ತರಕಾರಿಗಳು ಪ್ರತಿಯೊಂದು ಮನೆಯಲ್ಲಿ ಮುಂಜಾನೆ ಸಂಜೆ ಅವಶ್ಯವಾಗಿ ಬೇಕಾಗುತ್ತವೆ. ಅವುಗಳ ಬೆಲೆ ಕೂಡ ಹೆಚ್ಚುತ್ತಿರುತ್ತದೆ. ಇಂತಹ ಸ್ಥಿತಿಯಲ್ಲಿ ಅವುಗಳನ್ನು ಖರೀದಿಸುವ ಸಮಯದಲ್ಲಿ ಎಚ್ಚರಿಕೆ ವಹಿಸದಿದ್ದರೆ ಅವುಗಳನ್ನು ಸಿದ್ಧಪಡಿಸುವ ಮಜವಾಗಲಿ, ತಿನ್ನುವ ಖುಷಿಯಾಗಲಿ ದೊರೆಯದು. ಹೀಗಾಗಿ ತರಕಾರಿ ಖರೀದಿಸುವಾಗ ಈ ಸಂಗತಿಗಳ ಮೇಲೊಮ್ಮೆ ಗಮನ ಹರಿಸಿ :

ಎಷ್ಟೋ ಅಂಗಡಿಕಾರರು ಎತ್ತರದ ಫ್ಲ್ಯಾಟ್‌ ಫಾರ್ಮ್ ಮೇಲೆ ತರಕಾರಿಗಳನ್ನು ಪೇರಿಸಿ ಇಟ್ಟಿರುತ್ತಾರೆ. ಅದರಿಂದ ಅವರು ತರಕಾರಿ ಆಯ್ಕೆ ಮಾಡಲು ಕೂಡ ಅವಕಾಶ ಮಾಡಿಕೊಡುವುದಿಲ್ಲ. ನೆಲದ ಮೇಲೆ ಅಥವಾ ಗಾಡಿಯಲ್ಲಿಟ್ಟು ಮಾರಾಟ ಮಾಡುವವರಿಂದಲೇ ತರಕಾರಿ ಖರೀದಿಸಿ.

ಕೆಲವು ಮಾರಾಟಗಾರರು ಹಸಿರು ಸೊಪ್ಪುಗಳ ತೂಕ ಹೆಚ್ಚಳ ಮಾಡಲು ಅದರ ಮೇಲೆ ಆಗಾಗ ನೀರು ಸಿಂಪಡಿಸುತ್ತಿರುತ್ತಾರೆ.

ತರಕಾರಿ ಖರೀದಿಸುವಾಗ ಮಾರಾಟಗಾರರ ತಕ್ಕಡಿಯ ಮೇಲೆ ಗಮನಹರಿಸಿ. ಎಲೆಕ್ಟ್ರಾನಿಕ್‌ ತೂಕದ ಮೂಲಕ ಮಾರಾಟ ಮಾಡುವವರಿಂದ ಖರೀದಿಸುವುದು ಸೂಕ್ತವಾಗಿರುತ್ತದೆ.

ಬೇರೆ ಬೇರೆ ತರಕಾರಿಗಳನ್ನು ಖರೀದಿಸಬೇಕೇ? ಹಾಗಾದರೆ ಒಂದೇ ಅಂಗಡಿಯಲ್ಲಿ ಎಲ್ಲವನ್ನೂ ಖರೀದಿಸಬೇಡಿ. ಯಾವ ಅಂಗಡಿಯಲ್ಲಿ ಯಾವ ತರಕಾರಿ ಚೆನ್ನಾಗಿರುತ್ತದೆಯೋ ಅಲ್ಲಿಯೇ ಖರೀದಿಸಿ. ಇದರಿಂದ ನಿಮಗೆ ಸ್ವಲ್ಪ ಹೆಚ್ಚು ಸಮಯ ತಗುಲಬಹುದು. ಆದರೆ ಒಳ್ಳೆಯ ತರಕಾರಿ ಖರೀದಿಸಿದ ಸಮಾಧಾನವಂತೂ ಸಿಗುತ್ತದೆ.

ನೀವು ತರಕಾರಿ ಖರೀದಿಸುವಾಗ ಬೆಲೆಯ ಬಗ್ಗೆ ಚೌಕಾಶಿ ಮಾಡುತ್ತೀರಿ ಎನ್ನುವುದು ತರಕಾರಿ ಮಾರುವವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಹೀಗಾಗಿ ಅವರು ಹೆಚ್ಚಿನ ಬೆಲೆ ಹೇಳುತ್ತಾರೆ. ಒಂದು ನಿಶ್ಚಿತ ತರಕಾರಿಯ ಬೆಲೆ ಎಷ್ಟಿದೆ ಎನ್ನುವುದು ನಿಮಗೆ ಗೊತ್ತಿದ್ದರೆ, ಬೇರೆ ಕಡೆ ಇಷ್ಟು ಬೆಲೆ ಇದೆ. ನೀವ್ಯಾಕೆ ಜಾಸ್ತಿ ಹೇಳ್ತಿದೀರಾ ಎಂದು ಕೇಳಿ. ಆಗ ಅವರೇ ತಗೊಂಡು ಹೋಗಿ ಎಂದು ಹೇಳುತ್ತಾರೆ. 3-4 ಅಂಗಡಿಗಳಿಗೆ ಸುತ್ತಾಡಿ ಬೆಲೆ ಬಗ್ಗೆ ಕೇಳಿ ತಿಳಿದುಕೊಳ್ಳುವುದು ಒಳ್ಳೆಯದು.

ಕೆಲವು ಮಹಿಳೆಯರು ಕಾರಿನಲ್ಲಿ ಮಾರ್ಕೆಟ್‌ ಗೆ ಹೋಗಿ, ಕೆಳಗೆ ಇಳಿಯದೆಯೇ ತರಕಾರಿ ತಂದು ಕೊಡಲು ಹೇಳುತ್ತಾರೆ. ಅವರು ಅದರ ಗುಣಮಟ್ಟದ ಬಗ್ಗೆಗಾಗಲಿ, ಅದರ ಬೆಲೆಯ ಬಗ್ಗೆ ಆಗಲಿ ತಿಳಿದುಕೊಳ್ಳದೆಯೇ ಖರೀದಿಸಿಬಿಡುತ್ತಾರೆ. ಇದರಿಂದ ಮೋಸ ಹೋಗುವ ಸಾಧ್ಯತೆ ಹೆಚ್ಚು.

ಹೂಕೋಸು :

ಖರೀದಿಸುವಾಗ ಅದರ ಬಣ್ಣ ಬೆಳ್ಳಗೆ ಹಾಗೂ ಗಟ್ಟಿಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳಿ. ಅಲ್ಲಲ್ಲಿ ಬಿರುಕು ಬಿಟ್ಟಂತಿರುವ ಹೂಕೋಸು ಚೆನ್ನಾಗಿರುವುದಿಲ್ಲ. ಅದರಲ್ಲಿ ಹುಳುಗಳೇನಾದರೂ ಇರಬಹುದೇ ಎಂಬುದನ್ನು ಕೂಡ ಕಂಡುಕೊಳ್ಳಿ.

ಎಲೆಕೋಸು :

ಖರೀದಿಸುವಾಗ ಅದು ಹಸಿರಾಗಿದೆಯೇ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಿ. ಅದನ್ನು ಸ್ವಲ್ಪ ಅದುಮಿ ನೋಡಿ. ಅದು ಬಿರುಸಾಗಿರಬೇಕು. ಒಂದು ಒಳ್ಳೆಯ ಎಲೆಕೋಸು ಗಾತ್ರದಲ್ಲಿ ಚಿಕ್ಕದಾಗಿದ್ದರೂ ತೂಕ ಮಾತ್ರ ಚೆನ್ನಾಗಿರುತ್ತದೆ. ಅದರಲ್ಲಿ ಯಾವುದೇ ರಂಧ್ರ ಇದೆಯಾ ನೋಡಿ. ರಂಧ್ರ ಇದ್ದರೆ ಒಳಗಡೆ ಹುಳು ಇರುವುದರ ಸೂಚನೆ.

ಬ್ರೋಕ್ಲಿ :

Untitled-2

ಇದು ಕೂಡ ಒಂದು ಬಗೆಯ ಹೂಕೋಸು ಆಗಿದ್ದು, ಅದರ ಖರೀದಿಯ ಸಂದರ್ಭದಲ್ಲಿ ಕೂಡ ಹೂಕೋಸಿನ ಹಾಗೆಯೇ ಎಚ್ಚರಿಕೆ ವಹಿಸಿ.

ಸೋರೆಕಾಯಿ :

ಖರೀದಿಸುವಾಗ ಅದು ಬಹಳ ತೆಳ್ಳಗೂ ಇರಬಾರದು, ಅತಿ ದಪ್ಪ ಆಗಿರಬಾರದು. ಮಧ್ಯಮ ಆಕಾರದ ಉದ್ದನೆಯ ಅಥವಾ ಸ್ವಲ್ಪ ವಾಲಿರುವ ಸೋರೆಕಾಯಿ ಖರೀದಿಸಿ. ಪೂರ್ತಿ ಸೋರೇಕಾಯಿ ಹಸಿರಾಗಿರಬೇಕು. ಅದರ ಒಂದು ಭಾಗ ಬಿಳಿ ಅಥವಾ ಹಳದಿ ವರ್ಣ ಆಗಿರಬಾರದು. ಬಲಿತ ಸೋರೆಕಾಯಿ ಬೀಜಗಳು ಗಟ್ಟಿಯಾಗಿರುತ್ತವೆ. ತಾಜಾ ಸೋರೆಕಾಯಿ ಇದ್ದರೆ ಅದರ ಮೇಲೆ ಬೆಳ್ಳನೆಯ ಎಳೆಗಳು ಗೋಚರಿಸುತ್ತವೆ. ಅದರ ದೇಟು ಹಸಿರಾಗಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ