ಹಬ್ಬಗಳ ಆಗಮನದ ಜೊತೆಗೆ ಶಾಪಿಂಗ್‌ನ ಕ್ರೇಜ್‌ ಕೂಡ ಸಾಕಷ್ಟು ಹೆಚ್ಚುತ್ತದೆ. ಈ ಸಮಯದಲ್ಲಿ ಶಾಪಿಂಗ್‌ ಕೇವಲ ನಿಮ್ಮನ್ನು ನೀವು ಅಂದವಾಗಿಟ್ಟುಕೊಳ್ಳಲು ಅಲ್ಲ, ನಿಮ್ಮ ಮನೆ ಅಲಂಕರಿಸಲು, ನಿಮ್ಮವರಿಗೆ ಉಡುಗೊರೆ ಕೊಡಲು ಕೂಡ ಮಾಡಲಾಗುತ್ತದೆ. ಇದಕ್ಕಾಗಿ ನಾವು ಲೋಕಲ್ ಮಾರ್ಕೆಟ್‌ನಿಂದ ಹಿಡಿದು ಮಾಸ್ಕ್ ತನಕ ಸುತ್ತಾಡಿಸುತ್ತೇವೆ. ಏಕೆಂದರೆ ಯಾವ ಟ್ರೆಂಡ್‌ ನಡೆಯುತ್ತಿದೆ ಎನ್ನುವುದರ ಮಾಹಿತಿ ದೊರೆಯುವುದರ ಜೊತೆಗೆ ಬೆಸ್ಟ್ ನಲ್ಲಿ ಬೆಸ್ಟ್ ವಸ್ತು ಖರೀದಿಸಿ ಮನೆಯನ್ನು ಹೊಸ ರೀತಿಯಲ್ಲಿ ಮೇಕ್‌ ಓವರ್‌ ಮಾಡಲು ಸಾಧ್ಯವಾಗುತ್ತದೆ.

ಹೊರಗಡೆ ಹೋಗಿ ಮುಕ್ತವಾಗಿ ಖರೀದಿ ಮಾಡುವ ಸ್ವಾತಂತ್ರ್ಯವನ್ನು ಕೊರೋನಾ ಕಸಿದುಕೊಂಡಿದೆ. ಇಂತಹ ಸ್ಥಿತಿಯಲ್ಲಿ ಆನ್‌ ಲೈನ್‌ ಶಾಪಿಂಗ್‌ ಒಳ್ಳೆಯ ಆಪ್ಶನ್‌ ಆಗಿದೆ.

ಕಳೆದ ಕೆಲವು ವರ್ಷಗಳಿಂದ ಆನ್‌ ಲೈನ್‌ ಖರೀದಿ ಭರಾಟೆ ಸಾಕಷ್ಟು ಹೆಚ್ಚಿದೆ. ಇತ್ತೀಚೆಗೆ ಗ್ರಾಸರಿ ಐಟಂಗಳ ಮೇಲೆ ನಗರ ಪ್ರದೇಶಗಳ ನಾಗರಿಕರು ಆನ್‌ ಲೈನ್‌ ಶಾಪಿಂಗ್‌ ಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. `ಕೇಪ್‌ ಜೆಮಿನಿ ರಿಸರ್ಚ್‌ ಇನ್‌ ಸ್ಟಿಟ್ಯೂಟ್' ಮುಖಾಂತರ ನಡೆಸಿದ ಸಮೀಕ್ಷೆಯಲ್ಲಿ ಶೇ.65ರಷ್ಟು ಭಾರತೀಯರು ಆನ್‌ ಲೈನ್‌ ನಲ್ಲಿ ಗ್ರಾಸರಿ ಹೆಚ್ಚು ಖರೀದಿಸುವುದಾಗಿ ಹೇಳುತ್ತಾರೆ. ಏಕೆಂದರೆ ಅವರಿಗೆ ಈ ಸಮಯದಲ್ಲಿ ಇದೇ ಹೆಚ್ಚು ಸೂಕ್ತವಾಗಿ ಕಾಣಿಸುತ್ತೆ.

ಅಮೆರಿಕಾದ ಶೇ.25ರಷ್ಟು ಜನರು ಸಹ ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ಟೋರ್‌ ಗಳಲ್ಲಿ ಖರೀದಿಸುವುದಕ್ಕಿಂತ ಆನ್‌ ಲೈನ್‌ ಖರೀದಿಸುವುದೇ ಹೆಚ್ಚು ಜಾಣತನ ಎಂದು ಭಾವಿಸುತ್ತಾರೆ. ಉಳಿದವರಿಗೂ ಅವರು ಹೀಗೆಯೇ ಮಾಡಲು ಸಲಹೆ ನೀಡುತ್ತಾರೆ. ದ್ವಿಗುಣಗೊಂಡ ಆನ್‌ ಲೈನ್‌ ಮಾರ್ಕೆಟ್‌ ಕೊರೋನಾ ಕಾರಣದಿಂದ ಭಾರತದಲ್ಲಿ ಫ್ಯಾಷನ್‌ ಹಾಗೂ ಲೈಫ್‌ ಸ್ಟೈಲ್ ‌ಮಾರುಕಟ್ಟೆಗೆ ಆನ್‌ ಲೈನ್‌ ನಲ್ಲಿ ಭಾರಿ ಜಿಗಿತ ಕಂಡುಬಂದಿದೆ. 2021ರ ಅಂತ್ಯದ ತನಕ ಅದು ದ್ವಿಗುಣಗೊಳ್ಳುವ ಅಂದಾಜು ಇದೆ.

ಕಾಮರ್ಸ್ಪ್ಲಾಟ್ಫಾರ್ಮ್

ಭಾರತದಲ್ಲಿ 450 ಮಿಲಿಯನ್‌ ಇಂಟರ್‌ ನೆಟ್‌ ಯೂಸರ್‌ ಬೇಸ್‌ ಆಗಿದ್ದು, 2020ರಲ್ಲಿ 62% ಹೆಚ್ಚಳಗೊಂಡು 729 ಮಿಲಿಯನ್‌ ಆಗಿದೆ. 310 ಆ್ಯಕ್ಟಿವ್ ‌ಇಂಟರ್‌ ನೆಟ್‌ ಆ್ಯಕ್ಸೆಸಿಂಗ್‌ ಜನಸಂಖ್ಯೆಯು ತಿಂಗಳಲ್ಲಿ 1 ಸಲ ಖರೀದಿಸುತ್ತಾರೆ. ಆ ಸಂಖ್ಯೆಯಲ್ಲಿ ಶೇ.35 ರಷ್ಟು ಹೆಚ್ಚಳಗೊಂಡು 419 ಮಿಲಿಯನ್‌ಗೆ ಹೆಚ್ಚಳಾಗಬಹುದು ಎಂಬ ಅಂದಾಜಿದೆ.

ಆನ್‌ ಲೈನ್‌ ಶಾಪಿಂಗ್‌ಅವಲಂಬನೆ ಹೆಚ್ಚುತ್ತಿರುವಾಗ ನಾವು ಕೂಡ ಸ್ಮಾರ್ಟ್‌ ಆಗಿ ಶಾಪಿಂಗ್‌ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು. ಅದರಿಂದ ಸುರಕ್ಷತೆ ಹಾಗೂ ಉಳಿತಾಯ ಎರಡೂ ಕೂಡ ಸಾಧ್ಯವಾಗಬೇಕು.

ಬಟ್ಟೆ ಖರೀದಿಸುವಾಗ ತಿಳಿವಳಿಕೆ ಹಬ್ಬಗಳ ಸಂದರ್ಭದಲ್ಲಿ ಅಲಂಕಾರದ ಟ್ರೆಂಡ್‌ ಜೋರಾಗಿರುತ್ತದೆ. ಇಂತಹ ಸಂದರ್ಭದಲ್ಲಿ ನೀವು ಬಟ್ಟೆ ಖರೀದಿಸದಿದ್ದರೆ ಹಬ್ಬದ ಕಳೆಗೆ ಮಂಕು ಕವಿದಂತೆ. ನೀವು ನಿಮಗಾಗಿ, ಮಕ್ಕಳಿಗಾಗಿ ಅಥವಾ ಕುಟುಂಬವದರಿಗಾಗಿ ಬಟ್ಟೆ ಖರೀದಿಸುವುದಿದ್ದರೆ, ಕೊನೆಯ ಗಳಿಗೆಯ ಖರೀದಿಗಾಗಿ ಕಾಯಬೇಡಿ. ಹಬ್ಬಕ್ಕಿಂತ ಮುಂಚೆಯೇ ಆನ್‌ ಲೈನ್‌ ಸೈಟ್ಸ್ ಗಳಲ್ಲಿ ಸೇಲ್ ಆರಂಭವಾಗಿರುತ್ತದೆ. ಅದರ ಲಾಭ ಪಡೆದುಕೊಳ್ಳಿ. ನೀವು ಸೇಲ್ ನ ದಿನಗಳಲ್ಲಿ ಖರೀದಿಸದಿದ್ದರೆ, ಯಾವ ಸೈಟ್‌ ನಲ್ಲಿ ನಿಮಗೆ ಯಾವುದು ಇಷ್ಟವಾಗುತ್ತದೋ ಅದನ್ನು ತಕ್ಷಣವೇ ಖರೀದಿ ಮಾಡದೆ, ಬೇರೆ ಸೈಟ್‌ ಗಳಲ್ಲಿ ಅದನ್ನು ಹೋಲಿಕೆ ಮಾಡಿ ನೋಡಿ. ಹೀಗೆ ಮಾಡಿದಾಗ ನಿಮಗೆ ಮೊದಲಿಗಿಂತ ಹೆಚ್ಚು ಆಪ್ಶನ್‌ ಗಳು ದೊರಕಬಹುದು. ನೀವು ಇಷ್ಟಪಟ್ಟ ಡ್ರೆಸ್‌ ಬೇರೆ ಸೈಟ್‌ ಗಳಲ್ಲಿ ಮೊದಲಿಗಿಂತ ಕಡಿಮೆ ಬೆಲೆಯಲ್ಲಿ ದೊರಕಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ