ಬಾಹ್ಯವಾಗಿ ನಾವು ಎಷ್ಟೇ ಮೇಕಪ್‌ ಮಾಡಿಕೊಂಡರೂ, ಆಂತರಿಕವಾಗಿ ನಾವು ಫಿಟ್‌ ಫೈನ್‌ ಆಗಿರದಿದ್ದರೆ, ಮುಖದಲ್ಲಿ ನಗು ಮೂಡುವುದಿಲ್ಲ. ಬಲವಂತವಾಗಿ ಮುಗುಳ್ನಕ್ಕರೂ, ಮುಖದಲ್ಲಿ ಸಹಜ ಕಾಂತಿ ಇರುವುದಿಲ್ಲ. ನಿಮ್ಮ ಸುಸ್ತಾದ ಅನಾರೋಗ್ಯಕರ ಕಂಗಳ ಕೆಳಗೆ ಕಪ್ಪು ವೃತ್ತಗಳು, ನಿರ್ಜೀವ, ಡ್ರೈ ಹಾಗೂ ಕುಂದಿಹೋದ ಚರ್ಮ, ಶುಷ್ಕ ಮತ್ತು ದುರ್ಬಲ ಕೂದಲು, ಅಂದಗೆಟ್ಟ ಕಳಾಹೀನ ಉಗುರು ನಿಮ್ಮ ಆರೋಗ್ಯ ದಾರಿ ತಪ್ಪಿದೆ ಎಂದು ಹೇಳುತ್ತವೆ. ಇವನ್ನು ನೀವು ಬಲವಂತವಾಗಿ ಮೇಕಪ್‌ ನಿಂದ ಮರೆಮಾಚಲು ಆಗುವುದಿಲ್ಲ.

ಹೌದು, ನಿಮ್ಮ ದೇಹದಲ್ಲೂ ಕಬ್ಬಿಣಾಂಶದ ಕೊರತೆ ಇದ್ದರೆ, ಈ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ. ಸದಾ ಓಟದ ಈ ಯಾಂತ್ರಿಕ ಜೀವನದಲ್ಲಿ ಆರೋಗ್ಯದ ಕುರಿತಾಗಿ ಮಹಿಳೆಯರು ಸದಾ ನಿರ್ಲಕ್ಷ್ಯ ವಹಿಸುತ್ತಾರೆ. ಮನೆಗೆಲಸ, ಮನೆಯವರ ಬೇಕುಬೇಡ ಗಮನಿಸುವುದರಲ್ಲಿ ತಮ್ಮ ಆರೋಗ್ಯದ ಕಡೆ ಲಕ್ಷ್ಯ ವಹಿಸುವುದಿಲ್ಲ. ಇದರಿಂದ ನಿಮ್ಮ ಆರೋಗ್ಯ ಮಾತ್ರವಲ್ಲದೆ, ಸೌಂದರ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ.

ಹೀಗಾಗಿ ನೀವು ನಿಮ್ಮ ಸೌಂದರ್ಯ ಕಾಪಾಡಿಕೊಳ್ಳಬೇಕಿದ್ದರೆ, ಕಬ್ಬಿಣಾಂಶ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಿ ಆರೋಗ್ಯದಿಂದ ನಳನಳಿಸಿ. ಆಗ ಮಾತ್ರ ನೀವು ಅನೀಮಿಯಾ (ರಕ್ತಹೀನತೆ)ಗೆ ಬಲಿ ಆಗುವುದಿಲ್ಲ.

ಕಬ್ಬಿಣಾಂಶದ ಕೊರತೆಯ ದುಷ್ಪ್ರಭಾವ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಕಾಡುತ್ತಿದ್ದರೆ, ಚರ್ಮ ಮಾತ್ರವಲ್ಲದೆ, ಕೂದಲು ಮತ್ತು ಇತರ ಅಂಗಗಳೂ ಅದರ ದುಷ್ಪ್ರಭಾವಕ್ಕೆ ಒಳಗಾಗುತ್ತವೆ. ಮುಖ್ಯವಾಗಿ ಸೌಂದರ್ಯ ಬೇಗ ಕಳೆಗುಂದುತ್ತದೆ.

ಉಗುರಿನ ಸಮಸ್ಯೆ :

1200-540220132-female-hand-broken-nail

ಉಗುರು ಹೆಣ್ಣಿನ ಕೈಗಳ ಸೌಂದರ್ಯದ ಒಂದು ಪ್ರಮುಖ ಅಂಗ. ಸೌಂದರ್ಯ ಎದ್ದು ತೋರಲು ಸುಂದರ ಉಗುರುಗಳು ಬೇಕೇ ಬೇಕು. ನಿಮ್ಮ ಉಗುರು ಅಕಸ್ಮಾತ್‌ ಹಳದಿ ಆಗತೊಡಗಿದರೆ, ನಿರ್ಜೀವವಾಗಿ ತಂತಾನೇ ತುಂಡರಿಸ ತೊಡಗಿದರೆ ಆಗ ನೀವು ಬೇಗ ಎಚ್ಚೆತ್ತುಕೊಳ್ಳಬೇಕು. ಏಕೆಂದರೆ ಇವೆಲ್ಲ ದೇಹದಲ್ಲಿ ಐರನ್‌ ಕೊರತೆ ಸೂಚಿಸುತ್ತದೆ. ಹೀಗಾಗಿ ನೀವು ನಿಮ್ಮ ಸೌಂದರ್ಯ ಉಳಿಸಿಕೊಳ್ಳ ಬಯಸಿದರೆ, ಐರನ್‌ ಯುಕ್ತ ಆಹಾರ ಸೇವಿಸಿ.

ನಿರ್ಜೀವ ಚರ್ಮ :

ajwain (1)

ದೇಹದಲ್ಲಿ ಐರನ್‌ ಕಡಿಮೆ ಆದಾಗ ಮುಖ ಬಿಳಚಿಕೊಳ್ಳುತ್ತಾ ಹೋಗುತ್ತದೆ. ಒಮ್ಮೊಮ್ಮೆ ಲೈಟ್‌ ಹಳದಿ ಬಣ್ಣಕ್ಕೂ ತಿರುಗಬಹುದು. ಏಕೆಂದರೆ ಐರನ್‌ ಕೊರತೆಯಿಂದ ಹಿಮೋಗ್ಲೋಬಿನ್‌ ಮಟ್ಟ ಕುಸಿಯುತ್ತದೆ. ಇದರಿಂದಲೇ ರಕ್ತಕ್ಕೆ ಕೆಂಪು ಕಣ ಸಪ್ಲೈ ಆಗುವುದು. ಇದರಿಂದಾಗಿಯೇ ಮುಖದಲ್ಲಿ ತುಸು ಕೆಂಬಣ್ಣ ಹರಡಿ ಕಳೆಕಳೆಯಾಗಿ ಕಾಣುವುದು. ದೇಹದಲ್ಲಿ ಇಂಥ ಕೆಂಪು ರಕ್ತಕಣ ಕಡಿಮೆ ಆದರೆ, ಮುಖದಲ್ಲಿ ಹಳದಿ ಬಣ್ಣ, ನಿರ್ಜೀವ ಕಳೆ ತಂತಾನೇ ಮೂಡುತ್ತದೆ.

ಡಾರ್ಕ್ಸರ್ಕಲ್ಸ್ :

dark-circles-1030x700-(1)

ಕಂಗಳ ಕೆಳಗೆ ಹಾಗೂ ಸುತ್ತಮತ್ತಲೂ ಕಪ್ಪು ವೃತ್ತಗಳಿದ್ದರೆ ಯಾವ ಹೆಣ್ಣಿಗೆ ತಾನೇ ಇಷ್ಟವಾದೀತು? ದೇಹದಲ್ಲಿ ಐರನ್‌ ಕೊರತೆ ಇದ್ದರೆ, ನಿಮ್ಮ ಕಂಗಳ ಕೆಳಗೆ ಕಪ್ಪು ವೃತ್ತ ಅಂದ್ರೆ ಡಾರ್ಕಲ್ ಸರ್ಕಲ್ಸ್ ತಂತಾನೇ ಮೂಡುತ್ತವೆ.

ಕೂದಲಿನ ಮೇಲೆ ದುಷ್ಪರಿಣಾಮ :

1371591011512

ದೇಹದಲ್ಲಿ ಐರನ್‌ ಕೊರತೆ ಕಾಡಿದಾಗ, ರಕ್ತ ಸಂಚಾರದ ಮೇಲೆ ದಟ್ಟ ಪರಿಣಾಮ ಆಗುತ್ತದೆ. ಇದರಿಂದಾಗಿ ಆಮ್ಲಜನಕ ಸಲೀಸಾಗಿ ಅಗತ್ಯ ಪ್ರಮಾಣದಲ್ಲಿ ಕೂದಲಿನಡಿಯ ಸ್ಕಾಲ್ಪ್ ವರೆಗೂ ತಲುಪಲಾರದು. ಹೀಗಾಗಿ ಕೂದಲಿನ ಬೆಳವಣಿಗೆ ಕುಂಟುತ್ತದೆ. ಕ್ರಮೇಣ ಅದು ನಿರ್ಜೀವ ಆಗುತ್ತದೆ. ನಂತರ ಕೂದಲು ಉದುರುವಿಕೆ ಮಾಮೂಲಿ ಆಗುತ್ತದೆ. ಹೀಗಾದಾಗ ವೈದ್ಯರನ್ನು ಸಂಪರ್ಕಿಸಿ. ಅವರ ಬಳಿ ನೀವು ರಕ್ತಹೀನತೆಗೆ ತುತ್ತಾಗಿಲ್ಲ ತಾನೇ ಎಂದು ಖಚಿತಪಡಿಸಿಕೊಳ್ಳಿ.

ನ್ಯಾಚುರಲ್ ಗ್ಲೋಗಾಗಿ ಆಹಾರ

ನೀವು ಸಹ ನಿಮ್ಮ ಚರ್ಮ ಸಹಜವಾಗಿ ಕಾಂತಿಯುತವಾಗಿರಲಿ ಎಂದು ಬಯಸಿದರೆ, ನಿಮ್ಮ ಆಹಾರದಲ್ಲಿ ಅಗತ್ಯವಾಗಿ ತಾಜಾ ಹಸಿರು ತರಕಾರಿ, ಸೊಪ್ಪು, ಕ್ಯಾರೆಟ್‌, ಟೊಮೇಟೊ, ಬೀಟ್‌ ರೂಟ್‌, ಹಸಿ ಸಲಾಡ್‌, ಮೊಳಕೆಕಾಳು ಇತ್ಯಾದಿ ಹೆಚ್ಚಾಗಿ ಬಳಸಿಕೊಳ್ಳಿ.

Untitled-3

ಚರ್ಮದ ಜೀವಕೋಶಗಳನ್ನು ಆರೋಗ್ಯಕರ ಹಾಗೂ ಕೂದಲನ್ನು ಸಶಕ್ತ, ಹೊಳೆಯುವಂತೆ ನೋಡಲು ಬಯಸಿದರೆ ಹಸಿರು ತರಕಾರಿ, ಸೊಪ್ಪಿನ ಜೊತೆ ಮೊಟ್ಟೆ, ಟೂನಾಫಿಶ್‌, ಬೀನ್ಸ್, ಸೋಯಾ, ಟೋಫು, ನಟ್ಸ್ ಇತ್ಯಾದಿಗಳನ್ನು ಮರೆಯದೆ ಸೇವಿಸಿ.

ದೇಹದ ಐರನ್‌ ಕೊರತೆ ನೀಗಿಸುವ ಇನ್ನಿತರ ಆಹಾರ ವಸ್ತುಗಳೆಂದರೆ ರೆಡ್‌ ಮೀಟ್‌, ಚಿಕನ್‌, ಇಡಿಯಾದ ಕಾಳು, ಮೊಳಕೆಕಾಳು, ಕಾಬೂಲ್ ‌ಕಡಲೆ, ಬೆಲ್ಲ, ಪಾಲಕ್‌ ಸೊಪ್ಪು, ಟೊಮೇಟೊ ಸೂಪ್‌ ಇತ್ಯಾದಿ.

ಐರನ್ಕೊರತೆಯಿದ್ದರೆ ಇವು ಬೇಡ

ಐರನ್‌ ಕೊರತೆಯಿಂದಾಗಿ ದೇಹದಲ್ಲಿ ಅನೀಮಿಯಾ, ಉಸಿರಾಟದ ತೊಂದರೆ, ಮತ್ತೆ ಮತ್ತೆ ಸುಸ್ತಾಗುವಿಕೆ ಇತ್ಯಾದಿ ಸಮಸ್ಯೆ  ಕಾಣಿಸಬಹುದು. ಜೊತೆಗೆ ಹಿಮೊಗ್ಲೋಬಿನ್‌ ಕೊರತೆಯ ಕಾರಣ, ಆಕ್ಸಿಜನ್‌ ದೇಹದ ಎಲ್ಲಾ ಭಾಗಕ್ಕೂ ಅಗತ್ಯ ಪ್ರಮಾಣದಲ್ಲಿ ತಲುಪಲಾರದು. ಹೀಗಾಗಿ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಬಾರದೆಂದರೆ ಕೆಲವು ಆಹಾರ ಪದಾರ್ಥಗಳಿಂದ ದೂರ ಇರುವುದೇ ಒಳ್ಳೆಯದು. ಅವೆಂದರೆ :

ಚಾಕಲೇಟ್‌ :

temp-c-LSNetX1496660447641

ಇದರಲ್ಲಿ ಧಾರಾಳ ಕೋಕೋ ಇರುತ್ತದೆ. ಇದು ದೇಹದಲ್ಲಿನ ರಕ್ತ ಇನ್ನಷ್ಟು ಕಬ್ಬಿಣಾಂಶವನ್ನು ಹೀರಿಕೊಳ್ಳದಂತೆ 70%ನಷ್ಟು ತಡೆಯುತ್ತದೆ. ಹೀಗಾಗಿ ನೀವು ಅನೀಮಿಯಾ ರೋಗಿ ಆಗಿದ್ದರೆ ಖಂಡಿತಾ ಚಾಕಲೇಟ್‌ ಸೇವಿಸಬೇಡಿ.

ಕಾಫಿ ಟೀ :

Untitled-7

ಕಾಫಿ ಟೀಗಳಲ್ಲಿ ಪಾಲಿಫೆನಾಲ್ ಎಂಬ ಘಟಕವಿದ್ದು, ಇದು ಕಬ್ಬಿಣಾಂಶ ರಕ್ತದಲ್ಲಿ ವಿಲೀನಗೊಳ್ಳಲು ಅಡ್ಡಿಪಡಿಸುತ್ತದೆ.

ಬ್ಲ್ಯಾಕ್ಹರ್ಬಲ್ ಟೀ : ಕೆಲವು ಸಂಶೋಧನೆಗಳಿಂದ ತಿಳಿದು ಬಂದಿರುವುದೆಂದರೆ, ಬ್ಲ್ಯಾಕ್‌ ಹರ್ಬಲ್ ಟೀ ಸೇವನೆಯು, ಕಬ್ಬಿಣಾಂಶ ರಕ್ತದಲ್ಲಿ ವಿಲೀನಗೊಳ್ಳುವುದನ್ನು 50-70% ಅಡ್ಡಿಪಡಿಸುತ್ತದೆ ಎಂಬುದು. ಹೀಗಾಗಿ ಅನೀಮಿಯಾ ರೋಗಿಗಳು ಈ ಮೇಲ್ಕಂಡ ಪದಾರ್ಥಗಳಿಂದ ದೂರವಿರುವುದು ಲೇಸು.

ಪ್ರತಿನಿಧಿ

ಐರನ್ರಿಚ್ಬ್ಯೂಟಿ ಫುಡ್

ಪಾಲಕ್ಜೂಸ್‌ :

Spinach-juicylify-copy

ತಾಜಾ ಪಾಲಕ್‌ ಸೊಪ್ಪು ಐರನ್‌, ಅಯೋಡಿನ್‌, ಪೊಟ್ಯಾಶಿಯಂ, ಮೆಗ್ನಿಶಿಯಂ ಹಾಗೂ ವಿಟಮಿನ್‌ ಗಳ ಭಂಡಾರವಾಗಿದೆ. ಪಾಲಕ್‌ ಸೊಪ್ಪನ್ನು ಲಘುವಾಗಿ ಬೇಯಿಸಿ ಮಿಕ್ಸಿಗೆ ಹಾಕಿ ಜೂಸ್‌ ಮಾಡಿ ಕುಡಿದರೆ, ದೇಹದ ಪಿಂ ಮಟ್ಟ ಸದಾ ಬ್ಯಾಲೆನ್ಸ್ಡ್ ಆಗಿರುತ್ತದೆ. ಇದರಿಂದ ಚರ್ಮ, ಕೂದಲಿನ ಕಾಂತಿ ಸಹಜ ಹೆಚ್ಚಲಿದೆ.

ಬೀಟ್ರೂಟ್ಜೂಸ್‌ :

Untitled-1

ಬೀಟ್‌ ರೂಟ್‌ ನ್ನು ರಕ್ತ ಶುದ್ಧೀಕಾರಕ ಎಂದೂ ಹೇಳುತ್ತಾರೆ. ಇದು ರಕ್ತದಲ್ಲಿನ ಅಶುದ್ಧಿಗಳನ್ನು ಹೊರತೆಗೆದು ಮುಖದಲ್ಲಿ ಕೆಂಬಣ್ಣ ತೇಲಿಸುತ್ತದೆ, ಲವಲವಿಕೆ ಹೆಚ್ಚುತ್ತದೆ.

ಟೂನಾ ಫಿಶ್‌ :

fish

ಈ ಮೀನು ಒಮೇಗಾ 3 ಫ್ಯಾಟಿ ಆ್ಯಸಿಡ್ಸ್ ನಿಂದ ಸಮೃದ್ಧವಾಗಿದೆ. ದೇಹದಲ್ಲಿ ಐರನ್‌ ಪ್ರಮಾಣವನ್ನು ಬ್ಯಾಲೆನ್ಸ್ಡ್ ಮಾಡುವುದರ ಜೊತೆಯಲ್ಲೇ ಇದು ಚರ್ಮಕ್ಕಾಗಿ ಆಂತರಿಕವಾಗಿ ಮಾಯಿಶ್ಚರೈಸರ್‌ ನ ಕೆಲಸ ಮಾಡುತ್ತದೆ.

ಚಿಕನ್ಬ್ರೋಥ್‌ :

Untitled-2

ಚರ್ಮ, ಕೂದಲು, ಉಗುರುಗಳಿಗೆ ಚಿಕನ್‌ ಗಿಂತ ಉತ್ತಮ ಬೇರೊಂದಿಲ್ಲ. ಇದರಲ್ಲಿ ಅಡಗಿರುವ ಪೋಷಕಾಂಶಗಳು ಚರ್ಮದ ಜೀವಕೋಶಗಳನ್ನು ರಿಪೇರಿ ಮಾಡಿ ಅದರ ಟೆಕ್ಸ್ ಚರ್‌ ಸುಧಾರಿಸುತ್ತದೆ.

ಸೋಯಾ :

soybean1702

ಇದರಲ್ಲಿನ ಪೋಷಕಾಂಶಗಳು ಉಗುರಗಳನ್ನು ಸಶಕ್ತಗೊಳಿಸುವುದರ ಜೊತೆಯಲ್ಲೇ ಚರ್ಮವನ್ನು ಹೈಡ್ರೇಟೆಡ್ ಆಗಿರಿಸುವಲ್ಲಿಯೂ ಹೆಚ್ಚು ಸಹಾಯ ಮಾಡುತ್ತದೆ. ಇದು ಏಜಿಂಗ್‌ ನ ಗುರುತುಗಳಾದ ಸುಕ್ಕು, ನೆರಿಗೆ, ಚರ್ಮ ಜೋತು ಬೀಳುವಿಕೆ ಇತ್ಯಾದಿ ತಡೆಯುತ್ತದೆ. ಹೀಗಾಗಿ ಇಂಥ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ