ಯೌವನದ ಒಡವೆ ಎಂದರೆ ಮೊಡವೆ! ಇದರಲ್ಲೂ 2 ವಿಧ ಇವೆ ನಾನ್ ಇನ್ ಫ್ಲಮೇಟರಿ (ಇದರಲ್ಲಿ ಊತ ಬರುವುದಿಲ್ಲ) ಹಾಗೂ ಇನ್ ಫ್ಲಮೇಟರಿ (ಇದರಲ್ಲಿ ಊತ ಕಾಣಿಸುತ್ತದೆ). ವೈಟ್‌ಬ್ಲ್ಯಾಕ್ ಹೆಡ್ಸ್ ಸಾಮಾನ್ಯವಾಗಿ ನಾನ್ ನಿಂದಲೂ ಪ್ಯಾಪ್ಯೂಲ್, ನಾಡ್ಯೂಲ್ಸ್, ಸಿಸ್ಟ್ ಮುಂತಾದ ಇನ್ ಫ್ಲಮೇಟರಿಯಿಂದಲೂ ಬರುತ್ತವೆ.
ಇನ್ ಫ್ಲಮೇಟರಿ ಮೊಡವೆ ಚರ್ಮದ ಮೇಲೆ ಕಲೆಗುರುತು ಉಳಿಸಿಬಿಡುತ್ತದೆ. ಏಕೆಂದರೆ ಇವುಗಳ ಕಾರಣ ಚರ್ಮದ ಮೇಲೆ ಎಕ್ಸ್ ಟ್ರಾ ಆಯಿಲ್, ಡೆಡ್ ಸೆಲ್ಸ್, ಬ್ಯಾಕ್ಟೀರಿಯಾ ಇತ್ಯಾದಿ ಜಮೆಗೊಳ್ಳುವ ಸಾಧ್ಯತೆಗಳಿವೆ. ಇದರಿಂದ ಚರ್ಮದ ಬೊಕ್ಕೆಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಫಾಲಿಕ್ಸ್ ನ ಗೋಡೆ ಹರಡಿ ಒಡೆದು ಹೋಗುತ್ತವೆ.
ಮೊಡವೆಗಳಲ್ಲಿ ವಿವಿಧ ಬಗೆ
ಹೈಪರ್ ಟ್ರೋಫಿಕ್ ಗುರುತು ಅಂದ್ರೆ ದಪ್ಪ ಗಂಟುಗಳ ಗುರುತು.
ಬಾಕ್ಸ್ ಆಕಾರದ ಗುರುತು ಅಂದ್ರೆ ಅಗಲ ಗುರುತು ಉಳಿದು ಅದರ ಅಂಚು ಚೂಪಾಗಿರುತ್ತದೆ.
ಐಸ್ ಪಿಕ್ ಗುರುತು ಸಣ್ಣಪುಟ್ಟ, ಆಳವಾದ, ಬೊಕ್ಕೆಗಳಂಥ ಗುರುತುಗಳು.
ಆ್ಯಟ್ರೋಫಿಕ್ ಗುರುತು ಅಂದ್ರೆ ಚಪ್ಪಟೆ, ತೆಳು, ಒತ್ತಿದಂಥ ಗುರುತುಗಳು.
ರೋಲಿಂಗ್ ಗುರುತು ಅಂದ್ರೆ ಅಗಲ, ಒತ್ತಿದಂಥ ಹಾಗೂ ಸಂಕೀರ್ಣ ಅಂಚುಗಳುಳ್ಳ ಗುರುತುಗಳು.
ಮೊಡವೆ ನಿವಾರಿಸಲು ಮನೆಮದ್ದು
ಕಡಲೆಹಿಟ್ಟು :
ಇದು ಎಕ್ಸ್ ಫಾಲಿಯೇಶನ್ ಗೆ ಉತ್ತಮ ಹಾಗೂ ಚರ್ಮದ ಮೇಲೆ ಇರುವ ಕಲೆ ಗುರುತುಗಳನ್ನು ದೂರಗೊಳಿಸುತ್ತದೆ. 1 ದೊಡ್ಡ ಚಮಚ ಕಡಲೆಹಿಟ್ಟಿಗೆ ಗುಲಾಬಿಜಲ, ನಿಂಬೆರಸ ಬೆರೆಸಿಕೊಂಡು ಪೇಸ್ಟ್ ಮಾಡಿ ಮುಖ, ಕುತ್ತಿಗೆಗೆ ಸವರಿಕೊಳ್ಳಿ. ನಂತರ 30 ನಿಮಿಷ ಬಿಟ್ಟು ಬಿಸಿ ನೀರಲ್ಲಿ ತೊಳೆಯಿರಿ.
ಗ್ರೀನ್ ಟೀ : ಈಗಾಗಲೇ ಬಳಸಿದ ಗ್ರೀನ್ ಟೀ ಬ್ಯಾಗ್‌ಗಳನ್ನು ಪ್ರಭಾವಿತ ಚರ್ಮದ ಭಾಗದಲ್ಲಿರಿಸಿ. ನೀವು ಬಳಸಿರುವ ಟೀ ಚರಟವನ್ನು ಸಹ ಫೇಸ್ ಪ್ಯಾಕ್ ಮಾಡಿ ಲಾಭ ಪಡೆಯಬಹುದು. ಜೊತೆಗೆ ಪ್ರತಿದಿನ ಗ್ರೀನ್ ಟೀ ಸೇವನೆ ಸಹ ಒಳ್ಳೆಯದು. ಇಂಥ ಪ್ಯಾಕುಗಳನ್ನು ಪ್ರತಿದಿನ ಬಳಸಿಕೊಳ್ಳಬಹುದು.
ಗುಲಾಬಿ ಜಲ : ಇದಂತೂ ಬಹಳ ಉತ್ತಮ ಮಾಯಿಶ್ಚರೈಸರ್. ಇದು ಮೊಡವೆಗಳ ಟಿಶ್ಯುಗಳನ್ನು ಸಾಫ್ಟ್ ಗೊಳಿಸಿ. ಅದು ಬೇಗ ಗುಣವಾಗುವಂತೆ ಮಾಡುವಲ್ಲಿ ಪೂರಕ. ಜೊತೆಗೆ ಚರ್ಮದ ಕಲೆ ಗುರುತುಗಳು ಸಹ ಕ್ರಮೇಣ ಮಾಯವಾಗುವಂತೆ ಮಾಡಬಲ್ಲದು. ಕಾಟನ್ ಪ್ಯಾಡ್ ನ್ನು ಗುಲಾಬಿಜಲದಲ್ಲಿ ಅದ್ದಿ, ಚರ್ಮವನ್ನು ನೀಟಾಗಿ ಸ್ವಚ್ಛಗೊಳಿಸಿ. ಹೀಗೆ ದಿನಕ್ಕೆ 2 ಸಲ ಮಾಡಿ.
ಅರಿಶಿನ :
ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಹಾಗೂ ಆ್ಯಂಟಿ ಇನ್ ಫ್ಲಮೇಟರಿ ಗುಣಗಳು ಧಾರಾಳ ಅಡಗಿವೆ. ಹೀಗಾಗಿ ಅಡುಗೆಗೆ ಇದನ್ನು ಆಗಾಗ ಬಳಸುತ್ತಲೇ ಇರಬೇಕು. ಇದು ಮೊಡವೆಗಳ ಗುರುತು ದೂರ ಮಾಡಿ ಚರ್ಮದ ಬಣ್ಣ ಕಾಂತಿಯುತವಾಗಲು ಸಹಕಾರಿ. 1-2 ಸಣ್ಣ ಚಮಚ ಅರಿಶಿನಕ್ಕೆ ತುಸು ಚಂದನದ ಪುಡಿ, ನಿಂಬೆರಸ ಬೆರೆಸಿ ಪೇಸ್ಟ್ ಮಾಡಿಕೊಂಡು ಇಡೀ ಮುಖಕ್ಕೆ ಹಚ್ಚಿಕೊಳ್ಳಿ. 30 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ. ಈ ಮಿಶ್ರಣವನ್ನು ಫ್ರಿಜ್ ನಲ್ಲಿರಿಸಿ 2-3 ದಿನ ಬಳಸಿಕೊಳ್ಳಬಹುದು.