ಇತ್ತೀಚೆಗೆ ಡೆಲ್ಲಿ ಪ್ರೆಸ್‌ ದೆಹಲಿ ಕಾರ್ಯಾಲಯದಲ್ಲಿ `ಗೃಹಶೋಭಾ'ದಿಂದ ಆಯೋಜಿಸಲ್ಪಟ್ಟ ಫೆಡರೇಶನ್‌ ಆಫ್‌ ಬ್ಯೂಟಿ ಅಂಡ್ ಎಕ್ಸ್ ಪರ್ಟ್ಸ್ ನ (ಫೇಬ್‌) ಕಾರ್ಯಕ್ರಮದಲ್ಲಿ ಆಫ್ಘಾನಿಸ್ತಾನ್‌ ನ ಹೇರ್‌ ಡಿಸೈನರ್‌ ಮತ್ತು ಬ್ಯೂಟಿ ಸ್ಪೆಶಲಿಸ್ಟ್ ರಜಿಯಾ ಸುಲ್ತಾನ್ ಮೆಂಬರ್‌ ಗಳಿಗೆ `ಹೇರ್‌ ಡೂ'ನ  ಡೆಮಾನ್‌ ಸ್ಟ್ರೇಶನ್‌ ಮೂಲಕ ವಿಭಿನ್ನ ಸಂದರ್ಭಗಳಿಗೆ ಹೇರ್‌ ಡಿಸೈನ್‌ ಮಾಡುವುದನ್ನು ಕಲಿಸಿದರು ಮತ್ತು ಹೇರ್‌ ಡಿಸೈನ್‌ ಮಾಡುವಾಗ ಗಮನ ಇಡಬೇಕಾದ ವಿಷಯಗಳ ಬಗ್ಗೆ ತಿಳಿಸಿದರು.

ರಜಿಯಾ ಬ್ಯೂಟಿ ಜಗತ್ತಿನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರು ರಷ್ಯಾ, ಆಫ್ಘಾನಿಸ್ತಾನ್‌, ಇರಾನ್‌,  ತಜಕಿಸ್ತಾನ್‌ ಇತ್ಯಾದಿ ದೇಶಗಳಲ್ಲಿ ಕೆಲಸ ಮಾಡಿದ್ದಾರೆ.

ರಜಿಯಾ ಸುಲ್ತಾನ್‌ ವಿಭಿನ್ನ ಸಂದರ್ಭಗಳಿಗೆ ಸಿದ್ಧಪಡಿಸಿದ ಹೇರ್‌ ಸ್ಟೈಲ್ ‌ಗಳು ಕೆಳಕಂಡಂತಿವೆ :

ರಿಂಗ್ಸೆರೆಮನಿ ಹೇರ್ಸ್ಟೈಲ್

‌ಹುಡುಗಿಯರು ತಮ್ಮ ರಿಂಗ್‌ ಸೆರೆಮನಿ ಸಂದರ್ಭದಲ್ಲಿ ರಿಂಗ್‌ ಸೆರೆಮನಿ ಹೇರ್‌ ಸ್ಟೈಲ್ ಮಾಡಿಸಲು ಹೆಚ್ಚು ಇಷ್ಟಪಡುತ್ತಾರೆ. ಇದನ್ನು ಮಾಡಲು ಮೊದಲು ಕೂದಲಿನ ಮೇಲೆ ರೋಲರ್‌ ಹಚ್ಚಿ ಅವನ್ನು ರೋಲ್ ‌ಮಾಡಬೇಕು. ನಂತರ ಟಾಪ್‌ ಆಫ್‌ ದಿ ಕ್ರೌನ್ ಏರಿಯಾ ಮತ್ತು ಇಯರ್‌ ಟು ಇಯರ್‌ ಕೂದಲನ್ನು ಬಿಟ್ಟು, ಕೆಳಗೆ ಉಳಿದಿರುವ ಎಲ್ಲ ಕೂದಲನ್ನು ಪೋನಿಟೇಲ್‌ಮಾಡಿಕೊಳ್ಳಬೇಕು.

ನಂತರ ಎರಡೂ ಕಡೆಯ ಇಯರ್‌ ಏರಿಯಾದ ಕೂದಲನ್ನು ಹಿಂದೆ ಮಾಡಿ  ಪೋನಿಟೇಲ್ ‌ಕೆಳಗೆ ಪಿನ್‌ ಅಪ್‌ ಮಾಡಿ. ಈಗ ಕ್ರೌನ್ ಏರಿಯಾದ ಕೂದಲನ್ನು ಹಿಡಿದು ಬ್ಯಾಕ್‌ ಕೂಂಬಿಂಗ್‌ ಮಾಡಿ ಕರ್ವ್ ಶೇಪ್‌ ನಲ್ಲಿ ಪಫ್‌ ಮಾಡಿ ಇನ್‌ ವಿಸಿಬಲ್ ಪಿನ್‌ ಗಳ ಸಹಾಯದಿಂದ ಪಿನ್‌ ಅಪ್‌ ಮಾಡುತ್ತಾ ಹೋಗಿ. ಈ ಜಡೆಗಳನ್ನು ಕೊಂಚ ಸಡಿಲವಾಗಿಯೇ ಬಿಡಿ ಮತ್ತು ಅವುಗಳಿಗೆ ಹಗುರವಾಗಿ ಒತ್ತಡ ಹಾಕಿ ಜಡೆ ಹೆಣೆಯಿರಿ. ಆಗಲೇ ಈ ಹೇರ್‌ ಡಿಸೈನ್‌ ಸುಂದರವಾಗಿರುತ್ತದೆ. ಇದನ್ನು ಎರಡೂ ಕಡೆಯಲ್ಲಿ ಮಾಡಿ. ಈಗ ಪೋನಿ ಟೇಲ್ ‌ನಿಂದ ಸಣ್ಣ ಪುಟ್ಟ ಪದರಗಳನ್ನು ಪಡೆದು ಬ್ಯಾಕ್‌ ಕೂಂಬಿಂಗ್‌ ಮಾಡಿ ಅವನ್ನು ರೌಂಡ್‌ ಶೇಪ್‌ ನಲ್ಲಿ ಮೇಲಿನ ಕಡೆಗೆ ಪಿನ್‌ ಅಪ್‌ ಮಾಡುತ್ತಾ ಹೋಗಿ. ಹಿಂದೆ ಸ್ವಲ್ಪ ಕೂದಲನ್ನು ಬಿಟ್ಟು ಅದರ ಮೇಲೆ ಹೇರ್‌ ಆ್ಯಕ್ಸೆಸರೀಸ್‌ ನಿಂದ ಅಲಂಕರಿಸಲೂಬಹುದು. ಇದಕ್ಕೆ ನೀವು ಯಾವ ಹೆಸರನ್ನಾದರೂ ಕೊಡಬಹುದು.

ಫ್ಲವರ್ತುರುಬು

hairdesignke-2

ಈ ಕೇಶಾಲಂಕಾರ ಮಾಡಲು 2 ಪೋನಿಟೇಲ್ ‌ಮಾಡಿಕೊಳ್ಳಬೇಕು. ಮೊದಲು ಇಯರ್‌ ಟು ಇಯರ್‌ ಕೂದಲನ್ನು ತೆಗೆದುಕೊಳ್ಳಿ.  ಈಗ ಟಾಪ್‌ ಆಫ್‌ ದಿ ಕ್ರೌನ್‌ ನ ಕೂದಲನ್ನು ಬೇರೆ ಮಾಡಿ ಪೋನಿಟೇಲ್ ‌ಮಾಡಿಕೊಳ್ಳಿ. ಕೆಳಗೆ ಉಳಿದ ಕೂದಲನ್ನು ತೆಗೆದುಕೊಂಡು ಎಡ ಕಿವಿಯ ಒಂದು ಕಡೆ ಪೋನಿಟೇಲ್ ‌ಕಟ್ಟಿ. ಈಗ ಟಾಪ್‌ ಆಫ್‌ ದಿ ಕ್ರೌನ್‌ ಏರಿಯಾದ ಪೋನಿಟೇಲ್ ನ್ನು ಬ್ಯಾಕ್‌ ಕೂಂಬಿಂಗ್‌ ಮಾಡಿ ಮತ್ತು ಇದರಲ್ಲಿ ಸ್ಟಫ್‌ ತುಂಬಿಕೊಂಡು ಇಯರ್‌ ಟು ಇಯರ್‌ ರೌಂಡ್‌ ಶೇಪ್‌ ನಲ್ಲಿ ಅರ್ಧ ಜಡೆ ಮಾಡಿಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ