ಕೊರೋನಾ ಪ್ರಭಾವದಿಂದ ವಿವಾಹ ಸಂಭ್ರಮಗಳ ಮೇಲೆ ಮೌನ ಛಾಯೆ ಆವರಿಸಿದೆ. ವಿವಾಹ ಸಮಾರಂಭಗಳಿಂದ ಜೀವನ ನಡೆಸುತ್ತಿದ್ದ ಅದೆಷ್ಟೋ ಕುಟುಂಬಗಳು ಈಗ ಕಂಗಾಲಾಗಿವೆ. ಇದಕ್ಕೆ ಸರ್ಕಾರದ ತಪ್ಪು ನೀತಿ ಕೂಡ ಕಾರಣವಾಗಿದೆ.

ವಿನೂತಾಳ ಮದುವೆ ಈ ವರ್ಷದ ಏಪ್ರಿಲ್ ‌ತಿಂಗಳ ಕೊನೆಯ ವಾರದಲ್ಲಿ ನಿಗದಿಯಾಗಿತ್ತು. ಕಳೆದ ವರ್ಷದ ಅಕ್ಟೋಬರ್‌ ನಲ್ಲಿಯೇ ಮದುವೆಯ ದಿನಾಂಕವನ್ನು ಅಂತಿಮಗೊಳಿಲಾಗಿತ್ತು. ವಿವಾಹಕ್ಕೆ ಸಂಬಂಧಿಸಿದ ಎಲ್ಲ ಬುಕಿಂಗ್‌ ಗಳನ್ನು ಮಾಡಲಾಗಿತ್ತು. ಎಲ್ಲ ಅತ್ಯಗತ್ಯ ಸಿದ್ಧತೆಗಳು ಅಂತಿಮ ಹಂತದಲ್ಲಿರುವಾಗಲೇ ವಿನೂತಾಳ ತಂದೆಯ ಆರೋಗ್ಯ ಒಮ್ಮಿಂದೊಮ್ಮೆಲೆ ಹದಗೆಟ್ಟಿತು.

ಪರೀಕ್ಷೆಯಿಂದ ತಿಳಿದು ಬಂದದ್ದೇನೆಂದರೆ, ಅವರಿಗೆ ಕೊರೋನಾ ಆಗಿತ್ತಂತೆ. ಮುಂದಿನ 2 ದಿನಗಳಲ್ಲಿ ಕುಟುಂಬದ ಇತರೆ ಮೂವರು ಸದಸ್ಯರು ಕೂಡ ಪಾಸಿಟಿವ್ ‌ಆಗಿರುವುದು ತಿಳಿದುಬಂತು. ಈಗ ಈ ಮದುವೆ 6 ತಿಂಗಳ ಬಳಿಕ ಅಥವಾ ಎಲ್ಲ ಪರಿಸ್ಥಿತಿ ಸಾಮಾನ್ಯವಾದ ನಂತರ ನಡೆಯಲಿದೆ. ಇದರ ಪರಿಣಾಮವೆಂಬಂತೆ ಎಲ್ಲ ಪರಿಚಿತರಿಗೆ ವಿಷಯ ತಿಳಿಸಲಾಯಿತಲ್ಲದೆ, ಎಲ್ಲ ಮುಂಗಡ ಬುಕ್ಕಿಂಗ್‌ ಗಳನ್ನು ರದ್ದುಗೊಳಿಸಲಾಯಿತು.

ವಿನೂತಾಳ ಕುಟುಂಬಕ್ಕೆ ಇದು ಅತ್ಯಂತ ಕ್ಲಿಷ್ಟಕರ ಸಮಯವಾಗಿತ್ತು. ಏಕೆಂದರೆ ಅವರ ಯಾವುದೇ ಮುಂಗಡ ಪಾವತಿಗಳು ವಾಪಸ್‌ ಬರುವ ಸಾಧ್ಯತೆ ಇರಲಿಲ್ಲ. ಅವರಿಗೆ ಒಂದಷ್ಟು ನಿರಾಳತೆ ಕೊಟ್ಟ ವಿಷಯವೆಂದರೆ, ಮುಂದಿನ ದಿನಗಳಲ್ಲಿ ಅಂದರೆ ತಮಗೆ ಬುಕಿಂಗ್‌ ಇರದ ದಿನಗಳಲ್ಲಿ ಮದುವೆ ನಡೆಸುವುದಾದರೆ ಆ ಹಣವನ್ನೇ ಅಡ್ವಾನ್ಸ್ ಎಂದು ಭಾವಿಸುವುದಾಗಿ ಹೇಳಿದರು. ಆದರೆ ಎಲ್ಲ ವಿಭಾಗದವರನ್ನು ಒಗ್ಗೂಡಿಸುವುದು ಕಷ್ಟಕರ ಸಂಗತಿಯೇ ಆಗಿತ್ತು. ಇನ್ನೊಂದೆಡೆ ಮದುವೆ ಆಯೋಜಕರಿಗೂ ಇದು ಹಾನಿಯ ವಿಷಯವೇ ಆಗಿತ್ತು. ಅವರು ನಿಗದಿಪಡಿಸುವ ದಿನಾಂಕಕ್ಕೆ ಮತ್ತೆ ಯಾವುದಾದರೂ ಆರ್ಡರ್‌ ಸಿಗುವ ಸಾಧ್ಯತೆಯೂ ಇತ್ತು.

ವೃತ್ತಿಪರರಿಗೆ ಸಂಕಷ್ಟ

ಭಾರತದ ಮಟ್ಟಿಗೆ ಏಪ್ರಿಲ್-‌ಮೇ ತಿಂಗಳು ಮದುವೆಗಳ ತಿಂಗಳು ಎಂದೇ ಖ್ಯಾತಿ ಪಡೆದಿವೆ. ಆ ಬಳಿಕ ಚಳಿಗಾಲದಲ್ಲಿಯೇ ಮದುವೆಗಳು ಒಂದಷ್ಟು ಪ್ರಮಾಣದಲ್ಲಿ ನಡೆಯುತ್ತವೆ. ಮದುವೆಯ ತಿಂಗಳುಗಳಲ್ಲಿಯೇ ಕರ್ಫ್ಯೂ ಹಾಕಲ್ಪಟ್ಟಿದ್ದರಿಂದ ಕೊರೋನಾದ ಕಠಿಣ ನಿಯಮಗಳ ಕಾರಣದಿಂದ ಕೇಲವು ಯುವ ಜನಾಂಗದವರಷ್ಟೇ ಅಲ್ಲ, ಮದುವೆಗೆ ಸಂಬಂಧಪಟ್ಟ ವೃತ್ತಿಪರ ಕೆಲಸಗಳನ್ನು ಮಾಡುತ್ತಿದ್ದರ ಮೇಲೂ ಕೊರೋನಾ ಕರಿನೆರಳು ಬೀರಿದೆ.

ಭಾರತದಲ್ಲಿ ಮದುವೆಗಳ ಸಂಭ್ರಮ ಹಲವು ದಿನಗಳ ಕಾಲ ನಡೆಯುತ್ತದೆ. ಇದರ ಹಿಂದೆ ಒಂದು ಬಹುದೊಡ್ಡ ಅರ್ಥ ವ್ಯವಸ್ಥೆಯೇ ಕಲಸ ಮಾಡುತ್ತದೆ. ಲಕ್ಷಾಂತರ ಜನರು ಪರೋಕ್ಷ ಅಥವಾ ಅಪರೋಕ್ಷ ರೂಪದಲ್ಲಿ ಈ ಅರ್ಥ ವ್ಯವಸ್ಥೆಯೊಂದಿಗೆ ಜೋಡಿಸಲ್ಪಟ್ಟಿದ್ದಾರೆ.

ಮದುವೆ ಸಮಾರಂಭಗಳಿಗೆ ಸಂಬಂಧಪಟ್ಟ ವೃತ್ತಿಪರರು ಅಂದರೆ ಬ್ಯಾಂಡು ಬಾಜಾ, ಕುದುರೆಯವರು, ಹೂಮಾವೆ ವರ್ತಕರು, ಟೆಂಟ್‌ ಹೌಸ್‌ ಬಾಳೆ ಎಲೆ ಮಾರುವವರು, ಅಡುಗೆಯವರು, ಕಲ್ಯಾಣ ಮಂಟಪಗಳು, ಹೋಟೆಲ್ ಉದ್ಯಮ, ಆಟೋ ಟ್ಯಾಕ್ಯಿಯವರು ಕೊರೋನಾದ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಕೆಲವರಿಗೆ ಸ್ವಲ್ಪ ಪ್ರಮಾಣದಲ್ಲಿ ಮತ್ತು ಕೆಲವರಿಗೆ ಭಾರಿ ಪ್ರಮಾಣದಲ್ಲಿ ಹಾನಿ ಅನುಭವಿಸಬೇಕಾಗಿ ಬಂತು.

ಭಾರತದಲ್ಲಿ ಪ್ರತಿ ವರ್ಷ 1 ಕೋಟಿ ಮದುವೆಗಳು ನಡೆಯುತ್ತವೆ ಎಂಬುದು ಒಂದು ಅಂದಾಜು. ಪ್ರತಿ ಮದುವೆಗೆ 5 ಲಕ್ಷ ರೂ.ಗಳಿಂದ ಹಿಡಿದು 5 ಕೋಟಿ ರೂ. ತನಕ ಖರ್ಚು ಬರುತ್ತದೆ.

ಬಹುದೊಡ್ಡ ಹೊಡೆತ

IB129900_129900155338107_SM360927

ವಿವಿಧ ಸಂಗತಿಗಳ ಬಗ್ಗೆ ಜಗತ್ತಿನಾದ್ಯಂತ ಅಧ್ಯಯನ ನಡೆಸುವಲ್ಲಿ ಹೆಸರುವಾಸಿಯಾಗಿರುವ ಕೆಪಿಎಂಜಿಯ 2017ರ ಅಧ್ಯಯನ ಬಹಳ ಸ್ವಾರಸ್ಯಕರವಾಗಿದೆ. ಭಾರತದಲ್ಲಿ ಮದುವೆಗಳ ವಾರ್ಷಿಕ ವಹಿವಾಟು 36 ದಶಲಕ್ಷ ಕೋಟಿ. ಇದು ಅಮೆರಿಕದ ನಂತರ ಅತಿ ದೊಡ್ಡ ವಹಿವಾಟು. ಈ ವಹಿವಾಟಿನ ಮೇಲೆ ಕೊರೋನಾದ ಕರಿನೆರಳು ಬಿದ್ದರೆ, ಅದು ನಿಶ್ಚಿತವಾಗಿಯೂ ಅದಕ್ಕೆ ಸಂಬಂಧಪಟ್ಟವರ ಮೇಲೆ ದೊಡ್ಡ ಆಘಾತವೇ ಹೌದು.

ಶಶಿಧರ್‌ ಗೆ ಬೆಂಗಳೂರಿನಲ್ಲಿ ಈವೆಂಟ್ಸ್ ನ ವಹಿವಾಟು ಇದೆ. ಅವರು ಚಿಕ್ಕಪುಟ್ಟ ಬರ್ತ್‌ ಡೇ ಪಾರ್ಟಿಗಳಿಂದ ಹಿಡಿದು ಮದುವೆಗಳ ತನಕ ಬಹುದೊಡ್ಡ ಆಯೋಜನೆಗಳನ್ನು ಮಾಡುತ್ತಿರುತ್ತಾರೆ ಅವರ ಪ್ರಕಾರ, ಕೊರೋನಾ ಅವಧಿಯಲ್ಲಿ ಶೇ.25 ರಿಂದ 30ರಷ್ಟು ಹಾನಿ ಉಂಟಾಗಿದೆ.

ಮದುವೆ ಸಮಾರಂಭಗಳಿಗೆ ಕುದುರೆ ಪೂರೈಸುವ ವೃತ್ತಿ ನಡೆಸುವ ಮುಷ್ತಾಕ್‌ ಅಹಮ್ಮದ್‌ ರವರನ್ನು ಮಾತನಾಡಿಸಿದಾಗ, ಅವರ ಗಂಟಲು ತುಂಬಿ ಬಂತು, “ಇಡೀ ವರ್ಷ ನಾವು ಮದುವೆ ಸೀಜನ್ನಿಗಾಗಿ ನಿರೀಕ್ಷೆ ಮಾಡುತ್ತಿರುತ್ತೇವೆ. ಸೀಜನ್‌ ಚೆನ್ನಾಗಿ ಆದರೆ ನಮ್ಮ ಇಡೀ ವರ್ಷದ ಉಪಜೀವನ ನಡೆಯುತ್ತದೆ. ನಮ್ಮ ಮುಖ್ಯ ಆದಾಯ ಮದುವೆ ದಿಬ್ಬಣದವರ ನೃತ್ಯ. ವರನ ಸ್ನೇಹಿತರು ಹಾಗೂ ಸಂಬಂಧಿಕರು ಕೊಡುವ ಒಂದಿಷ್ಟು ಖುಷಿ ಕಾಸು ಆಗಿರುತ್ತದೆ. ಈ ವರ್ಷದ ಸೀಜನ್ನಿನಲ್ಲಿ ಮದುವೆಗಳು ನಡೆದದ್ದೇ ಕಡಿಮೆ. ಸೀಮಿತ ಆದಾಯದಿಂದ ನಮ್ಮ ಕುದುರೆಗೆ ನಾವು ಕೈಯಿಂದಲೇ ಖರ್ಚು ಮಾಡುವ ಸ್ಥಿತಿ ಬಂದಿದೆ.”

ಭಾರಿ ಹಾನಿ

IB127031-127031202000197-SM317754

ಈ ಕುರಿತಂತೆ ಶಿವಾ ಕಲ್ಯಾಣ ಮಂಟಪದ ಮ್ಯಾನೇಜರ್‌ ಸಂಜೀರನ್ನು ಮಾತನಾಡಿಸಿದಾಗ, ಕಳೆದ ವರ್ಷ ಕೊರೋನಾ ಅವಧಿಯಲ್ಲಿ ಬಹಳಷ್ಟು ಮದುವೆಗಳು ರದ್ದಾಗಿದ್ದವು. ಅವುಗಳಲ್ಲಿ ಸಾಮಾನ್ಯ ಬುಕ್ಕಿಂಗ್‌ ಗಳು ಕೂಡ ಸೇರಿದ್ದವು. ಕೊರೋನಾದ ಹಾವಳಿ ಕಡಿಮೆಯಾದ ಬಳಿಕ ಮತ್ತೆ ಬುಕ್ಕಿಂಗ್‌ ಗಳು ಆರಂಭವಾಗಿದ್ದವು. ಕಳೆದ ವರ್ಷ ಆದ ಹಾನಿಯನ್ನು ಈ ವರ್ಷ ತುಂಬಿಸಿಕೊಳ್ಳಬಹುದು ಎನಿಸಿತ್ತು.

ಅದನ್ನೇ ಗಮನದಲ್ಲಿಟ್ಟುಕೊಂಡು ನಾವು ವಿವಿಧ ಥೀಮ್ ಗಳಿಗನುಸಾರ ಮಂಟಪ ಹಾಗೂ ಇತರೆ ಸೆಟ್‌ ಗಳ ಮೇಲೆ ಸಾಕಷ್ಟು ಹಣ ವಿನಿಯೋಗಿಸಿದ್ದೆವು. ಬುಕ್ಕಿಂಗ್‌ ಕ್ಯಾನ್ಸಲ್ ಆದಕಾರಣ ನಮಗೆ ಬಹಳಷ್ಟು ಹಾನಿ ಆಗುತ್ತಿದೆ.

ಬಂಗಾರದ  ಆಭರಣ

ವ್ಯಾಪಾರಿ ರಮೇಶ್‌ ರದ್ದು ಮಾತ್ರ ಬೇರೆಯದ್ದೇ ಆದ ನೋವಿದೆ. ಮದುವೆ ಆಭರಣಗಳನ್ನು ನಾವು ನೆಪ ಮಾತ್ರದ ಮೊತ್ತದ ಮೇಲೆ ಬುಕ್ಕಿಂಗ್‌ ಮಾಡಲಾಗುತ್ತೇವೆ. ಆದರೆ ನಾವು ಪೂರ್ತಿ ಬಂಗಾರ ಖರೀದಿಸಬೇಕಾಗುತ್ತದೆ. ಒಂದು ವೇಳೆ ಮದುವೆಗಳು ರದ್ದಾಗಿಬಿಟ್ಟರೆ ನಮಗೆ ಡಬಲ್ ಹಾನಿಯಾದಂತೆ. ಮೊದಲನೆಯದು, ನಮ್ಮ ಹಣ ಒಂದು ಕಡೆ ಬ್ಲಾಕ್‌ ಆಗಿಬಿಡುತ್ತದೆ. ಎರಡನೆಯದು, ಚಿನ್ನದ ಬೆಲೆ ಕಡಿಮೆಯಾಗಲಿ ಅಥವಾ ಹೆಚ್ಚಾಗಲಿ, ಬುಕಿಂಗ್‌ ವೇಳೆ ಯಾವ ದರ ಇತ್ತೋ, ಅದೇ ದರದಲ್ಲಿ ನಾವು ಆಭರಣ ತಯಾರಿಸಿ ಕೊಡಬೇಕಾಗುತ್ತದೆ.

ಬರಿದಾಗುತ್ತಿರುವ ಮಂಟಪಗಳು

ನಗರದ ಹೆಸರಾಂತ ಕಲ್ಯಾಣ ಮಂಟಪಗಳು ಇತ್ತೀಚಿನ ದಿನಗಳಲ್ಲಿ ನಿರ್ಜನ ಪ್ರದೇಶ ಆಗಿಬಿಟ್ಟಿವೆ. ಕೆಲವು ಕಲ್ಯಾಣ ಮಂಟಪಗಳು ಎಷ್ಟು ಪ್ರಖ್ಯಾತಿ ಪಡೆದಿವೆಯೆಂದರೆ, ಒಂದು ವರ್ಷಕ್ಕೂ ಮುಂಚೆಯೇ ಅವು ಬುಕ್ಕಿಂಗ್‌ ಆಗಿರುತ್ತವೆ. ಅಲ್ಲಿ ಮದುವೆ ಮಾಡಿಕೊಳ್ಳುವುದೆಂದರೆ ಪ್ರತಿಷ್ಠೆಯ ಸಂಕೇತ ಎಂದು ಭಾವಿಸಲಾಗುತ್ತದೆ.

ಕಲ್ಯಾಣ ಮಂಟಪವೊಂದರ ಮ್ಯಾನೇಜರ್‌ ರಾಜೇಶ್‌ ತಮ್ಮ ಅನುಭವ ಹೀಗೆ ಹಂಚಿಕೊಂಡರು, “ಈ ಸೀಸನ್ನಿನಲ್ಲಿ ಯಾವುದೇ ದೊಡ್ಡ ಬುಕಿಂಗ್‌ ಆಗಿಲ್ಲ. ಏಕೆಂದರೆ ಮದುವೆಯಲ್ಲಿ ಸೀಮಿತ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕೆಂಬ ಕೊರೋನಾ ಗೈಡ್‌ ಲೈನ್ಸ್. ಮದುವೆಗೆ 50ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕೆಂದು ಹೇಳಿದರೆ, ಅಷ್ಟು ದೊಡ್ಡ ಹಾಲ್ ‌ನ್ನು ಯಾರು ತಾನೇ ಬುಕ್‌ ಮಾಡುತ್ತಾರೆ? ಕೊರೋನಾಗಿಂತ ಮುಂಚೆ ಎರಡು ದಿನದ ಬುಕ್ಕಿಂಗ್‌ ಇರುತ್ತಿತ್ತು. ಹಿಂದಿನ ದಿನಕ್ಕೆ ಬೇರೆ ರೀತಿಯ ವ್ಯವಸ್ಥೆ, ಮದುವೆ ದಿನಕ್ಕೆ ಬೇರೆ ವ್ಯವಸ್ಥೆ ಏರ್ಪಾಟು ಮಾಡಲಾಗುತ್ತಿತ್ತು. ಅಲಂಕಾರ, ಸಂಗೀತ ವ್ಯವಸ್ಥೆ ಹೀಗೆ ಎಲ್ಲವೂ ನಮ್ಮ ಕಡೆಯಿಂದಲೇ ಆಗುತ್ತಿತ್ತು. ಈಗ ಅದೆಲ್ಲ ಏನೂ ಇಲ್ಲ.

“ಒಂದೊಂದು ಮದುವೆಗೆ ಇಷ್ಟೊಂದು ವ್ಯವಸ್ಥೆ ಮಾಡುತ್ತಿದ್ದು, ನಾವು ಹತ್ತು ಹಲವು ಜನರಿಗೆ ಉದ್ಯೋಗ ಕೊಡುತ್ತಿದ್ದೆವು. ಈಗ ಮದುವೆ ಬುಕ್ಕಿಂಗ್‌ ಗಳು ರದ್ದಾಗುತ್ತಿರುವುದರಿಂದ ಎಷ್ಟೆಲ್ಲ ಜನರಿಗೆ ತೊಂದರೆಯಾಗುತ್ತದೆ ನೀವೇ ಯೋಚಿಸಿ,” ಎನ್ನುತ್ತಾರೆ.

IB129900_129900155338107_SM360927

ಇದೇ ತೆರನಾದ ನೋವು ಹೋಟೆಲ್ ‌ಉದ್ಯಮದರದ್ದು ಹಾಗೂ ಟೂರ್‌ ಟ್ರಾವೆಲರ್ಸ್‌ನವರದ್ದು ಸಹ ಆಗಿದೆ. ಹನಿಮೂನ್‌ ಸೀಜನ್ ಗೆ ಬರುವ ನವದಂಪತಿಗಳ ನಿರೀಕ್ಷೆಯಲ್ಲಿ ಇವರೆಲ್ಲ ಇರುತ್ತಿದ್ದರು. ಸೀಜನ್‌ ಇದ್ದಾಗ ಇವರು ಹೆಚ್ಚುವರಿ ಸ್ಟಾಫ್‌ ಕೂಡ ನೇಮಕ ಮಾಡುತ್ತಿದ್ದರು. ಅಡುಗೆಮನೆಯಲ್ಲಿ ಹೆಚ್ಚುವರಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಇಡುತ್ತಿದ್ದರು.

ವೆಡ್ಡಿಂಗ್‌ ಪ್ಲಾನರ್‌ ಕಂಪನಿಯೊಂದರ ನಿರ್ದೇಶಕ ರಾಜೀವ್ ‌ರ ಪ್ರಕಾರ ಈ ವೃತ್ತಿಯಲ್ಲಿದ್ದ ಶೇ. 50 ರಷ್ಟು ಕಂಪನಿಗಳು ಬಾಗಿಲು ಮುಚ್ಚಿವೆ.

ಕಾರ್ಡ್‌ ಮುಂತಾದ ಪ್ರಿಂಟಿಂಗ್‌ ಗೆ ಸಂಬಂಧಪಟ್ಟ ಶೀಲಾ ಪ್ರಿಂಟರ್ಸ್‌ ನ ಮಾಲೀಕ ಯೋಗಿ ಪ್ರಕಾರ, ಮೊದಲು ಒಂದು ಮದುವೆಯೆಂದರೆ 1000ಕ್ಕೂ ಹೆಚ್ಚು ಕಾರ್ಡ್‌ ಪ್ರಿಂಟ್‌ ಮಾಡಲಾಗುತ್ತಿತ್ತು. ಆದರೆ ಜನರ ಸಂಖ್ಯೆ ಸೀಮಿತಗೊಂಡ ಬಳಿಕ ಅದೀಗ 100ಕ್ಕೆ ಕಡಿಮೆ ಬೇಡಿಕೆ ಬರುತ್ತಿದೆ. ಜನರು ನೆಪ ಮಾತ್ರಕ್ಕೆ ಕಾರ್ಡ್‌ ಪ್ರಿಂಟ್‌ ಮಾಡಿಸುತ್ತಿದ್ದಾರೆ. ಈ ಕಾರಣದಿಂದ  ಹಲವು ಕಾರ್ಡ್ ಮಾರಾಟ ಅಂಗಡಿಗಳು ಬಂದ್‌ ಆಗಿವೆ. ಇಲ್ಲಿ ಅವು ಬೇರೆಯವರಿಗೆ ಮಾರಾಟ ಆಗಿವೆ .

ಸಂದೇಹ ನಿಜವಾಯ್ತು

ವಿಶ್ವ ಸಂಸ್ಥೆ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಕಳೆದ ವರ್ಷ ಏಪ್ರಿಲ್ ‌ತಿಂಗಳಿನಲ್ಲಿ ಜಾರಿ ಮಾಡಲಾದ ಒಂದು ವರದಿಯಲ್ಲಿ ಕೊರೋನಾ ವೈರಸ್‌ ನ ಸಂಕಷ್ಟಕ್ಕೆ ಭಾರತದಲ್ಲಿ ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುವ 40 ಕೋಟಿ ಜನರು ಬಡತನಕ್ಕೆ ಸಿಲುಕಬಹುದೆಂದು ಹೇಳಲಾಗಿತ್ತು. ಮದುವೆ ಕೂಡ ಎಂತಹದೊಂದು ಕ್ಷೇತ್ರವೆಂದರೆ, ಇಲ್ಲಿ ಅಸಂಘಟಿತ ಕಾರ್ಮಿಕರೇ ಕೆಲಸ ಮಾಡುತ್ತಾರೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯೊಂದರ ವರದಿ ಈಗ ನಿಜವಾಗುತ್ತಿರುವುದು ಗಮನಕ್ಕೆ ಬರುತ್ತಿದೆ.

ಮದುವೆ ಸಮಾರಂಭಗಳು ಮುಂದೂಡಿರುವ ಕಾರಣದಿಂದ ಹಲವಾರು ಕಾರ್ಮಿಕರಿಗೆ ಕುಟುಂಬ ಸಲಹುವ ಚಿಂತೆ ಎದುರಾಗಿದೆ. ಸರ್ಕಾರದ ಗಮನ ಇತ್ತ ಕಡೆ ಹೋಗುವ ಅವಶ್ಯಕತೆಯಿದೆ.

ಸರ್ಕಾರದ ಆದ್ಯತೆ ಜೀವ ಉಳಿಸುವುದಾಗಿದೆ. ಆದರೆ ಜೀವನ ಉಳಿಸುವುದು ಕೂಡ ಅತ್ಯವಶ್ಯಕವಾಗಿದೆ. ಸರ್ಕಾರ ಕೊರೋನಾ ಗೈಡ್‌ ಲೈನ್ಸ್ ಗಳನ್ನು ಪಾಲನೆ ಮಾಡಿಸುವುದರ ಜೊತೆಗೆ ವಿವಾಹ ಸಮಾರಂಭಗಳನ್ನು ನಡೆಸುವವರಿಗೆ ಒಂದಿಷ್ಟು ರಿಯಾಯ್ತಿಗಳನ್ನು ಕೊಡಬೇಕು. ಏಕೆಂದರೆ ಈ ವಹಿವಾಟಿಗೆ ಆರಿಸಿಕೊಂಡಿರುವ ಕರಿನೆರಳು ಬದಿಗೆ ಸರಿಯುವಂತಾಗಬೇಕು.

ಆಶಾ ಶರ್ಮ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ