ಇತ್ತೀಚೆಗೆ ಡೆಲ್ಲಿ ಪ್ರೆಸ್ ದೆಹಲಿ ಕಾರ್ಯಾಲಯದಲ್ಲಿ `ಗೃಹಶೋಭಾ’ದಿಂದ ಆಯೋಜಿಸಲ್ಪಟ್ಟ ಫೆಡರೇಶನ್ ಆಫ್ ಬ್ಯೂಟಿ ಅಂಡ್ ಎಕ್ಸ್ ಪರ್ಟ್ಸ್ ನ (ಫೇಬ್) ಕಾರ್ಯಕ್ರಮದಲ್ಲಿ ಆಫ್ಘಾನಿಸ್ತಾನ್ ನ ಹೇರ್ ಡಿಸೈನರ್ ಮತ್ತು ಬ್ಯೂಟಿ ಸ್ಪೆಶಲಿಸ್ಟ್ ರಜಿಯಾ ಸುಲ್ತಾನ್ ಮೆಂಬರ್ ಗಳಿಗೆ `ಹೇರ್ ಡೂ’ನ ಡೆಮಾನ್ ಸ್ಟ್ರೇಶನ್ ಮೂಲಕ ವಿಭಿನ್ನ ಸಂದರ್ಭಗಳಿಗೆ ಹೇರ್ ಡಿಸೈನ್ ಮಾಡುವುದನ್ನು ಕಲಿಸಿದರು ಮತ್ತು ಹೇರ್ ಡಿಸೈನ್ ಮಾಡುವಾಗ ಗಮನ ಇಡಬೇಕಾದ ವಿಷಯಗಳ ಬಗ್ಗೆ ತಿಳಿಸಿದರು.
ರಜಿಯಾ ಬ್ಯೂಟಿ ಜಗತ್ತಿನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರು ರಷ್ಯಾ, ಆಫ್ಘಾನಿಸ್ತಾನ್, ಇರಾನ್, ತಜಕಿಸ್ತಾನ್ ಇತ್ಯಾದಿ ದೇಶಗಳಲ್ಲಿ ಕೆಲಸ ಮಾಡಿದ್ದಾರೆ.
ರಜಿಯಾ ಸುಲ್ತಾನ್ ವಿಭಿನ್ನ ಸಂದರ್ಭಗಳಿಗೆ ಸಿದ್ಧಪಡಿಸಿದ ಹೇರ್ ಸ್ಟೈಲ್ ಗಳು ಕೆಳಕಂಡಂತಿವೆ :
ರಿಂಗ್ ಸೆರೆಮನಿ ಹೇರ್ ಸ್ಟೈಲ್
ಹುಡುಗಿಯರು ತಮ್ಮ ರಿಂಗ್ ಸೆರೆಮನಿ ಸಂದರ್ಭದಲ್ಲಿ ರಿಂಗ್ ಸೆರೆಮನಿ ಹೇರ್ ಸ್ಟೈಲ್ ಮಾಡಿಸಲು ಹೆಚ್ಚು ಇಷ್ಟಪಡುತ್ತಾರೆ. ಇದನ್ನು ಮಾಡಲು ಮೊದಲು ಕೂದಲಿನ ಮೇಲೆ ರೋಲರ್ ಹಚ್ಚಿ ಅವನ್ನು ರೋಲ್ ಮಾಡಬೇಕು. ನಂತರ ಟಾಪ್ ಆಫ್ ದಿ ಕ್ರೌನ್ ಏರಿಯಾ ಮತ್ತು ಇಯರ್ ಟು ಇಯರ್ ಕೂದಲನ್ನು ಬಿಟ್ಟು, ಕೆಳಗೆ ಉಳಿದಿರುವ ಎಲ್ಲ ಕೂದಲನ್ನು ಪೋನಿಟೇಲ್‌ಮಾಡಿಕೊಳ್ಳಬೇಕು.
ನಂತರ ಎರಡೂ ಕಡೆಯ ಇಯರ್ ಏರಿಯಾದ ಕೂದಲನ್ನು ಹಿಂದೆ ಮಾಡಿ ಪೋನಿಟೇಲ್ ಕೆಳಗೆ ಪಿನ್ ಅಪ್ ಮಾಡಿ. ಈಗ ಕ್ರೌನ್ ಏರಿಯಾದ ಕೂದಲನ್ನು ಹಿಡಿದು ಬ್ಯಾಕ್ ಕೂಂಬಿಂಗ್ ಮಾಡಿ ಕರ್ವ್ ಶೇಪ್ ನಲ್ಲಿ ಪಫ್ ಮಾಡಿ ಇನ್ ವಿಸಿಬಲ್ ಪಿನ್ ಗಳ ಸಹಾಯದಿಂದ ಪಿನ್ ಅಪ್ ಮಾಡುತ್ತಾ ಹೋಗಿ. ಈ ಜಡೆಗಳನ್ನು ಕೊಂಚ ಸಡಿಲವಾಗಿಯೇ ಬಿಡಿ ಮತ್ತು ಅವುಗಳಿಗೆ ಹಗುರವಾಗಿ ಒತ್ತಡ ಹಾಕಿ ಜಡೆ ಹೆಣೆಯಿರಿ. ಆಗಲೇ ಈ ಹೇರ್ ಡಿಸೈನ್ ಸುಂದರವಾಗಿರುತ್ತದೆ. ಇದನ್ನು ಎರಡೂ ಕಡೆಯಲ್ಲಿ ಮಾಡಿ. ಈಗ ಪೋನಿ ಟೇಲ್ ನಿಂದ ಸಣ್ಣ ಪುಟ್ಟ ಪದರಗಳನ್ನು ಪಡೆದು ಬ್ಯಾಕ್ ಕೂಂಬಿಂಗ್ ಮಾಡಿ ಅವನ್ನು ರೌಂಡ್ ಶೇಪ್ ನಲ್ಲಿ ಮೇಲಿನ ಕಡೆಗೆ ಪಿನ್ ಅಪ್ ಮಾಡುತ್ತಾ ಹೋಗಿ. ಹಿಂದೆ ಸ್ವಲ್ಪ ಕೂದಲನ್ನು ಬಿಟ್ಟು ಅದರ ಮೇಲೆ ಹೇರ್ ಆ್ಯಕ್ಸೆಸರೀಸ್ ನಿಂದ ಅಲಂಕರಿಸಲೂಬಹುದು. ಇದಕ್ಕೆ ನೀವು ಯಾವ ಹೆಸರನ್ನಾದರೂ ಕೊಡಬಹುದು.
ಫ್ಲವರ್ ತುರುಬು
ಈ ಕೇಶಾಲಂಕಾರ ಮಾಡಲು 2 ಪೋನಿಟೇಲ್ ಮಾಡಿಕೊಳ್ಳಬೇಕು. ಮೊದಲು ಇಯರ್ ಟು ಇಯರ್ ಕೂದಲನ್ನು ತೆಗೆದುಕೊಳ್ಳಿ. ಈಗ ಟಾಪ್ ಆಫ್ ದಿ ಕ್ರೌನ್ ನ ಕೂದಲನ್ನು ಬೇರೆ ಮಾಡಿ ಪೋನಿಟೇಲ್ ಮಾಡಿಕೊಳ್ಳಿ. ಕೆಳಗೆ ಉಳಿದ ಕೂದಲನ್ನು ತೆಗೆದುಕೊಂಡು ಎಡ ಕಿವಿಯ ಒಂದು ಕಡೆ ಪೋನಿಟೇಲ್ ಕಟ್ಟಿ. ಈಗ ಟಾಪ್ ಆಫ್ ದಿ ಕ್ರೌನ್ ಏರಿಯಾದ ಪೋನಿಟೇಲ್ ನ್ನು ಬ್ಯಾಕ್ ಕೂಂಬಿಂಗ್ ಮಾಡಿ ಮತ್ತು ಇದರಲ್ಲಿ ಸ್ಟಫ್ ತುಂಬಿಕೊಂಡು ಇಯರ್ ಟು ಇಯರ್ ರೌಂಡ್ ಶೇಪ್ ನಲ್ಲಿ ಅರ್ಧ ಜಡೆ ಮಾಡಿಕೊಳ್ಳಿ.
ನಂತರ ಕಿವಿಗಳ ಎರಡೂ ಕಡೆ ಹಗುರವಾಗಿ ತೂಗಿಬಿಟ್ಟ ಕೂದಲನ್ನು ತೆಗೆದುಕೊಂಡು ಬ್ಯಾಕ್ ಕೂಂಬಿಂಗ್ ಮಾಡಿ ಸ್ಟಫಿಂಗ್ ಮೇಲೆ ಪಿನ್ ಅಪ್ ಮಾಡುತ್ತಾ ಹೋಗಿ. ಈ ಕೂದಲಿನಿಂದ ಎರಡೂ ಕಡೆ ಒಂದೇ ರೀತಿಯಾದ ಡಿಸೈನ್ ತಯಾರಿಸಿ.
ಮುಂದುಗಡೆ ಇರುವ ಕೂದಲನ್ನು ಮಧ್ಯದಿಂದ 2 ಭಾಗಗಳಾಗಿ ಮಾಡಿ ಮತ್ತು ಜಿಗ್ ಜ್ಯಾಗ್ ಸ್ಟೈಲ್ ನಲ್ಲಿ ಸ್ಟಫಿಂಗ್ ಮೇಲೆ ಪಿನ್ ಅಪ್ ಮಾಡಿ. ಹಣೆಯ ಎರಡೂ ಕಡೆ ಉಳಿದಿರುವ ಕೂದಲನ್ನು ಬ್ಯಾಕ್ ಕೂಂಬಿಂಗ್ ಮಾಡಿ ಎರಡನ್ನೂ ಸುಂದರವಾಗಿ ಸೆಟ್ ಮಾಡಿ. ಎಡಕಿವಿಯ ಬಳಿ ಮಾಡಿದ್ದ ಪೋನಿಟೇಲ್ ನ ಕೂದಲನ್ನು 4 ಭಾಗಗಳನ್ನಾಗಿ ಮಾಡಿ ಮತ್ತು ಒಂದೊಂದಾಗಿ ಟ್ವಿಸ್ಟ್ ಮಾಡಿ ಮತ್ತು ರೌಂಡ್ ಶೇಪ್ ನಲ್ಲಿ ಹೂವಿನ ಆಕಾರ ಮಾಡಿ ಪಿನ್ ಅಪ್ ಮಾಡುತ್ತಾ ಹೋಗಿ. ಕೂದಲಿನ ನಾಲ್ಕೂ ಪದರಗಳನ್ನು ಪಿನ್ ಅಪ್ ಮಾಡುವುದರಿಂದ ಹಿಂದುಗಡೆ ಕೂದಲಿನ ಒಂದು ದೊಡ್ಡ ಹೂ ಸಿದ್ಧವಾಗುತ್ತದೆ. ರೌಂಡ್ ಶೇಪ್ ಕೊಟ್ಟು ಹೂವು ತಯಾರು ಮಾಡಿದ ಕೂದಲಿನ 4 ಭಾಗಗಳ ತುದಿಯನ್ನು ಮೇಲ್ಭಾಗದಲ್ಲಿ ಒಂದು ಕಡೆ ಸೇರಿಸಿ ಪಿನ್ ಅಪ್ ಮಾಡಿ. ಈಗ ಈ ಕೂದಲನ್ನು ಬ್ಯಾಕ್ ಕೂಂಬಿಂಗ್ ಮಾಡಿ ಫಂಕಿ ಲುಕ್ ಕೊಡಿ ಮತ್ತು ಇವನ್ನು ಪೊದೆಯಂತೆ ಮಾಡಿ ಹೂವಿನ ಮೇಲೆ ನಿಲ್ಲಿಸಿ. ಕೂದಲಿಗೆ ಸ್ಪ್ರೇ ಮಾಡಿ. ನಂತರ ಒಂದು ಕಾಗದದ ಮೇಲೆ ಸ್ಪಾರ್ಕ್ಸ್ ಇಟ್ಟು ಊದುತ್ತಾ ಕೂದಲಿನ ಮೇಲೆ ಹರಡುತ್ತಾ ಹೋಗಿ. ಎಲ್ಲಾ ಕೂದಲಿನ ಮೇಲೆ ಸ್ಪಾರ್ಕ್ಸ್ ಚಿಮ್ಮದಂತೆ ನೋಡಿಕೊಳ್ಳಿ.
– ಶರ್ಮಿಳಾ ಟ್ಯಾಗೋರ್
ಹೇರ್ ಸ್ಟೈಲ್ ಈ ಡಿಸೈನ್ ಸಿದ್ಧಪಡಿಸಲು ಮೊದಲು ಇಯರ್ ಟು ಇಯರ್ ಪಾರ್ಟಿಶನ್ ಮಾಡಿಕೊಂಡು ಕೂದಲನ್ನು ಕಿವಿಗಳ ಎರಡೂ ಕಡೆ ಬಿಟ್ಟು ಒಂದು ಪೋನಿಟೇಲ್ ಮಾಡಿ. ಪೋನಿಟೇಲ್ ನ್ನು ಬ್ಯಾಕ್ ಕೂಂಬಿಂಗ್ ಮಾಡಿ. ನಂತರ ಹೇರ್ ಬ್ರಶ್ ಸಹಾಯದಿಂದ ಹಗುರವಾಗಿ ಹರಡಿ. ನಂತರ ಇದೇ ಕೂದಲನ್ನು ಮತ್ತೆ ಬ್ಯಾಕ್ ಕೂಂಬಿಂಗ್ ಮಾಡಿ. ಫ್ರಂಟ್ ಮತ್ತು ಟಾಪ್ ಆಫ್ ದಿ ಕ್ರೌನ್ ಏರಿಯಾದ ಕೂದಲುಗಳನ್ನು ಸ್ಟಫಿಂಗ್ ಮಾಡಿ. ಈಗ ಐಬ್ರೋ ಪಾಯಿಂಟ್ ನಿಂದ ಕೂದಲನ್ನು ಪಾರ್ಟಿಶನ್ ಮಾಡಿಕೊಂಡು ಹಿಂದೆ ತೆಗೆದುಕೊಂಡು ಪಿನ್ ಅಪ್ ಮಾಡಿ. ಈಗ ಫ್ರಂಟ್ ನಲ್ಲಿರುವ ಕೂದಲನ್ನು ಕೈಗಳಿಂದ ಹಗುರವಾಗಿ ಬ್ಯಾಕ್ ಕೂಂಬಿಂಗ್ ಮಾಡಿ ಪಫ್ ಮೇಲೆ ಪಿನ್ ಅಪ್ ಮಾಡಿ. ಬ್ಯಾಕ್ ಕೂಂಬಿಂಗ್ ಮಾಡುವಾಗ ಕೂದಲಿನ ಬೇರುಗಳತ್ತ ಹೆಚ್ಚು ಮತ್ತು ತುದಿಗಳತ್ತ ಕಡಿಮೆ ಬ್ಯಾಕ್ ಕೂಂಬಿಂಗ್ ಮಾಡಿ. ಕುತ್ತಿಗೆಯ ಹಿಂದೆ ಉಳಿದಿರುವ ಸಣ್ಣ ಕೂದಲನ್ನು ಸ್ಪ್ರೇ ಸಹಾಯದಿಂದ ಸೆಟ್ ಮಾಡಿ. ಫ್ರಂಟ್ ನಲ್ಲಿರುವ ಕೂದಲಿಗೆ ಸೈಡ್ ಕೂಂಬಿಂಗ್ ಮಾಡಿ ಅವನ್ನು ತುರುಬಿಗೆ ಪಿನ್ ಅಪ್ ಮಾಡಿ.
ಉದ್ದ ಕೂದಲಿನ ಈಝಿ ತುರುಬು
ಈ ಡಿಸೈನ್ ಮಾಡಲು ಕೂದಲು ಒತ್ತಾಗಿ, ಉದ್ದವಾಗಿದ್ದಷ್ಟೂ ಒಳ್ಳೆಯದು. ಈ ಡಿಸೈನ್ ಮಾಡು ಮೊದಲು ಕೂದಲನ್ನು ಇಯರ್ ಟು ಇಯರ್ ಪಾರ್ಟಿಶನ್ ಮಾಡಿ, ಹಿಂದೆ ಪೋನಿಟೇಲ್ ಕಟ್ಟಿ. ಇದು ಬಹಳ ಎತ್ತರವಾಗಿ ಇರಬಾರದು. ಈಗ ಈ ಪೋನಿಟೇಲ್ ನ ಪದರಗಳನ್ನು ತೆಗೆದುಕೊಂಡು ಕೂದಲಿನ ಅರ್ಧ ಭಾಗದವರೆಗೆ ಬ್ಯಾಕ್ ಕೂಂಬಿಂಗ್ ಮಾಡುತ್ತಾ ಹೋಗಿ. ನೀವು ಬ್ಯಾಕ್ ಕೂಂಬಿಂಗ್ ಮಾಡಿರುವಷ್ಟು ಕೂದಲಿಗೆ ರಬ್ಬರ್ ಬ್ಯಾಂಡ್ ಹಾಕಿಡಿ. ತುದಿಯಲ್ಲಿ ಉಳಿದಿರುವ ಕೂದಲನ್ನೂ ಬ್ಯಾಕ್ ಕೂಂಬಿಂಗ್ ಮಾಡಿ. ಕೆಳಗೆ ಉಳಿದಿರುವ ಕೂದಲನ್ನು 2 ಭಾಗಗಳಾಗಿ ಮಾಡಿಕೊಂಡು ಮೇಲಿನತ್ತ ತರುತ್ತಾ ಪೋನಿಟೇಲ್ ನ ಆಧಾರದಲ್ಲಿ ಎರಡೂ ಕಡೆ ತಂದು ಪೋನಿಟೇಲ್ ಮೇಲೆ ಆಕರ್ಷಕವಾಗಿ ಒಂದು ಗಂಟು ಹಾಕಿ. ಈಗ ಇದೇ ಗಂಟಿನ ಮೇಲೆ ಎರಡನೇ ಮತ್ತು ಮೂರನೇ ಗಂಟನ್ನು ಹಾಕಿ. ಕೂದಲು ಬಹಳ ಉದ್ದವಾಗಿದ್ದರೆ 4-5 ಗಂಟುಗಳನ್ನೂ ಹಾಕಬಹುದು. ಪ್ರತಿ ಗಂಟನ್ನೂ ಸ್ಧಿರವಾಗಿಡಲು ಇನ್ ವಿಸಿಬಲ್ ಪಿನ್ ಗಳನ್ನು ಹಾಕಿ. ಗಂಟುಗಳು ಬಹಳ ಬಿಗಿಯಾಗಿ ಇರಬಾರದು. ಗಂಟುಗಳನ್ನು ಹಾಕಿದ ನಂತರ ಕೂದಲಿನ ಉಳಿದ ತುದಿಗಳಿಗೆ ಪರಸ್ಪರ ಗಂಟು ಹಾಕಿ ತುರುಬಿನ ಕೆಳಗೆ ಪಿನ್ ಅಪ್ ಮಾಡಿ. ಕೈಗಳಿಂದ ಹಗುರವಾಗಿ ಕಿವಿಯ ಒಂದು ಕಡೆಯ ಕೂದಲನ್ನು ತೆಗೆದುಕೊಂಡು ನಾಲ್ಕು ಪದರಗಳ ತುರುಬನ್ನು ಹೆಣೆಯುತ್ತಾ ಎಲ್ಲ ಕೂದಲನ್ನೂ ಅದರಲ್ಲಿ ತೆಗೆದುಕೊಳ್ಳಿ ಮತ್ತು ಈ ಗಂಟನ್ನು ಕ್ರೌನ್ ಏರಿಯಾ ಮೇಲೆ ಮಾಡಿದ ಕೂದಲಿನ ಗಂಟುಗಳ ಒಂದು ಸೈಡ್ ನಲ್ಲಿ ಪಿನ್ ಅಪ್ ಮಾಡಿ. ಇದರ ಮೇಲೆ ಹೇರ್ ಆ್ಯಕ್ಯೆಸರೀಸ್ ಗಳಿಂದ ಅಲಂಕರಿಸಿ.
– ವಿನುತಾ ರಾವ್