ಪ್ರ : ನನ್ನ ಹೆಚ್ಚಿನ ಬಟ್ಟೆಗಳು ಗಿಡ್ಡ ತೋಳಿನಾಗಿದ್ದು, ನಾನು ಅವನ್ನು ಕೈಗಳ ವರ್ಣಗಳಿಂದಾಗಿ ಧರಿಸಲು ಆಗುತ್ತಿಲ್ಲ. ಏಕೆಂದರೆ ನನ್ನ ಕೈನ ಅಧಿಕ ಭಾಗ ಬೆಳ್ಳಗೆ ಇದ್ದು, ಇನ್ನರ್ಧ ಭಾಗ ಟೋನಿಂಗ್‌ನಿಂದಾಗಿ ಕಪ್ಪಗಾಗಿವೆ. ನನ್ನ ಕೈಗಳ ವರ್ಣ ಒಂದೇ ರೀತಿಯದ್ದಾಗಲು ನಾನು ಏನು ಮಾಡಬೇಕು ತಿಳಿಸಿ.

ಉ : ನಿಮ್ಮ ಕೈಗಳಲ್ಲಿ, ಟೋನಿಂಗ್‌ ಆಗಿದ್ದರೆ, ಕಡಲೆಹಿಟ್ಟು, ಅರಿಶಿನ ಹಾಗೂ ಹಾಲು ಮಿಶ್ರಣ ಮಾಡಿದ ಲೇಪನವನ್ನು ಕೈಗಳಿಗೆ ಸರಿ. ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟು ಬಳಿಕ ಕೈಗಳಿಂದ ಉಜ್ಜುತ್ತಾ ನಿವಾರಿಸಿ. ಹೀಗೆ ಮಾಡುತ್ತಾ ಹೋದರೆ ಕೈಗಳ ವರ್ಣ ಸರಿಹೋಗುತ್ತದೆ. ಬಿಸಿಲಿನಲ್ಲಿ ಹೋಗುವಾಗ ಸನ್‌ ಸ್ಕ್ರೀನ್‌ ಲೇಪಿಸಿಕೊಂಡು ಹೋಗಿ.

ಪ್ರ : ನನ್ನ ಕೂದಲು ಉದ್ದ ಹಾಗೂ ದಟ್ಟ ಆಗಿದೆ. ಆದರೆ ಅದು ಬಹುಬೇಗನೇ ತುಂಡರಿಸುತ್ತಿದೆ. ನಾನು ಹಲವು ಬ್ರ್ಯಾಂಡ್ ಶ್ಯಾಂಪೂಗಳನ್ನು ಬಳಸಿದೆ. ಆದರೆ ಅದರಿಂದ ಯಾವುದೇ ಉಪಯೋಗ ಆಗಿಲ್ಲ. ನೀವು ಯಾವುದಾದರೂ ಉಪಾಯ ಸೂಚಿಸಿ.

ಉ : ನಿಮ್ಮ ಕೂದಲು ಬಹಳ ಬೇಗ ತುಂಡರಿಸುತ್ತಿದೆಯೆಂದರೆ, ಅದಕ್ಕೆ ಪ್ರೋಟೀನ್‌ ಕೊರತೆ ಇದೆ ಎಂದರ್ಥ. ನೀವು ಕೂದಲಿಗೆ ಪ್ರೋಟೀನ್‌ಯುಕ್ತ ಶ್ಯಾಂಪೂ ಲೇಪಿಸಿ. ಆ ಬಳಿಕ ಪ್ರೋಟೀನ್‌ ಕ್ರೀಮ್ ಲೇಪಿಸಿ 15 ನಿಮಿಷ ಹಾಗೆಯೇ ಬಿಟ್ಟು ಕೂದಲು ತೊಳೆದುಕೊಳ್ಳಿ. 2 ತಿಂಗಳಿಗೊಮ್ಮೆ ಕೂದಲನ್ನು ಟ್ರಿಮ್ಮಿಂಗ್‌ ಮಾಡುತ್ತಾ ಇರಿ.

ಪ್ರ : ನಾನು 40 ವರ್ಷದ ಉದ್ಯೋಗಸ್ಥೆ. ನನ್ನ ಹಿಮ್ಮಡಿಗಳು ಯಾವುದೇ ಹವಾಮಾನದಲ್ಲಾದರೂ ಒಡೆಯುತ್ತವೆ. ಬಹಳಷ್ಟು ಚಿಕಿತ್ಸೆ ಪಡೆದೆ. ಆದರೆ ಯಾವುದೇ ಉಪಯೋಗ ಆಗಿಲ್ಲ. ಇದಕ್ಕೆ ಏನಾದರೂ ಉಪಾಯ ಸೂಚಿಸಿ.

ಉ : ನಿಮ್ಮ ಕಾಲುಗಳ ಚರ್ಮ ಶುಷ್ಕವಾಗಿವೆ. ಹೀಗಾಗಿ ಮಲಗುವ ಮುನ್ನ ಕಾಲುಗಳನ್ನು ಸಾಧಾರಣ ಬೆಚ್ಚಗಿನ ನೀರಿನಲ್ಲಿ ಇಳಿಬಿಟ್ಟು ಕುಳಿತುಕೊಳ್ಳಿ. ಬಳಿಕ ಕೊಬ್ಬರಿ ಎಣ್ಣೆಯಿಂದ ಚೆನ್ನಾಗಿ ಮಸಾಜ್‌ ಮಾಡಿ. ಬಳಿಕ ಸ್ವಲ್ಪ ಹೊತ್ತಿನ ಮಟ್ಟಿಗೆ ಸಾಕ್ಸ್ ಧರಿಸಿ. ಆಫೀಸಿಗೆ ಹೋಗುವಾಗಲೂ ಕೂಡ ಅವಶ್ಯವಾಗಿ ಸಾಕ್ಸ್ ಧರಿಸಿ. ನೀವು ಕಾಲುಗಳನ್ನು ಎಷ್ಟು ಚೆನ್ನಾಗಿ ಮುಚ್ಚುತ್ತೀರೋ ಅವು ಅಷ್ಟು ಮೃದುವಾಗುತ್ತವೆ.

ಪ್ರ : 35 ವರ್ಷದ ಉದ್ಯೋಗಸ್ಥೆ. ನನ್ನ ಕೂದಲಿನಲ್ಲಿ ಯಾವಾಗಲೂ ಹೊಟ್ಟಿನ ಸಮಸ್ಯೆ ಇರುತ್ತದೆ. ಆ ಕಾರಣದಿಂದ ಬಹಳ ಶುಷ್ಕಗೊಂಡು ತುಂಡರಿಸುತ್ತದೆ. ನಾನು ನಿಮಿತವಾಗಿ ತೈಲ ಲೇಪಿಸಿಕೊಳ್ಳುತ್ತೇನೆ. ಆದರೂ ಈ ಸಮಸ್ಯೆ ಇದೆ. ಇದಕ್ಕೆ ಏನಾದರೂ ಮನೆ ಉಪಾಯ ಸೂಚಿಸಿ.

ಉ : ತೈಲ ಲೇಪಿಸುವುದು ಡ್ಯಾಂಡ್ರಫ್‌ಗೆ ಪರಿಹಾರವಲ್ಲ. ನೀವು ಆ್ಯಲೋವೆರಾ ತೆಂಗಿನ ಎಲೆ ಹಾಗೂ ತುಳಸಿಯ ಎಲೆಗಳ ಪೇಸ್ಟ್ ಮಾಡಿಕೊಂಡು ಕೂದಲಿಗೆ ಲೇಪಿಸಿ. ಜೇನುತುಪ್ಪ ಹಾಗೂ ಗ್ಲಿಸರಿನ್‌ನ್ನು ಮಿಶ್ರಣ ಮಾಡಿಕೊಂಡು ಡ್ಯಾಂಡ್ರಫ್‌ ನಿವಾರಣೆ ಆಗುತನಕ ಲೇಪಿಸಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ಡ್ಯಾಂಡ್ರಫ್‌ ಹೊರಟುಹೋಗುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ