ನನ್ನ ಗೆಳತಿ ಶಿಲ್ಪಾಳ ಅತ್ತೆ ಹೆಚ್ಚು ಕಡಿಮೆ ಹಿಟ್ಲರ್‌ ಸ್ವಭಾವದವರು. ಅವರು ತಮ್ಮ ಸೊಸೆಯನ್ನು ಮನೆಯ ಕೆಲಸದಾಳು ಎಂಬಂತೆ ಭಾವಿಸಿದ್ದಾರೆ. ಶಿಲ್ಪಾಳ ಗಂಡ ಸುಹಾಸ್‌ ಅಮ್ಮನ ಆಜ್ಞೆ ಪಾಲಿಸು ಮಗ. ಅವನು ತನ್ನ ಅಮ್ಮನ ಅಮಾನವೀಯ ವರ್ತನೆಯ ಬಗ್ಗೆ ಒಂದು ಶಬ್ದ ಕೂಡ ತುಟಿಬಿಚ್ಚಿ ಮಾತನಾಡುವುದಿಲ್ಲ. ತನ್ನ ಹೆಂಡತಿಯ ಪರ ವಹಿಸಿ ಎಂದೂ ಮಾತನಾಡುವುದಿಲ್ಲ. ಒಂದು ವೇಳೆ ಶಿಲ್ಪಾಳೇನಾದರೂ ಅಮ್ಮನ ಬಗ್ಗೆ ದೂರು ಹೇಳಿದರೆ, ಅವನು ಅವಳಿಗೇ ನಾಲ್ಕು ಮಾತು ಹೇಳಿ ಸುಮ್ಮನಾಗಿಸುತ್ತಾನೆ. ಅವನ ಉತ್ತರ ಯಾವಾಗಲೂ ರೆಡಿಮೇಡ್‌ ಆಗಿರುತ್ತದೆ. `ಇರುವುದಿದ್ದರೆ ಇವರು, ಇಲ್ಲದಿದ್ದರೆ ತಕ್ಷಣ ಹೊರಟುಹೋಗು....' ಅದೊಂದು ಸಲ ಅವಳು ಗಂಡ ಹಾಗೂ ಅತ್ತೆಯ ವರ್ತನೆಗೆ ರೋಸಿ ಹೋಗಿ ತನ್ನ ತವರಿಗೆ ಹೊರಟು ಹೋದಳು. ಆದರೆ ಸಮಾಜದ ದೃಷ್ಟಿಯಲ್ಲಿ ಶಿಲ್ಪಾಳದ್ದೇ ತಪ್ಪು. ಏಕೆ ಏಕೆಂದರೆ ತಪ್ಪು ಯಾವಾಗಲೂ ಸೊಸೆಯದ್ದೇ ಆಗಿರುತ್ತದೆ.

ಸಮಾಜದ ಇಬ್ಬಗೆಯ ಧೋರಣೆ

ಸಾಮಾನ್ಯವಾಗಿ ಕೇಳಿ ಬರುವ ಸುದ್ದಿಗಳೇನೆಂದರೆ, ಸೊಸೆ ಒಳ್ಳೆಯಳಾಗಿರಲಿಲ್ಲ. ಅವಳ ಕುಮ್ಮಕ್ಕಿನಿಂದಾಗಿ ಮಗ ತನ್ನ ತಾಯಿಯನ್ನು ಮನೆಯಿಂದ ಹೊರ ದಬ್ಬಿದ. ಯೋಚಿಸಬೇಕಾದ ಸಂಗತಿಯೇನೆಂದರೆ ಪ್ರತಿಸಲ ಸೊಸೆಯದ್ದೇ ತಪ್ಪು ಎಂದು ಏಕೆ ಭಾವಿಸಬೇಕು? ಹೆಂಡತಿಯ ಮಾತು ಕೇಳಿ ಅಮ್ಮನಿಗೆ ತೊಂದರೆ ಕೊಡುವುದು ತಪ್ಪು ಎಂದಾದರೆ, ಅಮ್ಮನ ಗೌವರಕ್ಕೆಂದು ಆಕೆಯ ತಪ್ಪು ಮಾತುಗಳ ಬಗ್ಗೆ ಮೌನದಿಂದಿರುವುದು ಸರಿ ಹೇಗಾಗುತ್ತದೆ?

ಎರಡು ಮಾತು ಅತ್ತೆಯವರೊಂದಿಗೆ ನಾನೂ ಕೂಡ ತಾಯಿ. ಅಮ್ಮ ಈ ಜಗತ್ತಿನ ಅತ್ಯಂತ ಪ್ರೀತಿಪಾತ್ರ ವ್ಯಕ್ತಿ ಎನ್ನುವುದು ನನಗೆ ಗೊತ್ತು. ಆಕೆಯದು ಅತಿ ವಿಶಿಷ್ಟ ಅನುಬಂಧ. ಅವಳ ಸಂಪರ್ಕಕ್ಕೆ ಅದ್ಭುತ ಅನುಭವ ದೊರಕುತ್ತದೆ. ಆದರೆ ಇದರರ್ಥ ಅಮ್ಮ ಎಂದೂ ತಪ್ಪು ಮಾಡುವುದಿಲ್ಲ ಎಂದಲ್ಲ. ತಪ್ಪನ್ನು ತಪ್ಪು ಎಂದು ಹೇಳುವುದರಲ್ಲಿ ಯಾವ ಅಪರಾಧ ಅಡಗಿದೆ? ಅದೂ ಕೂಡ ಒಬ್ಬ ಮಗನ ತಾಯಿ, ಅತ್ತೆಯಾದ ಬಳಿಕ ಉದ್ದೇಶಪೂರ್ಕವಾಗಿ ಈ ತಪ್ಪು ಮಾಡುತ್ತಾಳೆ. ಅತ್ತೆಯಾದ ಬಳಿಕ ಅಮ್ಮಂದಿರು ಅತ್ಯಂತ ನಿಸ್ವಾರ್ಥ ಭಾವದಿಂದ ಮಾಡಿದ ಮಮತೆಯ ಮೌಲ್ಯ ಬಯಸುತ್ತಾರೇನೋ? ಅದಕ್ಕಾಗಿ ಅವರಿಗೆ ಅಸುರಕ್ಷತೆಯ ಭಾವನೆ ಉಂಟಾಗುತ್ತಿರಬಹುದು. ಕಹಿ ಸತ್ಯ ಏನೆಂದರೆ, ಅತ್ತೆಯಾದ ಅಮ್ಮಂದಿರು ಸ್ವಾರ್ಥಿಗಳಾಗಿ ಬಿಡುತ್ತಾರೆ. ಅವರಿಗೆ ತಮ್ಮ ಮಗನ ಹೊರತಾಗಿ ಬೇರೇನೂ ಕಾಣಿಸುವುದಿಲ್ಲ. ಸೊಸೆಯಂತೂ ಕಣ್ಣಿಗೆ ಗೋಚರಿಸುವುದೇ ಇಲ್ಲ. ಅವರು ತಮ್ಮ ಸೊಸೆಯಂದಿರನ್ನು ಎದುರಾಳಿ ಎಂದು ತಿಳಿಯುತ್ತಾರೆ. ವೈರಿ ಎಂದು ಭಾವಿಸುತ್ತಾರೆ, ಸೊಸೆ ಮಗನನ್ನು ತನ್ನಿಂದ ಕಿತ್ತುಕೊಳ್ಳುತ್ತಿದ್ದಾಳೆ ಎಂದೇ ಆಕೆ ಭಾವಿಸುತ್ತಾಳೆ.

ಬಹುಶಃ ಇದಕ್ಕಿರಬಹುದು

ಆಕೆ ಅವನಿಗೆ ಜನ್ಮ ನೀಡಿದ್ದಾಳೆ. ಪಾಲನೆ ಪೋಷಣೆ ಮಾಡಿದ್ದಾಳೆ. ಹಾಗೆಂದು ಆಕೆ ಸೊಸೆಯನ್ನು ಬೀದಿಯಿಂದ ಎತ್ತಿಕೊಂಡು ಬಂದಿದ್ದಾಳೆಯೇ? ಸೊಸೆಗೂ ಆಕೆಯ ಅಮ್ಮ ಜನ್ಮ ನೀಡಿದ್ದಾಳೆ. ನಿಮ್ಮ ಮನೆಯ ಗೌರವ ಕಾಪಾಡಲೆಂದು ಆಕೆಗೂ ಚೆನ್ನಾಗಿ ಓದಿಸಿ, ಬೆಳೆಸಿದ್ದಾಳೆ. ಆಕೆಗೆ ಒಂದು ಅವಕಾಶವನ್ನಾದರೂ ಕೊಟ್ಟು ನೋಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ