2019 ಅಂಕಗಣಿತದ ಕೌಶಲ್ಯ ಶೈಕ್ಷಣಿಕ ಮತ್ತು ವೃತ್ತಿ ಯಶಸ್ಸಿಗೆ ಪ್ರಮುಖವಾದ ಕೌಶಲ್ಯಗಳಲ್ಲಿ ಒಂದಾಗಿದೆ. ಚಿಕ್ಕ ಮಕ್ಕಳಿಗೆ ಅಂಕಗಣಿತದ ಕುರಿತಾಗಿ ಬಾಲ್ಯದಲ್ಲಿಯೇ ದೃಢವಾದ ಅಡಿಪಾಯವನ್ನು ನಿರ್ಮಿಸುವ ಸಲುವಾಗಿ ಮತ್ತು ಆ ಮಕ್ಕಳ ಪ್ರತಿಭೆಗಳಿಗೆ ಆರಂಭಿಕ ಮನ್ನಣೆ ನೀಡುವುದರ ಜೊತೆಗೆ ಮಕ್ಕಳಲ್ಲಿನ ಬೌದ್ಧಿಕ ಸಾಮರ್ಥ್ಯವನ್ನು ಹೊರಹೊಮ್ಮಿಸುವುದೇ ಈ ಸ್ಪರ್ಧೆಯ ಉದ್ದೇಶ. ಈ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ಸುಮಾರು 2500 ಮಕ್ಕಳು ಪಾಲ್ಗೊಂಡಿದ್ದರು. ಬೇರೆ ಬೇರೆ ಶಾಲೆಯ 2, 3 ಮತ್ತು 4ನೇ ತರಗತಿಯ ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸ್ಪರ್ಧೆಯನ್ನು 4 ಸುತ್ತುಗಳಲ್ಲಿ ನಡೆಸಲಾಯಿತು. ಮೊದಲು ಶಾಲೆಯಲ್ಲಿ ಮತ್ತು ಎರಡನೇ ಸುತ್ತಿನಲ್ಲಿ ಇದೇ ಕೇಂದ್ರದಲ್ಲಿ ನಡೆಯಿತು. ಎರಡನೇ ಸುತ್ತಿನ ಸಾಧನೆಯ ಆಧಾರದ ಮೇಲೆ ಪ್ರತಿ ತರಗತಿಯ ಟಾಪ್‌ 10 ಮಕ್ಕಳನ್ನು ರಾಜ್ಯ ಫೈನಲ್ ನಲ್ಲಿ ಶಾಲೆಯನ್ನು ಪ್ರತಿನಿಧಿಸಲು ಆಯ್ಕೆ ಮಾಡಲಾಯಿತು. ಅದು ಮೂರನೇ ಸುತ್ತಿನಲ್ಲಿರುತ್ತದೆ. ರಾಜ್ಯ ಫೈನಲ್ಸ್ ನಲ್ಲಿ ಪ್ರತಿ ವರ್ಗದ ಅಗ್ರ 3 ಸ್ಪರ್ಧಿಗಳು ರಾಷ್ಟ್ರೀಯ ಫೈನಲ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಾರೆ.

sip-1

ಈ ದಿಸೆಯಲ್ಲಿ ಎಸ್‌.ಐ.ಪಿ. ಅಕಾಡೆಮಿ ಇಂಡಿಯಾ ಪ್ರೈ.ಲಿ., ಭಾನುವಾರದಂದು ಪಿ.ಇ.ಎಸ್‌ ಕಾಲೇಜ್‌ (ಔಟರ್‌ ರಿಂಗ್‌ ರಸ್ತೆ, ಬನಶಂಕರಿ, 3ನೇ ಹಂತ) ಆವರಣದಲ್ಲಿ 4ನೇ ವರ್ಷದ ಆಲ್ ಇಂಡಿಯಾ ಅಂಕಗಣಿತ ಜೀನಿಯಸ್‌ ಸ್ಪರ್ಧೆ ಆಯೋಜಿಸಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 2500ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕಲಿಕಾ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಅಚ್ಚರಿ ಮೂಡಿಸಿದರು.

ಕಳೆದ ವರ್ಷ ಚಿಕ್ಕಬಳ್ಳಾಪುರದ ಬಿಜಿಎಸ್‌ ವರ್ಲ್ಡ್ ಸ್ಕೂಲ್ ‌ಚಾಂಪಿಯನ್‌ ಶಾಲೆಯಾಗಿ ಹೊರಹೊಮ್ಮಿತು. ಈ ವರ್ಷ ಕರ್ನಾಟಕದಾದ್ಯಂತ 70 ಶಾಲೆಗಳು ಭಾಗವಹಿಸಿದ್ದು, ಈ ಶಾಲೆಗಳಿಂದ 30,000ಕ್ಕೂ ಹೆಚ್ಚು ಮಕ್ಕಳು ಮೊದಲ 2 ಸುತ್ತುಗಳಲ್ಲಿ ಭಾಗಹಿಸಿದ್ದರೆ, ಸುಮಾರು 2500 ಮಕ್ಕಳು ಫೈನಲ್ ನಲ್ಲಿ ಪಾಲ್ಗೊಂಡರು. ಈ ಸ್ಪರ್ಧೆಯ ಉದ್ದೇಶ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಉತ್ತಮಪಡಿಸುವುದರ ಜೊತೆಗೆ ಮಕ್ಕಳಲ್ಲಿ ಇಂತಹ ಸ್ಪರ್ಧೆಗಳಲ್ಲಿ ತಮ್ಮ ಕೌಶಲ್ಯವನ್ನು ಪ್ರೇರೇಪಿಸುವಂತೆ ಮಾಡುವುದೇ ಎಸ್‌.ಐ.ಪಿ. ಅಕಾಡೆಮಿಯ ಉದ್ದೇಶ.

GK-4

ಚಾಂಪಿಯನ್‌ ಸ್ಪರ್ಧಿಗಳು ತಲಾ 10,000 ಹಾಗೂ 25,000, ಫಸ್ಟ್ ರನ್ನರ್‌ ಅಪ್‌ 7,000 ಹಾಗೂ 15,000, ಸೆಕೆಂಡ್‌ ರನ್ನರ್‌ ಅಪ್ 5,000 ಹಾಗೂ 10,000 ನಗದು ಬಹುಮಾನ ಮತ್ತು ಟ್ರೋಫಿಗಳನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪಡೆಯುತ್ತಾರೆ. ಪ್ರತಿ ಸ್ಪರ್ಧಿಗೂ ಈ ಅಂಕಗಣಿತದ ಜೀನಿಯಸ್‌ ಸ್ಪರ್ಧೆಯಲ್ಲಿ ಭಾಗಹಿಸಿದ್ದಕ್ಕಾಗಿ ಪ್ರಮಾಣ ಪತ್ರ ವಿತರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಸಾಥ್‌ ನೀಡಿದ್ದು ಡೆಲ್ಲಿ ಪ್ರೆಸ್‌ ಪ್ರಕಟಣಾ ಸಂಸ್ಥೆಯ ಚಂಪಕ ಪತ್ರಿಕಾ ಬಳಗ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೂ ಚಂಪಕ, ಬುತ್ತಿ ಪತ್ರಿಕೆಗಳನ್ನು ಸಂಪೂರ್ಣ ಉಚಿತವಾಗಿ ವಿತರಿಸಲಾಯಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ