ಪಾರ್ಟಿ ಮುಗಿಯುತ್ತಿದ್ದಂತೆಯೇ ರಶ್ಮಿ ಎಂದಿನಂತೆ ಮುಖ ಊದಿಸಿಕೊಂಡು ಗಂಡ ಸಂದೀಪ್‌ ಮುಂದೆ ಮುಂದೆಯೇ ಹೆಜ್ಜೆ ಹಾಕತೊಡಗಿದಳು. ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಆಕೆ ಸಂದೀಪ್‌ ಮುಂದೆ ಪ್ರಶ್ನೆಗಳ ಸುರಿಮಳೆ ಸುರಿಸತೊಡಗಿದಳು.

``ಸುಧಾ ಭೇಟಿಯಾದಾಗೆಲ್ಲ ನಿಮ್ಮನ್ನು ನೋಡಿ ಅಷ್ಟೊಂದು ಮುಗುಳ್ನಗುವುದು ಏಕೆ? ಪತಿ ರಾಜಶೇಖರ್‌ ಎದುರಿಗಿದ್ದಾಗ ಮಾತ್ರ ಆಕೆ ಹಲ್ಲು ಕಚ್ಚಿಕೊಂಡು ಕುಳಿತಿರುತ್ತಾಳೆ. ಸ್ನೇಹಾ ನಿಮಗೆ `ಮಿ. ಹ್ಯಾಂಡ್‌ ಸಮ್' ಎಂದು ಏಕೆ ಕರೆದರು? ಅವರು ಹಾಗೆ ಕರೆದರೆ ಕರೆಯಲಿ. ಆದರೆ ನೀವು ಆಕೆಯ ಮಾತಿಗೆ ತಲೆಬಾಗಿ, ಹೃದಯದ ಮೇಲೆ ಕೈಯಿಟ್ಟು ನಮಸ್ಕರಿಸುವ ಅಗತ್ಯವಾದರೂ ಏನಿತ್ತು? ನಿಮ್ಮ ಅಸಿಸ್ಟೆಂಟ್‌ ಸುಜಾತಾ ಇದಾಳಲ್ಲ, ಅವಳ ಬಗೆಗೂ ನನಗೆ ಕೋಪ ಇದೆ. ಒಂದು ಸಲ ಅವಳ ಮನೆಗೆ ಹೋಗಿ ಚೆನ್ನಾಗಿ ಉಗಿದುಬರ್ತೀನಿ. ಆಗಲೇ ಅವಳಿಗೆ ಬುದ್ಧಿ ಬರುತ್ತದೆ. ಗಂಡನನ್ನು ಮನೆಯಲ್ಲಿ ಬಿಟ್ಟು ಒಬ್ಬಳೇ ಬಂದು ಅವರಿಗೆ ಹುಷಾರಿಲ್ಲ ಎಂದು ನೆಪ ಹೇಳುವುದು, ಇಲ್ಲಿ ಇನ್ನೊಬ್ಬರ ಗಂಡನ ಜೊತೆ ಚಕ್ಕಂದ ಆಡೋದು...'' ರಶ್ಮಿಯ ಮಾತಿನ ಸರಣಿ ಹಾಗೆಯೇ ಮುಂದುವರಿದಿತ್ತು.

2 ವರ್ಷಗಳ ಹಿಂದಷ್ಟೇ ರಶ್ಮಿಯ ಮದುವೆ ಆಗಿತ್ತು. ಸಂದೀಪ್‌ ನಂತಹ ಸ್ಮಾರ್ಟ್‌ ಗಂಡನನ್ನು ಪಡೆದು ಆಕೆ ತನ್ನನ್ನು ತಾನು ಧನ್ಯೆ ಎಂದು ಭಾವಿಸಿದ್ದಳು. ಆದರೆ ಕೆಲವೇ ದಿನಗಳಲ್ಲಿ ಆಕೆಯ ಈ ಖುಷಿ ಗಾಳಿಯಲ್ಲಿ ತೇಲಿಹೋಗಿತ್ತು. ತನ್ನ ಗಂಡನ ಸುತ್ತಮುತ್ತ ಯಾರಾದರೂ ಮಹಿಳೆ ಕಂಡುಬಂದರೆ ಸಾಕು, ಆಕೆಯ ಜೀವ ವಿಲಿವಿಲಿ ಒದ್ದಾಡುತ್ತಿತ್ತು. ಅಸುರಕ್ಷತೆಯ ಭಾವನೆಯಿಂದ ಆಕೆ ಒಮ್ಮೊಮ್ಮೆ ಸಂದೀಪ್‌ ಜೊತೆ ಜಗಳ ಕೂಡ ಆಡುತ್ತಿದ್ದಳು.

ರಶ್ಮಿಯ ಹಾಗೆ ನೀಲಾ ಕೂಡ ತನ್ನ ಪತಿ ರಾಜೇಶನ ಸ್ಮಾರ್ಟ್‌ ನೆಸ್‌ ನ್ನು ತನ್ನ ಶತ್ರು ಎಂಬಂತೆ ಕಾಣತೊಡಗಿದ್ದಳು. ಅವನ ಸ್ಮಾರ್ಟ್‌ ನೆಸ್‌ ಅವಳ ನೆಮ್ಮದಿಯನ್ನೇ ಕಿತ್ತುಕೊಂಡಿತ್ತು. ರಾಜೇಶ್‌ ತನ್ನ ಸ್ಮಾರ್ಟ್‌ ನೆಸ್‌ ನ ಲಾಭ ಪಡೆಯುತ್ತಿದ್ದಾನೆ ಎಂದು ಅವಳಿಗೆ ಅನಿಸುತ್ತಾ ಇರುತ್ತದೆ. ಅವಿವಾಹಿತೆಯೇ ಆಗಿರಬಹುದು ಅಥವಾ ವಿವಾಹಿತೆ, ಅವನು ಅವರ ಜೊತೆ ಬೆರೆಯಲು ನೋಡುತ್ತಾನೆ.

ತನ್ನ ಪತಿ ಯಾರಾದರೂ ಮಹಿಳೆಯ ಜೊತೆ ಮಾತನಾಡುತ್ತ ನಿಂತಿರುವುದನ್ನು ನೋಡಿದರೆ ಸಾಕು, ಎಲ್ಲರೆದುರೇ ಜಗಳಕ್ಕೆ ನಿಂತು ಬಿಡುತ್ತಾಳೆ. ತನ್ನ ಗೌರವ ಉಳಿಸಿಕೊಳ್ಳಲು ರಾಜೇಶ್‌ ಈಗ ಯಾರಾದರೂ ಮಹಿಳೆಯರು, `ಹಲೋ ನಮಸ್ಕಾರ' ಎಂದು ಹೇಳಿದರೂ ಅದಕ್ಕೆ ಪ್ರತಿಕ್ರಿಯೆ ಕೊಡುವುದಿಲ್ಲ. ಹೆಂಡತಿ ಜೊತೆ ಇದ್ದಾಗಲಂತೂ ಅವನು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನೀಲಾಳ ಆಧಾರರಹಿತ ಸಂದೇಹದ ಗುಣದಿಂದಾಗಿ ರಾಜೇಶನ ಸೋಶಿಯಲ್ ಲೈಫ್‌ ಹೆಚ್ಚು ಕಡಿಮೆ ಮುಗಿದೇ ಹೋಯಿತು.

ರಶ್ಮಿ ಹಾಗೂ ನೀತಾರಂತಹ ಅದೆಷ್ಟೋ ಮಹಿಳೆಯರ ಉದಾಹರಣೆ ನಮಗೆ ನೋಡಲು ಸಿಗುತ್ತದೆ. ಅವರಿಗೆ ಬೇರೆ ಮಹಿಳೆಯರು ತನ್ನ ಗಂಡನ ಕಡೆ ಆಕರ್ಷಿತರಾಗುವುದನ್ನು ಸಹಿಸಲು ಏಕೆ ಆಗುವುದಿಲ್ಲವೆಂದರೆ, ಅವನು ತನಗಿಂತ ಸ್ಮಾರ್ಟ್‌ ಆಗಿದ್ದಾನೆ ಎಂಬ ಕಾರಣಕ್ಕೆ. ಆದರೆ ತಪ್ಪನ್ನು ಅವರು ಗಂಡನ ಮೇಲೆಯೇ ಹೊರಿಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ