ಥಿಯೇಟರ್ಮಜವೇ ಬೇರೆ :

ನ್ಯೂಯಾರ್ಕಿನ ಸ್ಟೇಜ್‌ ಶೋ ಇಂದಿಗೂ ಸಹ ಬಲು ಜನಪ್ರಿಯ. ಟಿ.ವಿ, ಮೊಬೈಲ್ ‌ಗಳ ಹಾವಳಿಯ ನಡುವೆಯೂ `ಪ್ಯಾಟ್‌ ದಿ ಕ್ಯಾಟ್‌’ನಂಥ ಮ್ಯೂಸಿಕ್‌ ಲೈವ್ ‌ಥಿಯೇಟರ್‌ ನ್ನು ನೋಡಲು ಪ್ರೇಕ್ಷಕರ ನೂಕುನುಗ್ಗಲು ಇಲ್ಲದಿದ್ದರೂ, ಹಾಲ್ ‌ಅಂತೂ ತುಂಬಿರುತ್ತದೆ. ಪ್ರತಿ ಸಲ ಈ ಶೋಗಾಗಿ ಕಲಾವಿದರು ಸಿನಿಮಾಗಿಂತ ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ಹೀಗಾಗಿ ರಂಗಭೂಮಿಯ ನಾಟಕ ನೋಡಲು ಅವಕಾಶ ಸಿಕ್ಕಾಗ ಖಂಡಿತಾ ಮಿಸ್‌ ಮಾಡಬೇಡಿ.

ಚಿಂತೆ ತಪ್ಪಿದ್ದಲ್ಲ :

samachar-darshan-2

 

ರೇಶ್‌ ಸೇಜ್‌ ಅಂತಾರಾಷ್ಟ್ರೀಯ ಮ್ಯೂಸಿಕ್‌ ನಲ್ಲಿ ಜನಪ್ರಿಯ ಹೆಸರು. ಇವಳ ಆಲ್ಬಂ ಆಗಾಗ ಜಾಗತಿಕ ಮಟ್ಟದಲ್ಲಿ ರಿಲೀಸ್‌ ಆಗುತ್ತಿರುತ್ತದೆ. ಕ್ಯಾನ್ಸರ್‌ ರಿಸರ್ಚ್‌ ಗೆ ಹೆಲ್ಪ್ ಆಗಲಿ ಎಂದೇ ಒಂದನ್ನು ಆಕೆ ಲಾಂಚ್‌ ಮಾಡಿದ್ದಾಳೆ. ರಾಜಕಾರಣಿಗಳಿಗಿಂತ ಕಲಾವಿದರಿಗಾದರೂ ಕ್ಯಾನ್ಸರ್‌ ಕುರಿತು ಚಿಂತೆ ಇದೆಯಲ್ಲ ಎಂಬುದು ಮೆಚ್ಚತಕ್ಕದ್ದು.

ಸೌಂದರ್ಯದ ಮೋಡಿ :

samachar-darshan-3

ಕಳೆದ ವರ್ಷದ ನವೆಂಬರ್‌ ನಲ್ಲಿ  ಮುಂಬೈನಲ್ಲಿ `ಮಿಸೆಸ್‌ ಯೂನಿರ್ಸ್‌ 2019′ ಎಂಬ ಮತ್ತೊಂದು ಸೌಂದರ್ಯ ಸ್ಪರ್ಧೆ ನಡೆಯಿತು. ಇಂಥ ಎಷ್ಟೋ ಸ್ಪರ್ಧೆಗಳು ನಡೆಯುತ್ತಿರುತ್ತವೆ. ಆದರೆ ಇದು ಸಾಬೀತಪಡಿಸಿದ್ದು ಎಂದರೆ, ವಿವಾಹಿತೆಯರು ಸಹ ತಾವೂ ಕುಮಾರಿಯರಂತೆ ಅಷ್ಟೇ ಸ್ಮಾರ್ಟ್‌, ಕ್ಯೂಟ್‌ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳಲು ಬಯಸುತ್ತಾರೆ ಎಂಬುದು. ಹೀಗಾಗಿ ತಮ್ಮ ಮೈಕಟ್ಟಿನ ಕುರಿತಾಗಿಯೂ ಅಲರ್ಟ್‌ ಆಗಿರುತ್ತಾರೆ. ಇಂಥ ಕಳಕಳಿಯುಳ್ಳ ಆರೋಗ್ಯಕರ ಸ್ಪರ್ಧೆ ಇನ್ನಷ್ಟು ಹೆಚ್ಚಲಿ!

ಈಕೆಯ ಆತ್ಮವಿಶ್ವಾಸ ಗಮನಿಸಿ :

samachar-darshan-4

ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್‌ ಕಾಂಟೆಸ್ಟ್ ಆಗಿ ಗೆದ್ದುಬಿಟ್ಟ ಮಾತ್ರಕ್ಕೆ ಆಕಾಶ ಕೈಗೆ ಸಿಕ್ಕಂತಲ್ಲ. ಹೆಸರು ಗಳಿಸಿ, ಸಿನಿಮಾ, ಜಾಹೀರಾತುಗಳಲ್ಲಿ ಅವಕಾಶ ಗಿಟ್ಟಿಸಿ ಮೆರೆಯಬಹುದು ಎನ್ನವಷ್ಟು ಸುಲಭವಲ್ಲ. ಈ ಮಿಸ್ ಕಾಂಟೆಸ್ಟ್ ಗಳಲ್ಲಿ ಪಾರ್ಟಿಸಿಪೆಂಟ್‌ ಗಳ ಆತ್ಮವಿಶ್ವಾಸ ನಿಜಕ್ಕೂ ಪ್ರಶಂಸನೀಯ! ಇದರಿಂದ ಹುಡುಗಿಯರು ತಮ್ಮ ಬಗ್ಗೆ ಎಷ್ಟು ಹೆಮ್ಮೆಪಡುತ್ತಾರೆ ಎಂದು ತಿಳಿಯುತ್ತದೆ.

ಡ್ಯಾನ್ಸ್ ಅಂದ್ರೆ ಹೀಗಿರಬೇಕು :

 

samachar-darshan-5ಬಾತ್ ‌ರೂಂ ಡ್ಯಾನ್ಸಿಂಗ್‌ ಇತ್ತೀಚಿನ ಫ್ಯಾಷನ್‌ ನಲ್ಲಿ ಕೊಂಚ ಹಿಂದೆ ಉಳಿದಿದೆ, ಏಕೆಂದರೆ ಅದನ್ನು ಕಲಿಯಬೇಕಾಗುತ್ತದೆ. ಆದರೆ ಸಂಗಾತಿಯಿಂದ ಸಿಗುವ ಸ್ಪರ್ಶ ಸುಖ, ನಿಕಟತೆ, ಸುಗಂಧ ಇತ್ಯಾದಿಗಳು ಇಂದಿನ ರಾಂಪ್ ಮ್ಯೂಸಿಕ್‌ ನ ಯಾವ ಡ್ಯಾನ್ಸ್ ನಲ್ಲಿ ಸಿಕ್ಕೀತು? ಅಮೆರಿಕಾದ ಈ ಕ್ಯಾರೋಲೀನಾ ಡ್ಯಾನ್ಸ್ ಸ್ಟುಡಿಯೋದಲ್ಲಿ ಇದಕ್ಕೆಂದೇ ವಿಶೇಷ ತರಬೇತಿ ನೀಡುತ್ತಾರೆ. ಜೊತೆಗೆ ಕಾಂಪಿಟೇಶನ್‌ ಏರ್ಪಡಿಸಿ ಉತ್ತಮ ಬಹುಮಾನಗಳನ್ನೂ ನೀಡುತ್ತಾರೆ.

ಅಬ್ಬಾ…. ಇಂಥವರಿಂದ ದೂರವಿದ್ದರೆ ಲೇಸು :

samachar-darshan-6

ಸ್ಮಾರ್ಟ್‌ ಆಗಿ ಕಾಣಿಸಲು ಮಸಲ್ಸ್ ಟೋನ್ಡ್ ಆಗಿರಬೇಕು. ಹಾಗಿರುವಾಗ ಹೆಣ್ಣುಮಕ್ಕಳು ಯಾವ ಮಟ್ಟಕ್ಕೆ ಸ್ಟ್ರಾಂಗ್‌ ಆಗಿರಬಲ್ಲರು ಎಂಬುದನ್ನು ಈಕೆಯ ಮಸಲ್ಸ್ ಹೇಳುತ್ತಿವೆ. ಗಂಡಸರು ಬೇಕೆಂದೇ ಅನಾದಿ ಕಾಲದಿಂದ ಹೆಂಗಸರನ್ನು ಅಬಲೆ, ಕೋಮಲಾಂಗಿ ಎಂದು ಸುಮ್ಮನಿರಿಸಿದ್ದರು. ಅಕಾರಣವಾಗಿ ಅವರನ್ನು ತಮ್ಮ ಗುಲಾಮಗಿರಿಯ ಕಪಿಮುಷ್ಟಿಯಲ್ಲಿ ಹಿಡಿದಿದ್ದರು. ಹೀಗಿರುವಾಗ ಇಂಥ ಹುಡುಗಿಯನ್ನು ಯಾರಾದರೂ ಮುಟ್ಟಲು ಸಾಧ್ಯವೇ? `ಹೆಣ್ಮಕ್ಳೇ ಸ್ಟ್ರಾಂಗು ಗುರು!’ ಎಂದು ಸುಮ್ಮನೇ ಹೇಳಲಿಲ್ಲ ಬಿಡಿ.

ಕೋಲ್ಕತಾದಲ್ಲಿ ಬದಲಾವಣೆಯ ಸುಳಿಗಾಳಿ :

samachar-darshan-7

ಇತರ ಮಹಾನಗರಗಳಿಗೆ ಹೋಲಿಸಿದಾಗ ಕೋಲ್ಕತಾ ತುಸು ಹಿಂದುಳಿದ ನಗರ ಎನಿಸುತ್ತದೆ. ಆದರೆ ಮಮತಾ ಬ್ಯಾನರ್ಜಿ ಅಲ್ಲಿನ  ಆ್ಯಟಿಟ್ಯೂಡ್‌ ನ್ನು ಸಾಕಷ್ಟು ಬದಲಾಯಿಸಿದ್ದಾರೆ. ಹಾಗಾಗಿಯೇ `ಲಿವಾ ಮಿಸ್‌ದೀವಾ 2020’ರ ಆಡಿಶನ್‌ ನಲ್ಲಿ ಕೇವಲ ಶೇ.1020 ಅಲ್ಲ, ಬದಲಿಗೆ 80% ಸ್ಪರ್ಧಿಗಳು ಭಾಗವಹಿಸಿದ್ದರು!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ