ಮದುವೆಯೊಂದು ಸುಂದರ ಅನುಭವ. ಮೊದಲು ದಂಪತಿಗಳು ಮದುವೆಯಾಗುತ್ತಿದ್ದಂತೆ ಪರಸ್ಪರರನ್ನು ಸಮೀಪದಿಂದ ಅರ್ಥ ಮಾಡಿಕೊಳ್ಳಲು ಹನಿಮೂನ್ ಟ್ರಿಪ್ ಗೆ ಹೋಗುತ್ತಿದ್ದರು. ಆದರೆ ಈಗ ಡೇಟಿಂಗ್ ನ ಟ್ರೆಂಡ್ ಹೆಚ್ಚಾಗಿರುವುದರಿಂದ ದಂಪತಿಗಳು ಮದುವೆಗೂ ಮುನ್ನವೇ ಪರಸ್ಪರರ ಸ್ವಭಾವ, ಹವ್ಯಾಸ, ಅಭಿರುಚಿ ಹೀಗೆ ಬಹಳಷ್ಟು ಸಂಗತಿಗಳನ್ನು ತಿಳಿದುಕೊಂಡಿರುತ್ತಾರೆ. ಈಗ ಹನಿಮೂನ್ ಅಪೇಕ್ಷೆ ಒಂದು ಕ್ರೇಜ್ ಆಗಿಬಿಟ್ಟಿದೆ. ಕೆಲವು ದಿನಗಳ ಮಟ್ಟಿಗೆ ಯಾವುದೇ ಅಡೆತಡೆ ಇಲ್ಲದೆ, ಪರಸ್ಪರರು ಸಮಯ ಕಳೆಯಲೆಂದು ಹನಿಮೂನ್ ಗೆ ಹೋಗುತ್ತಾರೆ. ಆದರೆ ಹನಿಮೂನ್ ಗಾಗಿ ಒಳ್ಳೆಯ ಸ್ಥಳವೊಂದರ ಆಯ್ಕೆ ಮಾಡುವುದು ಯಾವುದೇ ದಂಪತಿಗಳಿಗೆ ಅತ್ಯಂತ ಕಷ್ಟದ ಕೆಲಸ. ಸ್ಥಳದ ಬಗ್ಗೆ ಗೊತ್ತಿರದೇ ಇದ್ದರೆ, ಹನಿಮೂನ್ ಗಾಗಿ ಸ್ಥಳ ನಿಗದಿ ಮಾಡುವ ಸಮಯದಲ್ಲಿ ಹಲವಾರು ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಆದರೆ ಈಗ ಅಂತಹ ತೊಂದರೆಪಡುವ ಅಗತ್ಯವಿಲ್ಲ. ಏಕೆಂದರೆ ನಾವಿಲ್ಲಿ ತಿಳಿಸುವ ಕೆಲವು ಸ್ಥಳಗಳು ಹೇಗಿವೆಯೆಂದರೆ, ಅವು ಬಹಳ ಇಷ್ಟಪಡುವಂತಹ ಸ್ಥಳಗಳು. ಆದರೆ ಜೇಬಿಗೆ ಹೆಚ್ಚು ಹೊರೆಯಾಗದಂತಹ ಸ್ಥಳಗಳು. ನೀವು ಇಂತಹ ರಮಣೀಯ ಸ್ಥಳದಲ್ಲಿ ಹನಿಮೂನ್ ಟ್ರಿಪ್ ನ್ನು ಮತ್ತಷ್ಟು ಸ್ಮರಣೀಯ ಆಗಿಸಿಕೊಳ್ಳಬಹುದು.
ಹಿಮ ಬಟ್ಟಲು `ಹಿಮದ ಸ್ವರ್ಗ’ ಎಂದು ಕರೆಯಲ್ಪಡುವ `ಔಲಿ’ ಎಂಬ ಸ್ಥಳ ಹನಿಮೂನ್ ಗೆ ಹೇಳಿ ಮಾಡಿಸಿದಂತಹ ಸ್ಥಳ. ಅದರ ಸೌಂದರ್ಯ ನೋಡಿ ಅದನ್ನು `ಹಿಮದ ಬಟ್ಟಲು’ ಎಂದು ಕರೆಯುತ್ತಾರೆ. ಅತ್ಯದ್ಭುತ ಹವಾಮಾನದ ಈ ಸ್ಥಳ ಉತ್ತರಾಖಂಡದ ಪ್ರಮುಖ ಪ್ರವಾಸಿ ಸ್ಥಳ. ಬೇಸಿಗೆಯಲ್ಲಿ ಇಲ್ಲಿಗೆ ಬಂದರೆ ಬಗೆಬಗೆಯ ಹೂಗಳ ದರ್ಶನವಾಗುತ್ತದೆ. ಚಳಿಗಾಲದಲ್ಲಿ ಬಂದರೆ ಹಿಮದ ಮೇಲೆ ಆಟ ಆಡುವ ಬಗೆ ಬಗೆಯ ಕ್ರೀಡೆಗಳ ಆನಂದ ಪಡೆಯಬಹುದು. ಜೊತೆಗೆ ಹಿಮಪಾತದ ಮಜವನ್ನೂ ಪಡೆದುಕೊಳ್ಳಬಹುದು. ಮೋಹಕ ಸ್ಥಳ ಹನಿಮೂನ್ ಗಾಗಿ ಮತ್ತೊಂದು ಒಳ್ಳೆಯ ಪರ್ಯಾಯ ಆಯ್ಕೆಯೆಂದರೆ ಗೋವಾ. ಇಲ್ಲಿನ ಬೀಚ್ ಗಳು ನಿಮಗೆ ವಿಶಿಷ್ಟ ವಾತಾವರಣದಲ್ಲಿ ಗೋಚರಿಸುತ್ತವೆ. ಪೋರ್ಚುಗೀಸರ ಕಾಲದಲ್ಲಿ ಸೃಷ್ಟಿಯಾದ ಕಾಡಿನ ನಡುವೆ ನೈಟ್ ಸ್ಟೇ ಮಾಡಬಹುದು. ಇಲ್ಲಿ ರೊಮಾನ್ಸ್ ಮಜ ಪಡೆಯುವುದು ಒಂದು ವಿಶಿಷ್ಟ ಅನುಭವ ನೀಡುತ್ತದೆ.
ರೊಮಾನ್ಸ್ ಮತ್ತು ರೋಮಾಂಚನ
ರೊಮಾನ್ಸ್ ನ ಜೊತೆಗೆ ರೋಮಾಂಚನ ಬೇಕಿದ್ದರೆ `ಕಸೌಲಿ’ಗಿಂತ ಒಳ್ಳೆಯ ಸ್ಥಳ ಮತ್ತೊಂದು ಸಿಗಲಿಕ್ಕಿಲ್ಲ. ಪರ್ವತದ ಮೇಲೆ ಹತ್ತುವ ಮಜಾ ಮತ್ತು ಚಳಿಯ ನಡುವೆ ಪರ್ವತ ಪ್ರದೇಶದ ವಿಶಿಷ್ಟ ಅನುಭವವನ್ನು ನೀಡುತ್ತದೆ. ಇಲ್ಲಿನ ಅಡ್ವೆಂಚರ್ ಹಾಗೂ ರೊಮಾನ್ಸ್ ನ ವಾತಾವರಣ ನಿಮಗೆ ಅತ್ಯಂತ ಸೂಕ್ತ ಅನಿಸಬಹುದು. `ಕಸೌಲಿ’ ಇದು ದೇಶದ ರೊಮ್ಯಾಂಟಿಕ್ ಡೆಸ್ಟಿನೇಶನ್ ಗಳಲ್ಲಿ ಒಂದಾಗಿದೆ. ಇಲ್ಲಿ ಪಸರಿಸಿರುವ ಹಸಿರು ಸಿರಿ ನಿಮ್ಮ ಮನಸೂರೆಗೊಳ್ಳಬಹುದು. ಇಲ್ಲಿ ಪೈನ್ ಹಾಗೂ ದೇವದಾರು ಮರಗಳು ಎಲ್ಲೆಡೆ ಆರಿಸಿಕೊಂಡಿರುವುದು ಗಮನಕ್ಕೆ ಬರುತ್ತದೆ. ಚಂಡೀಗರ್ ಹಾಗೂ ಸಿಮ್ಲಾ ದಾರಿಯ ಕಸೌಲಿಯಲ್ಲಿರುವ ಕಾಟೇಜ್ ಹಾಗೂ ಆಂಗ್ಲರ ಕಾಲದ ಚರ್ಚ್ ಎಂಥವರನ್ನಾದರೂ ಮಂತ್ರಮುಗ್ಧಗೊಳಿಸುತ್ತದೆ.
ನಿಮಗೆ ಅಡ್ವೆಂಚರ್ ಇಷ್ಟವಿದ್ದರೆ ಟ್ರೆಕಿಂಗ್ ಕೂಡ ಮಾಡಬಹುದು. ನೀವು ನಿಸರ್ಗ ಪ್ರೇಮಿಯಾಗಿದ್ದರೆ `ನೇಚರ್ ವಾಕ್’ಗೆ ತೆರಳಬಹುದು. ನೀವು ತಿಂಡಿ ಪ್ರಿಯರಾಗಿದ್ದರೆ, ನೀವಿಲ್ಲಿ ಬಗೆಬಗೆಯ ತಿಂಡಿಗಳ ರುಚಿಯನ್ನು ಸವಿಯಬಹುದು. ನೀವು ಸಂಗಾತಿಯ ಜೊತೆಗೆ ರೊಮ್ಯಾಂಟಿಕ್ ಸಮಯ ಕಳೆಯಲು ಇಚ್ಛಿಸಿದರೆ ಕಸೌಲಿ ನಿಮಗೊಂದು ಒಳ್ಳೆಯ ಪರ್ಯಾಯ ಆಯ್ಕೆಯೇ ಹೌದು.
ಏಕೆಂದರೆ ಈ ಗಿರಿಧಾಮಕ್ಕೆ ತಲುಪಿದ ಬಳಿಕ ನಿಮ್ಮ ದೇಹ ಹಾಗೂ ಮನಸ್ಸು ಎರಡೂ ರಿಫ್ರೆಶ್ ಆಗುತ್ತವೆ.
ವಾಸ್ತುಕಲೆಯ ವಿಶಿಷ್ಟ ಉದಾಹರಣೆ
ನೀವು ಪಾಂಡಿಚೆರಿಗೆ ತಲುಪಿದರೆ ಅದು ಪ್ಯಾರಿಸ್ ಗಿಂತಲೂ ಒಳ್ಳೆಯ ಸ್ಥಳ ಎಂಬುದು ನಿಮ್ಮ ಅನುಭಕ್ಕೆ ಬರುತ್ತದೆ. ಪಕ್ಕಾ ಫ್ರೆಂಚ್ ಸ್ಟೈಲ್ ನಲ್ಲಿ ಅದು ನಿಮ್ಮ ಸ್ವಾಗತಕ್ಕೆ ಸಜ್ಜಾಗಿರುತ್ತದೆ. ನಿಸರ್ಗದ ನಡುವೆ ಹನಿಮೂನ್ ನಿಸರ್ಗದ ನಡುವೆ ಹನಿಮೂನ್ ನ ಖುಷಿ ಪಡೆಯುವುದು ನಿಮಗೆ ವಿಶಿಷ್ಟ ಅನುಭವ ಎನಿಸುತ್ತದೆ. ಇದು ರಣ ಥಂಬೋರ್ ನ್ಯಾಷನಲ್ ಪಾರ್ಕಿನ ಬಗೆಗಿನ ಮಾಹಿತಿ. ಇಲ್ಲಿ ನೀವು ಹುಲಿಗಳ ಸಂಚಾರವನ್ನು ಗಮನಿಸಬಹುದು. ಅಸಂಖ್ಯ ಬಗೆಯ ಪಕ್ಷಿಗಳು ಕಲರವವನ್ನು ಆಲಿಸಬಹುದು. ವಿದೇಶಿ ನಡುಗಡ್ಡೆಗಿಂತ ಕಮ್ಮಿ ಏನಲ್ಲ ಹನಿಮೂನ್ ಗಾಗಿ ಇದಕ್ಕಿಂತ ಪ್ರಶಸ್ತ ಸ್ಥಳ ಮತ್ತೊಂದು ಇರಲಿಕ್ಕಿಲ್ಲ. ನಿಮ್ಮ ಪ್ರೀತಿ ಹಾಗೂ ರೊಮಾನ್ಸ್ ನ್ನು ಸಾಗರದ ಅಲೆಗಳ ಹಾಗೆ ಯಥೇಚ್ಛವಾಗಿ ಹರಿಯಲು ಬಿಡಿ. ನೀವು ಸ್ವಲ್ಪ ಸಾಹಸ ಪ್ರವೃತ್ತಿಯವರಾಗಿದ್ದರೆ ಮತ್ತು ಸುಂದರ ಬೀಚುಗಳು ಮತ್ತು ಲವ್ ಬರ್ಡ್ಸ್ ನಡುವೆ ರೋಮಾಂಚನ ಪಡೆಯಲು ಇಚ್ಛಿಸುವಿರಾದರೆ ಡಿಯು ಹಾಗೂ ಡಾಮನ್ ಗೆ ಹೋಗಿ. ಈ ಸ್ಥಳದ ಸೌಂದರ್ಯ ಯಾವುದೇ ವಿದೇಶಿ ನಡುಗಡ್ಡೆಗಿಂತ ಕಡಿಮೆ ಏನಲ್ಲ. ಅಲೆಪ್ಪಿ ಕೇರಳದ ಪ್ರಥಮ ಯೋಜನಾಬದ್ಧ ನಗರಗಳಲ್ಲಿ ಒಂದಾಗಿರುವ ಅಲೆಪ್ಪಿ ನಿಸರ್ಗ ಸೌಂದರ್ಯದ ಬೀಡು. ಇಲ್ಲಿ ಜಲ ಮಾರ್ಗಗಳು ಯುವ ಜೋಡಿಗಳನ್ನು ಹೆಚ್ಚು ಆಕರ್ಷಿಸುತ್ತವೆ. ಶಾಂತ ಪರಿಸರ ನವ ದಂಪತಿಗಳು ಪರಸ್ಪರರಲ್ಲಿ ಕಳೆದು ಹೋಗುವಂತೆ ಮಾಡುತ್ತವೆ. ಇಲ್ಲಿ ಬೀಚ್ ಜೊತೆಗೆ ಬೇಕಾದ್ದನ್ನು ಕೊಂಡುಕೊಳ್ಳಲು ಮಾರ್ಕೆಟ್ ಕೂಡ ಇದೆ.
ಈ ಸಂಗತಿಗಳನ್ನೊಮ್ಮೆ ಗಮನಿಸಿ
ನೀವು ವಿಮಾನ ಪ್ರಯಾಣದ ಯೋಜನೆ ಮಾಡುತ್ತಿದ್ದರೆ, ಕೆಲವು ಏರ್ ಲೈನ್ಸ್ ವಿಶೇಷ ರಿಯಾಯಿತಿ ನೀಡುತ್ತವೆ. ರಿಯಾಯಿತಿ ಅಥವಾ ಆಫರ್ ಬಗ್ಗೆ ತಿಳಿದುಕೊಳ್ಳಿ. ಅಂತಹ ಆಫರ್ ಗಳಿಗಾಗಿ ಕೆಲವು ತಿಂಗಳ ಮುಂಚೆಯೇ ಟಿಕೆಟ್ ಬುಕ್ಕಿಂಗ್ ಮಾಡಬೇಕಾಗುತ್ತದೆ.
ಹೋಟೆಲ್ ಬುಕ್ ಮಾಡಲು ಹಲವು ವೆಬ್ ಸೈಟ್ ಗಳಿವೆ. ಅದರಿಂದ ಮುಂಚಿತವಾಗಿಯೇ ಬುಕ್ ಮಾಡಬಹುದು. ಆಗ ಅದು ನಿಮಗೆ ಕಡಿಮೆ ದರದಲ್ಲಿಯೇ ಸಿಗಬಹುದು. ನೀವು ಒಂದೇ ಸ್ಥಳದಲ್ಲಿ ಹೆಚ್ಚು ದಿನ ಉಳಿಯುವ ಯೋಜನೆ ಮಾಡಿದರೆ, ಒಂದೇ ಹೋಟೆಲಿನಲ್ಲಿ ಒಂದಕ್ಕಿಂತ ಹೆಚ್ಚು ದಿನ ಇರಲು ಪ್ರಯತ್ನಿಸಿ. ಏಕೆಂದರೆ ಹಲವು ಹೋಟೆಲ್ ಗಳು ಒಂದಕ್ಕಿಂತ ಹೆಚ್ಚು ದಿನಗಳಿಗೆ ಬಹಳಷ್ಟು ರಿಯಾಯ್ತಿ ನೀಡುತ್ತವೆ.
ಹೋಟೆಲ್ ಬುಕ್ಕಿಂಗ್ ಮಾಡುವಾಗ ನಿಮ್ಮ ಚಾರ್ಜ್ ನಲ್ಲಿ ಉಪಾಹಾರ, ಊಟ ಹಾಗೂ ಡಿನ್ನರ್ ಸೌಲಭ್ಯ ಏನಾದರೂ ಇದೆಯಾ ಎಂದು ತಿಳಿದುಕೊಳ್ಳಿ. ಕೆಲವು ಹೋಟೆಲ್ ಗಳು ಉಪಾಹಾರ ಡಿನ್ನರ್ ನ ಸೌಲಭ್ಯ ಕೂಡ ನೀಡುತ್ತವೆ. ಏಕೆಂದರೆ ಮಧ್ಯಾಹ್ನದ ಹೊತ್ತಿಗೆ ನೀವು ಬೇರೆ ಕಡೆಗೆ ಇರುವ ಸಾಧ್ಯತೆ ಇರುತ್ತದೆ. ಹೀಗಾಗಿ ಹೊರಗಡೆಯೇ ಊಟ ಆಗುತ್ತದೆ.
ಊಟಕ್ಕೆ ಆರ್ಡರ್ ಮಾಡುವಾಗ ಒಂದೇ ಸಲಕ್ಕೆ ಹಲವು ಡಿಶ್ ಗಳಿಗೆ ಆರ್ಡರ್ ಮಾಡಬೇಡಿ. ಅದರ ಬದಲು ಸ್ವಲ್ಪ ಸ್ವಲ್ಪ ಆರ್ಡರ್ ಮಾಡಿ. ಇದರಿಂದ ಹೆಚ್ಚುವರಿ ಹಣ ಹಾಗೂ ಆಹಾರ ಪೋಲಾಗುವುದು ತಪ್ಪುತ್ತದೆ.
ಲಂಚ್ ಹೆಂಡತಿಯ ಇಷ್ಟಕ್ಕೆ ತಕ್ಕಂತೆ ಹಾಗೂ ಡಿನ್ನರ್ ಗಂಡನ ಇಷ್ಟದ್ದಾಗಿರಲಿ. ಇದರಿಂದಲೂ ಹಣದ ಉಳಿತಾಯ ಆಗುತ್ತದೆ.
ಪ್ರವಾಸದ ಸಮಯದಲ್ಲಿ ಕಾರ್ಡ್ ನಿಂದ ಪೇಮೆಂಟ್ ಮಾಡಿ. ಇದರಿಂದ ರಿಯಾಯಿತಿ ಹಾಗೂ ಮನಿಬ್ಯಾಕ್ ನ ಲಾಭ ದೊರೆಯುತ್ತದೆ.
ಟ್ಯಾಕ್ಸಿ ಬುಕ್ ಮಾಡುವಾಗ ಆಯಾ ದಿನಕ್ಕೆ ತಕ್ಕಂತೆ ಬುಕ್ಕಿಂಗ್ ಮಾಡಿ. ಇದರಿಂದಲೂ ಉಳಿತಾಯ ಆಗುತ್ತದೆ.
– ಅನುಪಮಾ