ಮಹಿಳೆಯರು ಬಗೆಬಗೆಯ ವರ್ಕ್ ಔಟ್ ಮಾಡುತ್ತಾರೆ. ಏರೋಬಿಕ್ಸ್, ಬಾಡಿ ಬಿಲ್ಡಿಂಗ್, ಸ್ಟ್ರೆಥ್ ಟ್ರೇನಿಂಗ್, ಕಿಕ್ ಬಾಕ್ಸಿಂಗ್, ಜುಂಬಾ ಟಬಾಟಾ ವರ್ಕ್ ಔಟ್ ಮುಂತಾದವು. ಆದರೆ ಈ ಎಲ್ಲ ವ್ಯಾಯಾಮಗಳನ್ನೂ ವಯಸ್ಸು, ದೇಹದ ಪ್ರಕಾರ, ಆರೋಗ್ಯ ಸಮಸ್ಯೆ, ದೇಹದ ಅಗತ್ಯಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ತಜ್ಞರ ಮೇಲ್ವಿಚಾರಣೆಯಲ್ಲಿ ಮಾಡಬೇಕು. ನಾವಿಲ್ಲಿ ತಿಳಿಸುವ ಕೆಲವು ವ್ಯಾಯಾಮಗಳು ಮಹಿಳೆಯರಿಗೆ ಅತ್ಯಂತ ಉಪಯುಕ್ತವಾಗಿವೆ.
ಕಾರ್ಡಿಯೋ ವರ್ಕ್ ಔಟ್ : ಇದೊಂದು ಉಪಯುಕ್ತ ವ್ಯಾಯಾಮ ಪ್ರಕಾರ. ತೂಕ ಕಡಿಮೆ ಮಾಡಿಕೊಳ್ಳಲು ಅತ್ಯಂತ ಸೂಕ್ತ. ಇದರಿಂದ ಒತ್ತಡ ಕಡಿಮೆಯಾಗುತ್ತದೆ. ಶ್ವಾಸಕೋಶದ ತನಕ ಆಮ್ಲಜನಕ ತಲುಪಲು ನೆರವಾಗುತ್ತದೆ. ಕಾರ್ಡಿಯೋ ವರ್ಕ್ ಔಟ್ ನಿಂದ ಹೃದಯದ ಶಕ್ತಿ ಬಲಗೊಳ್ಳುತ್ತದೆ, ರಕ್ತ ಶುದ್ಧೀಕರಣ ಪ್ರಕ್ರಿಯೆಗೆ ವೇಗ ದೊರಕುತ್ತದೆ. ದೇಹದಲ್ಲಿ ಜಮೆಗೊಂಡ ಹೆಚ್ಚುವರಿ ಫ್ಯಾಟ್ ಕರಗುತ್ತದೆ. ಬಗೆಬಗೆಯ ಕಾರ್ಡಿಯೋ ವರ್ಕ್ ಔಟ್ ಗಳು ನಿಮ್ಮನ್ನು ಫಿಟ್ ಆಗಿಸುತ್ತವೆ, ಅಂದರೆ :
ಏರೋಬಿಕ್ಸ್ : ನೀವು ಇದನ್ನು ಎಲ್ಲಿ ಬೇಕಾದರೂ ಅತ್ಯಂತ ಕಡಿಮೆ ಸ್ಥಳದಲ್ಲಿ ಸಹಜವಾಗಿ ಮಾಡಬಹುದು. ಇದರಲ್ಲಿ ನಿಮ್ಮ ಮೆಚ್ಚಿನ ಸಂಗೀತ ಹಾಕಿಕೊಂಡು ಹೆಜ್ಜೆ ಹಾಕಾಗುತ್ತದೆ. ಇದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಬೆವರಿನ ಮುಖಾಂತರ ದೇಹದಿಂದ ಟ್ಯಾಕ್ಸಿನ್ಸ್ ಹೊರಹೋಗುತ್ತಿದ್ದಂತೆ ಬೊಜ್ಜು ಕರಗುತ್ತದೆ. ಏರೋಬಿಕ್ಸ್ ವರ್ಕ್ ಔಟ್ ನಿಂದ ನೀವು ಹಾರ್ಟ್ ರೇಟ್ ನ್ನು ಅತ್ಯಂತ ಕಡಿಮೆಯಿಂದ ಗರಿಷ್ಠ ಮಟ್ಟಕ್ಕೆ ಕೊಂಡೊಯ್ದು, ಒಂದು ಹಂತಕ್ಕೆ ನಿರ್ವಹಣೆ ಮಾಡಬಹುದು. ಅದೇ ತೂಕ ಕಡಿಮೆಯಾಗಲು ಸಹಾಯ ಮಾಡುತ್ತದೆ.
ಡ್ಯಾನ್ಸ್ ಫಿಟ್ ನೆಸ್ : ಫಿಟ್ ನೆಸ್ ಡ್ಯಾನ್ಸ್ ಮಹಿಳೆಯರಿಗೆ ತುಂಬಾ ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ಇದು ಟ್ರೆಂಡಿಯಾಗುತ್ತ ಹೊರಟಿದೆ. ಬಗೆಬಗೆಯ ಡ್ಯಾನ್ಸ್ ಮಾಡುವುದರ ಮೂಲಕ ದೇಹವನ್ನು ಅತ್ತಿತ್ತ ತಿರುಗಿಸಿ 30-40 ನಿಮಿಷಗಳ ಕಾಲ ವ್ಯಾಯಾಮ ಮಾಡಬಹುದು.
ಕಿಕ್ ಬಾಕ್ಸಿಂಗ್ : ಇದು ಒಂದು ಬಗೆಯ ಕಾರ್ಡಿಯೊ ವರ್ಕ್ ಔಟ್ ಆಗಿದೆ. ಇದರಲ್ಲಿ ಬಹಳಷ್ಟು ಸ್ನಾಯುಗಳು ಏಕಕಾಲಕ್ಕೆ ಬಳಕೆಯಾಗುತ್ತವೆ. ಮಹಿಳೆಯರಿಗೆ ತಮ್ಮ ತೋಳುಗಳು ಹಾಗೂ ಕಾಲುಗಳನ್ನು ಟೋನ್ ಮಾಡುವುದೇ ಮುಖ್ಯವಾಗಿರುತ್ತದೆ. ಇದರಿಂದ ನೀವು ನಿಮ್ಮ ಮೆಚ್ಚಿನ ಕಟ್‌ಸ್ಲೀವ್ಸ್ ಅಥವಾ ಒನ್ ಪೀಸ್ ಡ್ರೆಸ್ ನ್ನು ಸಹಜವಾಗಿ ಧರಿಸಬಹುದು. ಇದರಿಂದ ದೇಹದ ಮೇಲ್ಭಾಗದ ಚಲನೆಗಳಾದ ಜೆಬ್ಸ್, ಕ್ರಾಸ್, ಹುಕ್ ಹಾಗೂ ಅರ್ ಕಟ್ಸ್ ಇದ್ದರೆ ದೇಹದ ಕೆಳಭಾಗದ ಮೂಮೆಂಟ್ ನಲ್ಲಿ ನೀವು ಸ್ಟೈಕ್, ಫ್ರಂಟ್ ಕ್ರಿಕ್, ರೌಂಡ್ ಹೌಸ್ ಕಿಕ್, ಸೈಡ್ ಕಿಕ್, ಬ್ಯಾಕ್ ಕಿಕ್ ಮುಂತಾದವು ಸೇರಿವೆ.
ಹೈ ಇಂಟೆನ್ಸಿಟಿ ವರ್ಕ್ ಔಟ್ : ಕೆಲವು ಮಹಿಳೆಯರು ತಮಗಾಗಿ ಸಮಯ ಮೀಸಲಿಡಲು ಆಗುವುದಿಲ್ಲ. ಅವರಿಗೆ ಹೈ ಇಂಟೆನ್ಸಿಟಿ ವರ್ಕ್ ಔಟ್ ಪರ್ಯಾಯ ಉಪಾಯವಾಗಿದೆ. ಇದು ಬೇರೆ ವರ್ಕ್ ಔಟ್ ಗಳಿಗಿಂತ ಸ್ವಲ್ಪ ಕಷ್ಟಕರವಾಗಿರುತ್ತದೆ. ಆದರೆ ಇದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ತೂಕ ಕರಗಿಸಬಹುದು, ಜಿಗಿಯುವುದು, ಈಜುವುದು, ಏರ್ ಪುಶ್ ಅಪ್ಸ್, ರಾಕ್ ಕ್ಲೈಂಬಿಂಗ್, ಸ್ಟಾರ್ ಜಂಪ್ಸ್, ಜಂಪ್ ಹೈನೀಸ್ ಇವೆಲ್ಲವನ್ನು ಸೇರಿಸಿ ಒಂದು ಸೆಟ್ ಮಾಡಿದ ಬಳಿಕ, ಆ ಎಲ್ಲವುಗಳ 3 ಸೆಟ್ ಅಥವಾ 5 ಸೆಟ್ ಮಾಡಲಾಗುತ್ತದೆ. ಪ್ರತಿಯೊಂದು ವ್ಯಾಯಾಮವನ್ನು ಹಲವು ನಿಮಿಷಗಳಲ್ಲಿ ಅಥವಾ ಸೆಕೆಂಡ್ ಗಳಲ್ಲಿ ಮಾಡಲಾಗುತ್ತದೆ. ತೂಕ ಕಡಿಮೆ ಮತ್ತು ಬಾಡಿ ಟೋನಿಂಗ್ ನ ಉದ್ದೇಶದಿಂದ ಕಡಿಮೆ ಸಮಯದಲ್ಲಿ ಹೆಚ್ಚು ತೂಕ ಕರಗಿಸಲು ಇದು ಒಳ್ಳೆಯ ವ್ಯಾಯಾಮವಾಗಿದೆ.
ಸ್ಟೆಪರ್ ವರ್ಕ್ ಔಟ್ : ಇದು ಕೂಡ ಒಂದು ಒಳ್ಳೆಯ ವ್ಯಾಯಾಮ. ಒಂದು ಬಾಕ್ಸ್ ಅಥವಾ ಮೆಟ್ಟಿಲನ್ನು ಉಪಯೋಗಿಸಿ ಈ ವರ್ಕ್ ಔಟ್ ಮಾಡಬಹುದು. ಸ್ಟಾಮಿನಾ ಹೆಚ್ಚಿಸಲು ಇದು ಸಾಕಷ್ಟು ಉಪಯೋಗವಾಗುತ್ತದೆ.
ಆ್ಯಬ್ಸ್ ವರ್ಕ್ ಔಟ್ : ಇದರಲ್ಲಿ ನೀವು ಲೆಗ್ ರೇಂಜ್, ಸ್ಕಾರ್ಟ್ಸ್, ಕ್ರಂಚೆಸ್ ಮುಂತಾದವುಗಳನ್ನು ಮಾಡಬಹುದು. ಇದರಿಂದ ಹೊಟ್ಟೆ, ಸೊಂಟ, ತೊಡೆಗಳ ಕೊಬ್ಬು ಕರಗುತ್ತದೆ.
ಮಹಿಳೆಯರಿಗಾಗಿ ಪ್ಲ್ಯಾಂಕ್, ಸುಮೊ ಸ್ಕೌಟ್ಸ್, ಲ್ಯಾಕ್ ಲೆಕ್ ಫ್ಲಟರ್ ಮುಂತಾದ ವ್ಯಾಯಾಮಗಳು ಹೆಚ್ಚು ಸೂಕ್ತವಾಗಿವೆ.
– ಕೆ. ಜಾನಕಿ