ಗಿರೀಶ್‌: ಈ ಲಾಕ್‌ ಡೌನ್‌ ನಲ್ಲಿ ಮನೆಯಲ್ಲಿ ಕುಳಿತು ವರ್ಕ್‌ಫ್ರಂ ಹೋಂ ಮಾಡಿ ಸಾಕಾಗಿದೆ. ಏನು ಮಾಡಿದ್ರೂ ಟೈಂ ಪಾಸ್‌, ಆಗ್ತಾ ಇಲ್ಲವೋ?

ಸತೀಶ್‌: ಹೌದಾ, ಹಾಗಾದರೆ ನಿನ್ನ ಮದುವೆಯ ವಿಡಿಯೋ ಕ್ಯಾಸೆಟ್‌ಅಥವಾ ಸಿಡಿ ಹಾಕಿಕೊಂಡು ನೋಡು..... ಹಿಂದೆ ಮಾಡಿದ ತಪ್ಪುಗಳೆಲ್ಲ ರೀವೈಂಡ್‌ ಆಗಿ ಮುಂದೆ ಚಾನ್ಸ್ ಸಿಕ್ಕಿದಾಗ ತಪ್ಪು ರಿಪೀಟ್‌ಆಗೋಲ್ಲ!

 

ಒಮ್ಮೆ ಬ್ಯಾಂಕ್‌ ಮ್ಯಾನೇಜರ್‌ ಒಬ್ಬ ತನ್ನ ಕುಟುಂಬದೊಂದಿಗೆ ಊಟಕ್ಕಾಗಿ ಹೋಟೆಲಿಗೆ ಹೋಗಿದ್ದ.

ಮ್ಯಾನೇಜರ್‌ : ಏನ್ರಿ, ಊಟಕ್ಕೆ ಏನೇನಿದೆ?

ಮಾಣಿ : ಪಾಲಕ್‌ ಪನೀರ್‌, ತಂದೂರಿ ಚಿಕನ್‌, ಬಿರಿಯಾನಿ.....

ಮ್ಯಾನೇಜರ್‌ : ಪಾಲಕ್‌ ಪನೀರ್‌ ಮತ್ತು ತಂದೂರಿ ರೊಟ್ಟಿ ಕೊಡು. ಮತ್ತೇನಿದೆ?

ಮಾಣಿ : ದಾಲ್‌ ಫ್ರೈ, ದಾಲ್‌ ತಡ್ಕಾ....

ಮ್ಯಾನೇಜರ್‌ : 1 ದಾಲ್‌ ಫ್ರೈ ಕೊಡಿ.

ಮಾಣಿ : ಚಿಕನ್‌ 65 ಅಥವಾ ಗೋಬಿ ಮಂಚೂರಿ ಕೊಡ್ಲಾ?

ಮ್ಯಾನೇಜರ್‌ :  ಗೋಬಿ ಮಂಚೂರಿ ಸಾಕು.

ಮಾಣಿ : ಮತ್ತೆ..... ಮಿನರಲ್ ವಾಟರ್‌ ತಂದು ಕೊಡ್ಲಾ ಸಾರ್‌?

ಮ್ಯಾನೇಜರ್‌ : ಹ್ಞೂಂ.... ಕೊಡು.

ಮಾಣಿ : ಸಾರ್‌, ನಿಮ್ಮ ಆರ್ಡರ್‌ ಹೀಗಿದೆ, ಚೆಕ್‌ ಮಾಡಿಕೊಂಡು ಬಿಡಿ. ಪಾಲಕ್‌ ಪನೀರ್‌, ತಂದೂರಿ ರೊಟ್ಟಿ, ದಾಲ್‌ ಫ್ರೈ, ಗೋಭಿ ಮಂಚೂರಿ ವಿತ್‌ ಮಿನರಲ್ ವಾಟರ್‌....

ಮ್ಯಾನೇಜರ್‌ : ಆಯ್ತು, ಎಲ್ಲಾ ಬೇಗ ತಗೊಂಬಾ.

ಮಾಣಿ : ಆದರೆ.... ಎಲ್ಲಾ ಖಾಲಿ ಆಗಿದೆ! ಸದ್ಯಕ್ಕೆ ಏನೂ ಸಿಗೋಲ್ಲ!

ಮ್ಯಾನೇಜರ್‌ : ಎಲ್ಲಾ ಮುಗಿದಿದೆ ಅಂದ್ರೆ, ಸುಡುಗಾಡು! ಮೊದಲೇ ಹೇಳಕ್ಕೆ ಆಗಲ್ವೇನ್ರಿ? ಹಸಿವಿನಿಂದ ಸಾಯ್ತಿರೋವಾಗ ಒಂದೊಂದೇ ವಿವರ ಕೇಳಿ, ವರದಿ ಒಪ್ಪಿಸಿ, ಆಮೇಲೆ ಏನೂ ಇಲ್ಲ ಅಂತೀರಲ್ಲಾ.....?

ಮಾಣಿ : ಸಾರ್‌, ನಾನು ದಿನಾ ನಿಮ್ಮದೇ ಬ್ಯಾಂಕಿನ FDಗೆ ಹೋಗಿ ಪಿನ್ ಕೋಡ್‌ ಹಾಕಿ, ಸೇವಿಂಗ್ಸ್/ ಕರೆಂಟ್‌ ಅಕೌಂಟ್‌, ಅಮೌಂಟ್‌, ರೆಸಿಪ್ಟ್ ಎಲ್ಲಾ ಕೇಳುತ್ತ. ಕೊನೆಯಲ್ಲಿ ಮಾತ್ರ ಅನ್ಸುತ್ತೆ. ಆಗ ಅಷ್ಟು ಹೊತ್ತು ಕ್ಯೂನಲ್ಲಿ ನಿಂತು ಕಾಲು ನೋಯಿಸಿಕೊಂಡಿದ್ದ ನಮಗೆ ಮಾತ್ರ ಉರಿಯಲ್ವಾ?

 

ಯಾರೋ ತೀರಿಕೊಂಡರೆಂದು ಮಂಗ್ಯಾ, ಬಸ್ಯಾ ಸ್ಮಶಾನಕ್ಕೆ ಬಂದು, ಹೆಣ ಉರಿಯುವರೆಗೂ ಕಾಯೋಣ ಎಂದು ನಿಂತುಕೊಂಡರು.

ಮಂಗ್ಯಾ : ಆ ಹೆಣ ನೋಡ್ಲೇ.... ಎಷ್ಟು ಆರಾಮವಾಗಿ ಮಲಗಿಕೊಂಡಿದೆ, ಹೌದಲ್ವಾ

ಹೆಣ (ಎದ್ದು ಕುಳಿತು) : ಯಾಕ್ಲಾ ಮಲಗಬಾರ್ದು? ಎಷ್ಟು ಕಷ್ಟಪಟ್ಟು ಹೋರಾಡಿ ದಾಯಾದಿಗಳಿಂದ ಈ ಜಾಗ ನಮ್ಮದಾಗಿಸಿಕೊಂಡ್ವಿ ಗೊತ್ತಾ.....

 

ಅನೂಷಾ : ಚೆಕ್‌ ಅಪ್‌ ಗೆಂದು ಗಂಡನ ಜೊತೆ ನರ್ಸಿಂಗ್‌ ಹೋಮಿಗೆ ಹೋದಳು. ಅಂದು ಲೇಡಿ ಡಾಕ್ಟರ್‌ ಬಂದಿರಲಿಲ್ಲ ಎಂದು ಡಾ. ವರುಣ್‌ ತಾನೇ ಚೆಕ್‌ ಮಾಡಲು ಮುಂದಾದರು. ಅನೂಷಾಳ ಗಂಡನನ್ನು ಹೊರಗೆ ಕೂರಿಸಿ, ಡಾಕ್ಟರ್‌ ಬಾಗಿಲು ಹಾಕಿ ತಪಾಸಣೆಗೆ ಮುಂದಾದರು.

ಅನೂಷಾ : ಡಾಕ್ಟರ್‌, ನೀವು ತಪ್ಪು ಭಾವಿಸುವುದಿಲ್ಲ ಅಂದ್ರೆ ದಯವಿಟ್ಟು, ನನ್ನ ಗಂಡನ್ನ ಸಹ ಒಳಗೆ ಕರೀತೀರಾ?

ಡಾಕ್ಟರ್‌ : ನಿಮ್ಮ ಆತಂಕ ನನಗೆ ಅರ್ಥ ಆಗುತ್ತಮ್ಮ....? ಈ ಸರ್ವೀಸಿನಲ್ಲಿ ನಾನು 10 ವರ್ಷ ಪಳಗಿದ್ದೇನೆ. ಜಂಟಲ್ ಮ್ಯಾನ್‌ ಡಾಕ್ಟರ್‌ ಅಂತಾನೇ ಫೇಮಸ್ಸು. ನೀವೇನೂ ಗಾಬರಿಗೊಳ್ಳಬೇಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ