅಥವಾ ನಿರ್ಲಕ್ಷ್ಯದಿಂದ ಎಷ್ಟೋ ಸಲ ಸಮಸ್ಯೆ ವಿಕೋಪಕ್ಕೆ ಹೋಗುತ್ತದೆ. ಸಾಮಾನ್ಯ ಲೈಂಗಿಕ ಸುಖ ಪಡೆಯುವುದು ಕೂಡ ಕಷ್ಟಕರವಾಗಿ ಪರಿಣಮಿಸುತ್ತದೆ. ಸಕಾಲಕ್ಕೆ ವೈದ್ಯರ ಬಳಿ ಹೋದರೆ, ಶಸ್ತ್ರಚಿಕಿತ್ಸೆಯ ಮುಖಾಂತರ ಜನನೇಂದ್ರಿಯದ ಊತಕಗಳ ದುರಸ್ತಿ ಕಾರ್ಯ ಸಾಧ್ಯವಾಗುತ್ತದೆ.
ಇಂತಹ ದುರ್ಘಟನೆಗಳಿಂದ ರಕ್ಷಿಸಿಕೊಳ್ಳುವ ಉಪಾಯವೆಂದರೆ ಸಮಾಗಮದ ಸಮಯದಲ್ಲಿ ಅತಿಯಾದ ಆತುರ ಬೇಡ, ಸಂಯಮ ಇರಲಿ.