ಮದುವೆಯೊಂದು ಸುಂದರ ಅನುಭವ. ಮೊದಲು ದಂಪತಿಗಳು ಮದುವೆಯಾಗುತ್ತಿದ್ದಂತೆ ಪರಸ್ಪರರನ್ನು ಸಮೀಪದಿಂದ ಅರ್ಥ ಮಾಡಿಕೊಳ್ಳಲು ಹನಿಮೂನ್ ಟ್ರಿಪ್ ಗೆ ಹೋಗುತ್ತಿದ್ದರು. ಆದರೆ ಈಗ ಡೇಟಿಂಗ್ ನ ಟ್ರೆಂಡ್ ಹೆಚ್ಚಾಗಿರುವುದರಿಂದ ದಂಪತಿಗಳು ಮದುವೆಗೂ ಮುನ್ನವೇ ಪರಸ್ಪರರ ಸ್ವಭಾವ, ಹವ್ಯಾಸ, ಅಭಿರುಚಿ ಹೀಗೆ ಬಹಳಷ್ಟು ಸಂಗತಿಗಳನ್ನು ತಿಳಿದುಕೊಂಡಿರುತ್ತಾರೆ. ಈಗ ಹನಿಮೂನ್ ಅಪೇಕ್ಷೆ ಒಂದು ಕ್ರೇಜ್ ಆಗಿಬಿಟ್ಟಿದೆ. ಕೆಲವು ದಿನಗಳ ಮಟ್ಟಿಗೆ ಯಾವುದೇ ಅಡೆತಡೆ ಇಲ್ಲದೆ, ಪರಸ್ಪರರು ಸಮಯ ಕಳೆಯಲೆಂದು ಹನಿಮೂನ್ ಗೆ ಹೋಗುತ್ತಾರೆ. ಆದರೆ ಹನಿಮೂನ್ ಗಾಗಿ ಒಳ್ಳೆಯ ಸ್ಥಳವೊಂದರ ಆಯ್ಕೆ ಮಾಡುವುದು ಯಾವುದೇ ದಂಪತಿಗಳಿಗೆ ಅತ್ಯಂತ ಕಷ್ಟದ ಕೆಲಸ. ಸ್ಥಳದ ಬಗ್ಗೆ ಗೊತ್ತಿರದೇ ಇದ್ದರೆ, ಹನಿಮೂನ್ ಗಾಗಿ ಸ್ಥಳ ನಿಗದಿ ಮಾಡುವ ಸಮಯದಲ್ಲಿ ಹಲವಾರು ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಆದರೆ ಈಗ ಅಂತಹ ತೊಂದರೆಪಡುವ ಅಗತ್ಯವಿಲ್ಲ. ಏಕೆಂದರೆ ನಾವಿಲ್ಲಿ ತಿಳಿಸುವ ಕೆಲವು ಸ್ಥಳಗಳು ಹೇಗಿವೆಯೆಂದರೆ, ಅವು ಬಹಳ ಇಷ್ಟಪಡುವಂತಹ ಸ್ಥಳಗಳು. ಆದರೆ ಜೇಬಿಗೆ ಹೆಚ್ಚು ಹೊರೆಯಾಗದಂತಹ ಸ್ಥಳಗಳು. ನೀವು ಇಂತಹ ರಮಣೀಯ ಸ್ಥಳದಲ್ಲಿ ಹನಿಮೂನ್ ಟ್ರಿಪ್ ನ್ನು ಮತ್ತಷ್ಟು ಸ್ಮರಣೀಯ ಆಗಿಸಿಕೊಳ್ಳಬಹುದು.
ಹಿಮ ಬಟ್ಟಲು `ಹಿಮದ ಸ್ವರ್ಗ' ಎಂದು ಕರೆಯಲ್ಪಡುವ `ಔಲಿ' ಎಂಬ ಸ್ಥಳ ಹನಿಮೂನ್ ಗೆ ಹೇಳಿ ಮಾಡಿಸಿದಂತಹ ಸ್ಥಳ. ಅದರ ಸೌಂದರ್ಯ ನೋಡಿ ಅದನ್ನು `ಹಿಮದ ಬಟ್ಟಲು' ಎಂದು ಕರೆಯುತ್ತಾರೆ. ಅತ್ಯದ್ಭುತ ಹವಾಮಾನದ ಈ ಸ್ಥಳ ಉತ್ತರಾಖಂಡದ ಪ್ರಮುಖ ಪ್ರವಾಸಿ ಸ್ಥಳ. ಬೇಸಿಗೆಯಲ್ಲಿ ಇಲ್ಲಿಗೆ ಬಂದರೆ ಬಗೆಬಗೆಯ ಹೂಗಳ ದರ್ಶನವಾಗುತ್ತದೆ. ಚಳಿಗಾಲದಲ್ಲಿ ಬಂದರೆ ಹಿಮದ ಮೇಲೆ ಆಟ ಆಡುವ ಬಗೆ ಬಗೆಯ ಕ್ರೀಡೆಗಳ ಆನಂದ ಪಡೆಯಬಹುದು. ಜೊತೆಗೆ ಹಿಮಪಾತದ ಮಜವನ್ನೂ ಪಡೆದುಕೊಳ್ಳಬಹುದು. ಮೋಹಕ ಸ್ಥಳ ಹನಿಮೂನ್ ಗಾಗಿ ಮತ್ತೊಂದು ಒಳ್ಳೆಯ ಪರ್ಯಾಯ ಆಯ್ಕೆಯೆಂದರೆ ಗೋವಾ. ಇಲ್ಲಿನ ಬೀಚ್ ಗಳು ನಿಮಗೆ ವಿಶಿಷ್ಟ ವಾತಾವರಣದಲ್ಲಿ ಗೋಚರಿಸುತ್ತವೆ. ಪೋರ್ಚುಗೀಸರ ಕಾಲದಲ್ಲಿ ಸೃಷ್ಟಿಯಾದ ಕಾಡಿನ ನಡುವೆ ನೈಟ್ ಸ್ಟೇ ಮಾಡಬಹುದು. ಇಲ್ಲಿ ರೊಮಾನ್ಸ್ ಮಜ ಪಡೆಯುವುದು ಒಂದು ವಿಶಿಷ್ಟ ಅನುಭವ ನೀಡುತ್ತದೆ.
ರೊಮಾನ್ಸ್ ಮತ್ತು ರೋಮಾಂಚನ
ರೊಮಾನ್ಸ್ ನ ಜೊತೆಗೆ ರೋಮಾಂಚನ ಬೇಕಿದ್ದರೆ `ಕಸೌಲಿ'ಗಿಂತ ಒಳ್ಳೆಯ ಸ್ಥಳ ಮತ್ತೊಂದು ಸಿಗಲಿಕ್ಕಿಲ್ಲ. ಪರ್ವತದ ಮೇಲೆ ಹತ್ತುವ ಮಜಾ ಮತ್ತು ಚಳಿಯ ನಡುವೆ ಪರ್ವತ ಪ್ರದೇಶದ ವಿಶಿಷ್ಟ ಅನುಭವವನ್ನು ನೀಡುತ್ತದೆ. ಇಲ್ಲಿನ ಅಡ್ವೆಂಚರ್ ಹಾಗೂ ರೊಮಾನ್ಸ್ ನ ವಾತಾವರಣ ನಿಮಗೆ ಅತ್ಯಂತ ಸೂಕ್ತ ಅನಿಸಬಹುದು. `ಕಸೌಲಿ' ಇದು ದೇಶದ ರೊಮ್ಯಾಂಟಿಕ್ ಡೆಸ್ಟಿನೇಶನ್ ಗಳಲ್ಲಿ ಒಂದಾಗಿದೆ. ಇಲ್ಲಿ ಪಸರಿಸಿರುವ ಹಸಿರು ಸಿರಿ ನಿಮ್ಮ ಮನಸೂರೆಗೊಳ್ಳಬಹುದು. ಇಲ್ಲಿ ಪೈನ್ ಹಾಗೂ ದೇವದಾರು ಮರಗಳು ಎಲ್ಲೆಡೆ ಆರಿಸಿಕೊಂಡಿರುವುದು ಗಮನಕ್ಕೆ ಬರುತ್ತದೆ. ಚಂಡೀಗರ್ ಹಾಗೂ ಸಿಮ್ಲಾ ದಾರಿಯ ಕಸೌಲಿಯಲ್ಲಿರುವ ಕಾಟೇಜ್ ಹಾಗೂ ಆಂಗ್ಲರ ಕಾಲದ ಚರ್ಚ್ ಎಂಥವರನ್ನಾದರೂ ಮಂತ್ರಮುಗ್ಧಗೊಳಿಸುತ್ತದೆ.