ಬೆಂಗಳೂರಿನ ಹತ್ತಿರವೇ ಸುಂದರವಾದ ರಮಣೀಯವಾದ ಪ್ರಕೃತಿ ತಾಣವಿರಬೇಕು. ಅದು ಪುಣ್ಯಕ್ಷೇತ್ರವೂ ಆಗಿರಬೇಕು. ಹಿರಿಯರು ಕಿರಿಯರೂ ಎಲ್ಲರೂ ಮೆಚ್ಚುವಂತಿರಬೇಕು ಎನ್ನುವ ಸುಂದರವಾದ ತಾಣಕ್ಕೆ ಅರಸುತ್ತಿದ್ದೀರೆ ಎಂದರೆ ಬೆಂಗಳೂರಿನಿಂದ ಕೇವಲ 72 km ದೂರದಲ್ಲಿರುವ ಸುಮಾರು 1 ಗಂಟೆ 30 ನಿಮಿಷಗಳಲ್ಲಿ ಆರಾಮವಾಗಿ ತಲುಪಬಹುದಾದಂತಹ ಪುರಾಣ ಪ್ರಸಿದ್ಧ ಪಕೃತಿತಾಣವೇ ದೇವರಾಯನ ದುರ್ಗ ಎಂದರೆ ಅತಿಶಯೋಕ್ತಿ ಎನಿಸದು.

ದೇವರಾಯನದುರ್ಗವು ತುಮಕೂರು ಜಿಲ್ಲೆಗೆ ಸೇರಿರುವ ಬೆಟ್ಟ ಗುಡ್ಡ, ಅರಣ್ಯಗಳಿಂದ ಆವೃತವಾಗಿರುವ ಹತ್ತು ಹಲವಾರು ದೇವಾಲಯಗಳನ್ನು ಒಳಗೊಂಡಿರುವ ಒಂದು ಸುಂದರವಾದ ಗಿರಿಧಾಮವಾಗಿರುವುದಲ್ಲದೇ, ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೂ ಹೇಳಿ ಮಾಡಿಸಿದಂತೆ. ಬೆಟ್ಟದ ಅಡಿಯಲ್ಲಿ ಯೋಗನರಸಿಂಹ ಮತ್ತು 1204 ಮೀಟರ್ ಎತ್ತರದ ಸುಮಾರು ೨೭೫ ಮೆಟ್ಟಿಲುಗಳನ್ನು ಹೊಂದಿರುವ ಬೆಟ್ಟದ ತುದಿಯಲ್ಲಿರುವ ಭೋಗನರಸಿಂಹ ಸ್ವಾಮಿಯ ದೇವಾಲಯಗಳು ಮತ್ತು ಅದರ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯ ಅಲ್ಲಿಂದ 6 ಕಿಮಿ ದೂರದಲ್ಲಿರುವ ನಾಮದ ಚಿಲುಮೆಯ ತಣ್ಣನೆಯ ಆಹ್ಲಾದಕರ ಅನುಭವ ನಿಜಕ್ಕೂ ವರ್ಣಿಸುವುದಕ್ಕಿಂತಲೂ ಅನುಭವಿಸಿದರೆ ಆಪ್ಯಾಯಮಾನ ಎನಿಸುತ್ತದೆ.

ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ 57 ಕಿಮೀ ದೂರ ಪ್ರಯಣಿಸಿ ದಾಬಸ್ ಪೇಟೆ ತಲುಪಿ ಅಲ್ಲಿಂದ ಬಲಕ್ಕೆ ಮಧುಗಿರಿ ರಸ್ತೆಯಲ್ಲಿ ಸುಮಾರು 10-12 ಕಿಮೀ ದೂರದಲ್ಲಿರುವ ಉರ್ಡಿಗೆರೆ ತಲುಪಿ ಅಲ್ಲಿಂದ ಎಡಕ್ಕೆ ಸುಮಾರು 4 ಕಿಮೀ ಘಾಟ್ ರಸ್ತೆಯಲ್ಲಿ ಸಂಚರಿಸಿದರೆ ಪುರಾಣಪ್ರಸಿದ್ಧ ದೇವರಾಯನ ದುರ್ಗದ ವೃತ್ತವನ್ನು ತಲುಪಬಹುದಾಗಿದೆ ವೃತ್ತದಿಂದ ಎಡಕ್ಕೆ ಅರ್ಧ ಕಿಮೀ ದೂರ ಸಂಚರಿಸಿದಲ್ಲಿ ಯೋಗಾನರಸಿಂಹನ ದೇವಲಯವಿದ್ದರೆ, ವೃತ್ತದಿಂದ ಸುಮಾರು 2-3 ಕಿಮೀ ತಿರುವ ಮುರುವು ರಸ್ತೆಯಲ್ಲಿ ಪ್ರಯಾಣಿಸಿದಲ್ಲಿ ರಮಣೀಯವಾದ ಭೋಗಾನರಸಿಂಹ ಬೆಟ್ಟದ ತಪ್ಪಲನ್ನು ತಲುಪಬಹುದಾಗಿದೆ.

ಸುತ್ತ ಮುತ್ತಲೂ ಬೆಟ್ಟಗುಡ್ಡಗಳಿಂದ ಆವೃತವಾಗಿರುವ ದೇವರಾಯನ ದುರ್ಗ ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕಿನಿಂದ ಈ ಪ್ರದೇಶವನ್ನು ನೋಡಿದಾಗ ಒಂದೊಂದು ರೀತಿಯಾಗಿ ಕಾಣುವುದು ಈ ಶ್ರೀ ಕ್ಷೇತ್ರದ ವಿಶೇಷವಾಗಿದೆ. ಪೂರ್ವದಿಂದ ನೋಡಿದಾಗ ಇದು ಆನೆಯಂತೆ ಕಾಣುವುದರಿಂದ ಈ ಕ್ಷೇತ್ರಕ್ಕೆ ಕರಿಗಿರಿ ಎಂಬ ಹೆಸರು ಇರುವ ಕಾರಣ, ಇಲ್ಲಿನ ನರಸಿಂಹ ದೇವರನ್ನು ಕರಿಗಿರಿರಾಯ ಎಂದೂ ಕರೆಯಲಾಗುತ್ತದೆ. ಇನ್ನು ದಕ್ಷಿಣದಿಂದ ನೋಡಿದರೆ ಸಿಂಹದಂತೆ, ಪಶ್ಚಿಮದಿಂದ ಹಾವಿನಂತೆ ಮತ್ತು ಉತ್ತರದಿಂದ ಗರುಡನಂತೆ ಕಾಣುತ್ತದೆ. ಮೈಸೂರಿಗ ಚಿಕ್ಕ ದೇವರಾಯ ಒಡೆಯರ್ ಅವರು ಯುದ್ಧದಲ್ಲಿ ಈ ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡ ಕಾರಣ ಈ ಪ್ರದೇಶಕ್ಕೆ ದೇವರಾಯನ ದುರ್ಗ ಎಂಬ ಹೆಸರು ಬಂದಿದೆ ಎನ್ನುವ ಪ್ರತೀತಿಯೂ ಇದೆ.

ಇಂತಹ ಶ್ರೀ ಕ್ಷೇತ್ರದ ದರ್ಶನವನ್ನು ಕುಳಿತಲ್ಲಿಂದಲೇ ಮಾಡೋಣ ಬನ್ನಿ.

ಇಲ್ಲಿನ ಸ್ಥಳ ಪುರಾಣದ ಪ್ರಕಾರ ದೂರ್ವಾಸರು ಈ ಪುಣ್ಯಕ್ಷೇತ್ರದಲ್ಲಿ ಸಾವಿರಾರು ವರ್ಷ ತಪಸ್ಸು ಮಾಡಿದ್ದಾರೆ. ಅವರಿಗೆ ಶ್ರೀಲಕ್ಷೀ ನರಸಿಂಹ ಸ್ವಾಮಿಯವರು ಪ್ರತ್ಯಕ್ಷವಾದ ಸ್ಥಳದಲ್ಲಿಯೇ ಈಗ ಶ್ರೀ ಭೋಗಾಲಕ್ಷ್ಮೀ ನರಸಿಂಹ ಸ್ವಾಮಿಯವರ ದೇವಸ್ಥಾನವಿದೆ. ಇದೇ ಕ್ಷೇತ್ರದಲ್ಲಿಯೇ ಕಂಟಕ ಪ್ರಾಯನಾಗಿದ್ದ ಪುಂಡರೀಕನೆಂಬ ರಾಕ್ಷಸನನ್ನು ಮಹಾವಿಷ್ಣುವು ಸಂಹರಿಸಿದಾಗ, ಎಲ್ಲ ದೇವತೆಗಳೂ ಆಕಾಶದಲ್ಲಿ ನಿಂತು ಜಯಕಾರ ಹಾಕಿದ್ದಲ್ಲದೇ, ಶ್ರೀಮನ್ನಾರಾಯಣನ ಮೇಲೆ ಪುಷ್ಪವೃಷ್ಟಿಯನ್ನು ಮಾಡಿದಾಗ ಈ ಪುಣ್ಯಕ್ಷೇತ್ರವೆಲ್ಲವೂ ಹೂವುಗಳಿಂದ ತುಂಬಿ ತುಳುಕಿದನ್ನು ಕಂಡ ಮಹರ್ಷಿಗಳು ಈ ದುರ್ಗವನ್ನು ಕುಸುಮಾದ್ರಿ ಎಂದು ಕರೆದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ