ಕೊರೋನಾ ಎಂತೆಂಥವರನ್ನೋ ನೆಲ ಕಚ್ಚುವಂತೆ ಮಾಡಿದೆ. ಆರ್ಥಿಕವಾಗಿ ಬಹಳ ಸಂಕಷ್ಟಕ್ಕೆ ದೂಡಿತು. ಹೀಗಾಗಿ ಈ ಸಲದ ದೀಪಾವಳಿ ಹಬ್ಬವನ್ನು ನಿಮ್ಮ ಜೇಬಿಗೆ ಹೊರೆ ಆಗುವಂತೆ ಮಾಡಿಕೊಳ್ಳಬೇಡಿ. ನೀವು ಏನನ್ನು ಖರೀದಿಸಬೇಕಾಗಿದೆಯೊ, ಅದನ್ನು ನಿಮಗಾಗಿ ಮಾತ್ರ ಖರೀದಿಸಿ. ನಿಮ್ಮ ಸ್ಟಡಿ ಟೇಬಲ್ ಗೆ, ಮನೆಯ ಇಂಟೀರಿಯರ್ ಗೆ ಹೊಸ ರೂಪ ಕೊಡಿ. ಏಕೆಂದರೆ ನಿಮ್ಮ ಹಣ ನಿಮ್ಮ ಮನೆಯಲ್ಲಿಯೇ ಇರಲಿ ಮತ್ತು ನೀವು ನಿಮ್ಮ ಮನೆಯನ್ನು ಸುಂದರವಾಗಿಡಲು ಸಾಧ್ಯವಾಗುತ್ತದೆ. ಸಾಮಾಜಿಕ ಅಂತರ ಕಾಪಾಡುವುದು ಇನ್ನೂ ಅಗತ್ಯವಿದೆ. ಹಾಗಾಗಿ ಹೊರಗೆ ಹೋಗುವ ಬಗ್ಗೆ ಬಹಳ ಎಚ್ಚರವಹಿಸಿ. ಶಾಪಿಂಗ್ ಮಾಡುವಾಗ, ಗಿಫ್ಟ್ ಖರೀದಿಸುವಾಗ ಜನದಟ್ಟಣೆಯನ್ನು ಗಮನಿಸಿ.
ಇಷ್ಟು ವರ್ಷಗಳ ಕಾಲ ದೀಪಾವಳಿ ಹಬ್ಬವನ್ನು ನೀವು ಹೆಚ್ಚು ಕಡಿಮೆ ಬೇರೆಯವರಿಗಾಗಿಯೇ ಆಚರಿಸಿರುವಿರಿ. ಬೇರೆಯವರಿಗೆ ಗಿಫ್ಟ್ ಖರೀದಿಸಿ ಕೊಟ್ಟಿರಿ. ಆದರೆ ಈ ಸಲ ಗಿಫ್ಟ್ ಗಳನ್ನು ನಿಮಗಾಗಿಯೇ ಖರೀದಿಸಿ. ಈ ರೀತಿ ಮಾಡುವುದರ ಮೂಲಕ ನಿಮಗೆ ಹೊಸ ರೀತಿಯ ಖುಷಿಯ ಸಂಚಲನವಾಗುತ್ತದೆ.
ಕಿಚನ್ ಗೆ ಸ್ಟೈಲಿಶ್ ಲುಕ್ ಕೊಡಿ
ಮನೆಯಲ್ಲಿ ಅಡುಗೆಮನೆ ಎಂತಹ ಜಾಗದಲ್ಲಿರುತ್ತದೆಂದರೆ, ಅಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡುತ್ತೇವೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು ಹೆಚ್ಚು ಹೊತ್ತು ಅಡುಗೆಮನೆಯಲ್ಲಿಯೇ ಇರಬೇಕಾಗಿ ಬರುತ್ತದೆ. ಇಂತಹ ಸ್ಥಿತಿಯಲ್ಲಿ ನಿಮ್ಮ ಅಡುಗೆ ಮನೆ ಸ್ಟೈಲಿಶ್ ಆಗಿದ್ದರೆ, ಅಲ್ಲಿ ನಿಮಗೆ ಕೆಲಸ ಮಾಡಲು ಹೆಚ್ಚು ಖುಷಿ ಕೊಡುತ್ತದೆ. ಜೊತೆಗೆ ನಿಮ್ಮ ಅಡುಗೆಮನೆ ನಿಮ್ಮ ಮನೆಯ ಲುಕ್ ನ್ನೇ ಬದಲಿಸುತ್ತದೆ. ಏಕೆಂದರೆ ಈಗ ಓಪನ್ ಮಾಡ್ಯುಲರ್ ಕಿಚನ್ ಹೆಚ್ಚು ಟ್ರೆಂಡ್‌ನಲ್ಲಿ ಇದೆ.
ನೀವು ನಿಮ್ಮ ಅಡುಗೆಮನೆಯಲ್ಲಿ ಅಡ್ವಾನ್ಸ್ಡ್ ಕಂಟೇನರ್ಸ್ ಇಡಬಹುದಾಗಿದೆ. ಈವರೆಗೆ ನೀವು ಬೇಳೆಗಳನ್ನು ಮಸಾಲೆಗಳನ್ನು ಸಾಧಾರಣ ಡಬ್ಬಗಳಲ್ಲಿ ಇಡುತ್ತಿದ್ದಿರಿ. ಈಗ ನೀವು ಅವುಗಳನ್ನು ಕಟಿಂಗ್ ಡೆಲ್ ಟ್ವಿಸ್ಟರ್ ಏರ್ ಟೈಟ್ ಕಂಟೇನರ್ಸ್ ಗಳಲ್ಲಿ ಇಡಿ. 4 ಗ್ರಿಲ್ ಏರ್ ಟೈಟ್ ಕಂಟೇನರ್ಸ್ ಗಳಲ್ಲಿ ನೀವು ಏಕಕಾಲಕ್ಕೆ 4 ವಸ್ತುಗಳನ್ನು ಇಡಬಹುದಾಗಿದೆ. ಅದರ ಜೊತೆಗೆ ನೀವು ಅಡುಗೆಮನೆಯಲ್ಲಿ ವುಡನ್ ಮೂಲಿಂಗ್ ಕಂಟೇನರ್ ಕೂಡ ಇಡಬಹುದಾಗಿದೆ. ಅವು ಕಾಣಲು ಸ್ಮಾರ್ಟ್ ಆಗಿರುವುದರ ಜೊತೆ ಜೊತೆಗೆ ಅವ ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತವೆ. ಕೆಲವು ಕಂಟೇನರ್ ಗಳು ಹೇಗಿರುತ್ತವೆಯೆಂದರೆ, ಅವುಗಳ ಮೇಲೆ ಮೊದಲೇ ಮಸಾಲೆಗಳು ಹಾಗೂ ಬೇಳೆಗಳ ಹೆಸರುಗಳನ್ನು ಬರೆಯಲಾಗಿರುತ್ತದೆ. ಅವನ್ನು ಖರೀದಿಸಿ ನೀವು ಸ್ಮಾರ್ಟ್ ಲುಕ್ಸ್ ಮೂಡುವುದರ ಜೊತೆ ಜೊತೆಗೆ ನೀವು ಕಿಚನ್ ವರ್ಕ್‌ನ್ನು ಕೂಡ ಅಚ್ಚುಕಟ್ಟಾಗಿ ಮಾಡಬಹುದು.
ಬೆಲೆ : ಈ ಸ್ಮಾರ್ಟ್ ಕಂಟೇನರ್ಸ್ ಮಾರುಕಟ್ಟೆಯಲ್ಲಿ 500 ರೂ.ಗಳಿಂದ ಹಿಡಿದು 1500 ರೂ.ಗಳಲ್ಲಿ ಸುಲಭವಾಗಿ ಖರೀದಿಸಬಹುದು.
ಸೂಚನೆ : ನೀವು ಅಡುಗೆ ಮನೆಗಾಗಿ ಸ್ಟೋರೇಜ್ ಬಾಕ್ಸ್ ಖರೀದಿಸುವುದಿದ್ದರೆ, ಅದು ಬಿಪಿಎ ಫ್ರೀ ಆಗಿರಬೇಕು. ಏಕೆಂದರೆ ಬಿಪಿಎ ಪಾಲಿ ಕಾರ್ಬೋನೆಟ್ ಪ್ಲಾಸ್ಟಿಕ್ ನಲ್ಲಿ ಕಂಡುಬರುತ್ತದೆ. ಅದು ಆರೋಗ್ಯಕ್ಕಾಗಿ ಸುರಕ್ಷಿತಲ್ಲ. ಅದು ಹಾರ್ಮೋನ್ ಮೇಲೆ ಪ್ರಭಾವ ಬೀರುತ್ತದೆ. ಅಷ್ಟೇ ಅಲ್ಲ, ಸ್ಪರ್ಮ್ ಕೌಂಟ್ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಖರೀದಿಸುವಾಗ ಆ ವಿಷಯದ ಬಗ್ಗೆ ಗಮನಕೊಡಬೇಕು.
ಪರದೆಗಳಿಂದ ಹೆಚ್ಚು ಕಳೆ
ಮನೆಯ ಇಂಟೀರಿಯರ್ ಸೌಂದರ್ಯ ಹೆಚ್ಚಿಸಲು ಪರದೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಪರದೆಗಳ ಡಿಸೈನ್ ಹಾಗೂ ಬಣ್ಣ ಮನೆಯ ಮೆರುಗು ಹೆಚ್ಚಿಸಲು ಕಾರಣವಾಗುತ್ತದೆ. ಇಂತಹದರಲ್ಲಿ ನೀವು ನಿಮ್ಮ ಮನೆಯ ಒಂದೇ ರೀತಿಯ ಪರದೆಗಳನ್ನು ನೋಡಿ ನೋಡಿ ಬೇಸತ್ತು ಹೋಗಿದ್ದರೆ, ಈ ದೀಪಾವಳಿಗೆ ಹೊಸ ಪರದೆಗಳ ಮೂಲಕ ಮನೆಗೆ ಹೊಸ ರೂಪ ಕೊಡಿ.
ಮನೆಗೆ ಹೊಸ ಲುಕ್ಸ್ ಕೊಡಲು ಎಂತಹ ಪರದೆ ಖರೀದಿಸಬೇಕೆಂದು ನೀವು ಯೋಚಿಸುತ್ತಿದ್ದರೆ, ಅದನ್ನು ನೀವು ಈ ಕೆಳಕಂಡ ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಬೇಕಾಗುತ್ತದೆ. ನೀವು ಪರದೆಗಳನ್ನು ಕೇವಲ ಮನೆಯ ಅಂದಕ್ಕಾಗಿ ಮಾತ್ರ ಅಳವಡಿಸುತ್ತಿದ್ದೀರೊ ಅಥವಾ ಬೆಳಕನ್ನು ನಿಯಂತ್ರಣದಲ್ಲಿಡಲೋ ಎಂಬುದನ್ನು ನೋಡಬೇಕು. ನೀವು ಲೈನಿಂಗ್ ಇರುವ ಪರದೆಗಳನ್ನು ಖರೀದಿಸಬಹುದು. ಅವುಗಳಲ್ಲಿ ಡಿಸೈನ್ ಕೂಡ ಚೆನ್ನಾಗಿರುತ್ತವೆ ಮತ್ತು ಹೊರಗಿನ ಲೈಟ್ ನ್ನು ರೂಮಿನೊಳಗೆ ಬರದಂತೆ ತಡೆಯಬಹುದು.
ಮಾರ್ಕೆಟ್ ನಲ್ಲಿ ನೀವು ನೆಟ್, ಶಿಮರಿ, ಕಾಟನ್, ಪ್ರಿಂಟೆಡ್, ಪ್ಲೇನ್, ಲೇಸ್ ಹೀಗೆ ಬಹಳಷ್ಟು ವಿಭಿನ್ನ ಬಗೆಯ ಪರದೆಗಳು ಲಭಿಸುತ್ತವೆ. ಅವನ್ನು ನೀವು ನಿಮ್ಮ ಇಚ್ಛೆಗನುಸಾರ ಅಳವಡಿಸಬಹುದು. ನೀವು ಪರದೆಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ರೂಮ್ ನಲ್ಲಿ ಬಳಿದಿರುವ ಪೇಂಟ್ ಗನುಗುಣವಾಗಿ ಖರೀದಿಸಬಹುದು. ಗೋಡೆಯ ಬಣ್ಣ ಗಾಢವಾಗಿದ್ದರೆ, ನೀವು ಪರದೆಯನ್ನು ಲೈಟ್ ಕಲರಿನಲ್ಲಿ ಆಯ್ಕೆ ಮಾಡಿ. ಇದರಿಂದ ಕೋಣೆಗೆ ಮೆರುಗು ಬರುವುದರ ಜೊತೆ ಜೊತೆಗೆ ಬೆಳಕು ಕೂಡ ಬರುತ್ತದೆ. ಪರದೆಗಳ ಮೆಟೀರಿಯಲ್ ಅಲ್ಲಿ ಅಳವಡಿಸಲಾಗಿರುವ ರಾಡ್ ಗಳಿಗೆ ತಕ್ಕಂತೆ ಆಯ್ಕೆ ಮಾಡಿ. ಒಂದು ವೇಳೆ ಪರದೆಯು ಸಾಕಷ್ಟು ದಪ್ಪಗಿದ್ದರೆ, ರಾಡ್ ಕೂಡ ದಪ್ಪವಾಗಿರಲಿ. ಇಲ್ಲದಿದ್ದರೆ ಪರದೆ ಕೆಳಗೆ ಬೀಳುವ ಅಪಾಯವಿರುತ್ತದೆ. ನೀವು ಆಯ್ಕೆ ಮಾಡುವ ಹೊಸ ಪರದೆ ನಿಮ್ಮ ಮನೆಯ ಅಂದಕ್ಕೆ ಇನ್ನಷ್ಟು ಮೆರುಗು ಕೊಡುತ್ತದೆ.
ಬೆಲೆ : ಪರದೆಗಳ ಬೆಲೆ ಅವುಗಳ ಫ್ಯಾಬ್ರಿಕ್ ಹಾಗೂ ಗಾತ್ರ ಅವಲಂಬಿಸಿರುತ್ತದೆ. ಫ್ಯಾನ್ಸಿ ಪರದೆಯ ಬೆಲೆ 500-900 ತನಕ ಇರಬಹುದು.
ಸೂಚನೆ : ನೀವು ಆನ್ ಲೈನ್ ನಲ್ಲಿ ಪರದೆ ಖರೀದಿಸುವುದಿದ್ದರೆ ಗಾತ್ರಕ್ಕನುಗುಣವಾಗಿ ಖರೀದಿಸಿ ಹಾಗೂ ಅವುಗಳ ರಿವ್ಯೂ ಖಂಡಿತಾ ಗಮನಿಸಿ. ಆಮೇಲೆ ನೀವು ಬೇಸರ ಪಟ್ಟುಕೊಳ್ಳುವಂತೆ ಆಗಬಾರದು.
ಸ್ಟಡಿ ಟೇಬಲ್ ನಿಂದ ಹೊಸ ಲುಕ್ಸ್ ಕೊರೋನಾ ವರ್ಕ್ ಫ್ರಮ್ ಹೋಮ್ ಕಲ್ಪನೆಗೆ ಹೊಸ ರೂಪ ಕೊಟ್ಟಿದೆ. ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ನಿಮಗೆ ಕಂಫರ್ಟ್ ಎನಿಸದಿದ್ದರೆ ಕೆಲಸದಲ್ಲಿ ಮನಸ್ಸೂ ನಿಲ್ಲದು ಹಾಗೂ ಕೆಲಸದಲ್ಲಿ ಪ್ರೊಡಕ್ಟಿವಿಟಿಯೂ ಇರದು. ನೀವು ಬಹಳ ದಿನಗಳಿಂದ ಸ್ಟಡಿ ಟೇಬಲ್ ತೆಗೆದುಕೊಳ್ಳಲು ಯೋಚಿಸುತ್ತಿದ್ದರೆ, ಈ ದೀಪಾವಳಿ ಹಬ್ಬಕ್ಕೆ ಸ್ಟಡಿ ಟೇಬಲ್ ಖರೀದಿಸಿ ಮನೆಗೆ ಹೋಂ ಲುಕ್ ಕೊಡಿ.
ಅದಕ್ಕಾಗಿ ನೀವು ಕಾರ್ನರ್ ಸ್ಟಡಿ ಟೇಬಲ್ ಕೂಡ ಖರೀದಿಸಬಹುದು. ಅದು ಡೆಕೋರೇಶನ್ ದೃಷ್ಟಿಯಿಂದಲೂ ಉಪಯೋಗಕ್ಕೆ ಬರುತ್ತದೆ ಹಾಗೂ ಅದರ ಬಳಿ ಕುಳಿತು ಕೆಲಸ ಕೂಡ ಮಾಡಬಹುದು. ಡಬಲ್ ಸೈಡ್ ವರ್ಕ್ ಮಾಡುವ ಸ್ಟಡಿ ಟೇಬಲ್, ಫ್ಲೋಲ್ಡೆಡ್ ಸ್ಟಡಿ ಟೇಬಲ್, ಅಟ್ಯಾಚ್ ಬೀರು ಸ್ಟಡಿ ಟೇಬಲ್, ಸ್ಟೋರೇಜ್ ಇರುವ ಸ್ಟಡಿ ಟೇಬಲ್ ಕೂಡ ಖರೀದಿಸಬಹುದು. ಅದು ಕೋಣೆಯ ಲುಕ್ ಹೆಚ್ಚಿಸುತ್ತದೆ. ಅದರಲ್ಲಿ ನೀವು ಸಾಮಗ್ರಿಗಳನ್ನು ಇರಿಸಬಹುದು. ಡೆಕೊರೇಟ್ ಕೂಡ ಮಾಡಬಹುದು. ನೀವು ಎಂತಹ ಟೇಬಲ್ ಖರೀದಿಸಬೇಕು ಎನ್ನುವುದರ ಮೇಲೆ ನಿಮ್ಮ ಆಯ್ಕೆ ನಿರ್ಧರಿಸಬೇಕು.
ಬೆಲೆ : ನೀವು 3000 ರೂ.ಗಳಿಂದ 15,000 ರೂ.ಗಳ ತನಕ ಸ್ಟಡಿ ಟೇಬಲ್ ಖರೀದಿಸಬಹುದು. ಆನ್ ಲೈನ್‌ನಲ್ಲೂ ಕೂಡ ಖರೀದಿಸಬಹುದು.
ಸೂಚನೆ : ನಿಮ್ಮ ಕೋಣೆಯ ಸ್ಥಳಾವಕಾಶ ಗಮನದಲ್ಲಿಟ್ಟುಕೊಂಡು ಸ್ಟಡಿ ಟೇಬಲ್ ಖರೀದಿಸಿ.
ವಾಲ್ ಸ್ಟಿಕರ್ನಿಂದ ಅಲಂಕಾರ
ಪ್ರತಿಸಲದಂತೆ ಈ ಸಲ ಗೋಡೆಗಳಿಗೆ ಬಣ್ಣ ಬಳಿಯುವುದು ಅಷ್ಟು ಸುಲಭವಾದ ಕೆಲಸವಲ್ಲ. ಹಾಗಾಗಿ ಅದನ್ನು ಕೈಬಿಟ್ಟು ಬೇರೊಂದು ಯೋಚನೆ ಮಾಡಬಹುದು. ಅಂದಹಾಗೆ, ಗೋಡೆಗಳು ಆಕರ್ಷಣೆಯ ಕೇಂದ್ರಬಿಂದು. ಅವು ಎಲ್ಲಕ್ಕೂ ಮೊದಲು ಗಮನ ಸೆಳೆಯುತ್ತವೆ. ಜೊತೆಗೆ ಮನೆಯ ಲುಕ್ಸ್ ಗೆ ಹೊಸ ಮೆರುಗು ಕೊಡುತ್ತವೆ. ಈಗ ನೀವು ಪೇಂಟಿಂಗ್‌ಗೆ ಬದಲು ಫಾಲ್ಸ್ ಸ್ಟಿಕರ್‌ನಿಂದ ಅಲಂಕರಿಸಬಹುದು. ಅದೇ ಗೋಡೆಗೆ ಹೊಸ ಲುಕ್ ನೀಡುತ್ತದೆ.
ಅದಕ್ಕಾಗಿ ನೀವು ಫ್ಲವರ್ ಸ್ಟಿಕರ್, ಸ್ಟಾರ್ ಸ್ಟೈಲ್, ಅಕ್ರೆಲಿಕ್ ಸ್ಟೈಲ್, ವಾಟರ್ ಪ್ರೂಫ್ ವಾಲ್ ಸ್ಟಿಕರ್ ಮುಂತಾದವನ್ನು ಖರೀದಿಸಿ ಮನೆಗೆ ಹಬ್ಬದ ಮೆರುಗು ನೀಡಬಹುದು. ಹ್ಯಾಂಡಿ ಕ್ರಾಫ್ಟ್, ಶೋಪೀಸ್, ಪಾಟ್ ಶೇಪ್ಡ್ ವಾಲ್, ಹ್ಯಾಂಗಿಂಗ್ ಪೇಂಟಿಂಗ್ ಕೂಡ ಅಳವಡಿಸಬಹುದು. ಅವು ವರ್ಷಾನುವರ್ಷ ಬಾಳಿಕೆ ಬರುವುದರ ಜೊತೆಗೆ ಗೋಡೆಗಳ ಮೆರುಗು ಕೂಡ ಹೆಚ್ಚುತ್ತದೆ.
ಬೆಲೆ : ಈ ಸ್ಟಿಕರ್‌ಗಳು 300-700ರ ನಡುವೆ ಸಿಗುತ್ತವೆ. ಅವುಗಳ ಬೆಲೆ ಗಾತ್ರವನ್ನು ಅವಲಂಬಿಸಿರುತ್ತದೆ. ವಾಲ್ ಡೆಕೋರ್ 700-3000 ರೂ ತನಕ ಲಭಿಸುತ್ತವೆ.
ಸೂಚನೆ : ನೀವು ವಾಲ್ ಸ್ಟಿಕರ್ ಖರೀದಿಸುವಾಗ ಅದರ ಮೇಲೆ ಬರೆದ ಸೂಚನೆಗಳನ್ನು ಅವಶ್ಯವಾಗಿ ಗಮನಿಸಿ. ಏಕೆಂದರೆ ವಾಲ್ ಸ್ಟಿಕರ್ ನ್ನು ಒಂದೇ ಸಲಕ್ಕೆ ಚೆನ್ನಾಗಿ ಅಂಟಿಸಬೇಕು. ಇಲ್ಲದಿದ್ದರೆ ಅದು ಹಾಳಾಗುವ ಸಂಭವ ಇರುತ್ತದೆ.
ಮ್ಯೂಸಿಕ್ ಪ್ಲೇಯರ್ ನಿಂದ ಲುಕ್ಸ್
ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ಮ್ಯೂಸಿಕ್‌ಇಲ್ಲದೆ ಹೋದರೆ ಹಬ್ಬದ ವಾತಾವರಣವೇ ಇರುವುದಿಲ್ಲ. ನಿಮ್ಮ ಬಳಿ ಮ್ಯೂಸಿಕ್ ಪ್ಲೇಯರ್ ಇರದೇ ಇದ್ದರೆ, ನೀವು ಈ ಸಲ ಮ್ಯೂಸಿಕ್ ಪ್ಲೇಯರ್ ಖರೀದಿಸಿ. ಅದಕ್ಕಾಗಿ ನೀವು ಅಲೆಕ್ಸಾ, ಬ್ಲೂಟೂಥ್ ಮ್ಯೂಸಿಕ್‌ಡಿವೈಸ್ ಖರೀದಿಸಿ. ಅದಕ್ಕಾಗಿ ಸ್ಮಾರ್ಟ್ ಫೋನ್ ನ ಸಂಪರ್ಕ ಕೊಟ್ಟು ನೆಟ್ ನ ನೆರವಿನಿಂದ ನಿಮ್ಮ ಮೆಚ್ಚಿನ ಹಾಡಿನ ಆನಂದ ಪಡೆಯಬಹುದು. ಹಬ್ಬದ ಸಂದರ್ಭದಲ್ಲಿ ನೀವು ಇದನ್ನು ಆನ್ ಲೈನ್ ನಲ್ಲೂ ಖರೀದಿಸಬಹುದು. ಅಲ್ಲಿ ಒಳ್ಳೆಯ ಆಫರ್ ಗಳು ದೊರೆಯುತ್ತವೆ.
ಬೆಲೆ : ಮ್ಯೂಸಿಕ್ ಪ್ಲೇಯರ್ 3000 ರೂ.ಗಳಿಂದ 5000 ರೂ. ತನಕ ದೊರೆಯುತ್ತವೆ.
ಸೂಚನೆ : ನೀವು ಮ್ಯೂಸಿಕ್ ಪ್ಲೇಯರ್ ಖರೀದಿಸುವಾಗ ಅದರ ಸ್ಪೀಕರ್ ಗಳು ಹೇಗಿವೆ ಎನ್ನುವುದನ್ನು ಅವಶ್ಯವಾಗಿ ಗಮನಿಸಿ.
ಸೀಲಿಂಗ್ ಲೈಟ್ಸ್ ನಿಂದ ಶೋಭೆ
ದೀಪಾವಳಿ ಹಬ್ಬದಲ್ಲಿ ದೀಪಗಳದ್ದೇ ದರ್ಬಾರು. ನೀವು ಮನೆಯ ಹೊರಗಂತೂ ಲೈಟ್ ಗಳಿಂದ ಮನೆ ಝಗಮಗಿಸುವಂತೆ ಮಾಡುತ್ತೀರಿ. ಲಿವಿಂಗ್ ರೂಮ್ ನಲ್ಲೂ ಸೀಲಿಂಗ್ ಲೈಟ್ಸ್ ಅಳವಡಿಸಿ ನಿಮ್ಮ ರೂಮಿಗೆ ಹೊಸ ಲುಕ್ ಕೊಡಬಹುದು. ಅದಕ್ಕಾಗಿ ನಿಮ್ಮ ಮುಂದೆ ಸಾಕಷ್ಟು ಆಪ್ಶನ್ಸ್ ಗಳಿವೆ. ಪೆಂಡೆಂಟ್ ಸೀಲಿಂಗ್ ಲೈಟ್ಸ್, ಎಲ್ಇಡಿ ಸೀಲಿಂಗ್ ಲೈಟ್ಸ್, ಕೋಲ್ ಲೈಟ್ಸ್, ಟ್ರಾಫ್ ಲೈಟ್ಸ್ ಅಳವಡಿಸಬಹುದು. ಸೀಲಿಂಗ್ ಲೈಟ್ಸ್ ನೋಡಿ ನಿಮಗೆಷ್ಟು ಖುಷಿ ಆಗಬಹುದು ಎಂಬ ಅಂದಾಜು ನಿಮಗಿಲ್ಲ. ಏಕೆಂದರೆ ಲೈಟ್ಸ್ ನ ನೇರ ಪರಿಣಾಮ ನಮ್ಮ ಖುಷಿಗೆ ಸಂಬಂಧಪಟ್ಟಿರುತ್ತದೆ. ಹಾಗೆಂದೇ ಪ್ರತಿಯೊಂದು ಖುಷಿಯ ಸಮಾರಂಭದಲ್ಲಿ ದೀಪಗಳಿಂದ ಮನೆಯನ್ನು ಬೆಳಗಿಸಲಾಗುತ್ತದೆ.
ಬೆಲೆ : 2000 ರೂ.ಗಳಿಂದ 5000 ರೂ.ತನಕ ಲಭಿಸುತ್ತದೆ.
ಸೂಚನೆ : ಸೀಲಿಂಗ್ ಲೈಟ್ ಸರಿಯಾಗಿ ನೇತು ಹಾಕಲ್ಪಟ್ಟಿದೆಯೇ ಎಂಬುದನ್ನು ಗಮನಿಸಿ. ಇದರ ಜೊತೆಗೆ ಲ್ಯಾಟ್ ಬಗೆಗೂ ಗಮನಹರಿಸಿ. ಏಕೆಂದರೆ ಕೋಣೆಯಲ್ಲಿ ಲೈಟಿಂಗ್ ಚೆನ್ನಾಗಿರಬೇಕು.
ಎಲೆಕ್ಟ್ರಾನಿಕ್ ಐಟಮ್ ನಿಂದ ಶೋಭೆ ಈ ದೀಪಾವಳಿಗೆ ನಿಮ್ಮ ಬಳಿ ಸಾಕಷ್ಟು ಬಜೆಟ್ ಇದ್ದು, ಬಹಳ ದಿನಗಳಿಂದ ಎಲೆಕ್ಟ್ರಾನಿಕ್ ಐಟಂ ಖರೀದಿಸಬೇಕೆಂದು ಯೋಚಿಸಿದ್ದರೆ, ಈ ಸಲ ನಿಮ್ಮ ಮೆಚ್ಚಿನ ಎಲೆಕ್ಟ್ರಾನಿಕ್ ಐಟಂ ಖರೀದಿಸಿ. ಏಕೆಂದರೆ ಹಬ್ಬದ ಸಂದರ್ಭದಲ್ಲಿ ಸಾಕಷ್ಟು ರಿಯಾಯ್ತಿ ದೊರಕುತ್ತದೆ. ನೀವು ಟಿ.ವಿ, ಬ್ಲೆಂಡರ್, ಓವನ್, ಏರ್ ಪ್ಯೂರಿಫೈಯರ್, ಕಾಫಿ ಮೇಕರ್ ಹೀಗೆ ಏನನ್ನಾದರೂ ಖರೀದಿಸಬಹುದು.
ಅದನ್ನು ಖರೀದಿಸಿ ನಿಮ್ಮ ಅಗತ್ಯವನ್ನಷ್ಟೇ ಪೂರೈಸುವುದಿಲ್ಲ, ಜೊತೆಗೆ ಅದನ್ನು ನೋಡಿ ಈ ದೀಪಾವಳಿ ನನಗೆ ಬಹಳಷ್ಟು ಖುಷಿ ತಂದಿದೆ ಎನ್ನಿಸದೇ ಇರಲಾರದು.
ಬೆಲೆ : ಪ್ರತಿಯೊಂದು ಉತ್ಪನ್ನಗಳ ಬೆಲೆ ಬೇರೆ ಬೇರೆ ಆಗಿರುತ್ತದೆ. ಏರ್ ಪ್ಯೂರಿಫೈರ್ ಬೆಲೆ 8000 ರೂ.ಗಳಿಂದ 35,000 ರೂ. ತನಕ ಟಿವಿ 14,000 ರೂ.ಗಳಿಂದ 50,000 ರೂ. ತನಕ ದೊರಕುತ್ತದೆ. ಬ್ಲೆಂಡರ್, ಕಾಫಿ ಮೇಕರ್‌ಗಳ ಬೆಲೆ ಗುಣಮಟ್ಟದ ಆಧಾರದ ಮೇಲೆ 1,500 ರೂ.ಗಳಿಂದ 5,000 ರೂ. ನಡುವೆ ಸಿಗುತ್ತವೆ.
ಸೂಚನೆ : ಯಾವಾಗಲೂ ಬ್ರಾಂಡೆಡ್ ಎಲೆಕ್ಟ್ರಾನಿಕ್ ಐಟಮ್ಸ್ ಖರೀದಿಸಿ. ಪ್ರಾಡಕ್ಟ್ ನ ವಾರಂಟಿಯನ್ನು ಅವಶ್ಯವಾಗಿ ಚೆಕ್ ಮಾಡಿ.
ಸಂಗಾತಿಗೆ ಆಭರಣ ಖರೀದಿಸಿ
ಮಹಿಳೆಯರಿಗೆ ಅಲಂಕರಿಸಿಕೊಳ್ಳುವುದು ಬಹಳ ಇಷ್ಟವಾಗುತ್ತದೆ. ಅದರಲ್ಲೂ ವಿಶೇಷವಾಗಿ ಹಬ್ಬಗಳ ಸಂದರ್ಭದಲ್ಲಿ. ಈ ದೀಪಾವಳಿಗೆ ನಿಮ್ಮ ಸಂಗಾತಿಗೆ ಇಯರ್ ರಿಂಗ್ಸ್, ಪೆಂಡೆಂಟ್, ಚೇನ್, ನೆಕ್ಲೇಸ್ ಮುಂತಾದವುಗಳಲ್ಲಿ ಯಾವುದನ್ನಾದರೂ ಖರೀದಿಸಿ ಕೊಡಬಹುದು. ಪ್ರತಿಸಲ ಅವರಿವರಿಗೆ ಕೊಡುವ ತೆಗೆದುಕೊಳ್ಳುವುದರಲ್ಲಿಯೇ ನಮ್ಮವರನ್ನೇ ನಾವು ಹಾಗೆಯೇ ಸುಮ್ಮನಾಗಿಸುತ್ತಿದ್ದೆ.
ಆದರೆ ಈ ಸಲ ನಮ್ಮವರಿಗಾಗಿಯೇ ಏನನ್ನಾದರೂ ಕೊಡಿಸುವ ಬಗ್ಗೆ ಯೋಚಿಸಬೇಕು. ಅವರ ಖುಷಿಯನ್ನು ಕಂಡುಕೊಳ್ಳಬೇಕು.
ಬೆಲೆ : ಇಯರ್ ರಿಂಗ್, ಪೆಂಡೆಂಟ್ಸ್, ಚೈನ್ ಕನಿಷ್ಠ 15,000 ರೂ.ಗಳಿಂದ 3,00,000 ರೂ. ಬಜೆಟ್ ನಲ್ಲಿ ದೊರಕುತ್ತವೆ.
ಸೂಚನೆ : ವಿಶ್ವಾಸಾರ್ಹ ಅಂಗಡಿಯಿಂದಲೇ ಖರೀದಿಸಿ ಹಾಗೂ ಅದರ ರಸೀದಿಯನ್ನು ಕೇಳಿ ಪಡೆದುಕೊಳ್ಳಿ.
ಹಬ್ಬವನ್ನು ಎಂಜಾಯ್ ಮಾಡಿ
ಹಬ್ಬಗಳು ಪರಸ್ಪರರನ್ನು ಭೇಟಿಯಾಗುವ ಅವರೊಂದಿಗಿನ ನಿಕಟತೆಯನ್ನು ಹೆಚ್ಚಿಸುವ ಒಂದು ವಿಶಿಷ್ಟ ಮಾಧ್ಯಮವಾಗಿದೆ. ಆದರೆ ಕೊರೋನಾದ ಕಾರಣದಿಂದ, ಅಂತರ ಕಾಪಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಹಾಗಿದ್ದಾಗ ನಾವು ಈ ಸಲ ನಮ್ಮದೇ ಮನೆಯಲ್ಲಿ ನಮ್ಮವರೊಂದಿಗೆ ಸಮಯ ಕಳೆಯಲು ಅನುಕೂಲವಾಗುತ್ತದೆ. ಎಷ್ಟೋ ಸಲ 6 ತಿಂಗಳು ಕೊರೋನಾದಿಂದ ನಮ್ಮವರಿಗೆ ನಾವು ಸಮಯ ಕೊಡಲು ಆಗುತ್ತಿರಲಿಲ್ಲ. ಈ ಸಲ ಯಾವುದೇ ದಣಿವಿಲ್ಲದೆ ನಮ್ಮವರೊಂದಿಗೆ ಹಬ್ಬ ಎಂಜಾಯ್ ಮಾಡಿ.
– ಜ್ಯೋತಿ