ಹೆಚ್ಚುತ್ತಿರುವ ವಯಸ್ಸು, ಗರ್ಭಧಾರಣೆ, ಕೆಲಸದ ಒತ್ತಡ, ವ್ಯರ್ಥವಾಗಿ ಹರಟುತ್ತಾ ಊಟ ಮಾಡುವುದು ಇತ್ಯಾದಿ ನಿಮ್ಮನ್ನು ಸ್ಥೂಲಕಾಯರನ್ನಾಗಿಸುತ್ತದೆ. ಹೆಚ್ಚಿನ ಮಹಿಳೆಯರಿಗೆ ಈ ಬಗ್ಗೆ ಚೆನ್ನಾಗಿ ತಿಳಿದಿದೆ. ಆದರೂ ಅವರೇನೂ ಮಾಡಲಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಅವರಿಗೆ ಇಷ್ಟವಾದ ಬಟ್ಟೆಗಳು ಅವರಿಗೆ ಸರಿಯಾಗಿ ಹೊಂದದೆ ನಿರಾಶರಾಗುತ್ತಾರೆ.

ಹೆಚ್ಚಿನ ಮಹಿಳೆಯರು ಮದುವೆಯಾಗಿ ಕೆಲವು ಸಮಯದ ನಂತರ ಅಸಮಾನ ರೂಪದಲ್ಲಿ ಹರಡಿಕೊಂಡಿರುವ ಕೊಬ್ಬು, ಮುಂದೆ ಬಂದ ಹೊಟ್ಟೆ ಇತ್ಯಾದಿಗಳನ್ನು ತಮ್ಮ ಬದುಕಿನ ಒಂದು ಭಾಗವನ್ನಾಗಿ ಒಪ್ಪಿಕೊಂಡು ತಮ್ಮ ಆಕಾರದ ಬಗ್ಗೆ ಗಮನ ಕೊಡುವುದಿಲ್ಲ. ಆದರೆ ಎಷ್ಟೇ ವಯಸ್ಸಾಗಿದ್ದರೂ ಅಥವಾ ಎಷ್ಟೇ ದಪ್ಪಗಿದ್ದರೂ ಸುಂದರ ಉಡುಪುಗಳನ್ನು ತೊಡಬೇಕೆಂದು ಎಲ್ಲರೂ ಬಯಸುತ್ತಾರೆ. ನೀವು ಸ್ಥೂಲತೆಯನ್ನು ಕಡಿಮೆ ಮಾಡಲಾಗದಿದ್ದರೆ ಸರಿಯಾದ ಉಡುಪುಗಳಿಂದ ಅದನ್ನು ಮರೆಮಾಡಿ ನಿಮ್ಮ ಲುಕ್ಸ್ ನ್ನು ಬದಲಿಸಬಹುದು.

ಚೆನ್ನೈನ ಫ್ಯಾಷನ್‌ ಡಿಸೈನರ್‌ ಟೀನಾ ಇಂತಹ ಉಡುಪುಗಳನ್ನು ಡಿಸೈನ್‌ ಮಾಡುವಲ್ಲಿ ಪ್ರಸಿದ್ಧರಾಗಿದ್ದಾರೆ.

ನೀವು ನಿಮ್ಮ ಆಕಾರ, ತೂಕ ಮತ್ತು ಬಣ್ಣದಂತಹ ಸಣ್ಣ ವಿಷಯಗಳಿಗೆ ಗಮನಕೊಟ್ಟು ನಿಮ್ಮ ಬಟ್ಟೆಗಳನ್ನು ಖರೀದಿಸಿದರೆ ನಿಮ್ಮ ಸ್ಥೂಲತೆ ಮತ್ತು ನಿಮ್ಮ ಮುಖದಲ್ಲಿ ಹೆಚ್ಚುತ್ತಿರುವ ವಯಸ್ಸಿನ ಛಾಪನ್ನು ಮರೆಮಾಡಬಹುದು ಎಂದು ಟೀನಾ ಹೇಳುತ್ತಾರೆ. ಟೀನಾ ಹೇಳಿದ ಕೆಲವು ವಿಶೇಷ ಟಿಪ್ಸ್ ಇಲ್ಲಿವೆ :

ಸ್ಕರ್ಟ್ಮತ್ತು ಘಾಘ್ರಾ

ಘಾಘ್ರಾ ಎಂತಹ ವಸ್ತ್ರವೆಂದರೆ ನಿಮಗೆ ಐಡೆಂಟಿಟಿ ಕೊಡುತ್ತದೆ ಅಥವಾ ಹಾಳು ಮಾಡುತ್ತದೆ. ನೀವು ಎತ್ತರವಾಗಿದ್ದು ದಪ್ಪಗಿದ್ದರೆ ಉದ್ದವಾದ, ಸಡಿಲವಾದ ಘಾಘ್ರಾವನ್ನು ಸೊಂಟದವರೆಗೆ ಉದ್ದವಾಗಿರುವ ಸ್ಲೀವ್ ಲೆಸ್‌ ಚೋಲಿಯೊಂದಿಗೆ ಧರಿಸಬಹುದು.

ಒಂದು ವೇಳೆ ಸ್ಥೂಲವಾಗಿದ್ದರೆ ಸ್ಟ್ರೇಟ್‌ ಕಟ್‌ ನ ಸ್ಕರ್ಟ್‌ ನ್ನು ಟೈಟ್‌ ಬನಿಯನ್‌ ಮತ್ತು ಜಾಕೆಟ್‌ ನೊಂದಿಗೆ ಧರಿಸಿದರೆ ನಿಮ್ಮ ಟಮಿ ಮತ್ತು ಶರೀರದ ಇತರ ಸ್ಥೂಲ ಭಾಗಗಳಿಗೆ ಸರಿಸಮಾನ ಆಕಾರ ಕೊಡಬಹುದು.

ಟ್ಯೂನಿಕ್‌, ಟಾಪ್‌ ಮತ್ತು ಜ್ಯಾಕೆಟ್‌ ಟ್ಯೂನಿಕ್‌ ಮತ್ತು ಟಾಪ್‌ ಈಗೀಗ ಬಹಳ ಪ್ರಚಲಿತವಾಗಿದೆ. ಇಂದು ಡಿಸೈನರ್‌ ಶೋರೂಮ್ ನಿಂದ ಹಿಡಿದು ಸಾಧಾರಣ ಅಂಗಡಿಗಳಲ್ಲಿ ಟ್ಯೂನಿಕ್‌ ಅಥವಾ ಡಿಸೈನರ್‌ ಟಾಪ್‌ ಸುಲಭವಾಗಿ ಸಿಗುತ್ತದೆ.

ನಿಮ್ಮ ಮಾಂಸಖಂಡಗಳು ಬಹಳ ದಪ್ಪಗಿದ್ದರೆ ಮತ್ತು ನಿಮಗೆ ಕೊಂಚ ಬೊಜ್ಜು ಇದ್ದರೆ ಕುತ್ತಿಗೆ ಅಗಲವಾಗಿದ್ದು ಸಾಕಷ್ಟು ಆಳವಾಗಿರುವ ಟಾಪ್‌ ಅಂದರೆ ಚೌಕಾಕಾರದ, ವಿ ಅಥವಾ ಬೋಟ್‌ ಶೇಪ್‌ ನದ್ದು ಆರಿಸಿಕೊಳ್ಳಿ. ಸ್ಲೀವ್ ಲೆ‌ಸ್‌ ಟಾಪ್ ಧರಿಸಬೇಡಿ.

ಟಾಪ್‌ ಖರೀದಿಸುವಾಗ ಕುತ್ತಿಗೆಯ ಬಳಿ ಡಿಸೈನರ್‌ ಪಟ್ಟಿಗಳು ಇದೆಯೇ ಎಂದು ಗಮನಿಸಿ.

ಸಾಮಾನ್ಯವಾಗಿ ಡಿಸೈನರ್‌ ಪಟ್ಟಿಗಳು ಬಟ್ಟೆಯ ಕೆಳಗಿನ ಮೂಲೆಯಲ್ಲಿರುತ್ತವೆ. ಆದರೆ ಅವನ್ನು ಟಾಪ್‌ ನ ಮೇಲ್ಭಾಗದಲ್ಲಿ ಹಾಕಿದ್ದಾಗ ನೋಡುವವರ ದೃಷ್ಟಿ ಟಮಿಯಿಂದ ದೂರವಾಗಿ ಕುತ್ತಿಗೆ ಅಥವಾ ಮೇಲಿನ ಭಾಗಕ್ಕೆ ಹೋಗುತ್ತದೆ. ಟಾಪ್‌ ಬಹಳ ಉದ್ದ ಅಥವಾ ಬಹಳ ಚಿಕ್ಕದಾಗಿ ಇರಬಾರದು. ಸಣ್ಣ ತೋಳು ಮತ್ತು ನಿತಂಬದವರೆಗಿನ ಉದ್ದದ ಟಾಪ್ಸ್ ಟಮಿ, ಸೊಂಟ ಮತ್ತು ದಪ್ಪ ತೊಡೆಗಳನ್ನು ಮರೆಮಾಡುತ್ತದೆ.

ನೀವು ಬಿಗಿಯಾದ ಟಾಪ್ಸ್ ಧರಿಸಬೇಡಿ. ಧರಿಸಬೇಕೆಂದಿದ್ದರೆ ಶರೀರಕ್ಕೆ ಆಕಾರ ಕೊಡುವ ಜಾಕೆಟ್‌ ಟಾಪ್‌ ಮೇಲೆ ಅಗತ್ಯವಾಗಿ ಧರಿಸಿ.

ಅನಾರ್ಕಲಿ ಸೂಟ್‌, ಸಡಿಲವಾದ ಘಾಘ್ರಾ ಮತ್ತು `ಎ’ ಕಟ್‌ ನ ಕುರ್ತಿ ಎಂದೂ ಧರಿಸಬೇಡಿ. ಕುರ್ತಿ ಅಥವಾ ಟಾಪ್‌ ನಲ್ಲಿ ವಿಶೇಷವೇನೆಂದರೆ ನೀವು ಅದಕ್ಕೆ ಯಾವ ರೀತಿಯ ಬಟ್ಟೆ ಆರಿಸುತ್ತೀರಿ ಎಂಬುದು. ಜಾರ್ಜೆಟ್‌, ಶಿಫಾನ್‌, ಲೈಕ್ರಾ, ಸಿಲ್ಕ್ ಮತ್ತು ಹತ್ತಿ ಬಟ್ಟೆಗಳನ್ನು ನಿಮ್ಮ ಸೈಜ್‌ ನ ಸಡಿಲವಾದ ಆದರೆ ಶೇಪ್‌ ಕೊಡುವ ಟ್ಯೂನಿಕ್‌ ಅಥವಾ ಟಾಪ್‌ ಖರೀದಿಸಬಹುದು.

ನೀವು ಉದ್ಯೋಗಸ್ಥೆಯಾಗಿದ್ದು, ಹೆಚ್ಚಾಗಿ ಪಾಶ್ಚಾತ್ಯ ಉಡುಗೆಗಳನ್ನು ಧರಿಸುವುರಾದರೆ ಲೆದರ್‌, ಡೆನಿಮ್ ಅಥವಾ ಎಲಾಸ್ಟಿಕ್ ಮೆಟೀರಿಯಲ್ ನಿಂದ ತಯಾರಿಸಿದ ಜಾಕೆಟ್‌ ಸೊಂಟದ ಬಳಿ ಬಿಗಿಯಾಗಿದ್ದು, ನಿತಂಬದವರೆಗಿದ್ದು, ಮೊಣಕಾಲಿನಿಂದ ಕೊಂಚ  ಮೇಲಿರುವ ಚಿಕ್ಕ ಸ್ಕರ್ಟ್‌ ನೊಂದಿಗೆ ಧರಿಸಿ. ಇದು ಕುಳ್ಳಗಿರುವ ಮಹಿಳೆಯರಿಗೆ ಬಹಳ ಚೆನ್ನಾಗಿರುತ್ತದ. ಒಂದು ವೇಳೆ ನೀವು ಉದ್ದವಾಗಿದ್ದು ನಿಮ್ಮ ಕಾಲುಗಳು ದಪ್ಪಗಿದ್ದರೆ, ಪೆನ್ಸಿಲ್ ‌ನಂತಹ ಮೊಣಕಾಲಿಗಿಂತ ಕೊಂಚ ಕೆಳಗಿರುವ ಸ್ಕರ್ಟ್‌ ಮತ್ತು ನಿಮ್ಮ ಮೇಲ್ಭಾಗದ ಆಕಾರ ಮತ್ತು ಸೊಂಟದವರೆಗೆ ಇರುವಂತಹ ಜಾಕೆಟ್‌ ಧರಿಸಿ. ಎರಡೂ ವಿಧಾನಗಳಿಂದ ಬೊಜ್ಜು ಮರೆಯಾಗಿ ನಿಮ್ಮ ವ್ಯಕ್ತಿತ್ವ ಕಾಂತಿಯುತವಾಗುತ್ತದೆ.

ಜೀನ್ಸ್ ಅಥವಾ ಪ್ಯಾಂಟ್

ಜೀನ್ಸ್ ಎಂತಹ ವಸ್ತ್ರವೆಂದರೆ ಪ್ರತಿಯೊಬ್ಬರ ವ್ಯಕ್ತಿತ್ವವನ್ನು ತನ್ನದೇ ರೀತಿಯಲ್ಲಿ ಬೆಳಗಿಸುತ್ತದೆ. ಆದರೆ ನಮ್ಮ ಶಾರೀರಿಕ ರಚನೆಗೆ ತಕ್ಕಂತೆ ಜೀನ್ಸ್ ಧರಿಸದಿದ್ದರೆ ನಮ್ಮ ವ್ಯಕ್ತಿತ್ವ ಹಾಳಾ ಸ್ಟ್ರೇಟ್‌ ಜೀನ್ಸ್ ಧರಿಸಿ. ಬಟ್ಟೆ ಗಟ್ಟಿಯಾಗಿದ್ದು ಹಾಗೂ ಸ್ಟ್ರೆಚ್ ಮಾಡುವಂಥದ್ದು ಆಗಿರಲಿ. ಗಟ್ಟಿಯಾದ ಬಟ್ಟೆ ನಿಮ್ಮ ತೊಡೆಗಳನ್ನು ಒಳಗೆ ತಳ್ಳುವುದಲ್ಲದೆ, ಹೊಟ್ಟೆ ಮತ್ತು ಸೊಂಟದ ಭಾಗಗಳನ್ನು ಬಿಗಿಗೊಳಿಸುತ್ತದೆ.

ನೀವು ಬೂಟ್‌ ಲೆಗ್‌ ಜೀನ್ಸ್ (ಬೆಲ್ ‌ಬಾಟಮ್) ಅಥವಾ ಫಾರ್ಮಲ್ ಪ್ಯಾಂಟ್‌ ನ್ನೂ ಧರಿಸಬಹುದು. ಆದರೆ 70ರ ದಶಕದ ಫ್ಯಾಷನ್ ನಲ್ಲಿ ರೂಢಿಯಲ್ಲಿದ್ದ ಆಳದ ಬೂಟ್‌ ಲೆಗ್‌ ಜೀನ್ಸ್ ಧರಿಸಬೇಡಿ. ಅದರಿಂದ ನೀವು ಹೆಚ್ಚು ದಪ್ಪ ಕಾಣುತ್ತೀರಿ. ನಿಮ್ಮ ಜೀನ್ಸ್ ಅಥವಾ ಪ್ಯಾಂಟ್‌ ತೆಳುವಾದ `ಎ’ ಶೇಪ್‌ ನಲ್ಲಿ ಕೊನೆಗೊಳ್ಳಬೇಕು. ಈಗ ಬೂಟ್‌ ಲೆಗ್‌ ಜೀನ್ಸ್ ಸೊಂಟದ ಪಟ್ಟಿ ಇಲ್ಲದೆ ಅಥವಾ ಲೋ ವೇಸ್ಟ್ ಅಂದರೆ ಕೆಳಗಿನ ಸೊಂಟದ್ದು ಹೆಚ್ಚು ಲಭ್ಯವಿವೆ. ಅವನ್ನು ಖರೀದಿಸಬೇಡಿ. ಬೂಟ್‌ ಲೆಗ್‌ ಜೀನ್ಸ್ ಅಥವಾ ಪ್ಯಾಂಟ್‌ ನಲ್ಲಿ ಸೊಂಟ ಮರೆಮಾಡು ಭಾಗ ಸರಿಯಾಗಿ ನಿಮ್ಮ ನಾಭಿೂಂದಿಗೆ ಸೇರಬೇಕು. ಇದರಿಂದ ತೊಡೆಗಳು ಮತ್ತು ಟಮಿ ಇನ್ನಷ್ಟು ಒಳಗೆ ದಬ್ಬಲ್ಪಟ್ಟು ನಿಮಗೆ ಒಳ್ಳೆಯ ಆಕಾರ ಸಿಗುತ್ತದೆ.

ಶೇಪ್‌ ವೇರ್‌ ಅಸಾಮಾನ್ಯ ರೂಪದಲ್ಲಿ ಹರಡಿರುವ ಸ್ಥೂಲತೆಯನ್ನು ಮರೆ ಮಾಡುವಲ್ಲಿ ನಿಮಗೆ ಶೇಪ್‌ ವೇರ್‌ನಿಂದ ದೊಡ್ಡ ಸಹಾಯ ಸಿಗುತ್ತದೆ. ಬಹಳಷ್ಟು ಮಹಿಳೆಯರು ಈ ಕಾರಣದಿಂದ ಶೇಪ್‌ ವೇರ್‌ ನ್ನು ಒಂದು ಗಿಫ್ಟ್ ಎನ್ನುತ್ತಾರೆ.

ಶೇಪ್‌ ವೇರ್‌ ನ್ನು ಉಡುಪಿನ ಕೆಳಗೆ ಧರಿಸಲಾಗುತ್ತದೆ. ಆದರೆ ಇದು ಒಳಉಡುಪಲ್ಲ. ಶೇಪ್‌ ವೇರ್‌ ನ್ನು ತೊಡೆಯ ಸ್ಥೂಲತೆಗೆ ಸರಿಯಾದ ಆಕಾರ ಕೊಡಲು ತಯಾರಿಸಲಾಗಿದೆ. ಇದನ್ನು ಧರಿಸಿದ ಮೇಲೆ ನೀವು ಸ್ಕರ್ಟ್‌ ಅಥವಾ ಪ್ಯಾಂಟ್‌ ಧರಿಸಿದಾಗ ಸ್ಥೂಲತೆ ಕಂಡುಬರುವುದಿಲ್ಲ. ಕೆಲವು ಶೇಪ್‌ ವೇರ್‌ ಗಳು ನಿಮ್ಮ ಟಮಿಯನ್ನು ಬಿಗಿ ಮಾಡಲು ತಯಾರಿಸಲಾಗಿವೆ. ಇನ್ನು ಕೆಲವು ಕೆಳಗಿನ ಭಾಗಗಳಿಂದ ಹಿಡಿದು ತೊಡೆಯವರೆಗೆ ಶರೀರಕ್ಕೆ ಸರಿಯಾದ ಆಕಾರ ಕೊಡಲು ತಯಾರಾಗಿವೆ.

ಶೇಪ್‌ ವೇರ್‌ ನ್ನು ನೀವು ದಿನ ಧರಿಸಲಾಗದೆ ಇರಬಹುದು. ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ ನೀವು ವಿಶೇಷವಾಗಿ ಕಾಣಲು ಬಯಸಿದಾಗ ಖಂಡಿತ ಧರಿಸಿ. ಏಕೆಂದರೆ ಶೇಪ್‌ ವೇರ್‌ ಅಸಾಧಾರಣವಾಗಿ ಹರಡಿರುವ ನಿಮ್ಮ ಸ್ಥೂಲತೆಯನ್ನು ಮರೆಮಾಡುವುದಲ್ಲದೆ, ನಿಮ್ಮ ವ್ಯಕ್ತಿತ್ವ ಬೆಳಗುವುದರೊಂದಿಗೆ ನಿಮ್ಮ ಮನೋಬಲವನ್ನೂ ಹೆಚ್ಚಿಸುತ್ತದೆ.

ಸುಂದರವಾಗಿ ಕಾಣಿಸಲು ಬಹಳಷ್ಟು ಹಣವನ್ನು ಖರ್ಚು ಮಾಡುವ ಅಗತ್ಯವೇನಿಲ್ಲ. ನಿಮ್ಮಲ್ಲಿ ನಿಮ್ಮ ಶರೀರಕ್ಕೆ ಅನುಗುಣವಾದ ಬಟ್ಟೆಗಳನ್ನು ಖರೀದಿಸುವ ತಿಳಿವಳಿಕೆ ಇರಬೇಕು. ಯಾವಾಗಲೂ ನಿಮ್ಮ ಆಕಾರ ಮತ್ತು ಸ್ಥೂಲತೆಯನ್ನು ಗಮನದಲ್ಲಿಟ್ಟುಕೊಂಡೇ ಬಟ್ಟೆಗಳನ್ನು ಖರೀದಿಸಿ.

ಪಿ. ಶರ್ಮಿಳಾ

ವಿಶೇಷ ಸೂಚನೆಗಳು

ಒಂದು ವೇಳೆ ನೀವು ಸ್ಥೂಲಕಾಯದವರಾಗಿದ್ದಲ್ಲಿ ನಿರಾಶರಾಗಿ ಸಡಿಲವಾದ ವಸ್ತ್ರಗಳನ್ನು ಧರಿಸಬೇಡಿ. ಅದರಿಂದ ನೀವು ಇನ್ನಷ್ಟು ದಪ್ಪನಾಗಿ ಕಾಣುವುದಲ್ಲದೆ ನಿಮ್ಮ ವ್ಯಕ್ತಿತ್ವದ ಮೇಲೂ ಕೆಟ್ಟ ಪ್ರಭಾವ ಬೀರುತ್ತದೆ.

ಹೆಚ್ಚು ಬಿಗಿಯಾದ ಉಡುಪುಗಳ್ನೂ ಧರಿಸಬೇಡಿ. ಅದರಿಂದ ನಿಮ್ಮ ಸ್ಥೂಲತೆ ಬಟ್ಟೆಯ ಮೇಲ್ಮೈನಲ್ಲಿ ಪದರದಂತೆ ಕಂಡುಬರುತ್ತದೆ. ಅದರಿಂದ ನೀವು ಅನಾಕರ್ಷಕವಾಗಿ ಕಂಡುಬರುತ್ತೀರಿ.

ನಿಮ್ಮ ಹೊಟ್ಟೆಯ ಭಾಗವನ್ನು ಆಕರ್ಷಣೆಯ ಕೇಂದ್ರ ಮಾಡಬೇಡಿ. ಅಲ್ಲಿ ಬೆಲ್ಟ್ ಸಹ ಕಟ್ಟಬೇಡಿ. ಏಕೆಂದರೆ ಅದರಿಂದ ಹೊಟ್ಟೆ ಇನ್ನಷ್ಟು ದಪ್ಪವಾಗಿ ಕಾಣಿಸುತ್ತದೆ.

ದಪ್ಪಗಿರುವವರು ಪ್ಯಾಂಟ್‌ ಅಥವಾ ಸ್ಕರ್ಟ್‌ ನಲ್ಲಿ ಅವರು ಧರಿಸುವ ಟಾಪ್‌ ಅಥವಾ ಬ್ಲೌಸ್‌ ಸೇರಿಸಬಾರದು.

ನೀವು ಆರಿಸುವ ಯಾವುದೇ ಬಟ್ಟೆಯ ಬಣ್ಣ, ಡಿಸೈನ್‌ ಮತ್ತು ಅದರ ಮೇಲೆ ಮಾಡಿರುವ ವರ್ಕ್‌ ನ್ನೂ ಗಮನಿಸಿ. ಅದರ ಮೇಲೆ ಉದ್ದ ಗೆರೆಗಳು, ಕತ್ತಿನ ಬಳಿಯ ಡಿಸೈನ್‌ ಗಳು ನಿಮ್ಮ ಸ್ಥೂಲತೆಯನ್ನು ಗಮನಿಸದಂತೆ ಮಾಡುತ್ತವೆ. ಸಾದಾ ಡ್ರೆಸ್‌ ನೊಂದಿಗೆ ಅಗಲವಾದ ಸುಂದರ ಸರ ಧರಿಸಿದರೆ ಒಳ್ಳೆಯದು. ಈ ಸೂಚನೆಗಳು ನಿಮ್ಮ ಸ್ಥೂಲತೆಗೆ ಒಂದು ಸುಂದರ ಆಕಾರವನ್ನು ಎರಕಹೊಯ್ಯುತ್ತವೆ.

ಒಂದು ವೇಳೆ ನೀವು ಕುಳ್ಳಗಿದ್ದರೆ ಅಗಲವಾದ ಕುತ್ತಿಗೆಯ ಅಥವಾ ಗಾಢವಾದ ವಿ ಶೇಪ್‌ ನ ಕುತ್ತಿಗೆಯ ಬಟ್ಟೆ ಧರಿಸಿ. ಇದರಿಂದ ನಿಮ್ಮ ತಲೆಯಿಂದ ಸೊಂಟದವರೆಗಿನ ಭಾಗ ಉದ್ದವಾಗಿ ಕಾಣುತ್ತದೆ ಮತ್ತು ನೀವು ತೆಳ್ಳಗೆ ಕಾಣುತ್ತೀರಿ. ಹೆಚ್ಚು ಬಿಗಿಯಾದ, ಹೆಚ್ಚು ಮುಚ್ಚಿರುವ ಅಥವಾ ಉದ್ದವಾದ ಬಟ್ಟೆಗಳ ಬದಲು ಒಳ್ಳೆಯ ಆಕಾರದ ಚಿಕ್ಕ ತೋಳಿನ ಬಟ್ಟೆಗಳನ್ನು ಆರಿಸಿಕೊಳ್ಳಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ