ನಗರ ಪ್ರದೇಶಗಳಲ್ಲಿ ಜಾಗದ ಕೊರತೆಯದ್ದೇ ಸಮಸ್ಯೆ. ಅಲ್ಲಿ ಬಹೂಪಯೋಗಿ ಪೀಠೋಪಕರಣಗಳು ಅತ್ಯುತ್ತಮ ಪರ್ಯಾಯವಾಗಿವೆ. ಇವು ಕಡಿಮೆ ಜಾಗದಲ್ಲಿ ಹೆಚ್ಚು ಅನುಕೂಲ ಮಾಡಿಕೊಡುತ್ತವೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಕಡಿಮೆಯಾಗುತ್ತಿರುವ ಜಾಗ ಬಹೂಪಯೋಗಿ ಪೀಠೋಪಕರಣಗಳನ್ನು ಖರೀದಿಸಲು ಅನಿವಾರ್ಯ ವಾತಾರಣ ಸೃಷ್ಟಿಸುತ್ತಿದೆ. ಇಂತಹ ಪೀಠೋಪಕರಣಗಳು ಅತ್ಯಾಕರ್ಷಕವಾಗಿರುವುದರ ಜೊತೆಗೆ ಗುಣಮಟ್ಟ ಕೂಡ ಚೆನ್ನಾಗಿರುತ್ತದೆ. ಬಹಳಷ್ಟು ಜನರಿಗೆ ಸೋಫಾ ಕಮ್ ಬೆಡ್‌ ಬಗೆಗಷ್ಟೇ ಗೊತ್ತು. ಇಂದು ಮಾರುಕಟ್ಟೆಯಲ್ಲಿ ಬಹು ಬಗೆಯ ಮಲ್ಟಿಪರ್ಪಸ್‌ ಪೀಠೋಪಕರಣಗಳು ಲಭ್ಯವಿವೆ.

ಮಕ್ಕಳಿಗೆ ಇಷ್ಟವಾಗುವಂಥ ಮಕ್ಕಳ ಕೋಣೆಗಾಗಿ ಬಂಕ್‌ ಬೆಡ್‌ ಉಪಯುಕ್ತ. ಇದರಲ್ಲಿ ಫಿಟ್‌ ಇನ್‌ ವಾರ್ಡ್‌ ರೋಬ್‌ ಗಳು ಲಭ್ಯವಿದ್ದು, ಅದರಲ್ಲಿ ನೀವು ಅವರ ಬಟ್ಟೆ ಮುಂತಾದವುಗಳನ್ನು ಇಡಬಹುದು. ಇದರ ಒಂದು ಬದಿಗೆ ಸ್ಟಡಿ ಟೇಬಲ್ ಕೂಡ ಅಳವಡಿಸಲ್ಪಟ್ಟಿರುತ್ತದೆ. ಅದನ್ನು ಬಳಸದೇ ಇದ್ದಾಗ ಅದನ್ನು ಸುಲಭವಾಗಿ ಮುಚ್ಚಿಡಬಹುದು. ನೋಡುವವರಿಗೆ ಈ ಬಂಕ್‌ ಬೆಡ್ ಇಷ್ಟು ಸುಲಭವಾಗಿ ಕಾರ್ಯನಿರ್ವಹಿಸಬಹುದು ಎಂಬುದು ಅರಿವಿಗೆ ಬರಲಾರದು. ಇದು ಮಾರುಕಟ್ಟೆಯಲ್ಲಿ ಹಲವು ವರ್ಣಗಳಲ್ಲಿ ದೊರೆಯುತ್ತದೆ. ನೀವು ನಿಮ್ಮ ಮಗುವಿನ ಆಸಕ್ತಿಗನುಗುಣವಾಗಿ ಅಥವಾ ಮಗುವಿನ ಕೋಣೆಯ ಗೋಡೆಗಳ ಬಣ್ಣಕ್ಕೆ ಹೊಂದುವಂತಹ ಬಂಕ್‌ ಬೆಡ್‌ ಖರೀದಿಸಬಹುದು.

ಹಗಲು ಸೋಫಾ ರಾತ್ರಿ ಬೆಡ್

ನಿಮ್ಮ ಪತಿಗೆ ಸೋಫಾ ಖರೀದಿಸಬೇಕಾಗಿದೆ ಹಾಗೂ ನಿಮಗೆ ದೀವಾನ್‌. ಏಕೆಂದರೆ ಸಾಮಾನುಗಳನ್ನು ಸುಲಭವಾಗಿ ಇಡಲು ಸಾಧ್ಯವಾಗಬೇಕು ಎಂದು. ಈಗ ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಈಗ ಈ ರೀತಿಯ ಸೋಫಾಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅದು ಹಗಲು ಹೊತ್ತಿನಲ್ಲಿ ಸೋಫಾ ಹಾಗೂ ರಾತ್ರಿ ಹೊತ್ತಿನಲ್ಲಿ ಒಬ್ಬ ವ್ಯಕ್ತಿಗೆ ಸಿಂಗಲ್ ಬೆಡ್‌ ಮತ್ತು ಡಬಲ್ ಬೆಡ್‌ ಆಗಿ ಪರಿವರ್ತಿಸಬಹುದು. ಇದರೊಳಗೆ ದೀವಾನ್‌ ನಲ್ಲಿ ಇಡುವಂತೆ ಸಾಮಾನುಗಳನ್ನು ಕೂಡ ಇಡಬಹುದಾಗಿದೆ. ಇದನ್ನು ನೀವು ಲಿವಿಂಗ್‌ ರೂಮ್ ನಲ್ಲಿ  ಕೂಡ ಇಡಬಹುದಾಗಿದೆ.

ವಿಶಿಷ್ಟ ಬುಕ್ಶೆಲ್ಫ್

ನಿಮಗೆ ಪುಸ್ತಕ ಓದುವ ಹವ್ಯಾಸವಿದೆ. ಆದರೆ ಪುಸ್ತಕಗಳನ್ನಿಡಲು ಹಾಗೂ ಓದಲು ಸರಿಯಾದ ಜಾಗವಿಲ್ಲ ಎಂಬ ಸಮಸ್ಯೆಯೆ? ಅದಕ್ಕಾಗಿ ವಿಶಿಷ್ಟವಾದ ಫರ್ನೀಚರ್‌ ವೊಂದನ್ನು ತಂದು ಬೆಡ್‌ ರೂಮ್ ನಲ್ಲೇಕೆ ಇಟ್ಟುಕೊಳ್ಳಬಾರದು? ಈ ಸ್ಲಿಮ್ ಆಗಿರುವ ಬುಕ್ ಶೆಲ್ಫ್ ನಲ್ಲಿ ಇನ್‌ ಬಿಲ್ಟ್ ಸ್ಟಡಿ ಟೇಬಲ್ ಅಂತೂ ಇದ್ದೇ ಇರುತ್ತೆ. ಅದನ್ನು ನೀವು ಯಾವಾಗ ಬೇಕಾದಾಗ ತೆರೆಯಬಹುದು, ಮುಚ್ಚಬಹುದು. ಅದರಲ್ಲಿ ಕಾಫಿ ಟೇಬಲ್ ಕೂಡ ಇರುತ್ತದೆ. ನಿಮಗೆ ಓದಲು ಬರೆಯಲು ಬೇಸರ ಎನಿಸಿದಾಗ ಅಲ್ಲಿಯೇ ಕುಳಿತು ನೆಮ್ಮದಿಯಿಂದ ಟೀ/ಕಾಫಿ ಹೀರಬಹುದು.

ನೀವು ಈ ಬುಕ್‌ ಶೆಲ್ಫ್ ನ್ನು ಕೆಲವ ವಸ್ತುಗಳನ್ನು ಅಲಂಕರಿಸಿಕೊಳ್ಳಲು ಕೂಡ ಬಳಸಿಕೊಳ್ಳಬಹುದು. ಬುಕ್‌ ಶೆಲ್ಫ್ ನ್ನು ಕಾರ್ನರ್ ಟೇಬಲ್ ನಂತೆ ಉಪಯೋಗಿಸಬಹುದು. ಇದರ ಮೇಲೆ ಲ್ಯಾಂಪ್‌ ನ ಜೊತೆ ಜೊತೆಗೆ ಫೋಟೊ ಫ್ರೇಮ್ ನಂತಹ ಹಗುರ ವಸ್ತುಗಳನ್ನು ಕೂಡ ಇಡಬಹುದು.

ಪ್ರತಿಷ್ಠೆ ಹೆಚ್ಚಿಸುವ ಟಿ.ವಿ. ಕ್ಯಾಬಿನೆಟ್‌

ನಿಮ್ಮ ಬಳಿ ಒಂದೇ ಕೋಣೆಯಿದೆ. ಅದನ್ನು ಇಬ್ಭಾಗಿಸಬೇಕೆಂದು ನೀವು ಇಚ್ಛಿಸುವಿರಿ. ಒಂದು ವೇಳೆ ನೀವು ಹಾಗೆ ಮಾಡಿದರೆ ಕೋಣೆ ಇನ್ನಷ್ಟು ತುಂಬಿಕೊಂಡಂತೆ ಭಾಸವಾಗುತ್ತದೆ. ಇಂತಹ ಸ್ಥಿತಿಯಲ್ಲಿ ನೀವು ಕ್ರಾಕರಿ ಯೂನಿಟ್‌ ನಂತೆಯೂ ಕೆಲಸ ಮಾಡುವಂತಹ ತೆಳ್ಳನೆಯ ಕ್ಯಾಬಿನೆಟ್‌ ಖರೀದಿಸಿ ಹಾಗೂ ಅದನ್ನು ಕೋಣೆಯ ನಟ್ಟನಡುವೆ ಇಡಿ. ಇದರಲ್ಲಿ ಒಂದು ಕಡೆ ಟಿ.ವಿ. ಮತ್ತು ಲಿವಿಂಗ್‌ ರೂಮ್ ನ್ನು ಅಲಂಕರಿಸು ಸಾಮಾನು ಇಡಿ. ಮತ್ತೊಂದೆಡೆ ಅಡುಗೆಮನೆಗೆ ಸಂಬಂಧಪಟ್ಟ ಕ್ರಾಕರಿಗಳನ್ನು ಇಡಿ.

ಬೆಡ್ಕಮ್ ಡೈನಿಂಗ್ಟೇಬಲ್

multipurpaj-B

ನೀವು ಇಷ್ಟಪಟ್ಟೂ ಕೂಡ ಡೈನಿಂಗ್‌ ಟೇಬಲ್ ಖರೀದಿಸಲು ಆಗದೇ ಇದ್ದಲ್ಲಿ, ಗೋಡೆಯೊಂದಿಗೆ ಅಟ್ಯಾಚ್‌ ಆಗುವ ಬೆಡ್‌ ಖರೀದಿಸಿ. ಇದು ಎಂತಹ ಬೆಡ್‌ ಅಂದರೆ, ಅದನ್ನು ಅಗತ್ಯವಿದ್ದಾಗ ಬಿಚ್ಚಬಹುದು. ಇದರ ಮೇಲ್ಭಾಗದಲ್ಲಿಯೇ ಮತ್ತೊಂದು ಅಟ್ಯಾಚ್‌ ಇರುತ್ತದೆ. ಅದನ್ನು ತೆರೆದಾಗ ಅದು ಡೈನಿಂಗ್‌ ಟೇಬಲ್ ಆಗಿ ಪರಿವರ್ತನೆ ಮಾಡಬಹುದು. ಜೊತೆಗೆ ನೀವು 4 ಕುರ್ಚಿಗಳನ್ನು ಕೂಡ ಇಡಬಹುದು. ಬಳಿಕ ಅದು ಬಾಲ್ಕನಿ ಅಥವಾ ಗ್ಯಾಲರಿಯಲ್ಲಿ ಕುಳಿತುಕೊಳ್ಳಲು ಕೂಡ ಉಪಯೋಗಿಸಬಹುದು. ಈ ಬೆಡ್‌ ಕಮ್ ಡೈನಿಂಗ್‌ ಟೇಬಲ್ ನ್ನು ನೀವು ಗೆಟ್ ರೂಮ್ ನಲ್ಲಿ ಇಡಬಹುದಾಗಿದೆ. ಇಲ್ಲಿ, ಲಿವಿಂಗ್ ರೂಮಿನ ಒಂದು ಮೂಲೆಯಲ್ಲೂ ಇಡಬಹುದು.

ಹೋಮ್ ಥಿಯೇಟರ್‌ : ಆರಾಮದ ಜೊತೆಗೆ ಸಂಗೀತ ಈ ರೀತಿಯ ಪೀಠೋಪಕರಣ ಸಿಕ್ಕರೆ ಎಷ್ಟು ಮಜವಾಗಿರುತ್ತದೆ ಎಂದು ನಿಮಗನ್ನಿಸಿರಬಹುದು. ಇಟಾಲಿಯನ್‌ ಫರ್ನೀಚರ್‌ ಕಂಪನಿ ನಟೂಜ್ಜಿಯ ಭಾರತದಲ್ಲಿನ ಮ್ಯಾನೇಜರ್‌ ನಿತಿನ್‌ ಅವರು ಹೀಗೆ ಹೇಳುತ್ತಾರೆ, “ನಿಜಕ್ಕೂ ಇದು ಅಚ್ಚರಿಯ ವಿಷಯವೇ ಆಗಿದೆ. ಈಗ ಇಂತಹ ಹೋಮ್ ಥಿಯೇಟರ್‌ ಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದ್ದು, ಅವುಗಳಲ್ಲಿ ಬಾರ್‌ ಯೂನಿಟ್‌ ಗೂ ಕೂಡ ಸ್ಥಳಾವಕಾಶ ಇರುತ್ತದೆ. ಜೊತೆಗೆ ರಿಮೋಟ್‌ ಇಡಲು ವಿಶಿಷ್ಟ ಜಾಗ ಮಾಡಲಾಗುತ್ತದೆ. ಇವುಗಳಲ್ಲಿ ಇನ್‌ ಬಿಟ್ ಸೌಂಡ್‌ ಸಿಸ್ಟಮ್ ಕೂಡ ಇರುತ್ತದೆ. ಕೆಲವದರಲ್ಲಿ ಐಪಾಡ್‌ ಸಂಪರ್ಕ ಕೂಡ ನೀಡಲಾಗಿರುತ್ತದೆ. ಎಲ್ಲಕ್ಕೂ ಅಚ್ಚರಿಯ ಸಂಗತಿಯೆಂದರೆ, ಇದರ ಜೊತೆ ಆರಾಮ ಕುರ್ಚಿ ಕೂಡ ಅಟ್ಯಾಚ್‌ ಮಾಡಲಾಗಿರುತ್ತದೆ. ಅಂದರೆ ವಿಶ್ರಾಂತಿ ಮಾಡುತ್ತಲೇ ನೀವು ಹಾಡುಗಳ ಆನಂದ ಪಡೆದುಕೊಳ್ಳಬಹುದು.

ಬೆಡ್‌ ರೂಮಿನ ಅಂದ ಹೆಚ್ಚಿಸುವ ಡ್ರೆಸ್ಸಿಂಗ್‌ ಟೇಬಲ್ ಇದು ನಿಮ್ಮ ಬೆಡ್‌ ರೂಮಿಗೆ ಅತ್ಯುತ್ತಮ ಪೀಠೋಪಕರಣವಾಗಿದೆ. ಕನ್ನಡಿಯ ಹಿಂಭಾಗದಲ್ಲಿ ಅದೆಷ್ಟೊ ರಾಕ್ಸ್ ಇದ್ದು ಅವುಗಳಲ್ಲಿ ನೀವು ಸೌಂದರ್ಯ ಪ್ರಸಾಧನಗಳನ್ನು, ಬಳೆಗಳನ್ನು, ಕಿವಿಯೋಸೆಗಳ ಜೊತೆಗೆ ಔಷಧಿ ಮುಂತಾದವುಗಳನ್ನು ಕೂಡ ಇಟ್ಟು ಕೊಳ್ಳಬಹುದು. ಅದರ ಕೆಳಭಾಗದಲ್ಲಿ ಡ್ರಾಯರ್‌ ಗಳಿದ್ದು, ಅಲ್ಲಿ ನಿಯತಕಾಲಿಕೆಗಳನ್ನು ಅಥವಾ ನ್ಯಾಪ್‌ ಕಿನ್‌ ಗಳನ್ನು ಇಟ್ಟುಕೊಳ್ಳಬಹುದು. ಈ ಡ್ರಾಯರ್‌ ಗಳ ಜೊತೆ ಒಂದು ಇನ್‌ ಬಿಲ್ಟ್ ಪುಟ್ಟ ಟೇಬಲ್ ಕೂಡ ಇದ್ದು, ಅದನ್ನು ಹಲವು ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು. ಅದನ್ನು ಕಾಫಿ ಟೇಬಲ್ ನಂತೆಯೂ ಬಳಸಿಕೊಳ್ಳಬಹುದು. ಯಾರಾದರೂ ಗೆಳತಿಯರು ಬಂದರೆ ಅಲ್ಲಿ ಕುಳಿತು ಕಾಫಿ ಕುಡಿಯಬಹುದು. ಸ್ವಲ್ಪ ಹೊತ್ತು ಅಲ್ಲಿ ಬೇರೆ ವಸ್ತುಗಳನ್ನು ಇಡಲು ಜಾಗ ಮಾಡಿಕೊಳ್ಳಬಹುದು.

ಕಾಫಿ ಟೇಬಲ್ : ಏಕಕಾಲಕ್ಕೆ ಅನೇಕ ಕೆಲಸ ಈಗ ಎಂತಹ ಕಾಫಿ ಟೇಬಲ್ ಗಳು ಬಂದಿವೆಯೆಂದರೆ, ಅವನ್ನು ನೀವು ಸ್ಟೋರೇಜ್ ಡೈನಿಂಗ್‌ ಹಾಗೂ ಕೆಲಸ ಮಾಡಲು ಬಳಸಿಕೊಳ್ಳಬಹುದಾಗಿದೆ. ಇದು ಮಲ್ಟಿಯೂಸ್‌ ನ ಒಂದು ಅತ್ಯುತ್ತಮ ಉದಾಹರಣೆ. ಇದರ ಒಳಭಾಗದಲ್ಲಿ ಸಾಮಾನುಗಳನ್ನು ಇಡಲು ಡ್ರಾಯರ್‌ ಗಳನ್ನು ನಿರ್ಮಿಸಲಾಗಿರುತ್ತದೆ. ಇದರಲ್ಲಿ ನೀವು ರಿಮೋಟ್‌ ಕಂಟ್ರೋಲ್‌, ನಿಯತಕಾಲಿಕೆಗಳು ಹಾಗೂ ಇತರೆ ಸಾಮಾನುಗಳನ್ನು ಇಡಬಹುದಾಗಿದೆ. ಇದರ ಟಾಪ್‌ ನ್ನು ಕೆಳಭಾಗದತ್ತ ಮಾಡಲು ಕೆಳಗೆ ಒಂದು ಹ್ಯಾಂಡ್‌ ಇರುತ್ತದೆ. ಕೆಳಭಾಗದತ್ತ ತಿರುಗಿದ ಬಳಿಕ ಇದು ಡೈನಿಂಗ್‌ ಟೇಬಲ್ ನಂತಾಗುತ್ತದೆ ಮತ್ತು ಲ್ಯಾಪ್‌ ಟಾಪ್‌ ಟೇಬಲ್ ಕೂಡ. ಹಗಲು ಹೊತ್ತಿನಲ್ಲಿ ಇದೇ ಕಾಫಿ ಟೇಬಲ್ ಸೆಂಟ್ರಲ್ ಟೇಬಲ್ ನಂತೆ ಕೆಲಸ ಮಾಡುತ್ತದೆ.

ಮೊಬೈಲ್ ಕ್ಯಾಬಿನೆಟ್ ಬಹೂಪಯೋಗ

multipurpaj-A

ಮೊಬೈಲ್ ಕ್ಯಾಬಿನೆಟ್‌ ನ ಎಲ್ಲಕ್ಕೂ ಮುಖ್ಯ ಉಪಯೋಗವೆಂದರೆ, ಅದನ್ನು ನೀವು ಯಾವುದೇ ಕೋಣೆಯಲ್ಲಾದರೂ ತೆಗೆದುಕೊಂಡು ಹೋಗಬಹುದಾಗಿದೆ. ಇದರ ಕೆಳಗೆ ಚಕ್ರಗಳನ್ನು ಅಳವಡಿಸಲಾಗಿರುತ್ತದೆ. ಹೀಗಾಗಿ ಇದನ್ನು ಅತ್ತಿತ್ತ ಸುಲಭವಾಗಿ ಸಾಗಿಸಬಹುದು. ಇದರಲ್ಲಿ ಡ್ರಾಯರ್‌ ಗಳಿದ್ದು, ಉದ್ದನೆಯ ಶೆಲ್ಫ್ ಗಳನ್ನು ಮಾಡಲಾಗಿರುತ್ತದೆ. ಅದರಲ್ಲಿ ನೀವು ಹಲವು ಬಗೆಯ ವಸ್ತುಗಳನ್ನು ಇಡಬಹುದಾಗಿದೆ. ಇದರ ಮೇಲ್ಭಾಗದಲ್ಲಿ ಅಳವಡಿಸಲಾಗಿರುವ ಬೋರ್ಡ್‌ ನ್ನು ಮುಂಭಾಗದತ್ತ ಎಳೆದಾಗ ಅದು ಚಿಕ್ಕ ಡೈನಿಂಗ್‌ ಟೇಬಲ್ ಆಗುತ್ತದೆ. ಇದರ ಮೇಲ್ಭಾಗದ ರಾಕ್‌ ನ್ನು ನೀವು ಬಾರ್‌ ಯೂನಿಟ್‌ ನಂತೆ ಬಳಸಿಕೊಳ್ಳಬಹುದು.

ಫುಟ್ಸ್ಟೂಲ್ ವೈಶಿಷ್ಟ್ಯಗಳು

ಹಗಲು ಹೊತ್ತಿನಲ್ಲಿ ನಾರ್ಮಲ್ ಅಥವಾ ಫುಟ್‌ ಸ್ಟೂಲ್ ‌ನಂತೆ ಕಂಡುಬರುವ ಈ ಫರ್ನೀಚರ್‌ ಅಗತ್ಯಬಿದ್ದಾಗ ಆರಾಮವಾಗಿ ಕುಳಿತುಕೊಳ್ಳುವ ಚೇರ್‌ ಆಗುತ್ತದೆ. ಇದರ ಮೇಲೆ ಕುಳಿತು ಸೊಗಸಾಗಿ ಮ್ಯಾಗ್‌ ಝೀನ್‌ ಓದಬಹುದು ಮತ್ತು ಬಾಲ್ಕನಿಯಲ್ಲಿ ಕುಳಿತು ಮಜವಾಗಿ ಚಹಾ ಹೀರಬಹುದು. ಮನೆಗೆ ಯಾರಾದರೂ ಅತಿಥಿಗಳು ಬರುತ್ತಿದ್ದಲ್ಲಿ ಗೆಸ್ಟ್ ರೂಮಿನಲ್ಲಿ ಇದನ್ನು ಬೆಡ್ ಮಾಡಿಕೊಳ್ಳಿ. ಮೇಲೆ ಬೆಡ್‌ ಹಾಕಿ, ಹೊದಿಕೆ ಹಾಸಿ. ಅತಿಥಿಗಳಿಗೆ ಬೆಡ್‌ ಸಿದ್ಧ. ಇದನ್ನು ನೀವು ಚೇರಿನಂತೆ ಇಲ್ಲಿ ಬೆಡ್‌ ನಂತೆ ಬಳಸಿಕೊಳ್ಳಲು ಸಿದ್ಧರಿಲ್ಲದಿದ್ದಲ್ಲಿ ನಿಮ್ಮ ಕೋಣೆಯಲ್ಲಿ ಬೆಡ್‌ ಬಳಿ ಫುಟ್‌ ಸ್ಟೂಲ್ ‌ನಂತೆ ಇಡಿ.

ಎಕ್ಸ್ ಟೆಂಡೆಡ್ಟೇಬಲ್ ಮಜ

ಇದು ಮೂಲರೂಪದಲ್ಲಿ ಸೆಂಟ್ರಲ್ ಟೇಬಲ್ ನ ಹಾಗಿರುತ್ತದೆ. ಊಟದ ಸಮಯದಲ್ಲಿ ಇದನ್ನು ಎಕ್ಸ್ ಟೆಂಡ್‌ ಮಾಡಿ ಡೈನಿಂಗ್‌ ಟೇಬಲ್ ನಂತೆ ಬಳಸಬಹುದು. ಇದರ ಮೇಲೆ ಊಟದ ಎಲ್ಲ ಪಾತ್ರೆಗಳನ್ನಿಟ್ಟು ಮನೆಯವರೆಲ್ಲ ಏಕಕಾಲಕ್ಕೆ ಊಟ ಮಾಡುತ್ತ ಟಿ.ವಿ.ಯ ಆನಂದ ಪಡೆಯಬಹುದು.

ಸುಭಾಷಿಣಿ ಕುಲಕರ್ಣಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ