ಸ್ವಾತಿ ಅತೀ ಉತ್ಸಾಹದಿಂದ ಕೂಡಿದ್ದಳು. ಅವಳು ಅವಿನಾಶ್‌ ನೊಂದಿಗೆ ಫಸ್ಟ್ ಡೇಟ್‌ ಗೆ ಹೋಗುವವಳಿದ್ದಳು. ಕಳೆದ 1 ವಾರದಿಂದ ಅವಳಿಗೆ ಯಾವ ಡ್ರೆಸ್‌ ತೊಡಲಿ, ಹೇಗೆ ಸಿದ್ಧವಾಗಲಿ ಎಂಬುದೇ ಚಿಂತೆ. ತಾನು ಸ್ಮಾರ್ಟ್‌ ಆಗಿ ಕಾಣಬೇಕು. ಅವಿನಾಶ್‌ ನ ದೃಷ್ಟಿ ತನ್ನಿಂದ ದೂರ ಸರಿಯಲೇಬಾರದು ಎನ್ನುವುದು ಅವಳ ಆಲೋಚನೆ. ಬಹಳ ದಿನಗಳ ಒಡನಾಟದ ನಂತರ ವಿಷಯ ಫಸ್ಟ್ ಡೇಟ್‌ ನ್ನು ತಲುಪಿತ್ತು. ಭಾನುವಾರ ಇಬ್ಬರಿಗೂ ರಜೆ ಇತ್ತು. ಅವಿನಾಶ್‌ ನಗರದ ಒಂದು ಪ್ರಖ್ಯಾತ ಹೋಟೆಲ್ ‌ಗೆ ಅವಳನ್ನು ಆಹ್ವಾನಿಸಿದ್ದ. ಇಬ್ಬರೂ ಲಂಚ್‌ ಗಾಗಿ ಅಲ್ಲಿ ಭೇಟಿ ಮಾಡಲಿದ್ದರು.

ಸ್ವಾತಿ ಒಂದು ಹೊಸ ಡ್ರೆಸ್‌ ಕೊಳ್ಳಲು ತೀರ್ಮಾನಿಸಿದಳು. ಮಾಲ್ ಗೆ ಹೋಗಿ ಒಂದು ಆಧುನಿಕ, ರಿವೀಲಿಂಗ್‌ ಡ್ರೆಸ್‌ ಕೊಂಡು ತಂದಳು. ಮಂಡಿಯವರೆಗಿದ್ದ ಆ ಸ್ಲೀವ್ ಲೆಸ್‌, ಆಫ್‌ ಶೋಲ್ಡರ್‌ ಒನ್‌ ಪೀಸ್‌ ಧರಿಸಿ ಅವಿನಾಶ್‌ ನನ್ನು ಭೇಟಿ ಮಾಡಿದಳು.

ಅವಿನಾಶ್‌ ಅವಳನ್ನು ಹಾರ್ದಿಕವಾಗಿ ಸ್ವಾಗತಿಸಿದ. ಇಬ್ಬರೂ ಎದುರು ಬದುರು ಕುಳಿತಾಗ ಸ್ವಾತಿಗೆ ತನ್ನ ಡ್ರೆಸ್‌ ಕಡೆಗೇ ಗಮನ.  ಇದು ಎಷ್ಟು ತೆರೆದಂತೆ ಇತ್ತೆಂದರೆ ಅವಳು ಮತ್ತೆ ಮತ್ತೆ ಅದನ್ನು ಸರಿ ಮಾಡಿಕೊಳ್ಳುತ್ತಿದ್ದಳು. ಒಮ್ಮೆ ಕತ್ತಿನ ಹತ್ತಿರ ಮೇಲಕ್ಕೆಳೆದುಕೊಂಡರೆ, ಇನ್ನೊಮ್ಮೆ ಮಂಡಿಯಿಂದ ಕೆಳಕ್ಕೆ ಎಳೆಯುತ್ತಿದ್ದಳು. ಮೆನು ಆರ್ಡರ್‌ ಮಾಡುವ ಕಡೆಗೂ ಅವಳಿಗೆ ಆಸಕ್ತಿ ಇರಲಿಲ್ಲ.

ಹೊರಡುವಾಗ ತುಂಬಿದ್ದ ಸ್ವಾತಿಯ ಆತುರ ಕಾತುರಗಳು ಹಿಂದಿರುಗುವಾಗ ಬರಿದಾಗಿದ್ದವು. ಅವಳು ನಿರೀಕ್ಷಿಸಿದ್ದಂತೆ ಏನೂ ಆಗಲಿಲ್ಲ. ಅವಿನಾಶ್‌ ನಿಂದ ಸೆಕೆಂಡ್‌ ಡೇಟ್‌ ಗೆ ಆಹ್ವಾನ ಬರಲಿಲ್ಲ. `ಫಸ್ಟ್ ಡೇಟ್‌ ಹೇಗಿತ್ತು?' ಎಂದು ಕೇಳಿದ ಗೆಳೆಯರಿಗೆ, `ಅವಳ ಗಮನವೆಲ್ಲ ಡ್ರೆಸ್‌ ಕಡೆಗೇ ಇತ್ತು. ಹಾಗೆ ಅಂಗ ಪ್ರದರ್ಶನ ಮಾಡುವ ಅವಶ್ಯಕತೆ ಏನಿತ್ತು?' ಎಂದು ಅವಿನಾಶ್‌ ಹೇಳಿದ.

ಈ ವಿಷಯ ಸ್ವಾತಿಯ ಕಿವಿಗೆ ಬಿದ್ದಾಗ ಅವಳಿಗೆ ತನ್ನ ಮೇಲೆಯೇ ಬೇಸರವಾಯಿತು.

ನೀವು ಫಸ್ಟ್ ಡೇಟ್‌ ಗೆ ಹೋಗುವವರಿದ್ದರೆ ಎಚ್ಚರಿಕೆಯಿಂದ ನಿಮ್ಮ ಡ್ರೆಸ್‌ ಆಯ್ಕೆ ಮಾಡಿ. ನಿಮ್ಮ ಬಟ್ಟೆ ಆಧುನಿಕ ಫ್ಯಾಷನ್ ದಾಗಿರಲಿ. ಆದರೆ ಮರ್ಯದಾಪೂರ್ವಕವಾಗಿರಬೇಕು. ನಿಮ್ಮ ಸ್ವಭಾವ, ವ್ಯವಹಾರ, ವ್ಯಕ್ತಿತ್ವದಿಂದ ನಿಮ್ಮ ಗೆಳೆಯ ಪ್ರಭಾವಿತನಾದರೆ ಒಳ್ಳೆಯದು. ಮುಂದೆ ನೀವು ಬಗೆಬಗೆಯ ಡ್ರೆಸೆಸ್‌ ಧರಿಸಿ ಅವನನ್ನು ಮೋಹಗೊಳಿಸುವ ಅವಕಾಶ ಸಿಗುತ್ತದೆ. ಆದರೆ ಫಸ್ಟ್ ಡೇಟ್‌ ನಲ್ಲಿ ನಿಮ್ಮ ಗೌರವವನ್ನು ಕಾಪಾಡಿಕೊಳ್ಳಿ.

ಜಾಗರೂಕರಾಗಿರಿ

ಅನನ್ಯಾ ಮತ್ತು ಸ್ವರೂಪ್‌ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ವರ್ಷದಿಂದಲೂ ಪರಿಚಿತರಾಗಿದ್ದರು. ಪರಿಚಯ ಸ್ನೇಹಕ್ಕೆ ತಿರುಗಿ, ಸ್ವರೂಪ್‌ ಫಸ್ಟ್ ಡೇಟ್‌ ಗೆ ಅನನ್ಯಾಳನ್ನು ಆಹ್ವಾನಿಸಿದ. ಸಾಯಂಕಾಲ ಅನನ್ಯಾ ಯಾರಿಗೂ ತಿಳಿಸದೆ ಅನೊಡನೆ ನಗರದ ಹೊರಲಯದ ಹೋಟೆಲ್ ‌ಗೆ ಹೋದಳು.

ಅವಳು ಸ್ವರೂಪನನ್ನು ಬಹಳವಾಗಿ ಮೆಚ್ಚಿಕೊಂಡಿದ್ದಳು. ಅವನ ಮಾತಿನ ಮೋಡಿಗೆ ಅವಳು ಮರುಳಾಗಿದ್ದಳು. ಹೋಟೆಲ್ ‌ನಲ್ಲಿ ಅವನು ಪಕ್ಕಕ್ಕೇ ಬಂದು ಕುಳಿತಾಗ ಅವಳಿಗೆ ಹಿತವೆನಿಸಿತು. ಆದರೆ ನಿಧಾನವಾಗಿ ಅವನ ನಡವಳಿಕೆ ಮರ್ಯಾದೆ ಮೀರತೊಡಗಿದಾಗ ಅವಳು ಅಡ್ಡಿಪಡಿಸಿದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ