ಗಿರೀಶ್‌: ಈ ಲಾಕ್‌ ಡೌನ್‌ ನಲ್ಲಿ ಮನೆಯಲ್ಲಿ ಕುಳಿತು ವರ್ಕ್‌ಫ್ರಂ ಹೋಂ ಮಾಡಿ ಸಾಕಾಗಿದೆ. ಏನು ಮಾಡಿದ್ರೂ ಟೈಂ ಪಾಸ್‌, ಆಗ್ತಾ ಇಲ್ಲವೋ?

ಸತೀಶ್‌: ಹೌದಾ, ಹಾಗಾದರೆ ನಿನ್ನ ಮದುವೆಯ ವಿಡಿಯೋ ಕ್ಯಾಸೆಟ್‌ಅಥವಾ ಸಿಡಿ ಹಾಕಿಕೊಂಡು ನೋಡು….. ಹಿಂದೆ ಮಾಡಿದ ತಪ್ಪುಗಳೆಲ್ಲ ರೀವೈಂಡ್‌ ಆಗಿ ಮುಂದೆ ಚಾನ್ಸ್ ಸಿಕ್ಕಿದಾಗ ತಪ್ಪು ರಿಪೀಟ್‌ಆಗೋಲ್ಲ!

 

ಒಮ್ಮೆ ಬ್ಯಾಂಕ್‌ ಮ್ಯಾನೇಜರ್‌ ಒಬ್ಬ ತನ್ನ ಕುಟುಂಬದೊಂದಿಗೆ ಊಟಕ್ಕಾಗಿ ಹೋಟೆಲಿಗೆ ಹೋಗಿದ್ದ.

ಮ್ಯಾನೇಜರ್‌ : ಏನ್ರಿ, ಊಟಕ್ಕೆ ಏನೇನಿದೆ?

ಮಾಣಿ : ಪಾಲಕ್‌ ಪನೀರ್‌, ತಂದೂರಿ ಚಿಕನ್‌, ಬಿರಿಯಾನಿ…..

ಮ್ಯಾನೇಜರ್‌ : ಪಾಲಕ್‌ ಪನೀರ್‌ ಮತ್ತು ತಂದೂರಿ ರೊಟ್ಟಿ ಕೊಡು. ಮತ್ತೇನಿದೆ?

ಮಾಣಿ : ದಾಲ್‌ ಫ್ರೈ, ದಾಲ್‌ ತಡ್ಕಾ….

ಮ್ಯಾನೇಜರ್‌ : 1 ದಾಲ್‌ ಫ್ರೈ ಕೊಡಿ.

ಮಾಣಿ : ಚಿಕನ್‌ 65 ಅಥವಾ ಗೋಬಿ ಮಂಚೂರಿ ಕೊಡ್ಲಾ?

ಮ್ಯಾನೇಜರ್‌ :  ಗೋಬಿ ಮಂಚೂರಿ ಸಾಕು.

ಮಾಣಿ : ಮತ್ತೆ….. ಮಿನರಲ್ ವಾಟರ್‌ ತಂದು ಕೊಡ್ಲಾ ಸಾರ್‌?

ಮ್ಯಾನೇಜರ್‌ : ಹ್ಞೂಂ…. ಕೊಡು.

ಮಾಣಿ : ಸಾರ್‌, ನಿಮ್ಮ ಆರ್ಡರ್‌ ಹೀಗಿದೆ, ಚೆಕ್‌ ಮಾಡಿಕೊಂಡು ಬಿಡಿ. ಪಾಲಕ್‌ ಪನೀರ್‌, ತಂದೂರಿ ರೊಟ್ಟಿ, ದಾಲ್‌ ಫ್ರೈ, ಗೋಭಿ ಮಂಚೂರಿ ವಿತ್‌ ಮಿನರಲ್ ವಾಟರ್‌….

ಮ್ಯಾನೇಜರ್‌ : ಆಯ್ತು, ಎಲ್ಲಾ ಬೇಗ ತಗೊಂಬಾ.

ಮಾಣಿ : ಆದರೆ…. ಎಲ್ಲಾ ಖಾಲಿ ಆಗಿದೆ! ಸದ್ಯಕ್ಕೆ ಏನೂ ಸಿಗೋಲ್ಲ!

ಮ್ಯಾನೇಜರ್‌ : ಎಲ್ಲಾ ಮುಗಿದಿದೆ ಅಂದ್ರೆ, ಸುಡುಗಾಡು! ಮೊದಲೇ ಹೇಳಕ್ಕೆ ಆಗಲ್ವೇನ್ರಿ? ಹಸಿವಿನಿಂದ ಸಾಯ್ತಿರೋವಾಗ ಒಂದೊಂದೇ ವಿವರ ಕೇಳಿ, ವರದಿ ಒಪ್ಪಿಸಿ, ಆಮೇಲೆ ಏನೂ ಇಲ್ಲ ಅಂತೀರಲ್ಲಾ…..?

ಮಾಣಿ : ಸಾರ್‌, ನಾನು ದಿನಾ ನಿಮ್ಮದೇ ಬ್ಯಾಂಕಿನ FDಗೆ ಹೋಗಿ ಪಿನ್ ಕೋಡ್‌ ಹಾಕಿ, ಸೇವಿಂಗ್ಸ್/ ಕರೆಂಟ್‌ ಅಕೌಂಟ್‌, ಅಮೌಂಟ್‌, ರೆಸಿಪ್ಟ್ ಎಲ್ಲಾ ಕೇಳುತ್ತ. ಕೊನೆಯಲ್ಲಿ ಮಾತ್ರ ಅನ್ಸುತ್ತೆ. ಆಗ ಅಷ್ಟು ಹೊತ್ತು ಕ್ಯೂನಲ್ಲಿ ನಿಂತು ಕಾಲು ನೋಯಿಸಿಕೊಂಡಿದ್ದ ನಮಗೆ ಮಾತ್ರ ಉರಿಯಲ್ವಾ?

 

ಯಾರೋ ತೀರಿಕೊಂಡರೆಂದು ಮಂಗ್ಯಾ, ಬಸ್ಯಾ ಸ್ಮಶಾನಕ್ಕೆ ಬಂದು, ಹೆಣ ಉರಿಯುವರೆಗೂ ಕಾಯೋಣ ಎಂದು ನಿಂತುಕೊಂಡರು.

ಮಂಗ್ಯಾ : ಆ ಹೆಣ ನೋಡ್ಲೇ…. ಎಷ್ಟು ಆರಾಮವಾಗಿ ಮಲಗಿಕೊಂಡಿದೆ, ಹೌದಲ್ವಾ

ಹೆಣ (ಎದ್ದು ಕುಳಿತು) : ಯಾಕ್ಲಾ ಮಲಗಬಾರ್ದು? ಎಷ್ಟು ಕಷ್ಟಪಟ್ಟು ಹೋರಾಡಿ ದಾಯಾದಿಗಳಿಂದ ಈ ಜಾಗ ನಮ್ಮದಾಗಿಸಿಕೊಂಡ್ವಿ ಗೊತ್ತಾ…..

 

ಅನೂಷಾ : ಚೆಕ್‌ ಅಪ್‌ ಗೆಂದು ಗಂಡನ ಜೊತೆ ನರ್ಸಿಂಗ್‌ ಹೋಮಿಗೆ ಹೋದಳು. ಅಂದು ಲೇಡಿ ಡಾಕ್ಟರ್‌ ಬಂದಿರಲಿಲ್ಲ ಎಂದು ಡಾ. ವರುಣ್‌ ತಾನೇ ಚೆಕ್‌ ಮಾಡಲು ಮುಂದಾದರು. ಅನೂಷಾಳ ಗಂಡನನ್ನು ಹೊರಗೆ ಕೂರಿಸಿ, ಡಾಕ್ಟರ್‌ ಬಾಗಿಲು ಹಾಕಿ ತಪಾಸಣೆಗೆ ಮುಂದಾದರು.

ಅನೂಷಾ : ಡಾಕ್ಟರ್‌, ನೀವು ತಪ್ಪು ಭಾವಿಸುವುದಿಲ್ಲ ಅಂದ್ರೆ ದಯವಿಟ್ಟು, ನನ್ನ ಗಂಡನ್ನ ಸಹ ಒಳಗೆ ಕರೀತೀರಾ?

ಡಾಕ್ಟರ್‌ : ನಿಮ್ಮ ಆತಂಕ ನನಗೆ ಅರ್ಥ ಆಗುತ್ತಮ್ಮ….? ಈ ಸರ್ವೀಸಿನಲ್ಲಿ ನಾನು 10 ವರ್ಷ ಪಳಗಿದ್ದೇನೆ. ಜಂಟಲ್ ಮ್ಯಾನ್‌ ಡಾಕ್ಟರ್‌ ಅಂತಾನೇ ಫೇಮಸ್ಸು. ನೀವೇನೂ ಗಾಬರಿಗೊಳ್ಳಬೇಡಿ.

ಅನೂಷಾ : ಅಯ್ಯಯ್ಯೋ! ನಿಮ್ಮ ಬಗ್ಗೆ ನನಗೆ ಎಳ್ಳಷ್ಟು ಸಂದೇಹವಿಲ್ಲ ಡಾಕ್ಟರ್‌. ಆದರೆ ಅಲ್ಲಿ ಹೊರಗೆ ಕುಳಿತಿದ್ದಾನಲ್ಲ ನನ್ನ ಪತಿರಾಯ, ಮಹಾ ಕಿರಾತಕ! ನಿಮ್ಮ ರಿಸಪ್ಶನಿಸ್ಟ್ ಬೇರೆ ಮೊದಲೇ ಮಹಾ ಗ್ಲಾಮರಸ್ಸು……

 

ವಿನುತಾ ಮಗುನನ್ನು ಕರೆದುಕೊಂಡು ವೈದ್ಯರ ಕ್ಲಿನಿಕ್ಕಿಗೆ ಬಂದಳು. ಮಗು ನಿಶ್ಶಕ್ತಿಯಿಂದ ಬಹಳ ಬಳಲುತ್ತಿತ್ತು. ವೈದ್ಯರು ಮಗುವನ್ನು ಆಮೂಲಾಗ್ರವಾಗಿ ಮತ್ತೆ ಮತ್ತೆ ಪರೀಕ್ಷಿಸಿ ಯಾವುದೇ ತರ್ಕಕ್ಕೆ ಬರದಾದರು.

ಡಾಕ್ಟರ್‌ : ಏನಮ್ಮಾ, ಮಗುವಿಗೆ ಎದೆ ಹಾಲು ಕುಡಿಸುತ್ತೀರೋ, ಬಾಟಲಿ ಹಾಲೋ?

ವಿನುತಾ : ಎದೆಹಾಲು ಡಾಕ್ಟರ್‌

ಡಾಕ್ಟರ್‌ : ಯಾವುದಕ್ಕೂ ನಿಮ್ಮನ್ನೂ ಒಮ್ಮೆ ಪರೀಕ್ಷಿಸಬೇಕು. ನಿಮ್ಮ ಟಾಪ್‌ ತೆಗೆದು ಇಲ್ಲಿ ಮಲಗಿ.

ವಿನುತಾ : ನನ್ನನ್ನು ಯಾಕೆ ಪರೀಕ್ಷಿಸಬೇಕು ಡಾಕ್ಟರ್‌?

ಡಾಕ್ಟರ್‌ : ನಿಮ್ಮ ಸ್ತನ ಪರೀಕ್ಷೆ ಆಗಬೇಕಿದೆ.

ಡಾಕ್ಟರ್‌ ಅವಳನ್ನು ಕೂಲಂಕಷವಾಗಿ ಪರೀಕ್ಷಿಸಿದರು.

ಡಾಕ್ಟರ್‌ : ಅದಕ್ಕೆ ಮತ್ತೆ…. ನಿಮ್ಮ ಎದೆಯಲ್ಲಿ ಹಾಲೇ ಇಲ್ಲ! ಮಗುವಿಗೆ ಶಕ್ತಿ ಎಲ್ಲಿಂದ ಬರಬೇಕು?

ವಿನುತಾ : ಇದನ್ನು ನೀವು ಮೊದಲೇ ಕೇಳಬೇಕಲ್ವಾ? ನಾನು ಈ ಮಗುವಿನ ಚಿಕ್ಕಮ್ಮ… ನಮ್ಮಕ್ಕನ ಮಗು ಇದು!

 

ಮೋನಾ : ಡಾಕ್ಟ್ರೇ….. ನನ್ನ ಗಂಡಂದು ಬಹಳ ಕಾಟ ಆಗಿಹೋಗಿದೆ. ಸಹಿಸಿ ಸಹಿಸಿ ಸಾಕಾಗಿದೆ. ಏನಾದ್ರೂ ಸಲಹೆ ಕೊಡಿ.

ಡಾಕ್ಟರ್‌ : ಮುಂದಿನ ಸಲ ಅವರನ್ನೂ ಕರೆದುಕೊಂಡು ಬಾರಮ್ಮ. ಫ್ಯಾಮಿಲಿ ಪ್ಲಾನಿಂಗ್‌ ಆಪರೇಷನ್‌ ಮಾಡಿ, ಕಾಟ ಕೊಡದಂತೆ ಮಾಡ್ತೀನಿ.

ಮೋನಾ : ಅಯ್ಯೋ ಕರ್ಮ! ಅದಲ್ಲ ಡಾಕ್ಟರ್‌….

ಡಾಕ್ಟರ್‌ : ಇನ್ನೇನು ಕುಡಿದು ಬಂದು ಹೊಡೀತಾನಾ….?

ಮೋನಾ : ಅಯ್ಯೋ…. ಅವನಿಗೆಲ್ಲಿದೆ ಅಷ್ಟು ದಮ್ಮು……

ಡಾಕ್ಟರ್‌ : ಮತ್ತೆ ಏನಮ್ಮ ತೊಂದರೆ…? ವಿವರವಾಗಿ ಹೇಳು.

ಮೋನಾ : ಅವನಿಲ್ಲದಾಗ ನಾನು ಮನೆಯಲ್ಲಿ ಆಗಾಗ ಸಿಗರೇಟ್‌ ಸೇದ್ತೀನಿ. ಅದನ್ನು ಯಾರೋ ಅವನಿಗೆ ಚಾಡಿ ಹೇಳಿಬಿಟ್ಟಿದ್ದಾರೆ. ಅದಕ್ಕೆ ನನ್ನ ಮೇಲೆ ಸಿಕ್ಕಾಪಟ್ಟೆ ರೇಗಾಡೋದಾ…?

 

ಗುಂಡಿ : ಏನ್ರಿ, ನಿಮಗೊಂದು ಅರ್ಜೆಂಟ್‌ ವಿಷಯ ಹೇಳಬೇಕು.

ಗುಂಡ : ಅದೇನು ಬೇಗ ಹೇಳು… ಟೈಮಿಲ್ಲ ನಂಗೆ….

ಗುಂಡಿ : ಮತ್ತೆ ಬೇಜಾರು ಮಾಡಿಕೊಳ್ಳಬಾರದು ಮತ್ತು ಕೋಪ ಮಾಡಿಕೊಳ್ಳಬಾರದು, ಪೇಚಾಡಬಾರದು……

ಗುಂಡ : ಇದೇನು ಪೀಠಿಕೆ ಇಷ್ಟು ದೊಡ್ಡದಾಗಿದೆ…. ಅದೇನು ವಿಷಯ ಅಂತ ಹೇಳ್ಬಾರ್ದಾ? ಸಸ್ಪೆನ್ಸ್ ಬೇರೆ….

ಗುಂಡಿ : ಮತ್ತೆ… ಮತ್ತೆ…. ನನಗೀಗ 3 ತಿಂಗಳು.

ಗುಂಡ : ಇದು ಸಂತೋಷದ ವಿಚಾರ! ಇದಕ್ಕೆ ಯಾಕೆ ಇಷ್ಟು ದೊಡ್ಡ ಪೀಠಿಕೆ?

ಗುಂಡಿ : ಮತ್ತೆ… ಮತ್ತೆ… ಕಾಲೇಜಿನಲ್ಲಿ ಓದುತ್ತಿದ್ದಾಗ ಇದೇ ವಿಷಯ ನಮ್ಮಪ್ಪನಿಗೆ ಹೇಳಿದ್ದಕ್ಕೆ ಬರಲು ತಗೊಂಡು ಬಾರಿಸೋದೇ…..?

 

ಮಹೇಶ್‌ ಹಿಂದಿನ ದಿನ ಬಂದಿದ್ದರೂ ಮತ್ತೆ ಮರುದಿನ ಅದೇ ಬಾರಿಗೆ ಬಂದು ಕುಳಿತಾಗ, ಮಾಣಿ ಏನು ಬೇಕು ಎಂದು ಕೇಳಿದ. 2 ಬಾಟಲಿ ತರುವಂತೆ ಮಹೇಶ್‌ ಹೇಳಿದ.

ಮಾಣಿ : ಏನಾಯ್ತು ಸಾರ್‌? ಬಹಳ ದುಃಖದಲ್ಲಿದ್ದೀರಿ….

ಮಹೇಶ್‌ : ನನ್ನ ತಮ್ಮನಿಗೆ ಮದುವೆ ಮಾಡೋಣ ಅಂತ ಕೇಳಿದರೆ ಅವನು ತಾನು ಗೇ ಮದುವೆ ಆಗೋಲ್ಲ ಅಂದುಬಿಟ್ಟ. ನನಗೆ ಮಗನ ಸಮಾನ, ಬಹಳ ದುಃಖ ಆಯ್ತು.

ಮಾಣಿ 2 ವಾರ ಬಿಟ್ಟು ನೋಡುತ್ತಾನೆ, 50ರ ಹರೆಯದ ಮಹೇಶ್‌ ಮತ್ತೆ ಕಾಲೆಳೆಯುತ್ತಾ ಬಾರಿಗೆ ಬಂದಿದ್ದ. ಅವನಿಗೆ ಬಾಟಲಿ ತಂದುಕೊಡುತ್ತಾ ಮಾಣಿ ವಿಚಾರಿಸಿದ

ಮಾಣಿ : ಏನಾಯ್ತು ಸಾರ್‌? ಮತ್ತೆ ದುಃಖದಲ್ಲಿದ್ದೀರಾ?

ಮಹೇಶ್‌ : ನನ್ನ ಮಗ ಸಹ ಸಲಿಂಗಕಾಮಿ ಅಂತ ಗೊತ್ತಾಯ್ತು. ಮದುವೆ ಬೇಡ ಅಂತಾನೆ. ನಮ್ಮ ವಂಶ ನಿಂತೇ ಹೋಯ್ತು!

1 ವಾರ ಬಿಟ್ಟು ಮಹೇಶ್‌ ಮತ್ತೆ ಬಾರಿಗೆ ಬಂದಾಗ ಮಾಣಿ ಕಕ್ಕಾಬಿಕ್ಕಿ. ಬಾಟಲಿ ತಂದುಕೊಡುತ್ತಾ ಕೇಳಿದ,

ಮಾಣಿ : ಮತ್ತೆ ಏನಾಯ್ತು ಸಾರ್‌? ನಿಮ್ಮ ಮನೆಯಲ್ಲಿ ಹೆಣ್ಣನ್ನು ಬಯಸುವವರು ಯಾರೂ ಇಲ್ಲವೇ?

ಮಹೇಶ್‌ : ಇದ್ದಾಳಲ್ಲ ನನ್ನ ಹೆಂಡತಿ…. ಆ ದುಃಖ ತಡೋಕೆ ಇಲ್ಲಿಗೆ ಬಂದಿದ್ದೀನಿ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ