‌ಇತ್ತೀಚೆಗೆ ಹೇರ್‌ ಸ್ಟೈಲಿಂಗ್‌ ಟೂಲ್ಸ್ ‌ನ ಟ್ರೆಂಡ್‌ ದಿನೇದಿನೇ ಹೆಚ್ಚುತ್ತಿದೆ. ಆದರೆ ಇನ್ನು ಬಳಸುವಾಗ ಹಲವು ವಿಷಯಗಳನ್ನು  ಗಮನದಲ್ಲಿಡಬೇಕು.

ಹೇರ್ಡ್ರೈಯರ್

ಕೂದಲಿಗೆ ಹೊಸ ಹೇರ್‌ ಸ್ಟೈಲ್ ನೀಡಲು ವಿದ್ಯುತ್‌ ಉಪಕರಣಗಳಲ್ಲಿ ಹೇರ್‌ ಡ್ರೈಯರ್‌ ಬಲು ಮುಖ್ಯ. ಕೂದಲಿನ ಉತ್ತಮ ಪೋಷಣೆಗಾಗಿ ನೀವು ವಾರದಲ್ಲಿ 1 ಸಲ ಹೇರ್‌ ಡ್ರೈಯರ್‌ ಬಳಸಬಹುದು. ಪ್ರತಿದಿನ ಅಥವಾ ಸತತ ಬಳಕೆಯಿಂದ ಕೂದಲಿನಲ್ಲಿ ಹೊಟ್ಟು, ಡ್ರೈನೆಸ್‌ ಹೆಚ್ಚುತ್ತದೆ. ಹೇರ್‌ ಡ್ರೈಯರ್‌ ನ ಉತ್ತಮ ಪರಿಣಾಮಕ್ಕಾಗಿ ಈ ಸಲಹೆಗಳನ್ನು ಗಮನಿಸಿ :

ನಿಮಗೆ ಹೇರ್‌ ಡ್ರೈಯರ್‌ ಬಳಸಲೇಬೇಕೆಂದು ಇದ್ದರೆ, ಕೂದಲಿಗೆ ನಿಯಮಿತವಾಗಿ ಕೊಬ್ಬರಿ ಎಣ್ಣೆ ಹಚ್ಚಿರಿ. ವಾರದಲ್ಲಿ ಗರಿಷ್ಠ ಒಂದು ಸಲ ಮಾತ್ರ ಇದನ್ನು ಬಳಸಬೇಕು.

ಡ್ರೈಯರ್‌ ನ್ನು ಬಳಸುವ ಮೊದಲು, ಕೂದಲಿನ ಕಂಡೀಶನಿಂಗ್‌ ಆಗಿರಬೇಕು ಎಂಬುದು ನೆನಪಿರಲಿ.

ಹೇರ್‌ ಡ್ರೈಯರ್‌ ಬಳಸುವ ಮೊದಲು ಕೂದಲಿನಲ್ಲಿ ನರಿಶ್‌ಮೆಂಟ್‌ ಸೀರಮ್ ಹಚ್ಚಿಕೊಳ್ಳಿ. ಆಗ ಡ್ರೈಯರ್‌ ನ ಹೀಟ್‌ ನಿಂದ ಕೂದಲು ಎಷ್ಟೋ ಮೃದುವಾಗುತ್ತದೆ.

ಕೂದಲಿನ ವಿಧ ಹಾಗೂ ಅಗತ್ಯಕ್ಕೆ ತಕ್ಕಂತೆ ಹೇರ್‌ ಡ್ರೈಯರ್‌ ಬಳಸಿರಿ. ಅಂದ್ರೆ ಕೂದಲು ಕರ್ಲಿ, ಅತಿ ಡ್ರೈ ಯಾ ಸಾಫ್ಟ್, ಸಿಲ್ಕಿ ಎಂಬುದನ್ನು ಗಮನಿಸಿ.

ಹೇರ್‌ ಡ್ರೈಯರ್‌ ನ್ನು 69 ಇಂಚಿನಷ್ಟು ದೂರದಲ್ಲಿ ಹಿಡಿದೇ ಬಳಸಬೇಕು, ಇಲ್ಲದಿದ್ದರೆ ಕೂದಲು ಬಲು ಬೇಗ ಅತಿ ಡ್ರೈ ಆಗುತ್ತದೆ.

ಶುಷ್ಕ (ಡ್ರೈ) ಕೂದಲಿಗೆ ಈ ಡ್ರೈಯರ್‌ ನ್ನು ಆದಷ್ಟೂ ಕಡಿಮೆ ಬಳಸಿರಿ.

ಹೇರ್ಐರನ್

ಕೂದಲನ್ನು ಸ್ಟ್ರೇಟ್‌ ಆಗಿರಿಸಿಕೊಳ್ಳಲು ಇತ್ತೀಚೆಗೆ ಹೆಚ್ಚಾಗಿ ಹೇರ್‌ ಐರನ್‌ ಮಾಡಲಾಗುತ್ತಿದೆ. ಆದರೆ ಇದರ ಉತ್ತಮ ಪರಿಣಾಮಕ್ಕಾಗಿ ನೆನಪಿಡಬೇಕಾದ ಒಂದು ಮುಖ್ಯ ವಿಷಯವೆಂದರೆ, ಸದಾ ಉತ್ತಮ ಗುಣಮಟ್ಟದ, ಫ್ಲಾಟ್‌ ಆಗಿರುವ ಬೇರೆ ಬೇರೆ ತಾಪಮಾನಕ್ಕಾಗಿ ಸಿರಾಮಿಕ್‌ ಪ್ಲೇಟ್ಸ್ ವುಳ್ಳ ಐರನ್‌ ತೆಗೆದುಕೊಳ್ಳಬೇಕು, ಇದು ಆಟೋ ಶಟ್‌ ಆಫ್‌ ಆಗಿರಬೇಕು. ಕೂದಲು ಬಹಳ ತೆಳುವಾಗಿದ್ದು, ಡ್ಯಾಮೇಜ್‌ ಆಗಿದ್ದರೆ, ಆರಂಭದಲ್ಲಿ ಲೋ ಸೆಟ್ಟಿಂಗ್‌ ನಿಂದ ಮಾಡಿ. ಆದರೆ ಕೂದಲು ಕರ್ಲಿ ಮತ್ತು ದಪ್ಪ ಆಗಿದ್ದರೆ, ಹೈ ಸೆಟ್ಟಿಂಗ್‌ ಮಾಡಿ.

ಕೂದಲಿಗೆ ಐರನ್‌ ಮಾಡಿಸುವ ಮೊದಲು, ತಪ್ಪದೆ ಅದನ್ನು ಶ್ಯಾಂಪೂ, ಕಂಡೀಶನಿಂಗ್‌ ಗೆ ಒಳಪಡಿಸಿ. ಒದ್ದೆ ಕೂದಲನ್ನೆಂದೂ ಸ್ಟ್ರೇಟ್‌ ನಿಂಗ್‌ ಮಾಡಲು ಹೋಗಬೇಡಿ. ಆದ್ದರಿಂದ ಮೊದಲು ಕೂದಲನ್ನು ಬ್ಲೋ ಡ್ರೈಯರ್‌ ನಿಂದ ಚೆನ್ನಾಗಿ ಒಣಗಿಸಿ. ಕೂದಲನ್ನು ನಡುನಡುವೆ ತಣ್ಣನೆಯ ಗಾಳಿಯಿಂದಲೂ ಒಣಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಸುಟ್ಟುಹೋಗುವ ಸಂಭವವವಿದೆ. ಕೂದಲಿಗೆ ಉತ್ತಮ ಹೀಟ್‌ ಪ್ರೊಟೆಕ್ಟರ್‌ ಬಳಸಿರಿ. ಆಗ ಅದು ಹಾಟ್‌ ಐರನ್‌ ಕಾರಣ ಕೆಡಬಾರದು. ಇದನ್ನು ಖರೀದಿಸುವಾಗ ಗಮನಿಸಬೇಕಾದುದು ಎಂದರೆ, ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಅಂಶ ಅಥವಾ ಸಿಲಿಕಾನ್‌ ಇರಲೇಬಾರದು. ಇದರ 1 ಹನಿಯೇ ಸಾಕು.

ವೈಬ್ರೇಟರ್ಮಸಾಜರ್

ಇದರ ಮೂಲಕ ಮಾಡಲಾಗುವ ಮಸಾಜ್‌, ಕೈಗಳಿಂದ ಮಾಡಲಾಗುವ ಮಸಾಜ್‌ ಗಿಂತ ಭಿನ್ನವಾಗಿರುತ್ತದೆ. ವೈಬ್ರೇಟರ್‌ ತಲೆಯ ಮಾಂಸಖಂಡ ಹಾಗೂ ಬುರುಡೆಯ ಚರ್ಮದಲ್ಲಿ ಕಂಪನ ಉಂಟು ಮಾಡಿ ಉತ್ತೇಜನ ಹೆಚ್ಚಿಸುತ್ತದೆ. ಇದರಿಂದ ರಕ್ತ ಸಂಚಾರ ತೀವ್ರಗೊಳ್ಳುತ್ತದೆ. ನರಗಳ ಟೆನ್ಶನ್‌ ದೂರವಾಗಿ, ಸುಸ್ತು ಮಾಯವಾಗುತ್ತದೆ. ಕೂದಲನ್ನು ಸ್ವಸ್ಥವಾಗಿರಿಸಿಕೊಳ್ಳಲು ಇದು ಹೆಚ್ಚು ಲಾಭಕರ.

ಕೂದಲಿನ ಪರಸ್ಪರ ತಿಕ್ಕಾಟದಿಂದ ಅದಕ್ಕೆ ಹಾನಿ ತಪ್ಪಿದ್ದಲ್ಲ. ಕೈಗಳಿಂದ ಮಾಡಲಾದ ಮಸಾಜ್‌ ಎಷ್ಟೋ ಸಲ ಇಂಥ ತಿಕ್ಕಾಟಕ್ಕೆ ಕಾರಣವಾಗುತ್ತದೆ. ಅದೇ ವೈಬ್ರೇಟರ್‌ ನಿಂದ ಮಾಡಲಾದ ಮಸಾಜ್‌ ಕೂದಲು ಪರಸ್ಪರ ತಿಕ್ಕಾಡುವುದನ್ನು ತಪ್ಪಿಸುತ್ತದೆ. ಜೊತೆಗೆ ರಕ್ತ ಸಂಚಾರ ಹೆಚ್ಚುವುದರಿಂದ ಕೂದಲಿನ ಬುಡ ಹೆಚ್ಚು ಸಶಕ್ತಗೊಳ್ಳುತ್ತದೆ. ವೈಬ್ರೇಟರ್‌ ಮಸಾಜರ್‌ ನಿಂದ ಮಸಾಜ್‌ಮಾಡಲು, ಮುಚ್ಚಳದಂತಿರುವ ಹಲ್ಲುಗಳುಳ್ಳ (ಬಾಚಣಿಗೆಯಂತೆ) ಅಪ್ಲಿಕೇಶನ್‌ ನ್ನು ಬಳಸಬೇಕು.

ಉತ್ತಮ ಪರಿಣಾಮಕ್ಕಾಗಿ ಬುರುಡೆಯ ಚರ್ಮಕ್ಕೆ ಮಸಾಜ್‌ ನೀಡಲು ವೈಬ್ರೇಟರ್‌ ನ ಸಾಮರ್ಥ್ಯ ನಿಮಿಷಕ್ಕೆ 2000 ಕಂಪನಗಳಿಗಿಂತ ಎಂದೂ ಅಧಿಕ ಮಾಡಿಕೊಳ್ಳಬೇಡಿ. ಮಸಾಜ್‌ ಮಾಡುವಾಗ ಅತ್ತಿತ್ತ ಜರುಗುಪುದು, ತರಲೆ ಮಾಡುವುದು ಕೂಡದು. ಇದರಿಂದ ಯಾವುದೇ ರೀತಿಯಲ್ಲಿ ಪೆಟ್ಟಾದರೂ ಅಸಾಧ್ಯ ನೋವಾಗುತ್ತದೆ. ವೇಬ್ರೇಟರ್‌ ಮಸಾಜರ್‌ ನ್ನು ಡ್ರೈ ಕೂದಲಿಗೆ ಬಳಸಬಹುದು, ಆದರೆ ಅದಕ್ಕೆ ಲೈಟಾಗಿ ಎಣ್ಣೆ ಹಚ್ಚಿ ಕೂದಲನ್ನು ಸಿದ್ಧಪಡಿಸಿರಿ.

ಸ್ಕಾಲ್ಪ್ ಸ್ಟೀಮರ್

ವಿದ್ಯುತ್‌ ನಿಂದ ನಡೆಯುವ ಈ ಉಪಕರಣ ಸ್ವಲ್ಪ ಹೊತ್ತಿನಲ್ಲೇ ನೀರನ್ನು ಆವಿ ಆಗಿಸಬಲ್ಲದು. ಹಲವು ವಿಧದ ಸಮಸ್ಯೆಗಳಿಂದ ಗ್ರಸ್ತ ಕೂದಲಿಗೆ ಹಬೆ ಚಿಕಿತ್ಸೆ ವಿಶೇಷ ಲಾಭಕಾರಿ. ಹಬೆಯಿಂದ ಚರ್ಮದ ಪೋರ್ಸ್‌ ಓಪನ್‌ ಆಗುತ್ತವೆ. ಅದರಲ್ಲಿ ಅಡಗಿದ ಕೊಳೆ ತಂತಾನೇ ಹೊರಬರುತ್ತದೆ. ರಕ್ತ ಸಂಚಾರ ವೇಗ ಗಳಿಸುವುದರಿಂದ, ಕೂದಲಿಗೆ ಹೆಚ್ಚಿನ ಪೋಷಣೆ ಸಿಗುತ್ತದೆ. ಇದರ ಉತ್ತಮ ಪರಿಣಾಮಕ್ಕಾಗಿ ಸ್ಕಾಲ್ಪ್ ಸ್ಟೀಮರ್‌ ನಿಂದ ಹಬೆ ಚಿಕಿತ್ಸೆಯನ್ನು ನಿಯಮಿತವಾಗಿ 2 ವಾರಗಳವರೆಗೂ ನೀಡಬೇಕು. ಕೂದಲಿಗೆ ಒದಗಿಸಲಾಗುವ ಎಲ್ಲಾ ಬಗೆಯ ಶುಶ್ರೂಷೆಗಳಲ್ಲೂ ಹಬೆ ಚಿಕಿತ್ಸೆ ಹೆಚ್ಚು ಲಾಭಕಾರಿ.

ಈ ರೀತಿ ಹಬೆ ನೀಡಿದ ನಂತರ ತಕ್ಷಣ ತಲೆಗೂದಲು ತೊಳೆಯಬೇಡಿ. ಯಾವುದೇ ಬಗೆಯ ಹೇರ್‌ ಟಾನಿಕ್‌ ಬಳಸಿ ಹಬೆ ಚಿಕಿತ್ಸೆ ನೀಡಿದ್ದರೆ, ಆಗಂತೂ ಕೂದಲನ್ನು ತೊಳೆಯುವ ಪ್ರಶ್ನೆಯೇ ಇಲ್ಲ.

ಇನ್ಫ್ರಾ ರೆಡ್ರೇಸ್ಲ್ಯಾಂಪ್

ಇದು ಹೆಚ್ಚಿನ ಶಾಖ ನೀಡುವ ಕಿರಣಗಳಾಗಿವೆ, ಆದರೆ ಇವು ಗೋಚರಿಸುವುದಿಲ್ಲ ಇವನ್ನು ಬೆಳಕಿನ ಜೊತೆ ಬೆರೆಸಿದಾಗ ಮಾತ್ರ ಗೋಚರಿಸುತ್ತವೆ. ಇನ್‌ ಫ್ರಾ ರೆಡ್‌ ರೇಸ್‌ ನಿಂದ ಪಡೆದ ಶಾಖ, ಆರಂಭದಲ್ಲಿ ತನ್ನ ವೇಗವನ್ನು ಕಡಿಮೆ ಇಟ್ಟುಕೊಳ್ಳುತ್ತದೆ, ಕೆಲವು ನಿಮಿಷಗಳ ನಂತರ ಪೂರ್ತಿಯಾಗಿ ಉಚ್ಚ ತಾಪಮಾನಕ್ಕೆ ತಲುಪುತ್ತದೆ. ಇದರ ಮೂಲಕ ಚರ್ಮದ ಒಳಗೆ ಮಾಂಸಖಂಡಗಳು ಹಾಗೂ ಚರ್ಮದ ಮೇಲಾಗುವ ಪರಿಣಾಮ ಬಹಳ ಹೊತ್ತಿನವರೆಗೂ ಉಳಿಯುತ್ತದೆ.

ಶುದ್ಧ ರಕ್ತಧಮನಿಗಳಲ್ಲಿ ಹಾಗೂ ಅಶುದ್ಧ ರಕ್ತವನ್ನು ಹೃದಯದ ಕಡೆ ಕೊಂಡೊಯ್ಯುವ ರಕ್ತದ ನಳಿಕೆಗಳಲ್ಲಿ ರಕ್ತ ಸಂಚಾರ ತೀವ್ರ ಹೆಚ್ಚಾಗುವ ಕಾರಣ, ಆ ಜಾಗದಲ್ಲಿ ಅಗತ್ಯ ಪೋಷಕಾಂಶಗಳು ಹಾಗೂ ಆಮ್ಲಜನಕ ಸಾಕಷ್ಟು ಪ್ರಮಾಣದಲ್ಲಿ ದೊರಕತೊಡಗುತ್ತದೆ. ಇದರಿಂದಾಗಿ ಮಾಂಸಖಂಡಗಳಲ್ಲಿ ಆದ ದೋಷಗಳು ಅಂದ್ರೆ ಊತ, ಸೆಳೆತ ಹಾಗೂ ರಕ್ತನಾಳಗಳ ಆಯಾಸ ಮತ್ತು ನೋವು ಇತ್ಯಾದಿಗಳನ್ನು ದೂರ ಮಾಡಲು ಇದು ವಿಶೇಷ ನೆರವು ನೀಡುತ್ತದೆ.

ಇದನ್ನು ಬಳಸುವ ಸಮಯದಲ್ಲಿ ಕಂಗಳನ್ನು ಕ್ಲೀನಾಗಿ ಇಡಿ. ಕನ್ನಡಕ, ಲೆನ್ಸ್ ಇದ್ದರೆ ಮೊದಲು ಕಳಚಿಡಿ. ಬೆಳ್ಳಿ ಚಿನ್ನದ ಆಭರಣ ಧರಿಸಿದ್ದರೆ ತೆಗೆದಿಡಿ, ಇಲ್ಲದಿದ್ದರೆ ಅವು ಬಿಸಿಯಾಗಿ ನಿಮ್ಮ ಚರ್ಮವನ್ನು ಸುಡಬಹುದು. ಈ ಲ್ಯಾಂಪ್‌ ಬಳಸಿದ ಮೇಲೆ ಸ್ಕಿನ್ ಮಾಮೂಲಿ ಸ್ಥಿತಿಗೆ ಬಂದ ನಂತರ, ಉಗುರು ಬೆಚ್ಚಗಿನ ನೀರಿನೊಂದಿಗೆ ಶ್ಯಾಂಪೂ ಬಳಸಿ ತೊಳೆಯಿರಿ. ಲ್ಯಾಂಪ್‌ ಬಳಸುವಾಗ ಅದು 25-30 ಇಂಚು ದೂರವಿರಬೇಕು. ಅದನ್ನು ಬಳಸುವಾಗ ಕುತ್ತಿಗೆ, ಸೊಂಟ, ಭುಜಗಳನ್ನು ಟವೆಲ್ ‌ನಿಂದ ಕವರ್‌ ಮಾಡಲು ಮರೆಯದಿರಿ.

ಓಝೋನ್ರೇಸ್ಲ್ಯಾಂಪ್

ವಿದ್ಯುತ್‌ ನಿಂದ ನಡೆಯುವ ಈ ಉಪಕರಣದಿಂದ ಓಝೋನ್‌ ರೇಸ್‌ ನಿರ್ಮಾಣವಾಗುತ್ತದೆ. ಈ ಕಿರಣಗಳು ರೋಗವನ್ನು ಪೂರ್ತಿಯಾಗಿ ವಾಸಿ ಮಾಡಬಲ್ಲದು. ಈ ಕಿರಣಗಳನ್ನು ಬಳಸುವುದರಿಂದ ಕೂದಲು ಮತ್ತು ಸ್ಕಾಲ್ಪ್ ಸ್ಕಿನ್‌ ಗೆ ಯಾವುದೇ ಬಗೆಯ ಸೋಂಕು ಯಾ ರೋಗ ಉಂಟಾಗುವ ಪ್ರಶ್ನೆಯೇ ಇಲ್ಲ. ಬಿಳಿಯ ಕೂದಲಿನ ಸಮಸ್ಯೆ, ಬೋಳುತಲೆ, ಕೂದಲು ಉದುರುವಿಕೆ…. ಇತ್ಯಾದಿ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಓಝೋನ್‌ ಕಿರಣಗಳು ಪೂರ್ತಿ ನೆರವಾಗುತ್ತವೆ. ಈ ಉಪಕರಣದ ಜೊತೆ ಒಂದು ಬಾಚಣಿಗೆಯಂಥ ಬಲ್ಬ್ ಕೂಡ ಇರುತ್ತದೆ. ಇದರ ಬಳಕೆಯಿಂದ ಓಝೋನ್‌ ಕಿರಣಗಳನ್ನು ಸುಲಭವಾಗಿ ಸಮರ್ಪಕ ರೀತಿಯಲ್ಲಿ ಕೂದಲಿನ ಬುಡದವರೆಗೂ ತಲುಪಿಸಬಹುದಾಗಿದೆ.

ಈ ಕಿರಣಗಳನ್ನು ಸದಾ ಒಣಗಿದ ಕೂದಲಿಗೇ ಕೊಡತಕ್ಕದ್ದು. ಮರೆತೂ ಸಹ ಒದ್ದೆ ಕೂದಲಿಗೆ ಇದನ್ನು ಕೊಡಬಾರದು, ಏಕೆಂದರೆ ಇದರಲ್ಲಿ ಕರೆಂಟ್‌ ಪ್ರವಹಿಸುತ್ತಿರುವುದರಿಂದ ಶಾಕ್‌ ತಗುಲಬಹುದು.

ಕೂದಲಿನಲ್ಲಿ ಯಾವುದೇ ಬಗೆಯ ಸೋಂಕು, ರೋಗ ಹೆಚ್ಚಾದರೆ ನಿಯಮಿತವಾಗಿ 12 ನಿಮಿಷಗಳವರೆಗೆ ಓಝೋನ್‌ ರೇಸ್ ನೀಡಲಾಗುತ್ತದ. ರೋಗ ವಾಸಿಯಾದ ನಂತರ, ಕೆಲವು ತಿಂಗಳವರೆಗೂ ಪ್ರತಿ ವಾರ ಈ ಚಿಕಿತ್ಸೆ ನೀಡುತ್ತಿರಬೇಕು. ಈ ಚಿಕಿತ್ಸೆಯ ನಂತರ, ಯಾವುದೇ ಬಗೆಯ ಹೇರ್‌ ಟಾನಿಕ್‌ ನ್ನು ಕೂದಲಿನ ಬುಡಕ್ಕೆ ಹಚ್ಚಿ ತಿಕ್ಕಬೇಕು. ಹೀಗಾಗಿ ಇದು ಲಾಭಕಾರಿ ಆಗುತ್ತದೆ. ಈ ಚಿಕಿತ್ಸೆ ಮೂಲಕ ಕೂದಲಿನ ಬೆಳಣಿಗೆಗೆ ವಿಶೇಷ ಆರೈಕೆ ದೊರಕುತ್ತದೆ. ಇನ್ನೇಕೆ ತಡ? ಇಂದೇ ಈ ಉಪಕರಣಗಳನ್ನು ಬಳಸಲಾರಂಭಿಸಿ, ಪ್ರೇಮಿಗಳ ದಿನಾಚರಣೆಯ ಹೊತ್ತಿಗೆ ನಿಮ್ಮ ಹೇರ್‌ ಸ್ಟೈಲ್ ‌ಪರ್ಫೆಕ್ಟ್ ಆಗಿರುವಂತೆ ಮಾಡಿಸಿಕೊಳ್ಳಿ. ಹ್ಯಾಪಿ ವ್ಯಾಲೆಂಟೈನ್‌ ಡೇ!

ಸ್ಮಿತಾ ರಾವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ