ಯಾವ ಮಹಿಳೆಯರ ಕೂದಲು ಸ್ಟ್ರೇಟ್‌ ಆಗಿರುತ್ತದೋ, ಅಂಥವರು ಯಾವುದೇ ಹೇರ್‌ ಸ್ಟೈಲ್ ‌ನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಮದುವೆ ಫಂಕ್ಷನ್‌ ಅಥವಾ ಯಾವುದೇ ಪಾರ್ಟಿ ಇರಲಿ, ಕೂದಲನ್ನು ಅಲಂಕರಿಸಿಕೊಳ್ಳಲು ಅವರಿಗೆ ಹೆಚ್ಚಿನ  ಸಮಯ ಬೇಕಾಗಿಲ್ಲ. ಆದರೆ ಗುಂಗುರು ಕೂದಲುಳ್ಳ ಮಹಿಳೆಯರಿಗೆ ಇದು ಖಂಡಿತಾ ಸುಲಭದ ಪ್ರಶ್ನೆಯಲ್ಲ, ಹೀಗಾಗಿ ಅವರು ಸದಾ ಚಿಂತೆಗೊಳಗಾಗುತ್ತಾರೆ. ಎಷ್ಟೋ ಸಲ ಈ ಗುಂಗುರು ಕೂದಲನ್ನು ಸಂಭಾಳಿಸುವುದು ಅಷ್ಟೇ ಕಷ್ಟವಾಗುತ್ತದೆ. ಅಸಲಿಗೆ ಕರ್ಲಿ ಹೇರ್‌ ಹೆಚ್ಚು ದಟ್ಟವಾಗಿರುತ್ತದೆ, ಆ ಕಾರಣದಿಂದ ಇದನ್ನು ಮ್ಯಾನೇಜ್‌ ಮಾಡುವುದು ಕಷ್ಟವಾಗುತ್ತದೆ.

ಕೆಮಿಕಲ್ಸ್ ಹೀಟ್‌ ನಿಂದ ನಿರ್ಜೀವ ಕೂದಲು ಕರ್ಲಿ, ಡ್ರೈ ಮತ್ತು ಸಿಕ್ಕಾದ ಕೂದಲಿನ ಸಮಸ್ಯೆ ಪರಿಹರಿಸಿಕೊಳ್ಳಲು ಎಲ್ಲಾ ತರಹದ ಮನೆಮದ್ದು ಮಾಡುತ್ತಿರುತ್ತಾರೆ. ಒಮ್ಮೆ ಸ್ಟ್ರೇಟನರ್‌ ನಿಂದ ಕೂದಲನ್ನು ಸುಟ್ಟುಕೊಂಡರೆ, ಕೆಮಿಕಲ್ಸ್ ಬಳಸಿ ಕೂದಲನ್ನು ಆರೈಕೆ ಮಾಡಲು ಯತ್ನಿಸುತ್ತಾರೆ. ಬ್ಯೂಟಿಫುಲ್ ಹೇರ್‌ ಪಡೆಯುವ ನೆಪದಲ್ಲಿ ಹೆಂಗಸರು ಕೆರ್ಯಾಟಿನ್‌, ಸ್ಮೂದನಿಂಗ್‌, ರೀಬೋರ್ಡಿಂಗ್ ನಿಂದ ಕೂದಲನ್ನು ಸ್ಟ್ರೇಟ್‌ ಏನೋ ಮಾಡಿಕೊಳ್ಳುತ್ತಾರೆ. ಆದರೆ ಇವೆಲ್ಲದರ ಬಳಕೆಯಿಂದ ಹಾನಿ ತಪ್ಪಿದ್ದಲ್ಲ. ಮೊದಲೇನೋ ಚೆನ್ನಾಗಿದೆ ಎಂದೇ ಅನಿಸುತ್ತದೆ, ಆದರೆ ಕ್ರಮೇಣ ಕೂದಲು ಉದುರುವ ಸಾಧ್ಯತೆಗಳಿವೆ. ಆದ್ದರಿಂದ ಕೂದಲನ್ನು ಹೇಗಿದೆಯೋ ಹಾಗೆ ಸಹಜವಾಗಿ ಇರಲು ಬಿಡಿ. ನೀವು ನಿಮ್ಮ ಕರ್ಲಿ ಕೂದಲನ್ನು ಚೆನ್ನಾಗಿ ಆರೈಕೆ ಮಾಡಿದರೆ, ನಿಮಗೆ ಈ ಕೆಮಿಕಲ್ಸ್ ನ ನೆರವು ಬೇಕಾಗುವುದಿಲ್ಲ. ಕೂದಲಿನ ಆರೈಕೆಗಾಗಿ ಬೇಕಾದುದೆಂದರೆ ಸರಿಯಾದ ಪ್ರಾಡಕ್ಟ್ ನ ಬಳಕೆ. ಸಾಮಾನ್ಯವಾಗಿ ಹೆಚ್ಚಿನ ಹೇರ್ ಕೇರ್‌ ಪ್ರಾಡಕ್ಟ್ಸ್ ನಲ್ಲಿ ಕೆಮಿಕಲ್ಸ್ ಹೆಚ್ಚಿರುತ್ತವೆ. ಇದು ಕೂದಲಿಗೆ ಕೃತಕ ಹೊಳಪನ್ನು ನೀಡುತ್ತದೆ. ಆದರೆ ನಾವಿಲ್ಲಿ ನಿಮಗೆ ಹೊಸತೊಂದು ಹೇರ್‌ ಕೇರ್‌ ಪ್ರಾಡಕ್ಟ್ ಪರಿಚಯಿಸುತ್ತಿದ್ದೇವೆ. ಇದರ ಬಳಕೆಯಿಂದ ಕರ್ಲಿ ಹೇರ್‌ ನಿರ್ಜೀವ ಹಾಗೂ ಡ್ರೈ ಆಗುವುದಿಲ್ಲ. ಬದಲಿಗೆ ಬ್ಯೂಟಿಫುಲ್ ಶೈನಿಂಗ್‌ ಆಗುತ್ತದೆ. ಇದರ ಬಳಕೆಯೂ ಸುಲಭ, ಹೀಗಾಗಿ ಈಗ ನಿಮಗೆ ನಿಮ್ಮ ಕರ್ಲಿ ಹೇರ್‌ಹೆಲ್ದಿ ಆಗಿ ಹೆಮ್ಮೆ ಎನಿಸುತ್ತದೆ.

`ಫಿಕ್ಸ್ ಮೈ ಕರ್ಲ್ಸ್’ ಇಂಥ ಒಂದು ಅದ್ಭುತ ಪ್ರಾಡಕ್ಟ್ ಆಗಿದ್ದು, ಇದು ಕರ್ಲಿ ಹೇರ್‌ ನ್ನು ಮಾಯಿಶ್ಚರೈಸ್‌ ಮಾಡುವುದರ ಜೊತೆ ಜೊತೆಯಲ್ಲೇ, ಕೂದಲಿನ ಕರ್ಲ್ಸ್ ನ್ನು ಡಿಫೈನ್‌ ಸಹ ಮಾಡುತ್ತದೆ. ಇದರಲ್ಲಿ ಮತ್ತೆ 5 ಬಗೆಯ ಉಪಭೇದಗಳಿದ್ದು, ಅವು ಕರ್ಲಿ ಕೂದಲಿಗೆ ಒಂದು ಬ್ಯೂಟಿಫುಲ್ ಕರ್ಲಿ ಲುಕ್‌ ಕೊಡುತ್ತವೆ. ಜೊತೆಗೆ ಇದು ಕೂದಲನ್ನು ನಾನ್‌ ಫ್ರೀಜೀ ಟ್ಯಾಂಗ್ಡ್‌ ಸಹ ಮಾಡುತ್ತವೆ.

ಬನ್ನಿ, `ಫಿಕ್ಸ್ ಮೈ ಕರ್ಲ್ಸ್’ ಪ್ರಾಡಕ್ಟ್ ನ 5 ಸುಲಭ ಸ್ಟೆಪ್ಸ್ ಫಾಲೋ ಮಾಡಿ. ನೀವು ನಿಮ್ಮ ಕರ್ಲಿ ಹೇರ್‌ ನ್ನು ಹೇಗೆ ಬ್ಯೂಟಿಫುಲ್ ಶೈನಿಂಗ್‌ ಮಾಡಬಹುದೆಂಬುದನ್ನು ಅರಿಯೋಣ :

ಸ್ಟೆಪ್‌ – 1 ಕ್ಲೆನ್ಸಿಂಗ್‌ : ಕೂದಲನ್ನು ನಿಯಮಿತ ರೂಪದಲ್ಲಿ ಕ್ಲೀನ್‌ ಮಾಡುವುದು ಬಹು ಅಗತ್ಯವಾದುದು. ಕೂದಲಿನ ಸ್ವಚ್ಛತೆ ಶುಭ್ರತೆಗಾಗಿ ನಾವು ಶ್ಯಾಂಪೂಗೆ ಮೊರೆಹೋಗುತ್ತೇವೆ. ಆದರೆ ಹೆಚ್ಚಿನ ಶ್ಯಾಂಪೂಗಳು ನಮ್ಮ ಸ್ಕಾಲ್ಪ್ ಗೆ ಕಠೋರ ಎನಿಸುತ್ತದೆ. ಈ ಶ್ಯಾಂಪೂಗಳು ಧಾರಾಳ ನೊರೆ ನೀಡುವುದೇನೋ ನಿಜ, ಆದರೆ ಹಿತಕರವಲ್ಲ. ಅದರಿಂದಾಗಿ ನಮ್ಮ ಕೂದಲು ಸ್ವಚ್ಛವಾಯಿತು ಎಂದುಕೊಳ್ಳುತ್ತೇವೆ. ಆದರೆ ಇದು ನಮ್ಮ ಕೂದಲನ್ನು ಶುಭ್ರಗೊಳಿಸುವ ಒಂದು ಅಪಾಯಕಾರಿ ವಿಧಾನ. ಆದರ ಬಳಕೆಯಿಂದ ನೀವು ನಿಮ್ಮ ಕ್ಲೆನ್ಸಿಂಗ್‌ ನ್ನು ಸುಲಭಗೊಳಿಸಬಹುದು. ಇದರಲ್ಲಿ ಸಲ್ಫೇಟ್ಸ್ ಸರ್ಫೆಕ್ಟೆಂಟ್ಸ್ ಖಂಡಿತಾ ಇಲ್ಲ. ಅದರಿಂದಲೇ ಹೆಚ್ಚಿನ ನೊರೆ ಬರುತ್ತದೆಂದು ಗಮನಿಸಿ. ಬದಲಿಗೆ ನವೆ ನಾಶಕ ಹರ್ಬ್ಸ್ ನ್ನು ಬಳಸಲಾಗಿದೆ. ಇದು ಕೂದಲಿನ ಹೊಟ್ಟು, ಸ್ಕಾಲ್ಪ್ ನ ನವೆ ತಗ್ಗಿಸಲು ಸಹಕಾರಿ. ನಿಮ್ಮ ಸ್ಕಾಲ್ಪ್ ನ್ನು ಸದಾ ಕೂಲ್ ‌ಆಗಿಡುತ್ತದೆ.

ನೀವು ಇದನ್ನು ವಾರದಲ್ಲಿ 1-2 ಸಲ ಮಾಡಬಹುದು. ಇದು ನಿಮ್ಮ ಹೇರ್‌ ವಾಶ್‌ ನ ಮೊದಲ ಹಂತ.

ಸ್ಟೆಪ್‌ – 2 ಮಾಯಿಶ್ಚರ್ಜೊತೆ ಸ್ವಚ್ಛತೆ : ಸಾಮಾನ್ಯವಾಗಿ ಬಹುತೇಕ ಹೆಂಗಸರಿಗೆ ವಾರದಲ್ಲಿ 1 ಸಲ ಶ್ಯಾಂಪೂ ಬಳಸಿ ತಲೆ ತೊಳೆದುಕೊಂಡರೆ ಸಾಕು, ಎನಿಸುತ್ತದೆ. ಆದರೆ ಹಾಗಲ್ಲ, ವಾರದಲ್ಲಿ 2 ಸಲವಾದರೂ ಶ್ಯಾಂಪೂ ಬಳಸಿ ತಲೆ ತೊಳೆಯಬೇಕು. ಸಾಮಾನ್ಯವಾಗಿ ಶ್ಯಾಂಪೂಗಳ ಬಳಕೆಯಿಂದ ತಲೆಗೂದಲು, ಸ್ಕಾಲ್ಪ್ ಡ್ರೈ ಆಗುತ್ತದೆ ಎಂಬುದು ಗೊತ್ತಿರುವ ಸಂಗತಿ. ಒಂದು ಉತ್ತಮ ಶ್ಯಾಂಪೂ ಆಗಿದ್ದು, ಅದರಲ್ಲಿನ ಮಾಯಿಶ್ಚರೈಸರ್‌ ಕಾರಣ ಹಾಗಾಗುವುದಿಲ್ಲ. ಈ ಪ್ರಾಡಕ್ಟ್ ನಲ್ಲಿ ಇತರ ಶ್ಯಾಂಪೂಗಳಿಗೆ ಹೋಲಿಸಿದಾಗ 2 ಪಟ್ಟು ಆಯಿಲ್ ‌ಇದೆ. ಹೇರ್‌ ವಾಶ್‌ ನಂತರ ಇದು ಸ್ಕಾಲ್ಪ್ ನಲ್ಲಿ ಮಾಯಿಶ್ಚರ್‌ ಉಳಿಸಿಕೊಳ್ಳುತ್ತದೆ. ಇದನ್ನು ನೀವು ಕ್ಲೆನ್ಸಿಂಗ್‌ ನಂತರ ಬಳಸಿಕೊಳ್ಳಿ.

 

ಸ್ಟೆಪ್‌ – 3 ಕಂಡೀಶನಿಂಗ್‌ : ಕಂಡೀಶನಿಂಗ್‌ ಮಾಡಿಸುವುದು ಎಲ್ಲರಿಗೂ ಇಷ್ಟವಾಗುವ ವಿಷಯ, ಏಕೆಂದರೆ ಇದರಿಂದ ಕೂದಲು ದಟ್ಟ ಮತ್ತು ಸುಂದರವಾಗುತ್ತದೆ. ಕಂಡೀಶನಿಂಗ್‌ ಕೂದಲಿಗೆ ಅತ್ಯಗತ್ಯ ಬೇಕು, ಏಕೆಂದರೆ ಎಷ್ಟೋ ಸಲ ಶ್ಯಾಂಪೂ ನಂತರ ಸ್ಕಾಲ್ಪ್ ಹೆಚ್ಚು ಡ್ರೈ ಆಗುತ್ತದೆ. ಆಗ ಅದು ತಂತಾನೇ ಆಯಿಲ್ ‌ಮಾಡಿಕೊಳ್ಳಬೇಕಾಗುತ್ತದೆ. ಈ ಆಯಿಲ್ ‌ತಯಾರಾಗುವ ಪ್ರಕ್ರಿಯೆಯನ್ನೇ ನಾವು ಸೀಬಮ್ ನಿರ್ಮಾಣದ ಕ್ರಿಯೆ ಎನ್ನುತ್ತೇವೆ. ಆದರೆ ಸೀಬಮ್ ತಯಾರಾಗಲು ಹಲವು ಕಾರಣಗಳಿರುತ್ತವೆ. ಆದರೆ ನಾವು ಮೊದಲಿನಿಂದಲೇ ನಮ್ಮ ಸ್ಕಾಲ್ಪ್ ನ್ನು ಮಾಯಿಶ್ಚರೈಸ್‌ ಮಾಡಿಟ್ಟುಕೊಂಡರೆ, ಸ್ಕಾಲ್ಪ್ ಡ್ರೈನೆಸ್‌ ಕಾರಣದಿಂದ ಆಯಿಲ್ ತಯಾರಿಕೆಯನ್ನೇ ನಿಲ್ಲಿಸಿಬಿಡುತ್ತದೆ. ಸ್ಕಾಲ್ಪ್ ಮೇಲೆ ಎಕ್ಸ್ ಟ್ರಾ ಆಯಿಲ್ ‌ಆಗಬಾರದು ಎಂದರೆ, ಇದಕ್ಕಾಗಿ ನೀವು ಶಿವಿ ಬಳಸಿಕೊಳ್ಳಬಹುದು. ಇದರಲ್ಲಿ ಜೇನು ಇದ್ದು, ಕೂದಲಿನ ಕಂಡೀಶನಿಂಗ್‌ ಚೆನ್ನಾಗಿ ಮಾಡುತ್ತದೆ.

ಗಾಜಿ ಬೆರೀಸ್‌ ನಲ್ಲಿ ವಿಟಮಿನ್‌ಧಾರಾಳ ಅಡಗಿದ್ದು, ಇದರಲ್ಲಿ ನೈಜಿಸ್ವಾ ಸ್ಯಾಟಿಲಾ ಆಯಿಲ್ ‌ತುಂಬಿರುತ್ತದೆ. ಅದು ಕೂದಲಿಗೆ ಉತ್ತಮ ಮಾಯಿಶ್ಚರೈಸರ್‌ ಎನಿಸಿದೆ. ಇದರಲ್ಲಿ ಫ್ಯಾಟಿ ಆ್ಯಸಿಡ್ಸ್ ಕೂಡ ಅಡಗಿದ್ದು, ಕೂದಲನ್ನು ಮಾಲಿನ್ಯದಿಂದ ದೂರ ಇಡುತ್ತದೆ. ನೀವು ಯಾವಾಗ ಕಂಡೀಶನಿಂಗ್‌ ಮಾಡಿದರೂ ಶವರ್‌/ಹೀಟ್‌ ಕ್ಯಾಪ್‌ ಬಳಸಿರಿ.

ಸ್ಟೆಪ್‌ – 4 ಕ್ರೀಂ ಬಳಕೆ : ಹೇರ್‌ ವಾಶ್‌ ಮಾಡುವುದು ಕೂದಲಿಗೆಷ್ಟು ಅನಿವಾರ್ಯ ಎಂದು ನಮಗೆ ಗೊತ್ತು, ಆದರೆ ಅದಾದ ಮೇಲೆ ಕೂದಲಿಗೆ ಉತ್ತಮ ಲುಕ್ಸ್ ನೀಡಲು ಜೆಲ್ ‌ಅಥವಾ ಕ್ರೀಂ ಬಳಕೆಯಿಂದ ಕೂದಲಿಗೆ ಬೇಕಾದ ಲುಕ್ಸ್ ಸಿಗುತ್ತದೆ. ಈ ಕ್ರೀಂ ಕರ್ಲಿ ಕೂದಲಿಗಾಗಿ ಬಲು ಲಾಭಕಾರಿ. ಈ ಕ್ರೀಂನಲ್ಲಿ ವೆನಿಲಾ ಎಕ್ಸ್ ಟ್ರಾಕ್ಟ್ಸ್, ನೈಜೆಲಾ ಸ್ಯಾಟಿಲಾ ಆಯಿಲ್ ಮತ್ತು ಜೋಜೋಬಾ ಬಟರ್‌ ಅಡಗಿದ್ದು, ನಿಮ್ಮ ಕೂದಲನ್ನು ಇದು ಬಲು ಸಾಫ್ಟ್ ಸಿಲ್ಕಿ ಮಾಡಲಿದೆ.

ಇದನ್ನು ಬಳಸಿದ ನಂತರ ನೀವು ನಿಮ್ಮ ಕೈ ಬೆರಳುಗಳ ನೆರವಿನಿಂದ ಮಸಾಜ್‌ ಮಾಡಿ. ನೀವು ವಾರಕ್ಕೆ 3-4 ಸಲ ಈ ಕ್ರೀಂ ಬಳಸಬಹುದು. ಕೂದಲನ್ನು ಒದ್ದೆ ಮಾಡಿಕೊಂಡ ನಂತರ, ಈ ಜೆಲ್ ‌ಕ್ರೀಂ ಹಚ್ಚಬೇಕು.

ಸ್ಟೆಪ್‌ – 5 ಹೇರ್ಜೆಲ್ ‌: ಇದು ಹೇರ್‌ ವಾಶ್‌ ನ ಕೊನೆಯ ಹಂತ, ಆದರೆ ಬಲು ಅಗತ್ಯವಾದುದು. ಈ ಜೆಲ್ ‌ನ್ನು ಬಳಸುವುದು ತುಸು ಕಷ್ಟಕರ ಎನಿಸಬಹುದು. ಆದರೆ ಇದನ್ನು ಬಳಸಿಕೊಳ್ಳಲು ಒಂದು ಸುಲಭ ವಿಧಾನ ಇದೆ. ನೀವು ಈ ಜೆಲ್ ‌ನ್ನು ಬಳಸುವಾಗ, ಕೂದಲನ್ನು ಚೆನ್ನಾಗಿ ಒದ್ದೆ ಮಾಡಿಕೊಳ್ಳಿ. ಎಷ್ಟು ಅಂದರೆ ತಲೆಯಿಂದ ನೀರು ತೊಟ್ಟಿಕ್ಕುತ್ತಿರಬೇಕು. ಈ ಜೆಲ್ ಪ್ರೋಟೀನ್‌ ಯುಕ್ತ ಹಾಗೂ ಗ್ಲಿಸರಿನ್‌ ಫ್ರೀ ಆಗಿದೆ, ಹೀಗಾಗಿ ಇದು ಪರ್ಫೆಕ್ಟ್ ಜೆಲ್ ‌ಅನಿಸಿದೆ. ಈ ಜೆಲ್ ‌ನ್ನು ಚಳಿಗಾಲದಲ್ಲಿ ಸಹ ಬಳಸಿಕೊಳ್ಳಬಹುದು. ನೀವು ಈಕ್ರೀಂ ನಂತರ ಮತ್ತೊಂದು ಕ್ರೀಂ ಬಳಸಿದರೆ ಆಗ ಅದು ಬೆಟರ್‌ ರಿಸ್ಟ್‌ ಕೊಡುತ್ತದೆ.

ಮಾಯಿಶ್ಚರೈಸರ್ಪ್ರೋಟೀನ್ಬಲು ಮುಖ್ಯ

ನಿಮ್ಮ ಕೂದಲಲ್ಲಿ ಶುಷ್ಕತೆ ಹಾಗೂ ಡಲ್ ನೆಸ್‌ ತುಂಬಿದ್ದರೆ, ಅದು ನೋಡಲು ಕೆಟ್ಟದಾಗಿರುತ್ತದೆ. ಶುಷ್ಕ, ನಿರ್ಜೀವ ಕೂದಲು ಬಿಲ್ ‌ಕುಲ್ ‌ಯಾರಿಗೂ ಇಷ್ಟವಾಗದು, ಅದು ಮುಖದ ಅಂದ ಹಾಳು ಮಾಡುತ್ತದೆ. ಹೀಗಾಗಿ ಕೂದಲಿಗೆ ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್‌ಮಾಯಿಶ್ಚರೈಸರ್‌ ನ ಅಗತ್ಯವಿದೆ. ಕೂದಲಿನ ಆರೈಕೆಗಾಗಿ ಮೊದಲ ಹಂತ ಎಂದರೆ ಪ್ರೋಟೀನ್‌ಮಾಯಿಶ್ಚರೈಸರ್‌ನ ಬೇಸ್‌ ಇರುವ ಶ್ಯಾಂಪೂ ಕಂಡೀಶನರ್‌ ಬಳಸುವುದು. ಅಂದರೆ ನಿಮ್ಮ ಪ್ರಾಡಕ್ಟ್ ನ್ಯಾಚುರಲ್ ಪದಾರ್ಥಗಳಿಂದ ತುಂಬಿರಬೇಕು, ಪ್ರೋಟೀನ್‌ವಿಟಮಿನ್‌ ಧಾರಾಳ ಇರಬೇಕು. ಜೊತೆಗೆ ಇದು ಕೆಮಿಕಲ್ ಫ್ರೀ ಆಗಿರಬೇಕು. ನೀವು ಕೆಮಿಕಲ್ ಯುಕ್ತ ಪ್ರಾಡಕ್ಟ್ ಬಳಸುವಿರಾದರೆ, ನಿಮ್ಮ ಕೂದಲು ಶುಷ್ಕ, ನಿರ್ಜೀವ, ಹೊಳಪುರಹಿತ ಮತ್ತು ತೆಳು ಆಗಿರಬಹುದು. ಪ್ರೋಟೀನ್ ಯುಕ್ತ ಶ್ಯಾಂಪೂ  ಕಂಡೀಶನರ್‌ ಕೂದಲನ್ನು ದಟ್ಟ, ಸಿಕ್ಕು ರಹಿತ ಮತ್ತು ಹೊಳೆಯುವಂತೆ ಮಾಡುವುದರ ಜೊತೆ ಕೂದಲಿಗೆ ಉತ್ತಮ ಟೆಕ್ಸ್ ಚರ್‌ ನೀಡುತ್ತದೆ. `ಫಿಕ್ಸ್ ಮೈ ಕರ್ಲ್ಸ್’ ಸಹ ನ್ಯಾಚುರಲ್ ಪದಾರ್ಥಗಳಿಂದ ತಯಾರಾದ ಪ್ರಾಡಕ್ಟ್. ಇದು ನಿಮ್ಮ ಕೂದಲನ್ನು ಮಾಯಿಶ್ಚರೈಸ್‌ ಮಾಡಿ, ಅದನ್ನು ಆರೋಗ್ಯಕರವಾಗಿ ಇಡುತ್ತದೆ.

ಪ್ರಾಡಕ್ಟ್ ಹೇಗೆ ಬೆಟರ್‌?

`ಫಿಕ್ಸ್ ಮೈ ಕರ್ಲ್ಸ್’ ತಮ್ಮ ಸಿಕ್ಕಾದ ಗುಂಗುರು ಕೂದಲಿನಿಂದ ಚಿಂತೆಗೊಳಗಾಗಿರುವ ಹೆಂಗಸರಿಗೆಂದೇ ರೂಪಿಸಲಾಗಿದೆ ಹಾಗೂ ಸದಾ ತಮ್ಮ ಕೂದಲನ್ನು ಗಂಟು ಹಾಕಿಕೊಳ್ಳುವವರಿಗೆ. ಆದರೆ ಈ ಪ್ರಾಡಕ್ಟ್ ಗಳ ಬಳಕೆಯಿಂದ ಹುಡುಗಿಯರು ತಮ್ಮ ಕೂದಲನ್ನು ಓಪನ್‌ ಆಗಿ ಫ್ರೀ ಬಿಡಬಹುದು, ಬೇಕಾದ ಹೇರ್‌ ಸ್ಟೈಲ್ ಮಾಡಿಕೊಳ್ಳಬಹುದು. `ಫಿಕ್ಸ್ ಮೈ ಕರ್ಲ್ಸ್’ ಕರ್ಲಿ ಹೇರ್‌ ನ್ನು ಬೆಟರ್‌ ಮಾಡುವ ನಿಟ್ಟಿನಲ್ಲಿ ತಯಾರಿಸಲಾದ ಪ್ರಾಡಕ್ಟ್. ಇದರಲ್ಲಿ ಹೆಚ್ಚು ಹೆಚ್ಚು ನ್ಯಾಚುರಲ್ ಪದಾರ್ಥ ಬಳಸಿಕೊಳ್ಳಲಾಗಿದೆ. ಇದರ ಈ ಸ್ಟೆಪ್ಸ್ ಫಾಲೋ ಮಾಡಿದ ನಂತರ ಕರ್ಲಿ ಹೇರ್‌ ಸಾಫ್ಟ್, ಹೊಳೆ ಹೊಳೆಯುವ, ಮೃದು ಕೂದಲಾಗುತ್ತದೆ. ಈ ಪ್ರಾಡಕ್ಟ್ಸ್ ಪ್ಯಾರಾಬೆನ್‌, ಸಿಲಿಕಾನ್‌ ಫ್ರೀ ಆಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ