ದೀಪಾವಳಿ ಹಬ್ಬ ಬರುವುದಕ್ಕೆ ಮೊದಲೇ ಎಲ್ಲರೂ ಅದರ ತಯಾರಿಗೆ ತೊಡಗುತ್ತಾರೆ. ಹಬ್ಬಗಳ ಸಕಾರಾತ್ಮಕತೆ, ಉತ್ಸಾಹ ಎಲ್ಲರೊಂದಿಗೆ ನಕ್ಕು ನಲಿಯುವ ಸಡಗರ ಸಂಭ್ರಮ ಹೆಚ್ಚುತ್ತದೆ. ಈ ಸಲದ ಹಬ್ಬಕ್ಕೆ ನೀವು ನಿಮ್ಮ ಸ್ಮೈಲ್ ಬ್ಯೂಟಿಯಿಂದ, ನಿಮ್ಮ ಕಡೆ ಎಲ್ಲರ ಮೆಚ್ಚುಗೆಯ ನೋಟ ಹರಿಯುವಂತೆ ಮಾಡಿ. ಅದಕ್ಕಾಗಿ ಈ ರೀತಿ ತಯಾರಿ ನಡೆಸಿರಿ.
ನಿಮ್ಮ ಓವರ್ ಆಲ್ ಲುಕ್ ಸುಧಾರಿಸಲು ಡ್ರೆಸ್ ಬಲು ಮುಖ್ಯ. ಅದರಲ್ಲೂ ಇಂಥ ದೊಡ್ಡ ಹಬ್ಬಗಳಲ್ಲಿ ಆಕರ್ಷಕ ಉಡುಗೆ ತೊಡುಗೆ, ನಿಮ್ಮ ಲುಕ್ಸ್ ಬದಲಿಸಬಹುದು. ಇದಕ್ಕಾಗಿ ಎಕ್ಸ್ ಪರ್ಟ್ಸ್ ಸಲಹೆ ಗಮನಿಸೋಣವೇ?
ಪರ್ಫಕ್ಟ್ A ಲೈನ್ ಕ್ಲಾಸಿಕ್
A ಲೈನ್ ಕುರ್ತಾ ನಿಮಗೆ ಆರಾಮದಾಯಕ ಬ್ಯೂಟಿಫುಲ್ ಡ್ರೆಸ್ ಧರಿಸಿರುವ ಅನುಭವ ತುಂಬುತ್ತದೆ. ಅಟ್ಯಾಚ್ಡ್ ದುಪಟ್ಟಾದ ಪಿಂಕ್ ಯಾ ರೆಡ್ A ಲೈನ್ ಕುರ್ತಾ ಆರಿಸಿ ಹಾಗೂ ಇದರ ಜೊತೆಗೆ ಬಿಳಿಯ ಚೂಡೀದಾರ್, ಟ್ಯಾಸ್ ಜುಮಕಿ ಮತ್ತು ಲ್ಯಾಟ್ಸ್ ಮ್ಯಾಚ್ ಗೊಳಿಸಿ, ನೀವು ಪರ್ಫೆಕ್ಟ್ ಲುಕ್ಸ್ ಪಡೆಯಬಹುದು.
ಎಂಬೆಲಿಶ್ಡ್ ಎನ್ ಸಿಂಬಲ್
ಇಂಥ ಹಬ್ಬಗಳ ಸಂದರ್ಭಕ್ಕೆ ವಿಶೇಷ ಕಳೆ ನೀಡುತ್ತವೆ, ಪರ್ಫೆಕ್ಟ್ ಎನಿಸುತ್ತವೆ. ಇದನ್ನು ಪ್ರಿಂಟೆಡ್ ಸ್ಕರ್ಟ್ ಹಾಗೂ ಫ್ರಂಟಿನಲ್ಲಿ ಮ್ಯಾಚಿಂಗ್ ಪ್ರಿಂಟೆಡ್ ಜಿಲೆಟ್ ಜೊತೆ ಮ್ಯಾಚ್ ಮಾಡಿ. ಬೆಳ್ಳಿ ಜುಮಕಿ ಜೊತೆ ಪರ್ಫೆಕ್ಟ್ ಲುಕ್ಸ್ ನೀಡುತ್ತವೆ. ಈ ಡ್ರೆಸ್ ಧರಿಸಿ ನೀವು (ಜಡೆ ಹೆಣೆಯದೆ) ಕೂದಲು ಇಳಿಬಿಟ್ಟರೆ ಹೆಚ್ಚು ಆಕರ್ಷಕ ಎನಿಸುತ್ತದೆ. ಈ ರೀತಿ ಹೊಸ ಲುಕ್ಸ್ ನೊಂದಿಗೆ ಹಬ್ಬದ ಆನಂದ ಅನುಭವಿಸಿ.
ಕೋ ಆರ್ಡಿನೇಟೆಡ್ ಮಾಮ್ ಡಾಟರ್ ಸೆಟ್ಸ್
ನಿಮ್ಮ ಮಗಳ ಜೊತೆ ಹೊಂದುವಂತೆ ಡ್ರೆಸ್ ಆರಿಸಿ ಹಾಗೂ ಮಾವ್ ಮೀ ಲುಕ್ ಜೊತೆ, ಎಲ್ಲರ ಆಕರ್ಷಣೆಗೆ ಒಳಗಾಗುವಂತೆ ರೆಡಿಯಾಗಿ. ಈ ಸಲದ ಹಬ್ಬಕ್ಕೆ ನೀವು ಗಾಢ ಹಳದಿ, ನೀಲಿ, ಗುಲಾಬಿ, ಹಸಿರು ಬಣ್ಣಗಳ ಬ್ಯೂಟಿಫುಲ್ ಪ್ರಿಂಟ್ಸ್ ಆರಿಸಿ ನಿಮ್ಮ ಲುಕ್ಸ್ ನ್ನು ಎಷ್ಟೋ ಸುಧಾರಿಸಬಹುದು.
ಜ್ಯಾಮೆಟ್ರಿಕಲ್ ಪ್ರಿಂಟ್ಸ್ ಹಬ್ಬಗಳ ಈ ಸೀಸನ್ ನಲ್ಲಿ ಇಂಥ ಡಿಸೈನಿನ ಕುರ್ತಾ ನಿಮಗೆ ಗ್ಲಾಮರಸ್ ಲುಕ್ಸ್ ನೀಡುತ್ತದೆ. ಇಂಥ ಪೀಚ್ ಬಣ್ಣದ ಕುರ್ತಾವನ್ನು ಪೀಚ್ ಪ್ಲಾಜೋ ಪ್ಯಾಂಟ್ಸ್ ಜೊತೆ ಮ್ಯಾಚ್ ಮಾಡಿ. ಹೀಲ್ ಮಿನಿಮಮ್ ಆ್ಯಕ್ಸೆಸರೀಸ್ ಜೊತೆ ನಿಮ್ಮ ಲುಕ್ಸ್ ಕಂಪ್ಲೀಟ್ ಮಾಡಿ.
ಮಿನಿಮಲಿಸ್ಟ್ ಈ ಸಲದ ಹಬ್ಬವನ್ನು ವರ್ಚುವಲ್ ಆಗಿ ಆಚರಿಸುವವರೇ ಹೆಚ್ಚು.
ಆದ್ದರಿಂದ ಆರಾಮದಾಯಕ ಲುಕ್ಸ್ ನ್ನೇ ಆರಿಸಿ. ಇದಕ್ಕಾಗಿ ಲಾಂಗ್ ಪ್ರಿಂಟೆಡ್ ಯಾ ಟೇರ್ಡ್ ಡ್ರೆಸೆಸ್ ಗಿಂತ ಬೆಟರ್ ಇನ್ನಾವುದು? ಈ ತರಹದ ಡ್ರೆಸ್ ಜೊತೆ, ನೀವು ಪುಟ್ಟ ಬೆಳ್ಳಿ ಜುಮಕಿ ಬ್ರಾಂಡೆಡ್ ಹೀಲ್ಸ್ ಧರಿಸಿ ನಿಮ್ಮ ಲುಕ್ಸ್ ನ್ನು ಕಂಪ್ಲೀಟ್ ಮಾಡಿ.
ಹಬ್ಬಗಳಲ್ಲಿ ಹೆಂಗಸರು ವಿಶೇಷವಾಗಿ ಎಥ್ನಿಕ್ ಡ್ರೆಸೆಸ್ ಇಷ್ಟಪಡುತ್ತಾರೆ. ಇದನ್ನು ನೀವು ತುಸು ಪ್ರಯಾಸಪಟ್ಟು ಅಧಿಕ ಕಂಫರ್ಟೆಬಲ್ ಆಕರ್ಷಕವಾಗಿಯೂ ಮಾಡಿಸಬಹುದು. ಈ ಕುರಿತು ಎಕ್ಸ್ ಪರ್ಟ್ಸ್ ನೀಡುತ್ತಿರುವ ವಿಶೇಷ ಸಲಹೆಗಳನ್ನು ಗಮನಿಸೋಣವೇ?
ಅಂಗ್ ರಖಾ ವಿತ್ ಬ್ಲ್ಯಾಕ್ ಪ್ರಿಂಟೆಡ್ ಪ್ಲಾಜೋ
ನೀವು ಹೆಚ್ಚಾಗಿ ಸೀರೆ ಉಡುವವರಲ್ಲವಾದರೆ, ಆಗ ಪ್ಲಾಜೋ ನಿಮಗೆ ಬೆಸ್ಟ್ ಆಯ್ಕೆ. ಇದನ್ನು ಉದ್ದನೇ ಅಂಗ್ ರಖಾ ಕುರ್ತಾ ಯಾ ಶಾರ್ಟ್ ನೀಲೆಂಥ್ ಶಾರ್ಪ್ ಲೀ ಕುರ್ತಾ ಜೊತೆ ಧರಿಸಿರಿ. ನೀವು ಸಾಂಪ್ರದಾಯಿಕ ಲುಕ್ಸ್ ಜೊತೆ, ಅಧಿಕ ಕ್ಯಾಶ್ಯುಯೆಲ್ ಆಗಿ ಕಾಣಿಸಲು, ದುಪಟ್ಟಾ ಬಳಸದೆ ಇದ್ದರೂ ನಡೆಯುತ್ತದೆ.
ಸಿಲ್ಕ್ ಮೋಟಿಫ್ ಬನರಾಸ್ ಸೀರೆ ವಿತ್ ಬ್ಲೌಸ್
ಕೆಂಪು ಬನಾರಸ್ ಸೀರೆಯಲ್ಲಿ ಪ್ರತಿ ಹೆಣ್ಣೂ ಆಕರ್ಷಕ ಎನಿಸುತ್ತಾಳೆ. ಇದರ ಜೊತೆ ಜುಮುಕಿ ಯಾ ಚಿನ್ನದ ಕಿವಿಯೋಲೆ, ನೆಕ್ ಪೀಸ್ ಹಾಗೂ ದೊಡ್ಡ ಕೆಂಪು ಬಿಂದಿಯ ಬಳಕೆ ನಿಮ್ಮ ಸೌಂದರ್ಯಕ್ಕೆ ಇಮ್ಮಡಿ ಕಳೆ ನೀಡುತ್ತದೆ.
ಕಾಂಟ್ರಾಸ್ಟ್ ಸ್ಟ್ರೈಪ್ಡ್ ಬಾರ್ಡರ್ ತಾಂತ್ ಸೀರೆ
ಯಾವುದೇ ಸಾಂಪ್ರದಾಯಿಕ ಭಾರತೀಯ ಹಬ್ಬ, ಸಮರ್ಪಕ ಎಥ್ನಿಕ್ ಡ್ರೆಸ್ ಇಲ್ಲದಿದ್ದರೆ ಅಪೂರ್ಣ ಎನಿಸುತ್ತದೆ. ಹಬ್ಬಗಳ ಈ ಸೀಸನ್ ನಲ್ಲಿ ಆಕರ್ಷಕ, ಗಾರ್ಜಿಯಸ್, ಸ್ಟ್ರೈಪ್ಡ್ ಬಾರ್ಡರ್ ನಿಂದ ಕೂಡಿದ ಕೆಂಪು ಬಂಗಾಳಿ ಸೀರೆಯನ್ನು ಯಾವುದೇ ಹಬ್ಬಕ್ಕಾದರೂ ಉಡಬಹುದು.
ಆರೆಂಜ್ ಆರ್ಟ್ ಸಿಲ್ಕ್ ಬಾಂಧ್ನಿ ದುಪಟ್ಟಾ
ದುಪಟ್ಟಾವನ್ನು ಹಲವು ವಿಧಗಳಲ್ಲಿ ಬಳಸಿಕೊಳ್ಳಬಹುದು. ಇದು ನಿಮ್ಮ ಡ್ರೆಸ್ಸನ್ನು ಸಾಂಪ್ರದಾಯಿಕ ಶೈಲಿಯಿಂದ ಆಧುನಿಕತೆಗೆ ತಿರುಗಿಸುತ್ತದೆ. ಬ್ಯೂಟಿಫುಲ್ ಆರೆಂಜ್ ಗೋಲ್ಡ್ ಕಾಂಬಿನೇಶನ್ ದುಪಟ್ಟಾ ನಿಮ್ಮನ್ನು ಅತ್ಯಾಕರ್ಷಕ ಮಾಡಬಲ್ಲದು. ಇದನ್ನು ಲಾಂಗ್ ಸ್ಕರ್ಟ್, ಕ್ರಾಪ್ ಟಾಪ್, ಬೇಸಿಕ್ ಸೂಟ್, ಲೆಹಂಗಾ ಯಾವುದರ ಜೊತೆಗಾದರೂ ಧರಿಸಿರಿ. ಇದೀಗ ನೀವು ಫೆಸ್ಟಿವಲ್ ಪಾರ್ಟಿಗಳ ಬ್ಯೂಟಿ ಕ್ವೀನ್ ಎನಿಸುವುದರಲ್ಲಿ ಎರಡು ಮಾತಿಲ್ಲ.
– ಪಿ. ಗಿರಿಜಾ