ಯೌವನದ ಒಡವೆ ಎಂದರೆ ಮೊಡವೆ! ಇದರಲ್ಲೂ 2 ವಿಧ ಇವೆ ನಾನ್‌ ಇನ್‌ ಫ್ಲಮೇಟರಿ (ಇದರಲ್ಲಿ ಊತ ಬರುವುದಿಲ್ಲ) ಹಾಗೂ ಇನ್‌ ಫ್ಲಮೇಟರಿ (ಇದರಲ್ಲಿ ಊತ ಕಾಣಿಸುತ್ತದೆ). ವೈಟ್‌ಬ್ಲ್ಯಾಕ್‌ ಹೆಡ್ಸ್ ಸಾಮಾನ್ಯವಾಗಿ ನಾನ್‌ ನಿಂದಲೂ ಪ್ಯಾಪ್ಯೂಲ್‌, ನಾಡ್ಯೂಲ್ಸ್‌, ಸಿಸ್ಟ್ ಮುಂತಾದ ಇನ್‌ ಫ್ಲಮೇಟರಿಯಿಂದಲೂ ಬರುತ್ತವೆ.

ಇನ್‌ ಫ್ಲಮೇಟರಿ ಮೊಡವೆ ಚರ್ಮದ ಮೇಲೆ ಕಲೆಗುರುತು ಉಳಿಸಿಬಿಡುತ್ತದೆ. ಏಕೆಂದರೆ ಇವುಗಳ ಕಾರಣ ಚರ್ಮದ ಮೇಲೆ ಎಕ್ಸ್ ಟ್ರಾ ಆಯಿಲ್‌, ಡೆಡ್‌ ಸೆಲ್ಸ್, ಬ್ಯಾಕ್ಟೀರಿಯಾ ಇತ್ಯಾದಿ ಜಮೆಗೊಳ್ಳುವ ಸಾಧ್ಯತೆಗಳಿವೆ. ಇದರಿಂದ ಚರ್ಮದ ಬೊಕ್ಕೆಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಫಾಲಿಕ್ಸ್‌ ನ ಗೋಡೆ ಹರಡಿ ಒಡೆದು ಹೋಗುತ್ತವೆ.

ಮೊಡವೆಗಳಲ್ಲಿ ವಿವಿಧ ಬಗೆ

ಹೈಪರ್‌ ಟ್ರೋಫಿಕ್‌ ಗುರುತು ಅಂದ್ರೆ ದಪ್ಪ ಗಂಟುಗಳ ಗುರುತು.

ಬಾಕ್ಸ್ ಆಕಾರದ ಗುರುತು ಅಂದ್ರೆ ಅಗಲ ಗುರುತು ಉಳಿದು ಅದರ ಅಂಚು ಚೂಪಾಗಿರುತ್ತದೆ.

ಐಸ್‌ ಪಿಕ್‌ ಗುರುತು ಸಣ್ಣಪುಟ್ಟ, ಆಳವಾದ, ಬೊಕ್ಕೆಗಳಂಥ ಗುರುತುಗಳು.

ಆ್ಯಟ್ರೋಫಿಕ್‌ ಗುರುತು ಅಂದ್ರೆ ಚಪ್ಪಟೆ, ತೆಳು, ಒತ್ತಿದಂಥ ಗುರುತುಗಳು.

ರೋಲಿಂಗ್‌ ಗುರುತು ಅಂದ್ರೆ ಅಗಲ, ಒತ್ತಿದಂಥ ಹಾಗೂ ಸಂಕೀರ್ಣ ಅಂಚುಗಳುಳ್ಳ ಗುರುತುಗಳು.

ಮೊಡವೆ ನಿವಾರಿಸಲು ಮನೆಮದ್ದು

ಕಡಲೆಹಿಟ್ಟು :

Besan

ಇದು ಎಕ್ಸ್ ಫಾಲಿಯೇಶನ್‌ ಗೆ ಉತ್ತಮ ಹಾಗೂ ಚರ್ಮದ ಮೇಲೆ ಇರುವ ಕಲೆ ಗುರುತುಗಳನ್ನು ದೂರಗೊಳಿಸುತ್ತದೆ. 1 ದೊಡ್ಡ ಚಮಚ ಕಡಲೆಹಿಟ್ಟಿಗೆ ಗುಲಾಬಿಜಲ, ನಿಂಬೆರಸ ಬೆರೆಸಿಕೊಂಡು ಪೇಸ್ಟ್ ಮಾಡಿ ಮುಖ, ಕುತ್ತಿಗೆಗೆ ಸವರಿಕೊಳ್ಳಿ. ನಂತರ 30 ನಿಮಿಷ ಬಿಟ್ಟು ಬಿಸಿ ನೀರಲ್ಲಿ ತೊಳೆಯಿರಿ.

ಗ್ರೀನ್‌ ಟೀ : ಈಗಾಗಲೇ ಬಳಸಿದ ಗ್ರೀನ್‌ ಟೀ ಬ್ಯಾಗ್‌ಗಳನ್ನು ಪ್ರಭಾವಿತ ಚರ್ಮದ ಭಾಗದಲ್ಲಿರಿಸಿ. ನೀವು ಬಳಸಿರುವ ಟೀ ಚರಟವನ್ನು ಸಹ ಫೇಸ್‌ ಪ್ಯಾಕ್‌ ಮಾಡಿ ಲಾಭ ಪಡೆಯಬಹುದು. ಜೊತೆಗೆ ಪ್ರತಿದಿನ ಗ್ರೀನ್‌ ಟೀ ಸೇವನೆ ಸಹ ಒಳ್ಳೆಯದು. ಇಂಥ ಪ್ಯಾಕುಗಳನ್ನು ಪ್ರತಿದಿನ ಬಳಸಿಕೊಳ್ಳಬಹುದು.

ಗುಲಾಬಿ ಜಲ : ಇದಂತೂ ಬಹಳ ಉತ್ತಮ ಮಾಯಿಶ್ಚರೈಸರ್‌. ಇದು ಮೊಡವೆಗಳ ಟಿಶ್ಯುಗಳನ್ನು ಸಾಫ್ಟ್ ಗೊಳಿಸಿ. ಅದು ಬೇಗ ಗುಣವಾಗುವಂತೆ ಮಾಡುವಲ್ಲಿ ಪೂರಕ. ಜೊತೆಗೆ ಚರ್ಮದ ಕಲೆ ಗುರುತುಗಳು ಸಹ ಕ್ರಮೇಣ ಮಾಯವಾಗುವಂತೆ ಮಾಡಬಲ್ಲದು. ಕಾಟನ್‌ ಪ್ಯಾಡ್‌ ನ್ನು ಗುಲಾಬಿಜಲದಲ್ಲಿ ಅದ್ದಿ, ಚರ್ಮವನ್ನು ನೀಟಾಗಿ ಸ್ವಚ್ಛಗೊಳಿಸಿ. ಹೀಗೆ ದಿನಕ್ಕೆ 2 ಸಲ ಮಾಡಿ.

 

ಅರಿಶಿನ :

turmuric

ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಹಾಗೂ ಆ್ಯಂಟಿ ಇನ್‌ ಫ್ಲಮೇಟರಿ ಗುಣಗಳು ಧಾರಾಳ ಅಡಗಿವೆ. ಹೀಗಾಗಿ ಅಡುಗೆಗೆ ಇದನ್ನು ಆಗಾಗ ಬಳಸುತ್ತಲೇ ಇರಬೇಕು. ಇದು ಮೊಡವೆಗಳ ಗುರುತು ದೂರ ಮಾಡಿ ಚರ್ಮದ ಬಣ್ಣ ಕಾಂತಿಯುತವಾಗಲು ಸಹಕಾರಿ. 1-2 ಸಣ್ಣ ಚಮಚ ಅರಿಶಿನಕ್ಕೆ ತುಸು ಚಂದನದ ಪುಡಿ, ನಿಂಬೆರಸ ಬೆರೆಸಿ ಪೇಸ್ಟ್ ಮಾಡಿಕೊಂಡು ಇಡೀ ಮುಖಕ್ಕೆ ಹಚ್ಚಿಕೊಳ್ಳಿ. 30 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ. ಈ ಮಿಶ್ರಣವನ್ನು ಫ್ರಿಜ್‌ ನಲ್ಲಿರಿಸಿ 2-3 ದಿನ ಬಳಸಿಕೊಳ್ಳಬಹುದು.

 

ಆ್ಯಲೋವೇರಾ :

aloe-vera

ಇದು ಮೊಡವೆಗಳ ಬೊಕ್ಕೆಗಳನ್ನು ಬೇಗ ತುಂಬಿಸಿ, ಅದರ ಗುರುತು ದೂರವಾಗುಂತೆ ಮಾಡುತ್ತದೆ. ಹೀಗೆ ಬೇಗ ಬೇಗ ಚರ್ಮದ ರಿಪೇರಿ ಮಾಡುತ್ತದೆ. ಇದರಿಂದ ತಾಜಾ ಜೆಲ್ ‌ಬೇರ್ಪಡಿಸಿ, ಅದರ ಒಂದು ಪದರನ್ನು ಮೊಡವೆಗಳಿರುವ ಭಾಗಕ್ಕೆ ಸವರಬೇಕು. ಇದನ್ನು ತಿಂಗಳಿಡೀ ಪ್ರತಿ ದಿನ ಹೀಗೆ ಬಳಸುವುದರಿಂದ ಉತ್ತಮ ಪರಿಣಾಮ ಲಭಿಸುತ್ತದೆ.

 

ಆ್ಯಪಲ್ ಸೈಡರ್ವಿನೇಗರ್‌ :

Apple-cider-vinegar

ಸೇಬಿನ ಈ ವಿನೇಗರ್‌ ಆ್ಯಂಟಿ ಮೈಕ್ರೋಬಿಯಲ್ ಗುಣಗಳಿಂದ ಸಮೃದ್ಧ. ಅದು ಚರ್ಮವನ್ನು ಮೊಡವೆ, ಆ್ಯಕ್ನೆಗಳಿಂದ ಸುರಕ್ಷಿತವಾಗಿಡುತ್ತದೆ. ಇದರಲ್ಲಿ ಆ್ಯಂಟಿ ಇನ್‌ ಫ್ಲಮೇಟರಿ ಗುಣಗಳಿದ್ದು, ಮೊಡವೆಗಳ ಊತ ಇಲ್ಲವಾಗಿಸುತ್ತದೆ, ಅದರ ಗುರುತಿಲ್ಲದಂತೆ ನಿವಾರಿಸುತ್ತದೆ.

ಬೇಕಿಂಗ್ಸೋಡ :

Baking-soda

ಇದು ಅತ್ಯುತ್ತಮ ಎಕ್ಸ್ ಫಾಲಿಯೇಟರ್‌ ಆಗಿದೆ. ಇದು ಚರ್ಮದ ಡೆಡ್‌ ಸೆಲ್ಸ್ ನಿವಾರಿಸುತ್ತದೆ. ಇದು ತುಸು ಕ್ಷಾರೀಯವಾದ್ದರಿಂದ, ಚರ್ಮದ ಸಾಮಾನ್ಯ ಆಗಿರುವಂತೆ ನೋಡಿಕೊಳ್ಳುತ್ತದೆ. ಇದು ಮೊಡವೆ ಮತ್ತದರ ಗುರುತನ್ನು ನಿವಾರಿಸುತ್ತದೆ. 2 ದೊಡ್ಡ ಚಮಚ ಬೇಕಿಂಗ್‌ ಸೋಡಾಗೆ 1 ಚಮಚ ನೀರು ಬೆರೆಸಿ ಪೇಸ್ಟ್ ಮಾಡಿ ಮೊಡವೆಗಳಿಗೆ ಲೇಪಿಸಿ ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ಓಟ್ಮೀಲ್ ಮಾಸ್ಕ್ :

oat-meal-mask

ಇದರ ಮಾಸ್ಕ್ ಮೊಡವೆಗಳ ಚರ್ಮಕ್ಕೆ ಬಲು ಲಾಭಕರ. ಇದು ಚರ್ಮದಿಂದ ಎಣ್ಣೆ ಅಂಶವನ್ನು ಹೀರಿಕೊಳ್ಳುತ್ತದೆ. ಇದು ಉತ್ತಮ ಎಕ್ಸ್ ಫಾಲಿಯೇಟರ್‌ ಕೂಡ ಹೌದು. ಮೊಡವೆಗಳ ಗುರುತು ದೂರಗೊಳಿಸಿ ಚರ್ಮದ ಟಿಶ್ಯು ರಿಪೇರಿ ಮಾಡುವಲ್ಲಿ ಎತ್ತಿದ ಕೈ. 2 ಚಮಚ ಓಟ್‌ ಮೀಲ್ ‌ಪೌಡರ್‌ ಮಾಡಿಕೊಂಡು 1-1 ಚಮಚ ನಿಂಬೆರಸ, ಜೇನು ಬೆರೆಸಿ ಮಿಶ್ರಣ ತಯಾರಿಸಿ. ಇದನ್ನು ಮುಖ, ಕುತ್ತಿಗೆಗೆ ನೀಟಾಗಿ ಸರಿಡಿ. 30 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಇದನ್ನು ವಾರಕ್ಕೆ 3-4 ಸಲ ಬಳಸಿಕೊಳ್ಳಿ.

ಆಲೂ : ಇದು ಚರ್ಮದ ಶ್ಯಾಮಲ ವರ್ಣವನ್ನು ತಿಳಿಗೊಳಿಸುತ್ತದೆ. ಕಲೆ ಗುರುತು, ಪಿಗ್ಮೆಂಟೇಶನ್‌ ದೂರ ಮಾಡುತ್ತದೆ. ಇದನ್ನು ರಸ ಮಾಡಿ, ಹತ್ತಿಯಲ್ಲಿ ಅದ್ದಿಕೊಂಡು ಮುಖ, ಕುತ್ತಿಗೆ ಪೂರ್ತಿ ಸವರಬೇಕು. ಮೊಡವೆ ಬಳಿ ಹೆಚ್ಚಾಗಿ ಸವರಬೇಕು. 20-30 ನಿಮಿಷ ಬಿಟ್ಟು ತೊಳೆಯಿರಿ. ಇದನ್ನು ಪ್ರತಿದಿನ ಬಳಸಬಹುದು.

ಬೇವು : ಬೇವಿನ ಎಲೆ ಆ್ಯಂಟಿ ಸೆಪ್ಟಿಕ್‌ ಗುಣಗಳಿಂದ ಸಮೃದ್ಧವಾಗಿದೆ. ಇದು ಸೋಂಕನ್ನು ದೂರಗೊಳಿಸಿ ಗಾಯ ಬೇಗ ಗುಣವಾಗುವಂತೆ ಮಾಡಬಲ್ಲದು. ಅನಾದಿ ಕಾಲದಿಂದಲೂ ಸ್ಮಾಲ್ ಪಾಕ್ಸ್ ಆದಾಗೆಲ್ಲ ಇದನ್ನು ಅರೆದು ಲೇಪಿಸಿ ಗುಣಪಡಿಸುತ್ತಿದ್ದಾರೆ. ಇದರ ಬಳಕೆಯಿಂದ ಮೊಡವೆಗಳ ಕಲೆಗುರುತು ಮಾಯವಾಗುತ್ತದೆ. ಒಂದು ಹಿಡಿಯಷ್ಟು ಬೇವಿನ ಎಲೆಯನ್ನು ಅರಿಶಿನ (ಹಸಿ ಕೊಂಬು ಇನ್ನೂ ಉತ್ತಮ)ದೊಂದಿಗೆ ಅರೆದು, ಮೊಡವೆಗಳ ಭಾಗಕ್ಕೆ ಲೇಪಿಸಿ. 30 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಇದನ್ನು ಪ್ರತಿದಿನ ಹೀಗೆ ಬಳಸಿದರೆ ಮೊಡವೆ, ಅದರ ಗುರುತು ಮಾಯವಾಗುತ್ತದೆ.

ಡಾ. ಸಾಕ್ಷಿ ಶಿವಾನಂದ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ