ಪ್ರ : ಇತ್ತೀಚಿನ ದಿನಗಳಲ್ಲಿ ನನಗೆ ಲೈಟ್ ಮೇಕಪ್ ಮಾಡಿಕೊಳ್ಳುವುದು ಇಷ್ಟವಾಗುತ್ತಿದೆ. ಅದರ ವಿಧಾನವನ್ನು ತಿಳಿಸಿ.
ಉ : ಮೇಕಪ್ ಮಾಡಿಕೊಳ್ಳುವ ಮೊದಲು ಮುಖ ಸ್ವಚ್ಛವಾಗಿರಲಿ. ಟೋನರ್ ಬಳಸಿ ಮೇಕಪ್ ಮಾಡಿಕೊಳ್ಳುವುದರಿಂದ ಮೇಕಪ್ ಹರಡುವುದಿಲ್ಲ. ಲೈಟ್ ಮೇಕಪ್ ಮಾಡಿಕೊಳ್ಳುವಾಗ ಕಾಜಲ್ ನ್ನು ಅವಶ್ಯ ಬಳಸಿ. ಗಾಢ ವರ್ಣದ ಶ್ಯಾಡೊ ಲೇಪಿಸುವುದರಿಂದ ದೂರ ಇರಿ. ಹಾಗೊಂದು ವೇಳೆ ಬಳಸಲೇಬೇಕಿದ್ದರೆ, ನ್ಯೂಟ್ರಲ್ ಕಲರ್ ಬಳಸಿ. ಲೈಟ್ ಕಲರ್ ಲಿಪ್ ಸ್ಟಿಕ್ ನ್ನು ಗ್ಲಾಸ್ ಜೊತೆಗೆ ಲೇಪಿಸುವುದು ಒಳ್ಳೆಯದು. ಗ್ಲಿಟರ್ ನ್ನು ಬಳಸಲೇಬೇಡಿ. ಹಗಲಿನಲ್ಲಿ ಬಿಸಿಲು ಹಾಗೂ ಉಷ್ಣತೆಯಿಂದ ಮೇಕಪ್ ಹಾಳಾಗಬಹುದು. ಹೀಗಾಗಿ ಯಾವಾಗಲೂ ವಾಟರ್ ಪ್ರೂಫ್ ಬ್ಯೂಟಿ ಪ್ರಾಡಕ್ಟ್ ಗಳನ್ನೇ ಉಪಯೋಗಿಸಿ. ಮೇಕಪ್ ಮಾಡಿಕೊಳ್ಳುವ 20 ನಿಮಿಷ ಮೊದಲೇ ಸನ್ ಸ್ಕ್ರೀನ್ ಲೇಪಿಸಿಕೊಳ್ಳುವುದನ್ನು ಮರೆಯಬೇಡಿ.
ಪ್ರ : ಎಎಚ್‌ಎ ಕ್ರೀಮಿನಿಂದ ಕಪ್ಪು ವಲಯಗಳು ಹಾಗೂ ಕಲೆಗಳನ್ನು ನಿವಾರಿಸಬಹುದೇ?
ಉ : ಎಎಚ್‌ಎ ಅಂದರೆ `ಅಲ್ಟ್ರಾ ಹೈಡ್ರಾಕ್ಸಿ ಆ್ಯಸಿಡ್' ಕ್ರೀಮಿನಲ್ಲಿ ಹಣ್ಣುಗಳಿಂದ ತೆಗೆಯಲಾದ ಆ್ಯಸಿಡ್ ಇರುತ್ತದೆ. ಅದು ತ್ವಚೆಯಲ್ಲಿ ಕೊಲೊಜೆನ್ ತೀವ್ರವಾಗಿ ಉತ್ಪನ್ನಗೊಂಡು, ಅದರ ಮೇಲೆ ಸುಕ್ಕುಗಳು ಉಂಟಾಗದಂತೆ ತಡೆಯುತ್ತದೆ. ಕಣ್ಣುಗಳ ಕೆಳಗಿನ ಕಪ್ಪುಛಾಯೆಯನ್ನು ದೂರಗೊಳಿಸಲು ನೆರವಾಗುತ್ತದೆ. ಈ ಕ್ರೀಮ್ ನ ಬಳಕೆಯಿಂದ ಎಕ್ಸ್ ಪೋಲಿಯೇಶನ್ ಮತ್ತು ಹೊಸ ಜೀವಕೋಶಗಳ ಹುಟ್ಟು ಪ್ರಕ್ರಿಯೆ ವೇಗ ಪಡೆದುಕೊಳ್ಳುತ್ತದೆ. ಅದರಿಂದಾಗಿ ತ್ವಚೆಯಲ್ಲಿ ಹೊಸತನ ಬರುತ್ತದೆ. ಪ್ರತಿ ರಾತ್ರಿ ತ್ವಚೆಯನ್ನು ಸ್ವಚ್ಛಗೊಳಿಸಲು ಬೆರಳಿನಲ್ಲಿ ಕ್ರೀಮ್ ಲೇಪಿಸಿಕೊಂಡು ಕಣ್ಣುಗಳು ನಾಲ್ಕೂ ಬದಿ ಗೋಲಾಕಾರದಲ್ಲಿ ಮಸಾಜ್ ಮಾಡಿ. ಈ ಕ್ರೀಮ್ ನ ಪ್ರತಿದಿನದ ಬಳಕೆಯಿಂದ ಸೈನ್ ಆಫ್ ಏಜಿಂಗ್ ಕಡಿಮೆಯಾಗುತ್ತದೆ ಮತ್ತು ತ್ವಚೆ ಹೊಳಪುಳ್ಳದ್ದಾಗುತ್ತದೆ. ಆದರೆ ಕ್ರೀಮ್ ಕಣ್ಣೊಳಗೆ ಹೋಗದಂತೆ ಎಚ್ಚರವಹಿಸಿ
ಪ್ರ : ನನ್ನ ಕಿವಿಯ ಮೇಲೆ ಕೂದಲು ಕಾಣಿಸುತ್ತದೆ. ಇದರಿಂದಾಗಿ ಹೊರಗೆ ಓಡಾಡಲು ಬಹಳ ಸಂಕೋಚವಾಗಿ ಎಲ್ಲೂ ಹೋಗದೆ ಉಳಿಯುತ್ತೇನೆ. ಇದನ್ನು ನಿವಾರಿಸುವ ಯಾವುದಾದರೂ ಉಪಾಯ ತಿಳಿಸಿ.
ಉ : ಕಿವಿಗಳ ಮೇಲಿನ ಕೂದಲನ್ನು ತೊಲಗಿಸಲು ಬಲು ಎಚ್ಚರಿಕೆಯಿಂದ ಅದನ್ನು ಪೂರ್ತಿ ಕತ್ತರಿಸಬೇಕು. ಇದನ್ನು ಶಾಶ್ವತವಾಗಿ ತೊಲಗಿಸಲು, ಲೇಸರ್ ಹೇರ್ ರಿಮೂವರ್ ಉತ್ತಮ ಆಯ್ಕೆಯಾಗಿದೆ. ಲೇಸರ್ ಲೈಟ್ ನ ಬೀಮ್ ಕೂದಲಿನ ಬುಡ ಭಾಗವನ್ನು ಶಾಶ್ವತವಾಗಿ ನಾಶ ಮಾಡುತ್ತದೆ. ಇದರಿಂದಾಗಿ ಆ ಭಾಗದಲ್ಲಿ ಕೂದಲು ಮತ್ತೆ ಬೆಳೆಯುವುದಿಲ್ಲ. ಇದಕ್ಕಾಗಿ ಟೆಕ್ನಿಕಲಿ ಉತ್ತಮವಾದ ಪಾರ್ಲರ್ ನ್ನೇ ಆರಿಸಿ.
ಇತ್ತೀಚೆಗೆ ಮಾರುಕಟ್ಟೆಯಲ್ಲಿ ಬಗೆಬಗೆಯ ಎಲೆಕ್ಟ್ರಿಕ್ ರೇಝರ್ ಗಳು ಲಭ್ಯ. ಇದನ್ನು ಬಳಸಿ ಮನೆಯಲ್ಲೇ ನಿಮ್ಮ ಕಿವಿಯ ಕೂದಲನ್ನು ತೆಗೆಯಬಹುದು. ಇದನ್ನು ಬಳಸುವ ಮೊದಲು, ರೇಝರ್ ನ್ನು ಕಿವಿಯ ಅತಿ ಹತ್ತಿರ ಅಥವಾ ದೂರ ಇರಬಾರದು ಎಂದು ನೆನೆಪಿಡಿ. ಲೋಶನ್ ಅಥವಾ ಕ್ರೀಂ ಪ್ರಯೋಗ ಬಲು ಸುಲಭ. ಇದರಲ್ಲಿನ ಕೆಮಿಕಲ್ಸ್ ಕೂದಲನ್ನು ಬುಡಸಮೇತ ತೆಗೆದುಹಾಕುತ್ತವೆ. ಲೋಶನ್/ಕ್ರೀಂ ಬಳಸುವ ಮುನ್ನ, ನಿಮ್ಮ ಸ್ಕಿನ್ ಮೇಲೆ ಅದನ್ನು ತುಸು ಸರಿ, ಪರೀಕ್ಷಿಸಿ. ಇದರಿಂದ ಉರಿ ಉರಿ ಎನಿಸಿದರೆ, ಆಗ ಅದನ್ನು ಬಳಸಬೇಡಿ. ನಿಮ್ಮ ಕೇಸ್ ನಲ್ಲಿ, ಕಿವಿಗೆ ಇಂಥ ಕ್ರೀಂ ಹಚ್ಚಿ 10-12 ನಿಮಿಷ ಬಿಟ್ಟು, ನಂತರ ಬಿಸಿ ನೀರಲ್ಲಿ ಹಿಂಡಿನ ಟವೆಲ್ ನಿಂದ ಒರೆಸಿಕೊಳ್ಳಿ. ನಂತರ ಬಿಸಿ ನೀರಿನಿಂದ ತೊಳೆಯಿರಿ.





