ಮೈಸೂರು ಸಂಸ್ಥಾನವನ್ನು ಆಳಿದ ಒಡೆಯರ್ ಸಂಸ್ಥಾನದಲ್ಲಿ ಚಾಮರಾಜ ಒಡೆಯರ್ ಎಂಬ ಹೆಸರಿನ ಹಲವು ರಾಜರಿದ್ದರೂ, ಶಿಕ್ಷಣ, ಕಲೆ ಮತ್ತು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡುವ ಮೂಲಕ ಆಧುನಿಕ ಮೈಸೂರಿನ ನಿರ್ಮಾತೃ ಎಂದೇ ಪ್ರಖ್ಯಾತರಾದ ಹತ್ತನೇ ಚಾಮರಾಜೇಂದ್ರ ಒಡೆಯರ್ (1881-1894) ಅವರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ

ವಿಜಯನಗರ ಸಾಮ್ರಾಜ್ಯದ ಅವಸಾನದ ನಂತರ, ಶ್ರೀರಂಗಪಟ್ಟಣದ ವಿಜಯನಗರ ಪ್ರತಿನಿಧಿಯಾಗಿದ್ದ ಶ್ರೀರಂಗರಾಯರ ಪತ್ನಿ ಅಲಮೇಲಮ್ಮನವರ ಬಳಿ ಇದ್ದ ಆಭರಣಗಳನ್ನು ಬಲವಂಅವಾಗಿ ಮೈಸೂರು ಸಂಸ್ಥಾನದ ಸೈನ್ಯ ಯತ್ನಿಸಿದಾಗ, ಒಡವೆಯನ್ನು ಕೊಡಲು ನಿರಾಕರಿಸಿದ್ದಲ್ಲದೇ, ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನಾ, ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂದು ಶಾಪ ನೀಡುತ್ತಾಳೆ. ಈ ಶಾಪದ ಹಿನ್ನಲೆಯೋ ಎನ್ನುವಂತೆ ಸುಮಾರು 400 ವರ್ಷಗಳ ಕಾಲ ಮೈಸೂರು ರಾಜರ ವಂಶದಲ್ಲಿ ಪ್ರತಿ ಎರಡು ತಲೆಮಾರಿಗೆ ಒಮ್ಮೆ ಮಾತ್ರ ಪುತ್ರ ಸಂತಾನವಾಗುತ್ತಿದ್ದು ಹಾಗಾಗಿ ಪ್ರತೀ ಎರಡು ಸಂತತಿಗೊಮ್ಮೆ ತಮ್ಮದೇ ಕುಟುಂಬದವರ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಸಂಪ್ರದಾಯವಿದೆ.

ಆದೇ ಪ್ರಕಾರದಂತೆ ಕೃಷ್ಣರಾಜ ಒಡೆಯರ್ III ಅವರಿಗೆ ಗಂಡು ಸಂತಾನ ಇಲ್ಲದಿದ್ದ ಕಾರಣ ತಮ್ಮ ಪುತ್ರಿ  ರಾಜಕುಮಾರಿ ಪುಟಮ್ಮಣಿ ದೇವಿ ಮತ್ತು ಬೆಟ್ಟದ-ಕೋಟೆ ಅರಸು ಶಾಖೆಯ ಸರ್ದಾರ್ ಚಿಕ್ಕ ಕೃಷ್ಣರಾಜ ಅರಸು ಅವರ ಮೂರನೇ ಮಗನಾಗಿ ಫೆಬ್ರವರಿ 22, 1863 ರಂದು ಜನಿಸಿದ್ದ ಶ್ರೀ ಜಾಮರಾಜೇಂದ್ರ ಅವರನ್ನು ಜೂನ್ 18,1865 ದತ್ತು ಮಗನಾಗಿ ಸ್ವೀಕರಿಸಿ, ಮುಂದೆ ಸೆಪ್ಟೆಂಬರ್ 23, 1868ರಂದು ಮೈಸೂರಿನ 23ನೇ ಮಹಾರಾಜರಾಗಿ ಪಟ್ಟಾಭಿಷೇಕವನ್ನು ಮಾಡಲಾಗುತ್ತದೆ.

ಹೀಗೆ 23ನೇ ಮೈಸೂರು ಅರಸರಾದರೂ 1831ರಲ್ಲಿ ಮೈಸೂರು ಆರಸರು ದುಂಚುವೆಚ್ಚಮಾಡಿ ಅಧಿಕಾರ ನಡೆಸುತ್ತಿದ್ದಾರೆ ಎಂಬ ಆರೋಪದಿಂದ ಬ್ರಿಟೀಷರು ಕೃಷ್ಣರಾಜ ಒಡೆಯರ್ III ಅವರಿಂದ ಅಧಿಕಾರವನ್ನು ಕಿತ್ತುಕೊಂಡು ನೇರವಾಗಿ ತಮ್ಮ ಅಧಿಕಾರಿಗಳ ಮೂಲಕ ಮೈಸೂರು ಸಂಸ್ಥಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರಿಂದ ಅವರ ಅಧಿಕಾರವನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಮೈಸೂರು ಸಂಸ್ಥಾನದ ಆಡಳಿತ ಹಕ್ಕನ್ನು ಹಿಂದುರಿಗಿಸಬೇಕೆಂದು ನಿರಂತರವಾಗಿ ಬ್ರೀಟೀಷರಿಗೆ ಪತ್ರ ಬರೆಯುತ್ತಿದ್ದ ಪರಿಣಾಮ 1881 ರಲ್ಲಿ, ಮೈಸೂರು ರಾಜಪ್ರಭುತ್ವ ರಾಜ್ಯವನ್ನು ಪುನರ್ರಚಿಸಿ ಒಡೆಯರ್ ರಾಜವಂಶಕ್ಕೆ ಅಧಿಕಾರವನ್ನು ಹಸ್ತಾಂತರ ಗೊಳಿಸಿದಾಗ, ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರು ಅಧಿಕೃತವಾಗಿ ಮೈಸೂರಿನ ಒಡೆಯರಾಗಿ ಆಡಳಿತದ ಜವಾಬ್ದಾರಿಯನ್ನು ವಹಿಸಿ ಕೊಳ್ಳುತ್ತಾರೆ

ಚಾಮರಾಜ ಒಡೆಯರು ಅಧಿಕಾರ ವಹಿಸಿಕೊಳ್ಳುತಿದ್ದಂತೆಯೇ ಬ್ರಿಟಿಷರು ತಮ್ಮ ವಶದಲ್ಲಿದ್ದ ಶ್ರೀರಂಗಪಟ್ಟಣವನ್ನು ಅವರಿಗೆ ಬಿಟ್ಟುಕೊಟ್ಟು ಬೆಂಗಳೂರಿನ ದಂಡು ಪ್ರದೇಶದ ಕಡೆ ತಮ್ಮ ವಲಸೆ ಹೋಗುತ್ತಾರೆ. ಹೀಗೆ ಅಧಿಕಾರ ತಮ್ಮ ಕೈವಶವಾಗುತ್ತಿದ್ದಂತೆಯೇ, ದೂರದೃಷ್ಟಿಯನ್ನು ಹೊಂದಿದ್ದ ಮಹಾರಾಜರು ದಿವಾನ್ ರಂಗಾಚಾರ್ಲು ಅವರೊಂದಿಗೆ ಸಮಾಲೋಚಿಸಿ ಆಡಳಿತದಲ್ಲಿ ಅನೇಕ ಸುಧಾರಣೆಗಳನ್ನು ತರಲು ಮುಂದಾಗಿ. ಭಾರತದ ದೇಶೀಯ ಸಂಸ್ಥಾನವೊಂದರಲ್ಲಿ ಪ್ರಪ್ರಥಮವಾಗಿ ಪ್ರಜಾಪ್ರತಿನಿಧಿ ಸಭೆಯನ್ನು ಆರಂಭಿಸುವ ಮೂಲಕ ಅಧಿಕಾರದ ವಿಕೇಂದ್ರೀಕರಣ ಗೊಳಿಸಿ ಪ್ರಜೆಗಳಿಂದ ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರ ಇರುವ ಪ್ರಜಾಪ್ರಭುತ್ವ ಶಾಸಕಾಂಗ ವ್ಯವಸ್ಥೆಯನ್ನು ಜಾರಿಗೆ ಗೊಳಿಸುತ್ತಾರೆ. ರಾಜಪ್ರಭುತ್ವದ ಹಿಡಿತದಲ್ಲಿದ್ದ ಭಾರತದಲ್ಲಿ ಪ್ರಜಾಪ್ರಭುತ್ವದ ಮುನ್ನುಡಿಯನ್ನು ಬರೆದ ಹೆಗ್ಗಳಿಕೆ ಚಾಮರಾಜೇಂದ್ರ ಒಡೆಯರಿಗೆ ಸಲ್ಲುತ್ತದೆ. 1883ರ ಅಕ್ಟೋಬರ್ ತಿಂಗಳಲ್ಲಿ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆ ಮೊಟ್ಟ ಮೊದಲ ಬಾರಿಗೆ ಸೇರಿದಾಗ, ಆ ಸಭೆಯಲ್ಲಿ ಒಟ್ಟು 144 ಮಂದಿ ಸದಸ್ಯರಿರುತಾರೆ. ಆ ಸಭೆಯಲ್ಲಿ ಪ್ರತಿ ವರ್ಷವೂ ದಸರಾ ಸಮಾರಂಭ ಕಾಲದಲ್ಲಿ ರಾಜ್ಯದ ಆಯವ್ಯಯವನ್ನು ಸಭೆಯ ಮುಂದೆ ಮಂಡಿಸಿ ಅದರ ಅಭಿಪ್ರಾಯವನ್ನು ಪಡೆಯುವ ಪದ್ಧತಿ ಜಾರಿಗೆ ತರುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ