ಇತ್ತೀಚೆಗೆ ಹೇರ್ ಸ್ಟೈಲಿಂಗ್ ಟೂಲ್ಸ್ ನ ಟ್ರೆಂಡ್ ದಿನೇದಿನೇ ಹೆಚ್ಚುತ್ತಿದೆ. ಆದರೆ ಇನ್ನು ಬಳಸುವಾಗ ಹಲವು ವಿಷಯಗಳನ್ನು ಗಮನದಲ್ಲಿಡಬೇಕು.
ಹೇರ್ ಡ್ರೈಯರ್
ಕೂದಲಿಗೆ ಹೊಸ ಹೇರ್ ಸ್ಟೈಲ್ ನೀಡಲು ವಿದ್ಯುತ್ ಉಪಕರಣಗಳಲ್ಲಿ ಹೇರ್ ಡ್ರೈಯರ್ ಬಲು ಮುಖ್ಯ. ಕೂದಲಿನ ಉತ್ತಮ ಪೋಷಣೆಗಾಗಿ ನೀವು ವಾರದಲ್ಲಿ 1 ಸಲ ಹೇರ್ ಡ್ರೈಯರ್ ಬಳಸಬಹುದು. ಪ್ರತಿದಿನ ಅಥವಾ ಸತತ ಬಳಕೆಯಿಂದ ಕೂದಲಿನಲ್ಲಿ ಹೊಟ್ಟು, ಡ್ರೈನೆಸ್ ಹೆಚ್ಚುತ್ತದೆ. ಹೇರ್ ಡ್ರೈಯರ್ ನ ಉತ್ತಮ ಪರಿಣಾಮಕ್ಕಾಗಿ ಈ ಸಲಹೆಗಳನ್ನು ಗಮನಿಸಿ :
ನಿಮಗೆ ಹೇರ್ ಡ್ರೈಯರ್ ಬಳಸಲೇಬೇಕೆಂದು ಇದ್ದರೆ, ಕೂದಲಿಗೆ ನಿಯಮಿತವಾಗಿ ಕೊಬ್ಬರಿ ಎಣ್ಣೆ ಹಚ್ಚಿರಿ. ವಾರದಲ್ಲಿ ಗರಿಷ್ಠ ಒಂದು ಸಲ ಮಾತ್ರ ಇದನ್ನು ಬಳಸಬೇಕು.
ಡ್ರೈಯರ್ ನ್ನು ಬಳಸುವ ಮೊದಲು, ಕೂದಲಿನ ಕಂಡೀಶನಿಂಗ್ ಆಗಿರಬೇಕು ಎಂಬುದು ನೆನಪಿರಲಿ.
ಹೇರ್ ಡ್ರೈಯರ್ ಬಳಸುವ ಮೊದಲು ಕೂದಲಿನಲ್ಲಿ ನರಿಶ್‌ಮೆಂಟ್ ಸೀರಮ್ ಹಚ್ಚಿಕೊಳ್ಳಿ. ಆಗ ಡ್ರೈಯರ್ ನ ಹೀಟ್ ನಿಂದ ಕೂದಲು ಎಷ್ಟೋ ಮೃದುವಾಗುತ್ತದೆ.
ಕೂದಲಿನ ವಿಧ ಹಾಗೂ ಅಗತ್ಯಕ್ಕೆ ತಕ್ಕಂತೆ ಹೇರ್ ಡ್ರೈಯರ್ ಬಳಸಿರಿ. ಅಂದ್ರೆ ಕೂದಲು ಕರ್ಲಿ, ಅತಿ ಡ್ರೈ ಯಾ ಸಾಫ್ಟ್, ಸಿಲ್ಕಿ ಎಂಬುದನ್ನು ಗಮನಿಸಿ.
ಹೇರ್ ಡ್ರೈಯರ್ ನ್ನು 69 ಇಂಚಿನಷ್ಟು ದೂರದಲ್ಲಿ ಹಿಡಿದೇ ಬಳಸಬೇಕು, ಇಲ್ಲದಿದ್ದರೆ ಕೂದಲು ಬಲು ಬೇಗ ಅತಿ ಡ್ರೈ ಆಗುತ್ತದೆ.
ಶುಷ್ಕ (ಡ್ರೈ) ಕೂದಲಿಗೆ ಈ ಡ್ರೈಯರ್ ನ್ನು ಆದಷ್ಟೂ ಕಡಿಮೆ ಬಳಸಿರಿ.
ಹೇರ್ ಐರನ್
ಕೂದಲನ್ನು ಸ್ಟ್ರೇಟ್ ಆಗಿರಿಸಿಕೊಳ್ಳಲು ಇತ್ತೀಚೆಗೆ ಹೆಚ್ಚಾಗಿ ಹೇರ್ ಐರನ್ ಮಾಡಲಾಗುತ್ತಿದೆ. ಆದರೆ ಇದರ ಉತ್ತಮ ಪರಿಣಾಮಕ್ಕಾಗಿ ನೆನಪಿಡಬೇಕಾದ ಒಂದು ಮುಖ್ಯ ವಿಷಯವೆಂದರೆ, ಸದಾ ಉತ್ತಮ ಗುಣಮಟ್ಟದ, ಫ್ಲಾಟ್ ಆಗಿರುವ ಬೇರೆ ಬೇರೆ ತಾಪಮಾನಕ್ಕಾಗಿ ಸಿರಾಮಿಕ್ ಪ್ಲೇಟ್ಸ್ ವುಳ್ಳ ಐರನ್ ತೆಗೆದುಕೊಳ್ಳಬೇಕು, ಇದು ಆಟೋ ಶಟ್ ಆಫ್ ಆಗಿರಬೇಕು. ಕೂದಲು ಬಹಳ ತೆಳುವಾಗಿದ್ದು, ಡ್ಯಾಮೇಜ್ ಆಗಿದ್ದರೆ, ಆರಂಭದಲ್ಲಿ ಲೋ ಸೆಟ್ಟಿಂಗ್ ನಿಂದ ಮಾಡಿ. ಆದರೆ ಕೂದಲು ಕರ್ಲಿ ಮತ್ತು ದಪ್ಪ ಆಗಿದ್ದರೆ, ಹೈ ಸೆಟ್ಟಿಂಗ್ ಮಾಡಿ.
ಕೂದಲಿಗೆ ಐರನ್ ಮಾಡಿಸುವ ಮೊದಲು, ತಪ್ಪದೆ ಅದನ್ನು ಶ್ಯಾಂಪೂ, ಕಂಡೀಶನಿಂಗ್ ಗೆ ಒಳಪಡಿಸಿ. ಒದ್ದೆ ಕೂದಲನ್ನೆಂದೂ ಸ್ಟ್ರೇಟ್ ನಿಂಗ್ ಮಾಡಲು ಹೋಗಬೇಡಿ. ಆದ್ದರಿಂದ ಮೊದಲು ಕೂದಲನ್ನು ಬ್ಲೋ ಡ್ರೈಯರ್ ನಿಂದ ಚೆನ್ನಾಗಿ ಒಣಗಿಸಿ. ಕೂದಲನ್ನು ನಡುನಡುವೆ ತಣ್ಣನೆಯ ಗಾಳಿಯಿಂದಲೂ ಒಣಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಸುಟ್ಟುಹೋಗುವ ಸಂಭವವವಿದೆ. ಕೂದಲಿಗೆ ಉತ್ತಮ ಹೀಟ್ ಪ್ರೊಟೆಕ್ಟರ್ ಬಳಸಿರಿ. ಆಗ ಅದು ಹಾಟ್ ಐರನ್ ಕಾರಣ ಕೆಡಬಾರದು. ಇದನ್ನು ಖರೀದಿಸುವಾಗ ಗಮನಿಸಬೇಕಾದುದು ಎಂದರೆ, ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಅಂಶ ಅಥವಾ ಸಿಲಿಕಾನ್ ಇರಲೇಬಾರದು. ಇದರ 1 ಹನಿಯೇ ಸಾಕು.
ವೈಬ್ರೇಟರ್ ಮಸಾಜರ್
ಇದರ ಮೂಲಕ ಮಾಡಲಾಗುವ ಮಸಾಜ್, ಕೈಗಳಿಂದ ಮಾಡಲಾಗುವ ಮಸಾಜ್ ಗಿಂತ ಭಿನ್ನವಾಗಿರುತ್ತದೆ. ವೈಬ್ರೇಟರ್ ತಲೆಯ ಮಾಂಸಖಂಡ ಹಾಗೂ ಬುರುಡೆಯ ಚರ್ಮದಲ್ಲಿ ಕಂಪನ ಉಂಟು ಮಾಡಿ ಉತ್ತೇಜನ ಹೆಚ್ಚಿಸುತ್ತದೆ. ಇದರಿಂದ ರಕ್ತ ಸಂಚಾರ ತೀವ್ರಗೊಳ್ಳುತ್ತದೆ. ನರಗಳ ಟೆನ್ಶನ್ ದೂರವಾಗಿ, ಸುಸ್ತು ಮಾಯವಾಗುತ್ತದೆ. ಕೂದಲನ್ನು ಸ್ವಸ್ಥವಾಗಿರಿಸಿಕೊಳ್ಳಲು ಇದು ಹೆಚ್ಚು ಲಾಭಕರ.