ಯಾರಾದರೂ ಅತಿಥಿಗಳು ನಮ್ಮ ಮನೆಗೆ ಬಂದಾಗ ಸಹಜವಾಗಿ ಅವರಿಗೆ ಟೀ ಅಥವಾ ಕಾಫಿ ಕೊಟ್ಟು ಸತ್ಕರಿಸುತ್ತೇವೆ. ಮಳೆ ಬರುತ್ತಿದ್ದಾಗಂತೂ ಬಿಸಿ ಬಿಸಿ ಬೋಂಡ ಪಕೋಡ ಜೊತೆ ಬಿಸಿಯಾದ ಒಂದೊಂದೇ ಹನಿ ಚಹಾ ಗುಟುಕರಿಸುತ್ತಿದ್ದರೆ, ಅದರ ಸವಿ ಬಲ್ಲವರೇ ಬಲ್ಲರು! ಬಹಳ ಸುಸ್ತಾಗಿ, ಕೆಲಸದ ಒತ್ತಡ ಹೆಚ್ಚಾಗಿ ಬ್ರೇಕ್‌ ಬೇಕಾದಾಗ 1 ಕಪ್‌ ಆಹ್ಲಾದಕರ ಚಹಾ ಬೇಕೇಬೇಕು ಎನಿಸುತ್ತದೆ. ಚಹಾ ಕುಡಿಯಲು ನೆಪ ಹುಡುಕುವುದೇ ಬೇಡ. ಯಾವಾಗ ಬೇಕಾದರೂ ಎಲ್ಲಾದರೂ ಸರಿ, ಚಹಾ ಗುಟುಕರಿಸಲು ಜೀವ ಹಾತೊರೆಯುತ್ತಿರುತ್ತದೆ.

ಹಳೆ ಗೆಳೆಯರು ಅಪರೂಪಕ್ಕೆ ಸಿಕ್ಕಾಗ ಮಾತುಕಥೆ, ಹರಟೆಗೆ ಜೊತೆಗೆ ಚಹಾ ಇರಲೇಬೇಕು. ಅದು ಸಾಧಾರಣ ಟೀ ಅಂಗಡಿ, ದರ್ಶಿನಿ, ರೆಸ್ಟೋರೆಂಟ್‌ ಅಥವಾ ಸ್ಟಾರ್‌ ಹೋಟೆಲ್ ‌ಯಾವುದೇ ಇರಲಿ, ಮೊದಲು ನೆನಪಾಗುವುದೇ ಚಹಾ! ಇದನ್ನು ತಯಾರಿಸುವ ವಿಧಾನ ಬೇರೆ ಬೇರೆ ಇರಬಹುದು. ಚೀನಾದಲ್ಲಿ ಇದಕ್ಕೆ ವೆಲ್ ‌ಕಂ ಡ್ರಿಂಕ್‌ ಎನ್ನುತ್ತಾರೆ, ಜಪಾನಿನಲ್ಲಿ ಅತಿಥಿಗಳು ಬಂದಾಗ ಟೀ ಇಲ್ಲದೆ ಅವರನ್ನು ಎದುರುಗೊಳ್ಳುವಂತೆಯೇ ಇಲ್ಲ.

ಚಹಾದ ಇತಿಹಾಸ

ಇದರ ಇತಿಹಾಸ ಬಹಳ ಪುರಾತನವಾದುದು. ಎಲ್ಲಕ್ಕೂ ಮೊದಲು ಚೀನಾದಲ್ಲಿ ಚಹಾ ಕುಡಿಯುವ ರೂಢಿ ಜಾರಿಗೆ ಬಂತಂತೆ. ನಂತರ 6ನೇ ಶತಮಾನದಲ್ಲಿ ಚೀನಾದಿಂದ ಅದು ಜಪಾನಿಗೆ ಹೋಯಿತು. ಅದು ಅಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. 19ನೇ ಶತಮಾನದಲ್ಲಿ ಇದು ಏಷ್ಯಾ ಖಂಡಕ್ಕೆ ಬಂದಿಳಿಯಿತು. ಅಂದು ಭಾರತದಲ್ಲಿ ಶುರುವಾದ ಚಹಾದ ಬೆಳೆ ಇಂದು ವಿಶ್ವದಲ್ಲೇ ಭಾರತಕ್ಕೆ ಅತ್ಯಧಿಕ ಚಹಾ ಉತ್ಪಾದಿಸುವ ರಾಷ್ಟ್ರ ಎಂಬ ಬಿರುದು ತಂದುಕೊಟ್ಟಿದೆ.

ಚಹಾದ ಲಾಭಗಳು

ಚಹಾ ನಮ್ಮ ಮನಸ್ಸನ್ನು ಲವಲವಿಕೆಯಿಂದ ಕೂಡಿರುವಂತೆ ಮಾಡುತ್ತದೆ. ಇದು ಆ್ಯಂಟಿ ಇನ್‌ ಫ್ಲಮೆಟರಿ, ಆ್ಯಂಟಿ ಬ್ಯಾಕ್ಟೀರಿಯಲ್ ಆ್ಯಂಟಿ ಡಯಾಬಿಟಿಕ್‌ ನಂಥ ಗುಣಗಳಿಂದ ಸಮೃದ್ಧವಾಗಿದೆ. ಹಲ್ಲುಗಳಿಗೂ ಇದು ಪೂರಕ. ಚಹಾದಲ್ಲಿ ಪೊಟ್ಯಾಶಿಯಂ ಸಹಿತ ಅನೇಕ ಖನಿಜ ಪದಾರ್ಥಗಳಿವೆ. ಚಹಾದಲ್ಲಿನ ಕೆಟ್ಯಾಚಿನ್‌, ಪಾಲಿಫಿನಾಲ್ ಹಾಗೂ ಆ್ಯಂಟಿ ಆಕ್ಸಿಡೆಂಟ್ಸ್ ಇದನ್ನು ಆರೋಗ್ಯಕರ ಆಗಿಸಿದೆ. ಭಾರತದಲ್ಲಿ ಇದನ್ನು ಉ. ಭಾರತದ ಕೌಸಾನಿ, ದ.ಭಾರತದ ನಾಲ್ಕೂ ರಾಜ್ಯಗಳು, ಪೂ.ಭಾರತದಲ್ಲಿ ಡಾರ್ಜಿಲಿಂಗ್‌, ಅಸ್ಸಾಂ, ಈಶಾನ್ಯ ರಾಜ್ಯಗಳು ಮತ್ತು  ನೀಲಗಿರಿ ಪ್ರಾಂತ್ಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.

ಬ್ಲ್ಯಾಕ್ಟೀ :

iStock-827215724

ಇದನ್ನು ಆಕ್ಸಿಡೇಶನ್‌ ಪ್ರಕ್ರಿಯೆಯಿಂದ ತಯಾರಿಸಲಾಗುತ್ತದೆ. ಇದರಲ್ಲಿ ಟೆನೆನ್‌ ಪ್ರಮಾಣ (ಕಾಫಿಯಲ್ಲಿ ಕೆಫೀನ್‌ಇರುವಂತೆ) 50-65% ಇರುತ್ತದೆ. ಇದು ಚಹಾದ ಅತ್ಯಂತ ಕಾಮನ್‌ ವೆರೈಟಿ ಆಗಿದೆ. ವಿಶ್ವವಿಡೀ ಸುಮಾರು 75% ಮಂದಿ ಇದನ್ನೇ ಬಳಸುತ್ತಾರೆ. ಇದರಲ್ಲಿ ಹಾಲು, ಸಕ್ಕರೆ ಇರುವುದಿಲ್ಲ. ನಮ್ಮ ಭಾರತದಲ್ಲಿ ಹಾಗೆ ಬೆರೆತ ಚಹಾ ಹೆಚ್ಚು ಜನಪ್ರಿಯ.

ಲಾಭ : ಇದು ಹೃದ್ರೋಗದ ಅಪಾಯಗಳನ್ನು ದೂರವಿಡುತ್ತದೆ. ಡಯಾಬಿಟೀಸ್‌ ರೋಗಿಗಳಿಗೂ ಇದು ಲಾಭಕರ. ಇದು ರೋಮ ರಂಧ್ರಗಳಲ್ಲಿ ಹೆಚ್ಚಿನ ಬಿಗಿವು ತರುತ್ತದೆ ಹಾಗೂ ಕೆಂಪು ರಕ್ತಕಣಗಳ ರಕ್ಷಣೆ ಮಾಡುತ್ತದೆ.

ಓವಾಂಗ್ಟೀ : ಚೀನೀ ಭಾಷೆಯಲ್ಲಿ ಓವಾಂಗ್‌ ಎಂದರೆ ಬ್ಲ್ಯಾಕ್‌ ಡ್ರಾಗನ್‌. ಟೆನೆನ್‌ ದೃಷ್ಟಿಯಿಂದ ನೋಡಿದಾಗ ಅದರ ಪ್ರಮಾಣ ಇದರಲ್ಲಿ ಬ್ಲ್ಯಾಕ್‌ ಟೀ ಗ್ರೀನ್‌ ಟೀ ಮಧ್ಯೆ ಬರುತ್ತದೆ. ಇದಕ್ಕೆ ತನ್ನದೇ ಆದ ಅದ್ಭುತ ಪರಿಮಳವಿದೆ. ಹಾಗೆ ನೋಡಿದರೆ ಇದು ಬ್ಲ್ಯಾಕ್ ಟೀ ತರಹವೇ ಇರುತ್ತದೆ. ಆದರೆ ಇದರ ಫರ್ಮೆಂಟೇಶನ್‌ ಕಡಿಮೆ ಕಾಲಾವಧಿಗೆ ಸೀಮಿತ, ಆ ಕಾರಣದಿಂದ ಇದರ ರುಚಿ ವಿಭಿನ್ನ. ಇದರ ಒಂದು ಕಪ್‌ ನಲ್ಲಿ ಟೆನೆನ್‌ ಪ್ರಮಾಣ 30 ಮಿ.ಗ್ರಾಂ ಇರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ