ಹಬ್ಬಗಳ ಆಗಮನದ ಜೊತೆಗೆ ಶಾಪಿಂಗ್‌ನ ಕ್ರೇಜ್ ಕೂಡ ಸಾಕಷ್ಟು ಹೆಚ್ಚುತ್ತದೆ. ಈ ಸಮಯದಲ್ಲಿ ಶಾಪಿಂಗ್ ಕೇವಲ ನಿಮ್ಮನ್ನು ನೀವು ಅಂದವಾಗಿಟ್ಟುಕೊಳ್ಳಲು ಅಲ್ಲ, ನಿಮ್ಮ ಮನೆ ಅಲಂಕರಿಸಲು, ನಿಮ್ಮವರಿಗೆ ಉಡುಗೊರೆ ಕೊಡಲು ಕೂಡ ಮಾಡಲಾಗುತ್ತದೆ. ಇದಕ್ಕಾಗಿ ನಾವು ಲೋಕಲ್ ಮಾರ್ಕೆಟ್‌ನಿಂದ ಹಿಡಿದು ಮಾಸ್ಕ್ ತನಕ ಸುತ್ತಾಡಿಸುತ್ತೇವೆ. ಏಕೆಂದರೆ ಯಾವ ಟ್ರೆಂಡ್ ನಡೆಯುತ್ತಿದೆ ಎನ್ನುವುದರ ಮಾಹಿತಿ ದೊರೆಯುವುದರ ಜೊತೆಗೆ ಬೆಸ್ಟ್ ನಲ್ಲಿ ಬೆಸ್ಟ್ ವಸ್ತು ಖರೀದಿಸಿ ಮನೆಯನ್ನು ಹೊಸ ರೀತಿಯಲ್ಲಿ ಮೇಕ್ ಓವರ್ ಮಾಡಲು ಸಾಧ್ಯವಾಗುತ್ತದೆ.
ಹೊರಗಡೆ ಹೋಗಿ ಮುಕ್ತವಾಗಿ ಖರೀದಿ ಮಾಡುವ ಸ್ವಾತಂತ್ರ್ಯವನ್ನು ಕೊರೋನಾ ಕಸಿದುಕೊಂಡಿದೆ. ಇಂತಹ ಸ್ಥಿತಿಯಲ್ಲಿ ಆನ್ ಲೈನ್ ಶಾಪಿಂಗ್ ಒಳ್ಳೆಯ ಆಪ್ಶನ್ ಆಗಿದೆ.
ಕಳೆದ ಕೆಲವು ವರ್ಷಗಳಿಂದ ಆನ್ ಲೈನ್ ಖರೀದಿ ಭರಾಟೆ ಸಾಕಷ್ಟು ಹೆಚ್ಚಿದೆ. ಇತ್ತೀಚೆಗೆ ಗ್ರಾಸರಿ ಐಟಂಗಳ ಮೇಲೆ ನಗರ ಪ್ರದೇಶಗಳ ನಾಗರಿಕರು ಆನ್ ಲೈನ್ ಶಾಪಿಂಗ್ ಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. `ಕೇಪ್ ಜೆಮಿನಿ ರಿಸರ್ಚ್ ಇನ್ ಸ್ಟಿಟ್ಯೂಟ್’ ಮುಖಾಂತರ ನಡೆಸಿದ ಸಮೀಕ್ಷೆಯಲ್ಲಿ ಶೇ.65ರಷ್ಟು ಭಾರತೀಯರು ಆನ್ ಲೈನ್ ನಲ್ಲಿ ಗ್ರಾಸರಿ ಹೆಚ್ಚು ಖರೀದಿಸುವುದಾಗಿ ಹೇಳುತ್ತಾರೆ. ಏಕೆಂದರೆ ಅವರಿಗೆ ಈ ಸಮಯದಲ್ಲಿ ಇದೇ ಹೆಚ್ಚು ಸೂಕ್ತವಾಗಿ ಕಾಣಿಸುತ್ತೆ.
ಅಮೆರಿಕಾದ ಶೇ.25ರಷ್ಟು ಜನರು ಸಹ ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ಟೋರ್ ಗಳಲ್ಲಿ ಖರೀದಿಸುವುದಕ್ಕಿಂತ ಆನ್ ಲೈನ್ ಖರೀದಿಸುವುದೇ ಹೆಚ್ಚು ಜಾಣತನ ಎಂದು ಭಾವಿಸುತ್ತಾರೆ. ಉಳಿದವರಿಗೂ ಅವರು ಹೀಗೆಯೇ ಮಾಡಲು ಸಲಹೆ ನೀಡುತ್ತಾರೆ. ದ್ವಿಗುಣಗೊಂಡ ಆನ್ ಲೈನ್ ಮಾರ್ಕೆಟ್ ಕೊರೋನಾ ಕಾರಣದಿಂದ ಭಾರತದಲ್ಲಿ ಫ್ಯಾಷನ್ ಹಾಗೂ ಲೈಫ್ ಸ್ಟೈಲ್ ಮಾರುಕಟ್ಟೆಗೆ ಆನ್ ಲೈನ್ ನಲ್ಲಿ ಭಾರಿ ಜಿಗಿತ ಕಂಡುಬಂದಿದೆ. 2021ರ ಅಂತ್ಯದ ತನಕ ಅದು ದ್ವಿಗುಣಗೊಳ್ಳುವ ಅಂದಾಜು ಇದೆ.
ಇ ಕಾಮರ್ಸ್ ಪ್ಲಾಟ್ ಫಾರ್ಮ್
ಭಾರತದಲ್ಲಿ 450 ಮಿಲಿಯನ್ ಇಂಟರ್ ನೆಟ್ ಯೂಸರ್ ಬೇಸ್ ಆಗಿದ್ದು, 2020ರಲ್ಲಿ 62% ಹೆಚ್ಚಳಗೊಂಡು 729 ಮಿಲಿಯನ್ ಆಗಿದೆ. 310 ಆ್ಯಕ್ಟಿವ್ ಇಂಟರ್ ನೆಟ್ ಆ್ಯಕ್ಸೆಸಿಂಗ್ ಜನಸಂಖ್ಯೆಯು ತಿಂಗಳಲ್ಲಿ 1 ಸಲ ಖರೀದಿಸುತ್ತಾರೆ. ಆ ಸಂಖ್ಯೆಯಲ್ಲಿ ಶೇ.35 ರಷ್ಟು ಹೆಚ್ಚಳಗೊಂಡು 419 ಮಿಲಿಯನ್‌ಗೆ ಹೆಚ್ಚಳಾಗಬಹುದು ಎಂಬ ಅಂದಾಜಿದೆ.
ಆನ್ ಲೈನ್ ಶಾಪಿಂಗ್‌ಅವಲಂಬನೆ ಹೆಚ್ಚುತ್ತಿರುವಾಗ ನಾವು ಕೂಡ ಸ್ಮಾರ್ಟ್ ಆಗಿ ಶಾಪಿಂಗ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು. ಅದರಿಂದ ಸುರಕ್ಷತೆ ಹಾಗೂ ಉಳಿತಾಯ ಎರಡೂ ಕೂಡ ಸಾಧ್ಯವಾಗಬೇಕು.
ಬಟ್ಟೆ ಖರೀದಿಸುವಾಗ ತಿಳಿವಳಿಕೆ ಹಬ್ಬಗಳ ಸಂದರ್ಭದಲ್ಲಿ ಅಲಂಕಾರದ ಟ್ರೆಂಡ್ ಜೋರಾಗಿರುತ್ತದೆ. ಇಂತಹ ಸಂದರ್ಭದಲ್ಲಿ ನೀವು ಬಟ್ಟೆ ಖರೀದಿಸದಿದ್ದರೆ ಹಬ್ಬದ ಕಳೆಗೆ ಮಂಕು ಕವಿದಂತೆ. ನೀವು ನಿಮಗಾಗಿ, ಮಕ್ಕಳಿಗಾಗಿ ಅಥವಾ ಕುಟುಂಬವದರಿಗಾಗಿ ಬಟ್ಟೆ ಖರೀದಿಸುವುದಿದ್ದರೆ, ಕೊನೆಯ ಗಳಿಗೆಯ ಖರೀದಿಗಾಗಿ ಕಾಯಬೇಡಿ. ಹಬ್ಬಕ್ಕಿಂತ ಮುಂಚೆಯೇ ಆನ್ ಲೈನ್ ಸೈಟ್ಸ್ ಗಳಲ್ಲಿ ಸೇಲ್ ಆರಂಭವಾಗಿರುತ್ತದೆ. ಅದರ ಲಾಭ ಪಡೆದುಕೊಳ್ಳಿ. ನೀವು ಸೇಲ್ ನ ದಿನಗಳಲ್ಲಿ ಖರೀದಿಸದಿದ್ದರೆ, ಯಾವ ಸೈಟ್ ನಲ್ಲಿ ನಿಮಗೆ ಯಾವುದು ಇಷ್ಟವಾಗುತ್ತದೋ ಅದನ್ನು ತಕ್ಷಣವೇ ಖರೀದಿ ಮಾಡದೆ, ಬೇರೆ ಸೈಟ್ ಗಳಲ್ಲಿ ಅದನ್ನು ಹೋಲಿಕೆ ಮಾಡಿ ನೋಡಿ. ಹೀಗೆ ಮಾಡಿದಾಗ ನಿಮಗೆ ಮೊದಲಿಗಿಂತ ಹೆಚ್ಚು ಆಪ್ಶನ್ ಗಳು ದೊರಕಬಹುದು. ನೀವು ಇಷ್ಟಪಟ್ಟ ಡ್ರೆಸ್ ಬೇರೆ ಸೈಟ್ ಗಳಲ್ಲಿ ಮೊದಲಿಗಿಂತ ಕಡಿಮೆ ಬೆಲೆಯಲ್ಲಿ ದೊರಕಬಹುದು.
ಯಾವ ಸಂಗತಿ ಗಮನದಲ್ಲಿಡಬೇಕು?
ಸಾಮಾನ್ಯವಾಗಿ ಆನ್ ಲೈನ್ ಸೈಟ್ ಗಳಲ್ಲಿ ಶಾಪಿಂಗ್ ಮಾಡುವಾಗ, 4000 ರೂ.ಗಳಿಗಿಂತ ಹೆಚ್ಚು ಖರೀದಿಸಿದಾಗ ನಿಮಗೆ ಬಟ್ಟೆಗಳಲ್ಲಿ 200 ರೂ. ತನಕ ರಿಯಾಯಿತಿ ದೊರಕುತ್ತದೆ. ಆದರೆ ದುರಾಸೆಗೆ ಬಿದ್ದು, ಅದು ಎಲ್ಲಿಯತನಕ ಲಾಭಕರ ಅನಿಸುವುದಿಲ್ಲಿವೋ ಅಲ್ಲಿಯವರೆಗೆ ಖರೀದಿಸಲು ಮುಂದಾಗಬೇಡಿ. ಎಷ್ಟೋ ಸಲ ಹೀಗೆ ಮಾಡಲು ಹೋಗಿ ನೀವು ನಿಮ್ಮ ಲಿಮಿಟ್ ಮೀರಿ ಖರೀದಿಸಿ ಆಮೇಲೆ ಪಶ್ಚಾತ್ತಾಪ ಪಡುವಂತಾಗುತ್ತದೆ.
ಸೇಲ್ ನ ಆಟವನ್ನು ಅರಿಯಿರಿ
ಪ್ರತಿಯೊಂದು ಸೇಲ್ ಲಾಭದ ವಹಿವಾಟು ಆಗಿರುವುದಿಲ್ಲ. ಈ ಸಂಗತಿಯನ್ನು ಅರಿಯುವುದು ಅತ್ಯವಶ್ಯಕ. ಸೇಲ್ ನ ಜೊತೆಗೆ ಕೆಲವು ನಿಯಮಗಳು ಹಾಗೂ ಷರತ್ತುಗಳು ಇರುತ್ತವೆ. ಅವನ್ನು ಗಮನಿಸಿ ನೀವು ಖರೀದಿಸಬೇಕು. ಹಬ್ಬದ ಸಂದರ್ಭದಲ್ಲಿ ಬಗೆಬಗೆಯ ಪಕ್ವಾನ್ನಗಳು ತಯಾರಾಗುತ್ತವೆ. ಅದಕ್ಕಾಗಿ ಗ್ರಾಸರಿ ಐಟಮ್ಸ್ ಹೆಚ್ಚಿಗೆ ಬೇಕಾಗುತ್ತವೆ. ಇಂತಹದರಲ್ಲಿ ಎಲ್ಲೆದರಲ್ಲಿ ನೀವು ಆಹಾರಧಾನ್ಯ ಖರೀದಿಸಬೇಡಿ. ಗ್ರಾಫೆರ್ಸ್, ಜಿಯೋ ಮಾರ್ಟ್, ಅಮೆಝಾನ್ ನಂತಹ ಸೈಟ್ ಗಳಲ್ಲಿ ಬೆಲೆಗಳನ್ನು ಹೋಲಿಕೆ ಮಾಡಿ ನೋಡಿಯೇ ಖರೀದಿಸಬೇಕು. ಎಲ್ಲಿ ನಿಮಗೆ ಕಡಿಮೆ ಬೆಲೆಯಲ್ಲಿ ಸಿಗುತ್ತದೊ, ಅಲ್ಲಿಯೇ ಖರೀದಿಸಿ. ಕ್ರಮೇಣ ನಿಮಗೆ ಮೆಂಬರ್ ಶಿಪ್ ದೊರೆಯುವುದರ ಜೊತೆಗೆ ಡಿಸ್ಕೌಂಟ್ ಸಹ ಹೆಚ್ಚು ಲಭಿಸುತ್ತದೆ.
ಒಂದುವೇಳೆ ನಿಮ್ಮ ಏರಿಯಾದಲ್ಲಿಯೇ ಯಾರಾದರೂ ಆನ್ ಲೈನ್ ಗ್ರಾಸರಿಯ ಕೆಲಸ ಶುರು ಮಾಡಿದ್ದರೆ ಅವರಿಂದಲೂ ಖರೀದಿಸಲು ಪ್ರಯತ್ನಿಸಿ. ಅಲ್ಲೂ ಕೂಡ ನಿಮಗೆ ಒಳ್ಳೆಯ ಬೆಲೆ ದೊರಕಬಹುದು. ಇದರಿಂದ ನಿಮಗೆ ಗುಣಮಟ್ಟ ಹಾಗೂ ಉಳಿತಾಯ ಎರಡೂ ದೊರೆಯುತ್ತದೆ.
ಯಾವ ಸಂಗತಿ ಗಮನದಲ್ಲಿಡಬೇಕು?
ಆನ್ ಲೈನ್ ಗ್ರಾಸರಿ ಖರೀದಿಸುವ ಸಂದರ್ಭದಲ್ಲಿ ಇಂತಿಂಥ ಕಾರ್ಡ್ ಗಳ ಮೇಲೆ ಶೇ.5ರ ಡಿಸ್ಕೌಂಟ್ ದೊರೆಯುತ್ತದೆ ಎಂಬ ಸಂದೇಶ ಕಾಣುತ್ತದೆ. ಅದನ್ನು ನೋಡಿ ನೀವು ಸಾಮಗ್ರಿಗಳಿಗೆ ಆರ್ಡರ್ ಕೊಟ್ಟುಬಿಡುತ್ತೀರಿ. ಆದರೆ ಪೇಮೆಂಟ್ ಮಾಡುವ ಸಂದರ್ಭದಲ್ಲಿ ನಿಮಗೆ 5000 ರೂ. ಖರೀದಿಗೆ ಮಾತ್ರ ಈ ಸೌಲಭ್ಯ ಎಂದು ಗೊತ್ತಾಗುತ್ತದೆ. ಇಂತಹ ಸ್ಥಿತಿಯಲ್ಲಿ ನೀವು ಮೂರ್ಖರಾಗಬೇಡಿ. ಬೇರೆ ಕೆಲವು ಸೈಟ್ ಗಳಿಗೆ ಹೋಗಿ ಆರ್ಡರ್ ಮಾಡಿ.
ಚಿಕ್ಕ ಫ್ಲಾಟ್ ಪಾರ್ಮ್ ಗಳಲ್ಲಿ ಖರೀದಿ
ಬೆಳಗ್ಗೆ ಹಬ್ಬದ ಸಂದರ್ಭಗಳಲ್ಲಿ ಮಾರ್ಕೆಟ್ ಗೆ ಹೋಗಿ ನಿಮ್ಮ ಮೆಚ್ಚಿನ ಡೆಕೋರೇಶ್ ಐಟಂಗಳಾದ ವಾಲ್ ಹ್ಯಾಂಗಿಂಗ್, ದೀಪಗಳು, ಲೈಟ್ಸ್, ಕ್ಯಾಂಡಲ್ ಮುಂತಾದವನ್ನು ಖರೀದಿಸುತ್ತಿದ್ದಿರಿ. ಅವು ಅಗ್ಗವಾಗಿರುವುದರ ಜೊತೆಗೆ ಉತ್ತಮ ಗುಣಮಟ್ಟದ್ದಾಗಿರುತ್ತಿದ್ದವು. ಕೊರೋನಾ ಕಾರಣದಿಂದ ಶಾಪಿಂಗ್ ಸ್ಟೈಲ್ ಬದಲಾಗಿರಬಹುದು. ಆದರೆ ನಿಮ್ಮ ಮೆಚ್ಚಿನ ಐಟಮ್ಸ್ ಅಂತಹವರಿಂದ ಆನ್ ಲೈನ್ ನಲ್ಲಿಯೇ ದೊರಕುತ್ತಿದ್ದರೆ, ಅವರಿಂದಲೇ ಖರೀದಿಸಿ. ಅವರಿಗೆ ಆದಾಯ ದೊರಕುತ್ತದೆ. ನಿಮಗೆ ನಿಮ್ಮ ಮೆಚ್ಚಿನ ಗುಣಮಟ್ಟದ ವಸ್ತು ಸಿಗುತ್ತದೆ.
ಅದಕ್ಕಾಗಿ ಫೇಸ್ ಬುಕ್ ಹಾಗೂ ವಾಟ್ಸ್ ಆ್ಯಪ್ ಮುಖಾಂತರ ತಮ್ಮ ಸಾಮಗ್ರಿಗಳನ್ನು ಪ್ರಮೋಟ್ ಮಾಡುತ್ತಿರುತ್ತಾರೆ. ನಿಮ್ಮ ಸುತ್ತಮುತ್ತಲ್ಲಿ ಅಂತಹ ಬಿಸ್‌ನೆಸ್ ಮಾಡುವವರಿದ್ದರೆ ಅಂಥವರಿಂದಲೇ ಖರೀದಿಸಿ. ನಿಮಗೆ ಯಾವ ವಸ್ತು ಇಷ್ಟವಾಗುತ್ತೋ ಅದರ ಸ್ಕ್ರೀನ್ ಶಾಟ್ ತೆಗೆದು ಕಳಿಸಬೇಕಿರುತ್ತದೆ. ಅವರು ಕೊಟ್ಟ ನಂಬರ್‌ಗೆ ಆನ್‌ಲೈನ್ ಪೇಮೆಂಟ್ ಮಾಡಬೇಕಿರುತ್ತದೆ. ಇಲ್ಲಿ ಕ್ಯಾಶ್ ಆನ್ ಡೆಲಿವರಿ ಸೌಲಭ್ಯ ಇರುತ್ತದೆ.
ಯಾವ ಸಂಗತಿ ಗಮನದಲ್ಲಿಡಬೇಕು?
ನೀವು ಬಾಗಿಲ ತೋರಣ ಖರೀದಿಸಬೇಕಿದ್ದರೆ ಅದರ ಸೈಜ್ ನೋಡಿಯೇ ಖರೀದಿಸಬೇಕು. ದೀಪಗಳಿಗೆ ಒಂದು ಸಲಕ್ಕೆ ಆರ್ಡರ್‌ಕೊಡಿ. ಯಾವುದಕ್ಕೆ ಆರ್ಡರ್ ಕೊಡುತ್ತೀರೊ, ಅದನ್ನು ಸರಿಯಾಗಿ ಪರಿಶೀಲಿಸಿಯೇ ಖರೀದಿಸಿ. ಏಕೆಂದರೆ ಇಂತಹವನ್ನು ಬದಲಿಸುವಾಗ ಅವು ಒಡೆಯುವ ಭೀತಿಯಿರುತ್ತದೆ. ಇಂತಹ ಸ್ಥಿತಿಯಲ್ಲಿ ಚಿಕ್ಕಪುಟ್ಟ ಆನ್ ಲೈನ್ ಪ್ಲಾಟ್ ಫಾರ್ಮ್ ಗಳಿಂದ ಖರೀದಿಸಲು ಆದ್ಯತೆ ಕೊಡಿ. ಇದು ನಿಮಗೆ ನಿಮ್ಮ ಮೆಚ್ಚಿನ ವಸ್ತುವನ್ನು ಕಡಿಮೆ ಬೆಲೆಯಲ್ಲಿ ದೊರಕಿಸುವ ವ್ಯವಸ್ಥೆ ಮಾಡುತ್ತದೆ.
ಉಡುಗೊರೆ ತಿಳಿವಳಿಕೆ ಉಪಯೋಗಿಸಿ ಹಬ್ಬದ ಸಂದರ್ಭದಲ್ಲಿ ಉಡುಗೊರೆಗಳನ್ನು ಕೊಡುವ, ತೆಗೆದುಕೊಳ್ಳುವುದು ನಡೆಯುತ್ತಿರುತ್ತದೆ.
ಈಗ ಕೊರೋನಾದ ಆತಂಕದ ದಿನಗಳಲ್ಲಿ ಜನರು ಹೋಗುವುದು ಬರುವುದು ಕಡಿಮೆಯಾಗಿದೆ. ಆದರೆ ಆನ್ ಲೈನ್‌ನ ಟ್ರೆಂಡ್ ಇರುವ ಇಂದಿನ ದಿನಗಳಲ್ಲಿ ನಿಮಗಿಷ್ಟವಾದವರಿಗೆ, ಅರಿಗಿಷ್ಟವಾಗುವಂತಹ ಉಡುಗೊರೆಗಳನ್ನು ಆನ್ ಲೈನ್ ಮೂಲಕ ಕಳಿಸಬಹುದು. ಡ್ರೆಸ್ ಆಗಿರಬಹುದು, ವಿಶಿಷ್ಟ ತಿಂಡಿ ಅಥವಾ ಡ್ರೈಫ್ರೂಟ್ಸ್….. ಹೀಗೆ ಏನನ್ನಾದರೂ ಕಳಿಸಬಹುದು. ಹೀಗಾಗಿ ನೀವು ಮೊದಲೇ ಯಾವ ಸೈಟ್ ನಲ್ಲಿ ಉತ್ತಮ ಗುಣಮಟ್ಟ ಹಾಗೂ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ ಎಂಬುದನ್ನು ಕಂಡುಕೊಂಡು ಆರ್ಡರ್ ಮಾಡಿ.
ಫೇಸ್ ಬುಕ್‌ನಲ್ಲಿ ವೈವಿಧ್ಯ ಬಟ್ಟೆಗಳನ್ನು ದೊರಕಿಸಿಕೊಡು ವ್ಯಾಪಾರಿಗಳು ಕಂಡುಬರುತ್ತಾರೆ. ಅವರು ದೇಶದ ವಿಭಿನ್ನ ಭಾಗದ ಬಟ್ಟೆಗಳನ್ನು ಡ್ರೆಸ್ ಗಳನ್ನು ನಿಮಗೆ ತಲುಪಿಸುತ್ತಾರೆ. ಅಲ್ಲಿ ನಿಮಗೆ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದ್ದರೆ, ಅದನ್ನು ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ಕಳಿಸಲು ಆರ್ಡರ್ ಕೊಡಬಹುದು. ಇದರಿಂದ ನಿಮಗೆ ನಿಮ್ಮ ಇಷ್ಟದ ವಸ್ತು ಕೂಡ ದೊರೆಯುತ್ತದೆ ಹಾಗೂ ಡಿಸ್ಕೌಂಟ್ ಕೂಡ ಲಭಿಸುತ್ತದೆ.
ಯಾವ ಸಂಗತಿ ಗಮನದಲ್ಲಿಡಬೇಕು?
ಆರ್ಡರ್ ಕೊಡುವ ಮುನ್ನ ಎಲ್ಲ ಸಂಗತಿಗಳ ಬಗೆಗೂ ಚೆನ್ನಾಗಿ ತಿಳಿದುಕೊಳ್ಳಿ. ಏಕೆಂದರೆ ಒಂದು ಗಿಫ್ಟ್ ನಿಮ್ಮ ಪ್ರೀತಿಪಾತ್ರರಿಗೆ ಒಂದು ಸಲ ಕೈ ಸೇರಿದರೆ, ಅದನ್ನು ಬದಲಿಸಲು ಸಾಕಷ್ಟು ಕಷ್ಟವಾಗುತ್ತದೆ. ಫೇಸ್ ಬುಕ್ ಮುಖಾಂತರ ಖರೀದಿಸಿದ್ದರೆ, ಅಲ್ಲಿ ಜನರು ಕೊಟ್ಟ ಕಮೆಂಟ್‌ಗಳನ್ನು ಅವಶ್ಯವಾಗಿ ಗಮನಿಸಿ. ಆಗ ನಿಮಗೆ ನಿಖರ ಮಾಹಿತಿ ದೊರಕುತ್ತದೆ ಹಾಗೂ ನೀವು ಮೋಸಕ್ಕೆ ತುತ್ತಾಗುವುದು ತಪ್ಪುತ್ತದೆ. ಅದೇ ರೀತಿ ಡೆಲಿವರಿ ಎಷ್ಟು ದಿನಗಳಲ್ಲಿ ಸಿಗುತ್ತದೆ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಿ. ಏಕೆಂದರೆ ಹಬ್ಬದ ಸಂದರ್ಭದಲ್ಲಿ ದೊರಕದೇ ಇದ್ದರೆ ಮೂಡ್ ಹಾಳಾಗುತ್ತದೆ. ಆ ಬಳಿಕ ನಿಮಗೆ ನಾನು ಅಗ್ಗಕ್ಕೆ ಮರುಳಾಗಿ ಖರೀದಿಸಲು ಮುಂದಾದೆ ಎಂದು ಪಶ್ಚಾತ್ತಾಪ ಪಡಬೇಕಾಗುತ್ತದೆ. ಬ್ಯಾಂಕ್ ಗಳಿಂದ ದುಬಾರಿ ವಸ್ತು ಖರೀದಿ ಹಬ್ಬದ ಸಂದರ್ಭದಲ್ಲಿ ಚಿನ್ನ, ಎಲೆಕ್ಟ್ರಿಕ್ ಐಟಮ್ಸ್ ಖರೀದಿಸುವ ಕ್ರೇಜ್ ಹೆಚ್ಚಿಗೆ ಇರುತ್ತದೆ. ಮೊದಲನೆಯದು, ಸೇಲ್ಸ್ ಆನಂದ ಪಡೆಯುವುದು ಹಾಗೂ ಹಬ್ಬದ ರಂಗು ಹೆಚ್ಚಿಸುವುದು. ಆದರೆ ಅಗ್ಗಕ್ಕೆ ಮರುಳಾಗಿ ನೀವು ಅಪರಿಚಿತ ಸೈಟ್ ನಲ್ಲಿ ಖರೀದಿಸದೇ ಹೆಸರಾಂತ ಬ್ರಾಂಡ್ ಗಳಿಂದ ಖರೀದಿಸಲು ಪ್ರಯತ್ನಿಸಿ. ಇಲ್ಲಿ ನೀವು ಮೋಸ ಹೋಗುವ ಸಾಧ್ಯತೆ ಕಡಿಮೆ. ಅಮೆಝಾನ್, ಫ್ಲಿಪ್ ಕಾರ್ಟ್, ಕ್ರೋಮಾ ರಿಲಯನ್ಸ್ ಡಿಜಿಟಲ್, ಪೇಟಿಎಂ ಮಾಲ್ ಮುಂತಾದವುಗಳಲ್ಲಿ ಖರೀದಿಸಿ. ಏಕೆಂದರೆ ಇಲ್ಲಿ ನಿಮಗೆ ಒಳ್ಳೆಯ ಆಫರ್ ದೊರಕುವುದರ ಜೊತೆಗೆ ವಸ್ತುವಿನ ಗ್ಯಾರಂಟಿ ಕೂಡ ಲಭಿಸುತ್ತದೆ.
ಒಂದು ವೇಳೆ ಆನ್ ಲೈನ್ ಗೋಲ್ಡ್ ಅಥವಾ ಡೈಮಂಡ್ ಖರೀದಿಸುವುದಿದ್ದರೆ ಕ್ಯಾರೆಟ್ ಲೇನ್, ತನಿಷ್ಕ್, ಪಿಸಿ ಜ್ಯೂವೆಲರ್ಸ್, ಕಲ್ಯಾಣ್, ಮಲಬಾರ್ ಗೋಲ್ಡ್ ಮುಂತಾದವುಗಳಲ್ಲಿ ಖರೀದಿಸಿ.
ಯಾವ ಸಂಗತಿ ಗಮನದಲ್ಲಿಡಬೇಕು?
ನೀವು ಹೆಸರಾಂತ ಬ್ರಾಂಡ್ ಗಳಿಂದಲೇ ಖರೀದಿಸಬಹುದು. ಆದರೆ ಒಂದು ಸಂಗತಿಯ ಬಗ್ಗೆ ನಿಮಗೆ ಅರಿವಿರಬೇಕು. ಆ ವಸ್ತುವಿನ ವಾರಂಟಿ ಎಷ್ಟಿದೆ? ವಾರಂಟಿ ಕೊಡುವವರಾರು? ಮ್ಯಾನುಫ್ಯಾಕ್ಚರರ್ ಅಥವಾ ಸೆಲ್ಲರ್ ಇನ್ ಸ್ಟೀವಾಶನ್ ಚಾರ್ಜಸ್ ಇದೆಯೊ ಇಲ್ಲವೋ, ಆನ್ ಸೈಟ್ ವಾರಂಟಿ ಇದೆಯೋ ಇಲ್ಲವೋ ಪ್ರಾಡಕ್ಟ್ ಸರ್ವೀಸ್ ಸೆಂಟರ್‌ಗಳು ಎಷ್ಟಿವೆ ಎನ್ನುವುದನ್ನು ತಿಳಿದುಕೊಳ್ಳಬೇಕು. ನೀವು ಜ್ಯೂವೆಲರಿ ಖರೀದಿಸುತ್ತಿದ್ದರೆ ಮೇಕಿಂಗ್ ಚಾರ್ಜೆಸ್ ಹೆಚ್ಚಿಗೆ ಇಲ್ಲ ತಾನೇ, ಒಂದು ಜ್ಯೂವೆಲರಿಯಲ್ಲಿ ಗೋಲ್ಡ್, ಡೈಮಂಡ್ ಅಥವಾ ಸ್ಟೋನ್ಸ್ ಅಳವಡಿಸಲಾಗಿದ್ದರೆ ಪ್ರತಿಯೊಂದರ ತೂಕದ ವಿವರ ಹಾಗೂ ಕ್ಯಾರೆಟ್ ಉಲ್ಲೇಖ ಮಾಡಿದ್ದಾರೆಯೇ ಎನ್ನುವುದನ್ನೂ ಗಮನಿಸಿ. ಡೈಮಂಡ್ ಜ್ಯೂವೆಲರಿ ಖರೀದಿಸುತ್ತಿದ್ದರೆ ಅದರ ಜೊತೆಗೆ ದೊರೆಯುವ ಸರ್ಟಿಫಿಕೇಟ್ ಗೆ ಮಾನ್ಯತೆ ಇರಬೇಕು.
ಸಿಹಿತಿಂಡಿಗಳ ಆನ್ ಲೈನ್ ಡೆಲಿವರಿ
ಹಬ್ಬದಲ್ಲಿ ಸಿಹಿ ತಿಂಡಿಗಳದ್ದೇ ದರ್ಬಾರು. ಪ್ರತಿಯೊಂದು ವಸ್ತುವನ್ನೂ ಆನ್ ಲೈನ್ ನಲ್ಲಿ ಆರ್ಡರ್ ಮಾಡಬಹುದು. ಆದರೆ ಸಿಹಿ ತಿಂಡಿಗಳನ್ನು ಅಂಗಡಿಗೆ ಹೋಗಿ ತರುವುದೇ ಸರಿ ಎಂದು ನೀವು ಅಂದುಕೊಂಡಿರುತ್ತೀರಿ. ಹೆಸರಾಂತ ಸ್ವೀಟ್ ಮಾರ್ಟ್ ಗಳಿಂದ ನಿಮ್ಮ ಇಷ್ಟದ ಸಿಹಿ ತಿಂಡಿಗಳನ್ನು ಆನ್ ಲೈನ್ ಮುಖಾಂತರ ತರಿಸಿಕೊಳ್ಳಬಹುದು. ರೇಟ್ ಕಾರ್ಡ್ ಕಣ್ಮುಂದೆ ಇರುವುದರಿಂದ ನಿಮಗೆಷ್ಟು ಬೇಕೋ ಅಷ್ಟು ಆನ್ ಲೈನ್ ನಲ್ಲಿ ಖರೀದಿಸಬಹುದು.
ಇತ್ತೀಚೆಗೆ ಲೋಕಲ್ ನಲ್ಲೂ ಸ್ವೀಟ್ ಮಾರ್ಟ್ ಗಳು ಆನ್ ಲೈನ್ ನಲ್ಲಿ ಸಿಹಿ ತಿಂಡಿಗಳನ್ನು ದೊರಕಿಸಿಕೊಡುತ್ತವೆ.
ಯಾವ ಸಂಗತಿ ಗಮನದಲ್ಲಿಡಬೇಕು?
ಸಿಹಿ ತಿಂಡಿಗಳನ್ನು ಯಾವಾಗಲೂ ಒಳ್ಳೆಯ ಅಂಗಡಿಗಳಿಂದಲೇ ತರಿಸಲು ಪ್ರಯತ್ನಿಸಿ. ಹಬ್ಬದ ಸಂದರ್ಭದಲ್ಲಿ ಬೇಗ ಹಾಳಾಗದಂತಹ ತಿಂಡಿಗಳಿಗೆ ಆರ್ಡರ್ ಕೊಡಿ. ಯಾವುದೊ ಒಂದು ಅಂಗಡಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಹಿ ತಿಂಡಿಗಳನ್ನು ಕೊಡುತ್ತಿದೆಯೆಂದರೆ, ಅದಕ್ಕೆ ಬಳಸಿದ ಸಾಮಗ್ರಿಗಳು ಕಳಪೆ ಆಗಿರಬಹುದು. ಹಾಗಾಗಿ ಗುಣಮಟ್ಟದ ಬಗ್ಗೆ ಗಮನವಿಟ್ಟು ಖರೀದಿಸಿ.
ಕಾಸ್ಮಿಟಿಕ್ಸ್ ಖರೀದಿ : ಸ್ವಲ್ಪ ಎಚ್ಚರವಹಿಸಿ ನೀವು ಆನ್ ಲೈನ್ ನಲ್ಲಿ ಕಾಸ್ಮೆಟಿಕ್ಸ್ ಖರೀದಿಸಲು ಹೊರಟಿದ್ದರೆ, ಬೆಸ್ಟ್ ಕಾಸ್ಮೆಟಿಕ್ ಸೈಟ್ಸ್ ನಿಂದಲೇ ಖರೀದಿಸಿ. ಏಕೆಂದರೆ ಇಲ್ಲಿ ಬ್ಯೂಟಿ ಪ್ರಾಡಕ್ಟ್ ಗಳ ಬಹುದೊಡ್ಡ ಸಂಗ್ರಹವೇ ಇರುತ್ತದೆ.
– ಪ್ರತಿನಿಧಿ
ಕೊರೋನಾ ಬದಲಿಸಿದ ಆನ್ ಲೈನ್ ಶಾಪಿಂಗ್ ಚಿತ್ರಣ
ಹಲವು ವರ್ಷಗಳ ಹಿಂದಿನಿಂದಲೇ ಆನ್ ಲೈನ್ ಶಾಪಿಂಗ್ ನಡೆಯುತ್ತಿದೆ. ಏಕೆಂದರೆ ಆನ್ ಲೈನ್ ಶಾಪಿಂಗ್‌ನ ದಿಸೆಯಲ್ಲಿ 2017ರಲ್ಲಿ ಮಹತ್ವದ ತಿರುವು ಬಂತು. ಏಕೆಂದರೆ ಈ ಅವಧಿಯಲ್ಲಿ ಶೇ.80ರಷ್ಟು ಜನರ ಬಳಿ ಸ್ಮಾರ್ಟ್‌ಫೋನ್‌ಗಳು ಬಂದವು. ಆದರೆ ಅದಕ್ಕೂ ಹೆಚ್ಚಾಗಿ ಕೊರೋನಾದ ಕಾರಣದಿಂದ ಆನ್ ಲೈನ್ ಖರೀದಿಗೆ ಹೆಚ್ಚು ಮಹತ್ವ ಬಂತು. ಪೆನ್ಸಿಲ್ವೇನಿಯಾ ವಿವಿಯ ವಾಟರ್ನ್ ಸ್ಕೂಲ್ ಆಫ್ ಬಿಸ್‌ನೆಸ್ ಮಾರ್ಕೇಟಿಂಗ್ ಪ್ರೊಫೆಸರ್ ಬಾರ್ಬರಾ ಕಾನ್ ಹೇಳುವುದೇನೆಂದರೆ, ಮುಂದಿನ 3-4 ವರ್ಷಗಳಲ್ಲಿ ಮಾಡಬಹುದಾದ ಪ್ರಗತಿಯನ್ನು ಈಗಲೇ ಮಾಡಿದೆ ಎಂದು ಹೇಳಿದ್ದಾರೆ.
ಈ ಸಂಗತಿಗಳನ್ನು ಗಮನದಲ್ಲಿಡಿ
ಶಾಪಿಂಗ್‌ನ್ನು ಯಾವಾಗಲೂ ಹೆಸರಾಂತ ಆನ್ ಲೈನ್ ಸೈಟ್‌ಗಳಿಂದಲೇ ಮಾಡಿ.
ಆನ್ ಲೈನ್ ಶಾಪಿಂಗ್ ಗೂ ಮುಂಚೆ ಆಫರ್ಸ್‌ಗಳನ್ನು ಅವಶ್ಯವಾಗಿ ಚೆಕ್ ಮಾಡಿ.
ಎಕ್ಸ್ ಚೇಂಜ್ ಆಫರ್ಸ್‌ಗಳು ಒಂದು ವೇಳೆ ಲಾಭಕರ ಎಂದು ಸಾಬೀತಾದರೆ ಅದರ ಲಾಭ ಪಡೆದುಕೊಳ್ಳಿ.
ಯಾವುದೇ ಬಗೆಯ ಮೋಸದಿಂದ ಪಾರಾಗಲು ಕೋಡ್‌ನ ಆಪ್ಶನ್ ಆಯ್ಕೆ ಮಾಡಿಕೊಳ್ಳಿ.
ಒಂದು ಉತ್ಪನ್ನ ಖರೀದಿಸುವಾಗ ಅದರ ಶಿಪ್ಪಿಂಗ್ ಚಾರ್ಜ್ ನಿಮಗೆ ಕೊಡಬೇಕಾಗಿದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಿ.
ಆನ್ ಲೈನ್ ಪೇಮೆಂಟ್ ಮಾಡುವ ಸಮಯದಲ್ಲಿ ಎಂದೂ ನಿಮ್ಮ ಕಾರ್ಡ್‌ನ್ನು ಸೇವ್ ಮಾಡಬೇಡಿ.
ಆನ್ ಲೈನ್ ಶಾಪಿಂಗ್ ಮಾಡುವಾಗ ಯಾವಾಗಲೂ ನಿಮ್ಮ ಇಮೇಲ್ ಐಡಿ ರೆಡಿ ಇಟ್ಟುಕೊಳ್ಳಿ. ಏಕೆಂದರೆ ಆರ್ಡರ್‌ನ ಸಂಪೂರ್ಣ ಮಾಹಿತಿ ನಿಮಗೆ ಲಭಿಸಬೇಕು.
ಒಂದು ಉತ್ಪನ್ನದ ಗುಣಮಟ್ಟ ಗಾತ್ರ ಸರಿಯಾಗಿರದಿದ್ದರೆ ಅದನ್ನು ಮರಳಿಸಲು ರಿಟರ್ನ್ ಪಾಲಿಸಿಯ ಬಗ್ಗೆ ಚೆನ್ನಾಗಿ ಕೇಳಿ ತಿಳಿದುಕೊಳ್ಳಿ.
ರೇಟಿಂಗ್ ಗಮನದಲ್ಲಿಟ್ಟುಕೊಂಡು ಸಾಮಗ್ರಿ ಖರೀದಿಸಿ.
ಸ್ವದೇಶಿ ವಸ್ತುಗಳನ್ನೇ ಖರೀದಿಸಿ
ನಾವು ಆನ್ ಲೈನ್ ಶಾಪಿಂಗ್ ಮಾಡುವಾಗ ಬೇರೆ ಬೇರೆ ಬ್ರಾಂಡ್ ಗಳ ವಸ್ತುಗಳು ನೋಡಲು ಸಿಗುತ್ತವೆ. ಹಾಗಾಗಿ ಅವನ್ನು ನೋಡುತ್ತಲೇ ಖರೀದಿಸಿಬಿಡುತ್ತೇವೆ. ಅವು ನಮ್ಮ ಅಗತ್ಯ ವಸ್ತು ಆಗಿರಬಹುದು ಅಥವಾ ಐಷಾರಾಮಿ ವಸ್ತು ಆಗಿರಬಹುದು. ಆದರೆ ಖರೀದಿಸುವಾಗ ಅವುಗಳ ಉತ್ಪಾದಕರ ಬಗ್ಗೆ ಗಮನಿಸಿ. ಸಾಧ್ಯವಾದಷ್ಟು ನಮ್ಮ ದೇಶದಲ್ಲಿ ತಯಾರಾದ ವಸ್ತುಗಳನ್ನೇ ಖರೀದಿಸಿ. ಹೀಗಾಗಿ ಉತ್ಪನ್ನದ ವಿವರಗಳನ್ನು ಗಮನಿಸಿ. ಉತ್ಪಾದಕರ ದೇಶದ ಹೆಸರು ಸಹ ಅದರಲ್ಲಿರುತ್ತದೆ. ಇದರಿಂದ ಸ್ವದೇಶಿ ವಸ್ತುಗಳನ್ನು ಖರೀದಿಸಲು ಅನುಕೂಲವಾಗುತ್ತದೆ. ಅದರಿಂದ ಸ್ವದೇಶಿ ಕಂಪನಿಗಳಿಗೆ ಲಾಭವಾಗುತ್ತದೆ.
ಆನ್ ಲೈನ್ ಶಾಪಿಂಗ್‌ನ ಲಾಭಗಳು
ಕೊರೋನಾ ಸಮಯದಲ್ಲಿ ನೀವು ಜನರ ಸಂಪರ್ಕಕ್ಕೆ ಬರುವುದು ತಪ್ಪುತ್ತದೆ.
ಆಫರ್ಸ್ ಗಳ ಸಂಪೂರ್ಣ ಲಾಭ ಪಡೆಯಲು ಸಾಧ್ಯವಾಗುತ್ತದೆ.
ಒಂದು ವೇಳೆ ನಿಮಗೆ ಒಂದು ವಸ್ತು ಇಷ್ಟವಾಗದಿದ್ದರೆ ಅದನ್ನು ನೀವು ವಾಪಸ್ ಕಳಿಸಬಹುದು, ಬದಲಿಸಿ ತೆಗೆದುಕೊಳ್ಳಬಹುದು.
ಹಬ್ಬದ ಸಂದರ್ಭದಲ್ಲಿ ಬೇರೆಯವರ ಮನೆಗಳಿಗೆ ಉಡುಗೊರೆಗಳನ್ನು ಸುಲಭವಾಗಿ ಆನ್ ಲೈನ್ ಮೂಲಕ ತಲುಪಿಸಬಹುದು. ಇದರಿಂದ ನೀವು ಹಬ್ಬಗಳಲ್ಲಿ ಪರಸ್ಪರರ ಸಂಪರ್ಕಕ್ಕೆ ಬರುವಿರಿ.