ಬ್ರೆಸ್ಟ್ ಇಂಪ್ಲಾಂಟ್ ಒಂದು ಪ್ರಭಾವಶಾಲಿ ಹಾಗೂ ಸುರಕ್ಷಿತ ಶಸ್ತ್ರಚಿಕಿತ್ಸೆಯಾಗಿದೆ. ಲಕ್ಷಾಂತರ ಮಹಿಳೆಯರು ತಮ್ಮ ಸ್ತನದ ಗಾತ್ರವನ್ನು ಹೆಚ್ಚಿಸಿಕೊಳ್ಳಲು ಈ ತಂತ್ರಜ್ಞಾನದ ನೆರವು ಪಡೆದುಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಸ್ತನದ ಊತಕಗಳ ಹಿಂಭಾಗದಲ್ಲಿ ಕೊಯ್ದು ಇಂಪ್ಲಾಂಟ್ ಮಾಡಲಾಗುತ್ತದೆ. ಇದು ಸಾಮಾನ್ಯವಾಗಿ ಸಿಲಿಕಾನ್ ನಿಂದ ನಿರ್ಮಾಣವಾದುದಾಗಿರುತ್ತದೆ. ಇದರಿಂದ ಸ್ತನಗಳ ಆಕಾರ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗುತ್ತದೆ.
ಇದೊಂದು ಅತ್ಯಂತ ಸರಳ ಪ್ರಕ್ರಿಯೆಯಾಗಿದ್ದು, ಇದಕ್ಕೆ 12 ಗಂಟೆಯ ಸಮಯ ತಗುಲುತ್ತದೆ ಹಾಗೂ ಮಹಿಳೆ ಅದೇ ದಿನ ಆಸ್ಪತ್ರೆಯಿಂದ ಮನೆಗೆ ಹೋಗಬಹುದು.
ಸ್ತನ ಇಂಪ್ಲಾಂಟ್ ಯಾವುದರಿಂದ ಮಾಡಲಾಗುತ್ತದೆ?
ಸ್ತನದ ಇಂಪ್ಲಾಂಟ್ ಸಿಲಿಕಾನ್ ಅಥವಾ ಸೆಲೈನ್ ಹೀಗೆ 2 ಪ್ರಕಾರದ್ದಾಗಿರುತ್ತದೆ. ಇದರಲ್ಲಿ ಯಾವುದಾದರೂ ಒಂದು ಪ್ರಕ್ರಿಯೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಎರಡರಲ್ಲೂ ಸಿಲಿಕಾನ್ ನ ಆವರಣ ಇರುತ್ತದೆ. ಆದರೆ ಅವುಗಳ ಒಳಭಾಗದಲ್ಲಿ ಬೇರೆಬೇರೆ ಪ್ರಕಾರದ ವಸ್ತುಗಳನ್ನು ಭರ್ತಿ ಮಾಡಲಾಗುತ್ತದೆ.
ಸೆಲೈನ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಸೆಲೈನ್ ದ್ರಾವಣವನ್ನು ತುಂಬಲಾಗುತ್ತದೆ. ಆದರೆ ಸಿಲಿಕಾನ್ ಇಂಪ್ಲಾಂಟ್ ನಲ್ಲಿ ಮೊದಲೇ ಸಿಲಿಕಾನ್ ಜೆಲ್ ತುಂಬಿರಲಾಗಿರುತ್ತದೆ. ಅದು ಮಾನವನ ಕೊಬ್ಬನ್ನು ಹೋಲುವಂತಹ ಒಂದು ಬಗೆಯ ಗಾಢ ದ್ರವವಾಗಿರುತ್ತದೆ. ಹೆಚ್ಚಿನ ಮಹಿಳೆಯರು ಸಿಲಿಕಾನ್ ಇಂಪ್ಲಾಂಟ್ ನ್ನೇ ಇಷ್ಟಪಡುತ್ತಾರೆ. ಏಕೆಂದರೆ ಇದು ನೋಡಲು ಹಾಗೂ ಅನುಭೂತಿ ಪಡೆಯಲು ನೈಸರ್ಗಿಕ ಸ್ತನಗಳ ಊತಕಗಳಂತೆಯೇ ಇರುತ್ತದೆ.
ಈ ಪ್ರಕ್ರಿಯೆ ಏಕೆ?
ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಈ ಪ್ರಕ್ರಿಯೆಯನ್ನು ಅನುಸರಿಸಿದ್ದಾರೆ. ಅವರು ತಮ್ಮ ಮೂಲ ಸ್ತನದ ಗಾತ್ರದ ಬಗ್ಗೆ ಸಂತೃಪ್ತರಾಗಿರಲಿಲ್ಲ. ಅವುಗಳ ಗಾತ್ರ ಹೆಚ್ಚಿಸಿಕೊಳ್ಳಲು ಅವರು ಕಾತುರದಿಂದಿದ್ದರು.
ಗರ್ಭಾಸ್ಥೆಯ ಕಾರಣದಿಂದ ಸ್ತನಗಳ ಆಕಾರದಲ್ಲಿ ಉಂಟಾಗುವ ಬದಲಾವಣೆ (ಆಕಾರ ಕೆಟ್ಟು ಹೋಗಿರುವುದು, ಬಿಗುವು ಇಲ್ಲದೆ ಇರುವುದು)ಯನ್ನು ಸ್ತನ ಇಂಪ್ಲಾಂಟ್ ಮುಖಾಂತರ ಸರಿಪಡಿಸಬಹುದಾಗಿದೆ. ಎರಡೂ ಸ್ತನಗಳ ಆಕಾರದಲ್ಲಿ ಇದ್ದಿರಬಹುದಾದ ವ್ಯತ್ಯಾಸವನ್ನು ಈ ಪ್ರಕ್ರಿಯೆಯ ಮುಖಾಂತರ ಸರಿಪಡಿಸಬಹುದಾಗಿದೆ.
ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ ಕೆಲವು ಮಹಿಳೆಯರು ಮೆಸ್ಟೆಕ್ಟೋಮಿಯ ಬಳಿಕ ಸ್ತನ ಇಂಪ್ಲಾಂಟ್ ಮಾಡಿಸಿಕೊಳ್ಳುತ್ತಾರೆ.
ಎಷ್ಟು ಸಮಯ ತಗುಲುತ್ತದೆ? ಸ್ತನ ಇಂಪ್ಲಾಂಟ್ ಮಾಡಿಸಿಕೊಂಡ ಬಳಿಕ ಅದು ಸುಸ್ಥಿತಿಗೆ ಬರಲು ಎಷ್ಟು ಸಮಯ ತಗುಲುತ್ತದೆ?
ಯಾವ ಯಾವ ಸಂಗತಿಗಳ ಬಗ್ಗೆ ಗಮನ ಕೊಡಬೇಕಾಗುತ್ತದೆ? ಎಂಬೆಲ್ಲ ಪ್ರಶ್ನೆಗಳು ಏಳುವುದು ಸಹಜ.
ಮಹಿಳೆಯರ ವಯಸ್ಸು, ದೇಹದ ಗಾತ್ರ, ಇಂಪ್ಲಾಂಟ್ ಮಾಡುವ ಸ್ಥಳ (ಸ್ನಾಯುಗಳ ಮೇಲ್ಭಾಗ ಅಥವಾ ಕೆಳಭಾಗದಲ್ಲಿ) ಇವು ಮಹಿಳೆ ಶಸ್ತ್ರಚಿಕಿತ್ಸೆಯ ಬಳಿಕ ಸಾಮಾನ್ಯ ಸ್ಥಿತಿಗೆ ಬರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ.
ಸಾಮಾನ್ಯವಾಗಿ ಆರಂಭದ ದಿನಗಳಲ್ಲಿ ಹೆಚ್ಚು ತೊಂದರೆ ಇರಬಹುದು, ಆಗ ಊತ ಹಾಗೂ ನೋವು ಅನಿಸುತ್ತಿರುತ್ತದೆ. ಅಂತಹ ಸಂದರ್ಭಗಳಲ್ಲಿ ಮಹಿಳೆಯರಿಗೆ ಕಂಪ್ರೆನ್ಸಿಲ್ ಪಟ್ಟಿಗಳು ಅಥವಾ ಕೆಲವು ಮಹಿಳೆಯರಿಗೆ ಸರ್ಜಿಕಲ್ ಬ್ರಾ ಅಥವಾ ಎಸ್ ರಾಪ್ ನ ಅವಶ್ಯಕತೆ ಉಂಟಾಗಬಹುದು.
ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕೆಲವು ದಿನಗಳವರೆಗಾದರೂ ಮಹಿಳೆ ಭಾರಿ ತೂಕ ಎತ್ತುವುದಾಗಲಿ, ಹೆಚ್ಚು ವ್ಯಾಯಾಮ ಮಾಡುವುದಾಗಲಿ ಮಾಡಬಾರದು.
ಇಂಪ್ಲಾಂಟ್ ಪ್ರಕ್ರಿಯೆಗೊಳಪಟ್ಟ 4-6 ವಾರಗಳಲ್ಲಿ ಮಹಿಳೆ ಮೊದಲಿನ ಹಾಗೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದಾಗಿದೆ. ಆದರೆ ತೊಂದರೆಗಳು ಪರಿಪೂರ್ಣವಾಗಿ ಕಡಿಮೆಯಾಗುವವರೆಗೂ ವೈದ್ಯರ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಊಟ ತಿಂಡಿಗಳ ಬಗ್ಗೆ ಸಾಕಷ್ಟು ಗಮನಕೊಡಬೇಕು. ಗಾಯ ಪೂರ್ತಿಯಾಗಿ ಒಣಗುವತನಕ ಅದನ್ನು ಒದ್ದೆಯಾಗದಂತೆ ನೋಡಿಕೊಳ್ಳಬೇಕು.
ಸ್ತನ ಇಂಪ್ಲಾಂಟ್ ಕುರಿತಾದ ಕೆಲವು ಭ್ರಮೆಗಳು :
ಭ್ರಮೆ : ಸ್ತನ ಇಂಪ್ಲಾಂಟ್ ಪ್ರಕ್ರಿಯೆ ಅಸುರಕ್ಷಿತವಾಗಿದೆ.
ವಾಸ್ತವ : ಒಂದು ವೇಳೆ ತರಬೇತಿ ಪಡೆದ ಅನುಭವಿ ವೈದ್ಯರಿಂದ ಸ್ತನ ಇಂಪ್ಲಾಂಟ್ ಮಾಡಿಸಿಕೊಂಡರೆ, ಇದು ಪರಿಪೂರ್ಣ ಸುರಕ್ಷಿತ ಪ್ರಕ್ರಿಯೆಯಾಗಿದೆ. ಪ್ರಕ್ರಿಯೆಯ ದೀರ್ಘಕಾಲಿಕ ಯಶಸ್ಸಿಗಾಗಿ ಒಳ್ಳೆಯ ಗುಣಮಟ್ಟದ ಸ್ತನ ಇಂಪ್ಲಾಂಟ್‌ಮಾಡಬೇಕಾಗುತ್ತದೆ. ಅದಕ್ಕೆ ಅಂತಾರಾಷ್ಟ್ರೀಯ ಪ್ರತಿಷ್ಠಿತ ಸಂಸ್ಥೆಯೊಂದು ಮಾನ್ಯತೆ ನೀಡಿರಬೇಕಾಗುತ್ತದೆ. ಉದಾಹರಣೆಗೆ ಅಮೆರಿಕದ ಎಫ್‌ಡಿಎ.
ಭ್ರಮೆ : ಸಿಲಿಕಾನ್ ಸ್ತನದಿಂದ ಕ್ಯಾನ್ಸರ್ ಬರುತ್ತದೆ.
ವಾಸ್ತವ : ಸಿಲಿಕಾನ್ ಸ್ತನ ಇಂಪ್ಲಾಂಟ್ ಬಗ್ಗೆ ಸಾಕಷ್ಟು ಸಂಶೋಧನೆಗಳು ಆಗಿವೆ. ಅಮೆರಿಕದ ಎಫ್‌ಡಿಎಯ ಒಂದು ವರದಿಯ ಪ್ರಕಾರ, ಎಫ್‌ಡಿಎ ಅನುವೋದಿಸಲ್ಪಟ್ಟ ಸಿಲಿಕಾನ್ ಸ್ತನ ಇಂಪ್ಲಾಂಟ್ ನ ನಿರ್ದೇಶನಗಳನುಸಾರ ಉಪಯೋಗಿಸಲ್ಪಟ್ಟಿದ್ದರೆ, ಅದು ಸುರಕ್ಷಿತ ಹಾಗೂ ಪ್ರಭಾವಶಾಲಿಯಾಗಿದೆ. ಇಂಪ್ಲಾಂಟ್ ನ ಕಾರಣದಿಂದಾಗಿ ಈವರೆಗೆ ಕ್ಯಾನ್ಸರ್ ನ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ಹೀಗಾಗಿ ಬಹಳಷ್ಟು ಮಹಿಳೆಯರು ಈ ಪ್ರಕ್ರಿಯೆಯನ್ನು ಅನುಸರಿಸುತ್ತಿದ್ದಾರೆ.
ಭ್ರಮೆ : ಸ್ತನ ಇಂಪ್ಲಾಂಟ್ ಪ್ರಕ್ರಿಯೆಯಿಂದ ಸ್ತನ್ಯಪಾನ ಮಾಡಿಸಲು ತೊಂದರೆಯುಂಟಾಗುತ್ತದೆ.
ವಾಸ್ತವ : ಬಹಳಷ್ಟು ಮಹಿಳೆಯರು ಇಂಪ್ಲಾಂಟ್ ಮಾಡಿಸಿಕೊಂಡ ಬಳಿಕ ಯಶಸ್ವಿಯಾಗಿ ಹಾಲುಣಿಸಿದ್ದಾರೆ. ಏಕೆಂದರೆ ಸ್ತನದ ಊತಕಗಳು ಹಾಗೂ ಎದೆಯ ನಡುಭಾಗದಲ್ಲಿ ಇಂಪ್ಲಾಂಟ್ ಮಾಡಲಾಗುತ್ತದೆ. ಹೀಗಾಗಿ ಇದು ಸ್ತನದ ಊತಕಗಳು ಅಥವಾ ನಿಪ್ಲಸ್ (ಎಲ್ಲಿ ದುಗ್ಧನಾಳಗಳು ಇರುತ್ತವೆ) ಮೇಲೆ ಯಾವುದೇ ಪರಿಣಾಮ ಬೀರುದಿಲ್ಲ.
– ಡಾ. ಚಾರುಲತಾ
ಉನ್ನತ ವಕ್ಷಸ್ಥಲದ ಸಲುವಾಗಿ
ಸ್ತನಗಳು ಆಕರ್ಷಕವಾಗಿ ಕಾಣಬೇಕೆಂಬ ಆಕಾಂಕ್ಷೆ ಕೇವಲ ಸಿನಿಮಾ ತಾರೆಯರಿಗೆ ಮಾತ್ರವಲ್ಲ, ಉನ್ನತ ಹಾಗೂ ಮಧ್ಯಮ ವರ್ಗದ ಮಹಿಳೆಯರಿಗೂ ಉಂಟಾಗಿದೆ. ಈಗ ಪ್ರತಿಯೊಬ್ಬ ಮಹಿಳೆ ಸುಂದರಾಕೃತಿಯ ಸ್ತನ ಪಡೆಯಲು ಇಚ್ಛಿಸುತ್ತಾಳೆ. ಏಕೆಂದರೆ ಸೌಂದರ್ಯದ ಮಾನದಂಡದಲ್ಲಿ ಇವುಗಳ ಪಾತ್ರ ಬಹು ದೊಡ್ಡದು ಎಂದು ಭಾವಿಸಲಾಗುತ್ತದೆ. ಭಾರತದಲ್ಲೂ ಬ್ರೆಸ್ಟ್ ಇಂಪ್ಲಾಂಟ್ ಮಾಡಿಸಿಕೊಳ್ಳುವ ಮಹಿಳೆಯರ ಸಂಖ್ಯೆ ಆಶ್ಚರ್ಯಕರ ರೀತಿಯಲ್ಲಿ ಹೆಚ್ಚುತ್ತಿದೆ. ಹಾಗೆಂದೇ ಮಾಡೆಲ್ ಪೂನಂ ಪಾಂಡೆ ಮಾರ್ಚ್ 30 ರಂದು ಇಂದು ಹ್ಯಾಪಿ ಕ್ಲೀವೇಜ್ ಡೇ, ನಾನು ಇದನ್ನು ಹೇಗೆ ಆಚರಿಸಲಿ? ಎಂದು ಟ್ವೀಟ್ ಮಾಡಿದ್ದಳು.
ಪೂನಂಳ ಈ ಟ್ವೀಟ್ ಬಳಿಕ ಸುಂದರ ಕ್ಲೀವೇಜ್ ಪಡೆಯಲು ಮಹಿಳೆಯರಲ್ಲಿ ಅದೆಷ್ಟು ಜ್ವರ ಏರಿದೆ ಎನ್ನುವುದು ಗೊತ್ತಾಯಿತು. 30 ದಾಟಿದ ಮಹಿಳೆಯರಲ್ಲಿಯೇ ಇದರ ಕ್ರೇಜ್ ಹೆಚ್ಚಾಗಿದೆ. ಅದರಲ್ಲೂ ಗರ್ಭಾವವಸ್ಥೆ ಹಾಗೂ ಸ್ತನ್ಯಪಾನ ಮಾಡಿಸಿದ್ದರಿಂದಾಗಿ ಆಕಾರ ಕಳೆದುಕೊಂಡ ಸ್ತನಗಳಿಗೆ ಸರಿಯಾದ ರೂಪ ಕೊಡಲು ಇಚ್ಛಿಸುತ್ತಾರೆ.
ಕಿಶೋರಿಯರು ಹಾಗೂ ಕಾಲೇಜು ಹುಡುಗಿಯರು ಕೂಡ ತಮ್ಮ ಸ್ತನಗಳನ್ನು ಸುಂದರಗೊಳಿಸಲು ಇತ್ತ ಕಡೆ ಹೆಜ್ಜೆ ಹಾಕುತ್ತಿದ್ದಾರೆ. ಕೋಯಿನಾ ಮಿತ್ರಾ, ರಾಖಿ ಸಾವಂತ್, ಮಿನಿಷಾ ಲಾಂಬಾ, ಶರ್ಲಿನ್ ಚೋಪ್ರಾ, ಮಲ್ಲಿಕಾ ಶೆರಾವತ್ ರಂತಹ ಬಾಲಿವುಡ್ ರಾಣಿಯರು ತಮ್ಮ ಗ್ಲಾಮರ್ ಕಾಯ್ದುಕೊಂಡು ಹೋಗಲು ಬ್ರೆಸ್ಟ್ ಇಂಪ್ಲಾಂಟ್ ಮಾಡಿಸಿಕೊಂಡಿದ್ದಾರೆ.
ಸಾಕಷ್ಟು ಗಾಳಿ ಸುದ್ದಿಗಳು ಹಾಗೂ ಸರ್ಜರಿಯ ಅಪಾಯಗಳ ನಡುವೆಯೂ ಬ್ರೆಸ್ಟ್ ಇಂಪ್ಲಾಂಟ್ ಮಾಡಿಸಿಕೊಳ್ಳುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಅಂಕಿಅಂಶಗಳ ಮೇಲೆ ಕಣ್ಣು ಹರಿಸುವುದಾದರೆ, 2010-11ನೇ ಸಾಲಿನಲ್ಲಿ ಬ್ರೆಸ್ಟ್ ಇಂಪ್ಲಾಂಟ್ ಕ್ಷೇತ್ರದಲ್ಲಿ ಭಾರತ 7ನೇ ಸ್ಥಾನದಲ್ಲಿತ್ತು.
ಬ್ರೆಸ್ಟ್ ಸರ್ಜರಿಯ ಇತಿಹಾಸ
ಸುಂದರ ಸ್ತನಗಳನ್ನು ಪಡೆದುಕೊಳ್ಳಬೇಕೆಂಬ ಆಕಾಂಕ್ಷೆ ಇಂದು ನಿನ್ನೆಯದಲ್ಲ. ಜಗತ್ತಿನ ಮೊದಲ ಬ್ರೆಸ್ಟ್ ಇಂಪ್ಲಾಂಟ್ 1962ರಲ್ಲಿ ಅಮೆರಿಕದ ಟೆಕ್ಸಾಸ್ ನಲ್ಲಿ ಮಾಡಲಾಗಿತ್ತು. ಟಿಮಿಜಾ ಲಿಂಡ್ಸೆ ಬ್ರೆಸ್ಟ್ ಇಂಪ್ಲಾಂಟ್ ಮಾಡಿಸಿಕೊಂಡ ಪ್ರಥಮ ಮಹಿಳೆ. ಪ್ರ್ಯಾಂಕ್ ಗೆರಿ ಅವರು ಸಿಲಿಕಾನ್ ಬ್ರೆಸ್ಟ್ ಇಂಪ್ಲಾಂಟ್ ನ ಸಂಶೋಧಕರಾಗಿದ್ದಾರೆ.
1965ರಲ್ಲಿ ಫ್ರಾನ್ಸ್ ನ ಸರ್ಜನ್ ಡಾ. ಎಚ್.ಆರ್. ಏರಿಯನ್ ಬಲೂನ್ ನಂತೆ ಉಬ್ಬು ಸೆಲೈನ್ ಬ್ರೆಸ್ಟ್ ಇಂಪ್ಲಾಂಟ್ ನ್ನು ಕಂಡುಹಿಡಿದರು. ಭಾರತದಲ್ಲಿ 1972-73ರಲ್ಲಿ ಇದರ ಮೊದಲ ಶಸ್ತ್ರಚಿಕಿತ್ಸೆ ನಡೆಯಿತು. 1990ರ ದಶಕದಲ್ಲಿ ಸಿಲಿಕಾನ್ ಹಾಗೂ ಸೆಲೈನ್ ನ ಮಿಶ್ರಣವುಳ್ಳ ಜೆಲ್ ಇಂಪ್ಲಾಂಟ್ ನ್ನು ಕಂಡುಹಿಡಿಯಲಾಯಿತು. ಇಂದು ಬ್ರೆಟ್ ಇಂಪ್ಲಾಂಟ್ ಸರ್ಜರಿ ಜಗತ್ತಿನ ಅತ್ಯಂತ ಜನಪ್ರಿಯ ಶಸ್ತ್ರಚಿಕಿತ್ಸೆ ಎನಿಸಿಕೊಂಡಿದೆ.
ಕೆಲವು ತೊಂದರೆಗಳು
ಬ್ರೆಸ್ಟ್ ಇಂಪ್ಲಾಂಟ್ ಸರ್ಜರಿಯಿಂದ ಕೆಲವು ದುಷ್ಪರಿಣಾಮಗಳು ಹಾಗೂ ತೊಂದರೆಗಳು ಕೂಡ ಇವೆ.
ದಪ್ಪ ಹಾಗೂ ಉಬ್ಬಿದ ಭಾಗ ಮತ್ತಷ್ಟು ಹೆಚ್ಚಳವಾಗಬಹುದು. ಒಂದುವೇಳೆ ಅದು ನಿರಂತರವಾಗಿ ಹೆಚ್ಚುತ್ತ ಹೋದರೆ ವೈದ್ಯರನ್ನು ತಕ್ಷಣವೇ ಸಂಪರ್ಕಿಸಬೇಕು.
ಒಂದು ವೇಳೆ ಗಮನಕೊಡದೇ ಹೋದರೆ ಇಂಪ್ಲಾಂಟ್ ಮಾಡಿರುವುದು ಕೆಲವೇ ದಿನಗಳಲ್ಲಿ ಕೈಕೊಡಬಹುದು.
ಒಳಭಾಗದಲ್ಲಿ ರಕ್ತ ಜಮೆಗೊಳ್ಳಬಹುದು. ಅದರಿಂದ ನೋವು ಹಾಗೂ ಊತದ ಸಮಸ್ಯೆ ಉಂಟಾಗಬಹುದು.