ನಿಮ್ಮ ಕೈಗಳಿಗೆ ನೀವು ಸಂಪೂರ್ಣ ಗಮನ ಕೊಟ್ಟರೂ ಅವು ಸುಂದರವಾಗಿ ಕಾಣುತ್ತಿಲ್ಲವೇ? ಅವಕ್ಕೆ ಸರಿಯಾದ ಪೋಷಣೆಯ ಅಗತ್ಯವಿದೆ. ಈಗ ಚಳಿಗಾಲವಾದ್ದರಿಂದ ಕೈಗಳು ಪದೇ ಪದೇ ಶುಷ್ಕಗೊಳ್ಳುವುದು ಸ್ವಾಭಾವಿಕ. ಕೈಗಳಲ್ಲಿ ಕಡಿಮೆ ಆಯಿಲ್ ಗ್ಲ್ಯಾಂಡ್ಸ್ ಇರುವುದೇ ಇದಕ್ಕೆ ಕಾರಣ. ಬಟ್ಟೆಗಳು ಮತ್ತು ಪಾತ್ರೆಗಳನ್ನು ಸ್ವಚ್ಛಗೊಳಿಸಿ ಕೈಗಳ ಸ್ಥಿತಿ ಹಾಳಾಗಿರುತ್ತದೆ. ಕೈಗಳನ್ನು ನಿಯಮಿತವಾಗಿ ಎಕ್ಸ್ ಪಾಲಿಯೇಟ್ ಮತ್ತು ಮಾಯಿಶ್ಚರೈಸ್ ಮಾಡುತ್ತಿರಬೇಕು. ಕೈಗಳಿಗೆ ಹಚ್ಚು ಬಹಳಷ್ಟು ಪ್ಯಾಕ್ ಗಳನ್ನು ಮನೆಯಲ್ಲೂ ತಯಾರಿಸಬಹುದು.
ಲೈಮ್ ಸಾಫ್ಟ್ ನರ್
ದೊಡ್ಡ ಸ್ಪೂನ್ ನಿಂಬೆರಸ, 1 ಚಿಕ್ಕ ಸ್ಪೂನ್ ಸಕ್ಕರೆ ಮತ್ತು ಕೊಂಚ ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಕೈಗಳಿಗೆ ಹಚ್ಚಿ 5 ನಿಮಿಷ ಬಿಡಿ. ನಂತರ ಬಿಸಿ ನೀರಿನಿಂದ ತೊಳೆದು ಒರೆಸಿಕೊಳ್ಳಿ.
ಶುಗರ್ ಎಕ್ಸ್ ಪಾಲಿಯೇಟ್ ವೆಜಿಟೆಬಲ್/ಸನ್ ಫ್ಲವರ್/ಬೇಬಿ ಅಥವಾ ಆಲಿಲ್ ಆಯಿಲ್ ನ 2 ದೊಡ್ಡ ಚಮಚದೊಂದಿಗೆ 3 ದೊಡ್ಡ ಚಮಚ ಸಕ್ಕರೆ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಅದರಿಂದ ನಿಮ್ಮ ಕೈಗಳ ಮೇಲೆ 3-4 ನಿಮಿಷಗಳವರೆಗೆ ಉಜ್ಜುತ್ತಿರಿ. ನಂತರ ಬಿಸಿ ನೀರಿನಿಂದ ತೊಳೆದು ಒಣಗಿಸಿ.
ಹನಿ ಎಗ್ ಸಾಫ್ಟ್ ನರ್
ಒಂದು ಬೌಲ್ ನಲ್ಲಿ ಕೊಂಚ ಜೇನುತುಪ್ಪ, ಮೊಟ್ಟೆಯ ಬಿಳಿ ಭಾಗ, 1 ಚಮಚ ಗ್ಲಿಸರಿನ್ ಮತ್ತು 1 ಚಮಚ ಬಾರ್ಲಿ ಪೌಡರ್ ತೆಗೆದುಕೊಳ್ಳಿ. ಎಲ್ಲವನ್ನೂ ಚೆನ್ನಾಗಿ ಬೆರೆಸಿ ಕೈಗಳಿಗೆ ಹಚ್ಚಿ. ಕೆಲವು ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ.
ಟೊಮೇಟೊ ಲೈಮ್ ಸಾಫ್ಟ್ ನರ್
ನಿಮ್ಮ ಕೈಗಳು ಬಹಳ ಶುಷ್ಕವಾಗಿದ್ದರೆ 1 ಟೊಮೇಟೊ ಮತ್ತು 1 ನಿಂಬೆಯ ಜ್ಯೂಸ್ ತೆಗೆದು ಚೆನ್ನಾಗಿ ಕದಡಿಕೊಳ್ಳಿ. ಅದಕ್ಕೆ 2-3 ಚಮಚ ಗ್ಲಿಸರಿನ್ ಬೆರೆಸಿ. ಈ ಮಿಶ್ರಣವನ್ನು ಕೈಗಳಿಗೆ ಹಚ್ಚಿ ಮಸಾಜ್ ಮಾಡಿ. 4-5 ನಿಮಿಷಗಳ ನಂತರ ಬಿಸಿನೀರಿನಿಂದ ತೊಳೆಯಿರಿ.
ನೇಲ್ ಸಾಫ್ಟ್ ನರ್ ಆಲಿವ್ ಆಯಿಲ್ ನಿಂದ ಉಗುರುಗಳಿಗೆ ಮಸಾಜ್ ಮಾಡಿ. ನಂತರ ಬಿಸಿನೀರಿನಲ್ಲಿ ಅದ್ದಿ. ಇದರಿಂದ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಉಗುರೂ ಕೂಡ ಸ್ವಚ್ಛ ಮತ್ತು ಆರೋಗ್ಯವಾಗಿ ಇರುತ್ತವೆ.
ನರಿಶಿಂಗ್ ಕ್ರೀಮ್
3 ಚಮಚ ಗ್ಲಿಸರಿನ್ ಗೆ 2 ಸಣ್ಣ ಚಮಚ ಗುಲಾಬಿ ಜಲವನ್ನು ಸೇರಿಸಿ. ಅದನ್ನು ಬಾಟಲ್ ನಲ್ಲಿ ತುಂಬಿ ಫ್ರಿಜ್ ನಲ್ಲಿಡಿ. ಕೈಗಳು ಶುಷ್ಕವಾಗಿದೆ ಅನಿಸಿದಾಗೆಲ್ಲಾ ಅದನ್ನು ಕೈಗಳಿಗೆ ಹಚ್ಚಿ ಮಸಾಜ್ ಮಾಡಿ.
ಕ್ಯೂಟಿಕಲ್ ಸಾಫ್ಟ್ ನರ್
ಸ್ನಾನದ ನಂತರ, ಆಲಿಲ್ ಆಯಿಲ್ ನ್ನು ಬಿಸಿ ಮಾಡಿ ಕ್ಯೂಟಿಕಲ್ಸ್ ಮೇಲೆ ಹಚ್ಚಿ. ಕ್ಯೂಟಿಕಲ್ಸ್ ಮೇಲೆ ಮಸಾಜ್ ಮಾಡುತ್ತಾ ಬೆರಳಿನ ತುದಿಯಿಂದ ಅದನ್ನು ಹಿಂದೆ ತಳ್ಳಿ.
- ಎನ್. ಸುರೇಖಾ