ಹಬ್ಬಗಳ ಅರ್ಥವೇ ಸಾಕಷ್ಟು ಖುಷಿಪಡುವುದಾಗಿದೆ. ಸಾಕಷ್ಟು ಸಿಹಿ ಪದಾರ್ಥಗಳು ಹಾಗೂ ಇತರೆ ಆಹಾರಗಳನ್ನು ತಯಾರಿಸುವುದು ಮತ್ತು ಮನೆಯನ್ನು ಚೆಂದವಾಗಿಡುವುದಾಗಿದೆ. ಮನೆಯ ಸ್ವಚ್ಛತೆಯ ಬಗ್ಗೆ ಪ್ರಸ್ತಾಪ ಬಂದಾಗ, ಅಡುಗೆಮನೆಯನ್ನು ಸ್ವಚ್ಛವಾಗಿಡುವುದರ ಬಗ್ಗೆ ಗಮನ ಕೊಡುವುದಾಗಿದೆ. ಏಕೆಂದರೆ ಅದರಲ್ಲಿಯೇ ನಾವು ನಮ್ಮ ಆರೋಗ್ಯದ ಬಗ್ಗೆ ಗಮನ ಕೊಡುವುದರ ಜೊತೆ ಜೊತೆಗೆ ಹಬ್ಬದಲ್ಲಿ ಬಗೆ ಬಗೆಯ ಪಕ್ವಾನ್ನಗಳನ್ನು ತಯಾರಿಸಿ ಅತಿಥಿಗಳನ್ನು ಸ್ವಾಗತಿಸುತ್ತೇವೆ.

ಒಂದು ವೇಳೆ ನಿಮ್ಮ ಅಡುಗೆಮನೆ ಸ್ವಚ್ಛವಾಗಿರದೇ ಇದ್ದರೆ, ಸಲಕರಣೆಗಳನ್ನು ಸರಿಯಾಗಿ ಪೇರಿಸಿ ಇಡದೇ ಇದ್ದರೆ, ನಿಮಗೆ ಹಬ್ಬದ ಆನಂದದ ಅನುಭವ ಪಡೆದುಕೊಳ್ಳಲು ಆಗುವುದಿಲ್ಲ. ಹೀಗಾಗಿ ಈ ಹಬ್ಬದಲ್ಲಿ ನೀವು ನಿಮ್ಮ ಅಡುಗೆಮನೆಯ ನೈರ್ಮಲ್ಯವನ್ನು ಗಮನದಲ್ಲಿಟ್ಟುಕೊಂಡು ಅದನ್ನು ಹಬ್ಬಕ್ಕಾಗಿ ಹೀಗೆ ಸಜ್ಜುಗೊಳಿಸಿ. ಕೆಲವು ಸುಲಭ ಟಿಪ್ಸ್ ತಿಳಿದುಕೊಳ್ಳಿ :

ನಿಮ್ಮ ಸ್ವಚ್ಛತೆಯಿಂದ ಆರಂಭವಾಗಲಿ.....

ಅಡುಗೆಮನೆಯ ನೈರ್ಮಲ್ಯದ ಬಗ್ಗೆ ಯೋಚಿಸುವ ಮೊದಲು ನೀವು ನಿಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಬೇಕಾಗುತ್ತದೆ. ಏಕೆಂದರೆ ಪ್ರತಿದಿನ ಮನೆ ಹಾಗೂ ಹೊರಗಿನ ಕೆಲಸ ಮಾಡುತ್ತ ಯಾವಾಗ ನಾವು ರೋಗಾಣುಗಳ ಸಂಪರ್ಕಕ್ಕೆ ಬರುತ್ತೇವೋ ಗೊತ್ತೇ ಆಗುವುದಿಲ್ಲ. ಅವು ನಮ್ಮ ಕಣ್ಣಿಗೆ ಗೋಚರಿಸದ ಕಾರಣ, ನಮ್ಮ ಕೈಗಳು ಸ್ವಚ್ಛವಾಗಿವೆ ಎಂದು ನಾವು ಭಾವಿಸುತ್ತೇವೆ. ಆದರೆ ಅದು ಹಾಗಲ್ಲ.

ನಾವು ಯಾವುದಾದರೂ ಒಂದು ವಸ್ತುವನ್ನು ಮುಟ್ಟಿದಾಗ ಅಥವಾ ಯಾರದ್ದಾದರೂ ಕೈ ಮುಟ್ಟಿದಾಗ, ನಾವು ಪ್ರತಿಸಲ ರೋಗಾಣುಗಳು ನಮ್ಮ ಕೈಗೆ ಪ್ರವೇಶಿಸಲು ಆಮಂತ್ರಣ ಕೊಡುತ್ತೇವೆ. ಆ ಕಾರಣದಿಂದ ಇನ್‌ಫೆಕ್ಷನ್‌ ಹಾಗೂ ಫುಡ್‌ ಪಾಯಿಸನಿಂಗ್‌ ಆಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಅದು ಜೀವಕ್ಕೆ ಕುತ್ತು ತರಬಹುದು. ಇಂತಹ ಸ್ಥಿತಿಯಲ್ಲಿ ನಾವು ಮೇಲಿಂದ ಮೇಲೆ ನಮ್ಮ ಕೈಗಳನ್ನು ಸ್ಯಾನಿಟೈಸರ್‌ ನಿಂದ ಸ್ವಚ್ಛಗೊಳಿಸುತ್ತ ಇರಬೇಕು. ಹೀಗೆ ಮಾಡುವುದರಿಂದ ನಾವು ಅನಾರೋಗ್ಯ ಪೀಡಿತರಾಗುವುದು ತಪ್ಪುತ್ತದೆ ಮತ್ತು ಹಬ್ಬದ ಸಂದರ್ಭದಲ್ಲಿ ನಮ್ಮವರ ಬಗ್ಗೆ ಹೆಚ್ಚು ಗಮನಕೊಡಲು ಸಾಧ್ಯವಾಗುತ್ತದೆ.

ವಸ್ತುಗಳನ್ನು ಸರಿಯಾಗಿ ಜೋಡಿಸಿ

ನೀವು ವಾರ್ಡ್‌ ರೋಬ್‌ ನ್ನು ಅರೇಂಜ್‌ ಮಾಡಿ ಇಟ್ಟರೆ, ವಾರ್ಡ್‌ ರೋಬ್‌ ಸುಂದರವಾಗಿ ಕಾಣುವುದರ ಜೊತೆಗೆ, ವಸ್ತುಗಳು ಸಹ ಸುಲಭವಾಗಿ ಸಿಗುತ್ತವೆ. ಅದೇ ರೀತಿ ನೀವು ನಿಮ್ಮ ಅಡುಗೆಮನೆಯ ವಸ್ತುಗಳನ್ನು ಅರೇಂಜ್‌ ಮಾಡಿಡಿ. ಬಹಳಷ್ಟು ಮಹಿಳೆಯರು ಸಣ್ಣಪುಟ್ಟ ವಸ್ತುಗಳನ್ನು ಅಡುಗೆಮನೆಯಲ್ಲಿ ಅಲ್ಲಿ ಇಲ್ಲಿ ಇಡುತ್ತಾರೆ. ಹೀಗಾಗಿ ಅಡುಗೆಮನೆ ಚೆಂದವಾಗಿ ಕಾಣುವುದಿಲ್ಲ. ಅಷ್ಟೇ ಅಲ್ಲ, ವಸ್ತುಗಳು ಹಾಗೆಯೇ ಮುಕ್ತವಾಗಿ ಬಿದ್ದುಕೊಳ್ಳುವುದರಿಂದ ಅದರಲ್ಲಿ ಬ್ಯಾಕ್ಟೀರಿಯಾ ಉತ್ಪನ್ನವಾಗುವ ಸಾಧ್ಯತೆ ಹೆಚ್ಚುತ್ತದೆ. ಅಂತಹ ಸಾಮಗ್ರಿಗಳನ್ನು ಬಳಸುವುದರಿಂದ ನಾವು ರೋಗಪೀಡಿತರಾಗಬಹುದು.

ಹಬ್ಬ ಬರುವ ಸಂದರ್ಭದಲ್ಲಿ ನಿಮ್ಮ ಒಂದಿಷ್ಟು ನಿರ್ಲಕ್ಷತೆ ಹಬ್ಬದ ಉತ್ಸಾಹಕ್ಕೆ ಭಂಗವನ್ನುಂಟು ಮಾಡಬಹುದು. ಹೀಗಾಗಿ ನೀವು ಮೊದಲಿನಿಂದಲೇ ಅಡುಗೆಮನೆಯ ಯಾವುದೇ ಒಂದು ಸಾಮಗ್ರಿಯನ್ನು ಡಬ್ಬಗಳಲ್ಲಿ ಹಾಕಿಡಲು ಕಲಿಯಿರಿ. ಆದ್ದರಿಂದ ವಸ್ತುಗಳು ಸುಲಭವಾಗಿ ದೊರೆಯುತ್ತವಲ್ಲದೆ, ಅಡುಗೆಮನೆಯು ಸುಂದರವಾಗಿ ಕಾಣುತ್ತದೆ. ವಸ್ತುಗಳು ಹಾಳಾಗುವ ಟೆನ್ಷನ್‌ ಕೂಡ ಇರುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ