ನಗರ ಪ್ರದೇಶಗಳಲ್ಲಿ ಜಾಗದ ಕೊರತೆಯದ್ದೇ ಸಮಸ್ಯೆ. ಅಲ್ಲಿ ಬಹೂಪಯೋಗಿ ಪೀಠೋಪಕರಣಗಳು ಅತ್ಯುತ್ತಮ ಪರ್ಯಾಯವಾಗಿವೆ. ಇವು ಕಡಿಮೆ ಜಾಗದಲ್ಲಿ ಹೆಚ್ಚು ಅನುಕೂಲ ಮಾಡಿಕೊಡುತ್ತವೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಕಡಿಮೆಯಾಗುತ್ತಿರುವ ಜಾಗ ಬಹೂಪಯೋಗಿ ಪೀಠೋಪಕರಣಗಳನ್ನು ಖರೀದಿಸಲು ಅನಿವಾರ್ಯ ವಾತಾರಣ ಸೃಷ್ಟಿಸುತ್ತಿದೆ. ಇಂತಹ ಪೀಠೋಪಕರಣಗಳು ಅತ್ಯಾಕರ್ಷಕವಾಗಿರುವುದರ ಜೊತೆಗೆ ಗುಣಮಟ್ಟ ಕೂಡ ಚೆನ್ನಾಗಿರುತ್ತದೆ. ಬಹಳಷ್ಟು ಜನರಿಗೆ ಸೋಫಾ ಕಮ್ ಬೆಡ್ ಬಗೆಗಷ್ಟೇ ಗೊತ್ತು. ಇಂದು ಮಾರುಕಟ್ಟೆಯಲ್ಲಿ ಬಹು ಬಗೆಯ ಮಲ್ಟಿಪರ್ಪಸ್ ಪೀಠೋಪಕರಣಗಳು ಲಭ್ಯವಿವೆ.
ಮಕ್ಕಳಿಗೆ ಇಷ್ಟವಾಗುವಂಥ ಮಕ್ಕಳ ಕೋಣೆಗಾಗಿ ಬಂಕ್ ಬೆಡ್ ಉಪಯುಕ್ತ. ಇದರಲ್ಲಿ ಫಿಟ್ ಇನ್ ವಾರ್ಡ್ ರೋಬ್ ಗಳು ಲಭ್ಯವಿದ್ದು, ಅದರಲ್ಲಿ ನೀವು ಅವರ ಬಟ್ಟೆ ಮುಂತಾದವುಗಳನ್ನು ಇಡಬಹುದು. ಇದರ ಒಂದು ಬದಿಗೆ ಸ್ಟಡಿ ಟೇಬಲ್ ಕೂಡ ಅಳವಡಿಸಲ್ಪಟ್ಟಿರುತ್ತದೆ. ಅದನ್ನು ಬಳಸದೇ ಇದ್ದಾಗ ಅದನ್ನು ಸುಲಭವಾಗಿ ಮುಚ್ಚಿಡಬಹುದು. ನೋಡುವವರಿಗೆ ಈ ಬಂಕ್ ಬೆಡ್ ಇಷ್ಟು ಸುಲಭವಾಗಿ ಕಾರ್ಯನಿರ್ವಹಿಸಬಹುದು ಎಂಬುದು ಅರಿವಿಗೆ ಬರಲಾರದು. ಇದು ಮಾರುಕಟ್ಟೆಯಲ್ಲಿ ಹಲವು ವರ್ಣಗಳಲ್ಲಿ ದೊರೆಯುತ್ತದೆ. ನೀವು ನಿಮ್ಮ ಮಗುವಿನ ಆಸಕ್ತಿಗನುಗುಣವಾಗಿ ಅಥವಾ ಮಗುವಿನ ಕೋಣೆಯ ಗೋಡೆಗಳ ಬಣ್ಣಕ್ಕೆ ಹೊಂದುವಂತಹ ಬಂಕ್ ಬೆಡ್ ಖರೀದಿಸಬಹುದು.
ಹಗಲು ಸೋಫಾ ರಾತ್ರಿ ಬೆಡ್
ನಿಮ್ಮ ಪತಿಗೆ ಸೋಫಾ ಖರೀದಿಸಬೇಕಾಗಿದೆ ಹಾಗೂ ನಿಮಗೆ ದೀವಾನ್. ಏಕೆಂದರೆ ಸಾಮಾನುಗಳನ್ನು ಸುಲಭವಾಗಿ ಇಡಲು ಸಾಧ್ಯವಾಗಬೇಕು ಎಂದು. ಈಗ ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಈಗ ಈ ರೀತಿಯ ಸೋಫಾಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅದು ಹಗಲು ಹೊತ್ತಿನಲ್ಲಿ ಸೋಫಾ ಹಾಗೂ ರಾತ್ರಿ ಹೊತ್ತಿನಲ್ಲಿ ಒಬ್ಬ ವ್ಯಕ್ತಿಗೆ ಸಿಂಗಲ್ ಬೆಡ್ ಮತ್ತು ಡಬಲ್ ಬೆಡ್ ಆಗಿ ಪರಿವರ್ತಿಸಬಹುದು. ಇದರೊಳಗೆ ದೀವಾನ್ ನಲ್ಲಿ ಇಡುವಂತೆ ಸಾಮಾನುಗಳನ್ನು ಕೂಡ ಇಡಬಹುದಾಗಿದೆ. ಇದನ್ನು ನೀವು ಲಿವಿಂಗ್ ರೂಮ್ ನಲ್ಲಿ ಕೂಡ ಇಡಬಹುದಾಗಿದೆ.
ವಿಶಿಷ್ಟ ಬುಕ್ ಶೆಲ್ಫ್
ನಿಮಗೆ ಪುಸ್ತಕ ಓದುವ ಹವ್ಯಾಸವಿದೆ. ಆದರೆ ಪುಸ್ತಕಗಳನ್ನಿಡಲು ಹಾಗೂ ಓದಲು ಸರಿಯಾದ ಜಾಗವಿಲ್ಲ ಎಂಬ ಸಮಸ್ಯೆಯೆ? ಅದಕ್ಕಾಗಿ ವಿಶಿಷ್ಟವಾದ ಫರ್ನೀಚರ್ ವೊಂದನ್ನು ತಂದು ಬೆಡ್ ರೂಮ್ ನಲ್ಲೇಕೆ ಇಟ್ಟುಕೊಳ್ಳಬಾರದು? ಈ ಸ್ಲಿಮ್ ಆಗಿರುವ ಬುಕ್ ಶೆಲ್ಫ್ ನಲ್ಲಿ ಇನ್ ಬಿಲ್ಟ್ ಸ್ಟಡಿ ಟೇಬಲ್ ಅಂತೂ ಇದ್ದೇ ಇರುತ್ತೆ. ಅದನ್ನು ನೀವು ಯಾವಾಗ ಬೇಕಾದಾಗ ತೆರೆಯಬಹುದು, ಮುಚ್ಚಬಹುದು. ಅದರಲ್ಲಿ ಕಾಫಿ ಟೇಬಲ್ ಕೂಡ ಇರುತ್ತದೆ. ನಿಮಗೆ ಓದಲು ಬರೆಯಲು ಬೇಸರ ಎನಿಸಿದಾಗ ಅಲ್ಲಿಯೇ ಕುಳಿತು ನೆಮ್ಮದಿಯಿಂದ ಟೀ/ಕಾಫಿ ಹೀರಬಹುದು.
ನೀವು ಈ ಬುಕ್ ಶೆಲ್ಫ್ ನ್ನು ಕೆಲವ ವಸ್ತುಗಳನ್ನು ಅಲಂಕರಿಸಿಕೊಳ್ಳಲು ಕೂಡ ಬಳಸಿಕೊಳ್ಳಬಹುದು. ಬುಕ್ ಶೆಲ್ಫ್ ನ್ನು ಕಾರ್ನರ್ ಟೇಬಲ್ ನಂತೆ ಉಪಯೋಗಿಸಬಹುದು. ಇದರ ಮೇಲೆ ಲ್ಯಾಂಪ್ ನ ಜೊತೆ ಜೊತೆಗೆ ಫೋಟೊ ಫ್ರೇಮ್ ನಂತಹ ಹಗುರ ವಸ್ತುಗಳನ್ನು ಕೂಡ ಇಡಬಹುದು.
ಪ್ರತಿಷ್ಠೆ ಹೆಚ್ಚಿಸುವ ಟಿ.ವಿ. ಕ್ಯಾಬಿನೆಟ್