ಹೊಸ ವರ್ಷ ಬರುತ್ತಿದ್ದಂತೆ ಜನರು ಬಗೆಬಗೆಯ ಸಂಕಲ್ಪಗಳನ್ನು ಮಾಡಲು ತೊಡಗುವವರು. `ಹೊಸ ವರ್ಷದಲ್ಲಿ ನಾನು ಫಿಟ್ ಆಗಿರಬೇಕು. ಅದಕ್ಕಾಗಿ 5 ಕೆ.ಜಿ ತೂಕ ಕಡಿಮೆ ಮಾಡಿಕೊಳ್ಳಬೇಕು,’ ಅಥವಾ `ಹಾಳಾಗಿರುವ ನನ್ನ ಫಿಟ್‌ ನೆಸ್‌ ನ್ನು ಮತ್ತೆ ಪಡೆದು ಅದನ್ನು ಮೇಂಟೇನ್‌ ಮಾಡಬೇಕು,’ ಹೀಗೆ ಕೆಲವರು ಇಂತಹ ಸಂಕಲ್ಪಗಳನ್ನು ಮಾಡುವರು. ಕೆಲವರು ಶೀಘ್ರವಾಗಿ ಫಿಟ್ ಆಗಬೇಕೆಂಬ ಆತುರದಲ್ಲಿ ಶಾರ್ಟ್‌ ಕಟ್‌ ವಿಧಾನವನ್ನು ಕೈಗೊಳ್ಳುವುದುಂಟು. ಆದರೆ ತೂಕ ಇಳಿಸಿ ಮೈ ಕರಗಿಸುವ ಪ್ರಕ್ರಿಯೆಯು ನಾಲ್ಕು ದಿನಗಳಲ್ಲಿ ಆಗುವಂತಹುದಲ್ಲ, ನಿತ್ಯ ಪ್ರಯತ್ನ ಜಾರಿಯಲ್ಲಿರಬೇಕು. ಇದಕ್ಕೆ ಜುಂಬಾ ಮತ್ತು ವೇಟ್‌ ಲಿಫ್ಟಿಂಗ್‌ ಉತ್ತಮ ಸಾಧನವಾಗಿರುತ್ತದೆ.

ಜುಂಬಾ

ಕೆಲವರು ಜುಂಬಾಗಾಗಿ ಜಿಮ್ ಗೆ ಹೋಗುತ್ತಾರೆ. ಆದರೆ ಜಿಮ್ ನ ಮೆಶೀನ್‌ ಗಳಲ್ಲಿ ಹಳೆಯ ಪದ್ಧತಿಯ ವರ್ಕ್‌ ಔಟ್‌ ಮಾಡುವುದು ಇಂದಿನ ಫಿಟ್‌ ನೆಸ್‌ ಪ್ರೇಮಿಗಳಿಗೆ ನೀರಸವಾಗಿ ತೋರುತ್ತದೆ. ಅವರು ವೈವಿಧ್ಯಮಯ, ಉತ್ಸಾಹದಾಯಕ, ಮನೋರಂಜಕ ಟೆಕ್ನಿಕ್‌ ಗಳನ್ನು ಬಯಸುತ್ತಾರೆ.

ಫಿಟ್‌ ನೆಸ್‌ ಟ್ರೇನರ್‌ ಆಲ್ಪರ್ಟ್‌ ಬೆಟೊ ಪೆರೆಜ್‌ ಎಂಬುವರು 90ರ ದಶಕದಲ್ಲಿ ಜುಂಬಾದ ಆವಿಷ್ಕಾರ ಮಾಡಿದರು. ಇದು ಶಕ್ತಿಯುತವಾದ ಏರೋಬಿಕ್‌ ಫಿಟ್‌ ನೆಸ್‌ ಪ್ರೋಗ್ರಾಂ ಆಗಿದ್ದು, ದಕ್ಷಿಣ ಅಮೆರಿಕೆಯ ವಿವಿಧ ನೃತ್ಯಶೈಲಿಗಳಿಂದ ಪ್ರೇರಿತವಾದುದಾಗಿದೆ. ಈ ವರ್ಕ್‌ ಔಟ್‌ ವಿಧಾನ ತ್ವರಿತವಾಗಿ ಕ್ಯಾಲೋರಿ ಬರ್ನ್‌ ಮಾಡುವಲ್ಲಿ ಸಹಕಾರಿಯಾಗಿರುತ್ತದೆ. ಇದರಲ್ಲಿ ಹಿಪ್‌ ಹಾಪ್‌ ಮತ್ತು ಸಾಲ್ಸಾದ ಬೀಟ್ಸ್ ಗೆ ತಕ್ಕಂತೆ ಮುಂಗಾಲಿನ ಮೇಲೆ ನಿಂತು ಬಾಡಿ ಮೂವ್ ‌ಮೆಂಟ್‌ ಮಾಡಬೇಕಾಗುತ್ತದೆ. ಗ್ರೂಪ್‌ ನಲ್ಲಿ ಮಾಡಲಾಗುವ ಜುಂಬಾ, ಉತ್ಸಾಹ ಮತ್ತು ಫಿಟ್‌ ನೆಸ್‌ ಬಗ್ಗೆ ಕೇಂದ್ರೀಕೃತವಾಗಿರುತ್ತದೆ. ಇದು ಅತಿ ವೇಗವಾಗಿ ಮಾಡುವ ಡ್ಯಾನ್ಸ್ ಆದ್ದರಿಂದ ಇತರೆ ಜಾಗಿಂಗ್‌ ಅಥವಾ ಟ್ರೆಡ್‌ ಮಿಲ್ ‌ಗಳಿಗಿಂತ ಬಹು ಬೇಗನೆ ಫ್ಯಾಟ್‌ ಬರ್ನ್‌ ಮಾಡುತ್ತದೆ. ಶರೀರದ ಬಳುಕುವಿಕೆ ಜುಂಬಾ ಒಂದು ಉತ್ತಮ ಕಾರ್ಡಿಯೊ ವ್ಯಾಸ್ಕುಲರ್‌ ಎಕ್ಸರ್‌ ಸೈಸ್‌ ಆಗಿದ್ದು, ವೇಗ ಮತ್ತು ಮಧ್ಯಮಗತಿಯಲ್ಲಿ ಅದನ್ನು ಮಾಡಲಾಗುತ್ತದೆ. ಇದು ಬೆನ್ನು ಮತ್ತು ಹೊಟ್ಟೆಯ ಮಾಂಸಖಂಡಗಳ ಮೇಲೆ ಪ್ರಭಾವ ಬೀರುತ್ತದೆ. ಇದರ ತೊಡಕಾದ ಮೂವ್ ‌ಮೆಂಟ್ಸ್ ಮಾಂಸಖಂಡಗಳ ಬಳುಕುವಿಕೆಯನ್ನು ಹೆಚ್ಚಿಸಿ ಶರೀರವನ್ನು ಸಮತೋಲನಗೊಳಿಸುತ್ತದೆ. ಜುಂಬಾದ ಮತ್ತೊಂದು ಪ್ರಯೋಜನವೆಂದರೆ, ಇದು ಮಾಂಸಖಂಡಗಳನ್ನು ಸಕ್ರಿಯಗೊಳಿಸಿ ಇಡೀ ಶರೀರ ಫಿಟ್‌ ಆಗಲು ಸಹಾಯ ಮಾಡುತ್ತದೆ. ಎಲ್ಲಕ್ಕಿಂತ ಉತ್ತಮ ಅಂಶವೆಂದರೆ, ಇದಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ. 5-65 ವರ್ಷಗಳವರೆಗಿನ ಯಾವುದೇ ವ್ಯಕ್ತಿಯು ಜುಂಬಾ ಮಾಡಬಹುದಾಗಿದೆ.

ವೇಟ್ಟ್ರೇನಿಂಗ್ತೂಕ ಇಳಿಸಲು

ವೇಟ್‌ ಟ್ರೇನಿಂಗ್‌ ಇನ್ನೊಂದು ಪ್ರಭಾವೀ ವರ್ಕ್‌ ಔಟ್‌ ಆಗಿದೆ. ಇದು ಹಿಂದಿನಿಂದಲೂ ಬಾಡಿ ಬಿಲ್ಡರ್ಸ್‌ ಗೆ ಪ್ರಿಯವಾದ ವ್ಯಾಯಾಮವಾಗಿದೆ. ದಷ್ಟಪುಷ್ಟವಾಗಿ ಶರೀರ ಬೆಳೆಸಲು ವೇಟ್‌ ಟ್ರೇನಿಂಗ್‌ ಒಂದು ಸಾಧನ ಎಂಬುದು ಸಾಮಾನ್ಯವಾಗಿ ಜನರ ಭಾವನೆಯಾಗಿರುತ್ತದೆ. ಆದ್ದರಿಂದಲೇ ತೂಕ ಇಳಿಸಲು ಪ್ರಯತ್ನಿಸುವವರು ವೇಟ್‌ ಲಿಫ್ಟಿಂಗ್‌ ಗೆ ಆದ್ಯತೆ ನೀಡುವುದಿಲ್ಲ. ವೇಟ್ ಲಿಫ್ಟಿಂಗ್‌ ಶರೀರವನ್ನು ಬಲಿಷ್ಠಗೊಳಿಸುವುದರೊಂದಿಗೆ ತೂಕ ಇಳಿಸಬಹುದಾದ ಒಂದು ಮುಖ್ಯ ವ್ಯಾಯಾಮವಾಗಿದೆ. ಹಿಂದಿನಿಂದಲೂ ಸ್ಟ್ರೆಂತ್‌ ಟ್ರೇನಿಂಗ್‌ ನಲ್ಲಿ ಮಾಂಸಖಂಡಗಳ ಬಲವರ್ಧನೆಗಾಗಿ ಪ್ರೀ ವೇಟ್‌ ಅಥವಾ ವೇಟ್‌ ಮಶೀನ್‌ ಗಳನ್ನು ಬಳಸಲಾಗುತ್ತದೆ. ಮೆಟಬಾಲಿಕ್‌ ಸ್ಟ್ರೆಂತ್‌ ಟ್ರೇನಿಂಗ್‌ ನಲ್ಲಿ ತೀವ್ರವಾದ ಇಂಟರ್‌ ನೆಟ್‌ ಸರ್ಕ್ಯೂಟ್ಸ್ ಮತ್ತು ಚೇಂಜಿಂಗ್ ಕಾಂಬಿನೇಶನ್‌ ನೊಂದಿಗೆ ಪ್ರೀ ವೇಟ್ಸ್, ಕ್ಯಾಂಟರ್‌ ಬಿಲ್ಸ್, ಡಂಬಲ್ಸ್ ಮುಂತಾದವುಗಳನ್ನು ಬಳಸಲಾಗುತ್ತದೆ.

ವರ್ಕ್‌ ಔಟ್‌ ಮಾಡುವಾಗ ರೆಸಿಸ್ಟೆನ್ಸ್ ಬ್ಯಾಂಡ್ಸ್ ನಿಂದಾಗಿ ಮೆಟಬಾಲಿಸಮ್ ರೇಟ್‌ ಹೆಚ್ಚುತ್ತದೆ. ಕಾರ್ಡಿಯೋ ಟ್ರೇನಿಂಗ್‌ ನಲ್ಲಿ ವರ್ಕ್‌ ಔಟ್‌ ಮಾಡುವಾಗ ಮಾತ್ರ ಕ್ಯಾಲೋರೀಸ್‌ ಬರ್ನ್‌ ಆಗುತ್ತದೆ. ಇದಕ್ಕೆ ವಿರುದ್ಧವಾಗಿ ವೇಟ್‌ ಟ್ರೇನಿಂಗ್‌ ನಲ್ಲಿ ವ್ಯಾಯಾಮ ಮುಗಿದ 72 ಗಂಟೆಗಳವರೆಗೆ ಕ್ಯಾಲೋರಿ ಬರ್ನಿಂಗ್‌ ಆಗುತ್ತಿರುತ್ತದೆ. ಇದು ಶರೀರದ ಮೆಟಬಾಲಿಕ್‌ ರೇಟ್‌ ನ್ನು ಹೆಚ್ಚಿಸಿ ದಿನವಿಡೀ ಕ್ಯಾಲೋರಿ ಬರ್ನ್‌ ಆಗಲು ಸಹಾಯ ಮಾಡುತ್ತದೆ.

ತೂಕ ಇಳಿಸಿ ಶಕ್ತಿವಂತರಾಗಿ

ವೇಟ್‌ ಲಿಫ್ಟಿಂಗ್‌ ತೂಕ ಇಳಿಸುವುದಕ್ಕಷ್ಟೇ ಸೀಮಿತವಾಗಿರುವುದಿಲ್ಲ. ವೇಟ್‌ ಟ್ರೇನಿಂಗ್‌ ನಿಂದ ಬಾಡಿ ಮಸಲ್ಸ್ ದೃಢವಾಗಿ, ಮೂಳೆಗಳ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದ ಆಸ್ಟೂಪೊರೊಸಿಸ್‌ ನಂತಹ ಕಾಯಿಲಗಳು ತಪ್ಪುತ್ತವೆ. ದಿನ ವೇಟ್‌ ಲಿಫ್ಟಿಂಗ್ ಮಾಡುವುದರಿಂದ ಡಯಾಬಿಟಿಸ್‌ ನ ಅಪಾಯ ಕಡಿಮೆಯಾಗುತ್ತದೆ. ಬೆನ್ನು ನೋವಿನಿಂದಲೂ ಮುಕ್ತಿ ದೊರೆಯುತ್ತದೆ. ಮಾನಸಿಕ ಬಲ ಹೆಚ್ಚುತ್ತದೆ ಮತ್ತು ಕೆಲಸ ಕಾರ್ಯಗಳಲ್ಲಿ ಉತ್ಸಾಹಿತರನ್ನಾಗಿ ಮಾಡುತ್ತದೆ.

ಆದ್ದರಿಂದ ಶರೀರದ ಬಲವರ್ಧನೆಗಾಗಿ ಜುಂಬಾ ಅಥವಾ ವೇಟ್‌ ಲಿಫ್ಟಿಂಗ್‌ ಆಯ್ಕೆ ಮಾಡಿಕೊಳ್ಳಿ. ಈ ಎರಡೂ ವರ್ಕ್‌ ಔಟ್ಸ್ ನೀವು ಫಿಟ್‌ ನೆಸ್‌ ಪಡೆಯುವಲ್ಲಿ ಸಹಾಕಾರಿಯಾಗಿರುತ್ತದೆ. ಜುಂಬಾ ಮತ್ತು ವೇಟ್‌ ಲಿಫ್ಟಿಂಗ್‌ ಎರಡೂ ಉತ್ತಮ ಮಾರ್ಗಗಳು. ನೀವು ಬೆವರು ಹರಿಸಲು ಸಿದ್ಧರಾಗಿರುವಿರಿ ತಾನೇ?

ಜಿ. ಪ್ರಿಯಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ