ಉರಿ ಬೇಸಿಗೆಯ ದಿನಗಳು ಬಂದಿವೆ. ನೀವು ಪಾರ್ಟಿಗೆ ಹೋಗಲು ಸಿದ್ಧರಾಗುತ್ತಿದ್ದೀರಿ. ಅವಸರಕ್ಕೆ ಯಾವುದೋ ಒಂದಿಷ್ಟು ಮೇಕಪ್‌ ತೀಡಿಕೊಳ್ಳಲು ಮನಸ್ಸಿಲ್ಲ. ಆದರೆ ಅದಕ್ಕಾಗಿ ಹೆಚ್ಚಿನ ಸಮಯ ಇಲ್ಲ. ಆದರೆ ಪಾರ್ಟಿಯಲ್ಲಿ ಎಲ್ಲರಿಗಿಂತ ವಿಭಿನ್ನವಾಗಿ ಕಾಣಿಸಬೇಕೆಂಬ ಆಸೆ ಇದೆ.

ಹೀಗಿರುವಾಗ ನೀವು ಹೆವಿ ಮೇಕಪ್‌ ಮಾಡಿಕೊಳ್ಳುವ ಬದಲು, ನಿಮ್ಮ ಕಂಗಳನ್ನೇ ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಿಬಿಡಿ. ಇಂದಿನ ಮಾರುಕಟ್ಟೆಯಲ್ಲಿ ಕಂಗಳನ್ನು ಆಕರ್ಷಕಗೊಳಿಸಲು ಎಷ್ಟೋ ಟ್ರೆಂಡಿ ಐ ಮೇಕಪ್‌ ಸಾಧನಗಳಿವೆ. ಕಣ್ಣುಗಳನ್ನು ಹೈಲೈಟ್ ಗೊಳಿಸುವುದಕ್ಕಾಗಿ ಕಲರ್ಸ್‌ ಸ್ಪಾರ್ಕ್‌, ನಕ್ಷತ್ರಗಳು, ಸ್ವರೊಸ್ಕಿ..... ಇತ್ಯಾದಿಗಳನ್ನು ಬಳಸಬಹುದು. ಇವುಗಳ ನೆರವಿನಿಂದ ಕಂಗಳಿಗೆ ಹೇಗೆ ಆಕರ್ಷಕ ಲುಕ್ಸ್ ಒದಗಿಸುವುದೆಂದು ತಿಳಿದುಕೊಳ್ಳೋಣ, ಬನ್ನಿ.

ಎಲ್ಲರಿಗಿಂತ ವಿಭಿನ್ನವಾಗಿ ಕಂಗೊಳಿಸಲು ವೆಪರ್ಡ್‌ ಹಾಗೂ ಕ್ಯಾಟ್‌ ಮೇಕಪ್‌ ನಿಂದ ಕಂಗಳಿಗೆ ಆಕರ್ಷಕ ಲುಕ್ಸ್ ಕೊಡಬಹುದು. ಈ ಮೇಕಪ್‌ ಬಹಳ ಬ್ಯೂಟಿಫುಲ್ ಮಾತ್ರವಲ್ಲ, ರಿಚ್‌ ಗ್ಲಾಮರಸ್‌ ಎನಿಸುತ್ತದೆ. ಇದರಿಂದ ನಿಮ್ಮ ಕಂಗಳು ಬೇರೆಯವರಿಗಿಂತ ಬಹಳ ವಿಭಿನ್ನವಾಗಿ ಕಂಗೊಳಿಸುತ್ತವೆ. ಈ ಮೇಕಪ್‌ ನಿಂದ ನಿಮ್ಮ ಕಂಗಳ ಮೇಲೆ ವೆಪರ್ಡ್‌ ಹಾಗೂ ಕ್ಯಾಟ್‌ ಸ್ಕಿನ್ನಿನಂಥ ಪ್ರಿಂಟ್ಸ್ ಮೂಡಿಬರುತ್ತವೆ. ಈ ಮೇಕಪ್‌ ನಲ್ಲಿ ಲಿಕ್ವಿಡ್‌ ಕಲರ್‌ ಹಾಗೂ ಒಂದೇ ಸಲ 2-3 ಬಣ್ಣಗಳನ್ನು ಬಳಸಬಹುದಾಗಿದೆ.

ಆಕರ್ಷಕ ಲುಕ್ಸ್ ನೀಡುವ ಕಂಗಳು ಎಷ್ಟೋ ಸಲ ಮೇಕಪ್‌ ಹೇಗಿರುತ್ತದೆ ಅಂದರೆ ಏನೋ ಖಾಲಿ ಖಾಲಿ ಅನಿಸುತ್ತದೆ, ಜೊತೆಗೆ ಬೆಟರ್‌ ಎಂಬ ಫೀಲಿಂಗ್‌ ಬರುತ್ತದೆ. ಇತ್ತೀಚೆಗಂತೂ ಮೇಕಪ್‌ ಹೀಗೆ ಖಾಲಿ ಆಗಿರುವಿಕೆಯೇ ದೊಡ್ಡ ಟ್ರೆಂಡ್‌ ಆಗಿಹೋಗಿದೆ. ಕಂಗಳಿಗೆ ಸ್ಮೋಕಿ ಹಾಗೂ ಕಾಜಲ್ ಲುಕ್ಸ್ ನೀಡುವುದಕ್ಕಾಗಿ ಬ್ಲ್ಯಾಕ್‌ ಐ ಲೈನರ್‌ ಬಳಸಬಹುದು. ಆದರೆ ಈಗ ಲೈಟ್‌ ಐ ಮೇಕಪ್ ಚಾಲ್ತಿಯಲ್ಲಿದೆ. ಇದರಲ್ಲಿ ಕಂಗಳ ಮೇಲೆ ಹಾಗೂ ಕೆಳಗೆ ಸಿಲ್ವರ್‌ ಮತ್ತು ಲೈಟ್‌ ಐ ಮೇಕಪ್‌ ಮಾಡಬಹುದು, ಇದರಿಂದ ಕಂಗಳ ಖಾಲಿತನ ಹಾಗೆಯೇ ಉಳಿಯುತ್ತದೆ ಹಾಗೂ ಕಂಗಳು ಇತರರಿಗಿಂತ ವಿಭಿನ್ನವಾಗಿ ಕಂಡುಬರುತ್ತವೆ.

ಡಿಫರೆಂಟ್ಕಲರ್ಫುಲ್ ಲುಕ್ಸ್

ಡ್ರಮ್ಯಾಟಿಕ್‌ ಐ ಮೇಕಪ್‌ ನಲ್ಲಿ ವಿಭಿನ್ನ ಬಗೆಯ ಬಣ್ಣಗಳನ್ನು ಬಳಸಲಾಗುತ್ತದೆ. ಐಬ್ರೋ ಹಾಗೂ ಕಣ್ಣುಗಳ ಅಕ್ಕಪಕ್ಕದಲ್ಲಿ ನಿಮ್ಮ ಡ್ರೆಸ್‌ ಗೆ ಹೊಂದುವಂಥ ಡ್ರಮ್ಯಾಟಿಕ್‌ ಮೇಕಪ್‌ ಮಾಡಬಹುದು.

ವಿಭಿನ್ನ ಲುಕ್ಸ್ ನೀಡುವ ಫೆದರ್ಸ್‌ ಇತ್ತೀಚೆಗೆ ಮೇಕಪ್‌ ನಲ್ಲೂ ಧಾರಾಳವಾಗಿ ಫೆದರ್ಸ್‌ ನ ಬಳಕೆ ಆಗುತ್ತಿರುವುದನ್ನು ಕಾಣಬಹುದು. ಮಾರುಕಟ್ಟೆಯಲ್ಲಿ ವಿಭಿನ್ನ ಸ್ಟೈಲ್ ನ ಫೆದರ್ಸ್‌ ಲಭ್ಯವಿವೆ, ಇವನ್ನು ನೀವು ಐ ಮೇಕಪ್‌ ಗಾಗಿ ಬಳಸಬಹುದು. ನೀವು ಇದರಲ್ಲಿ ವಿವಿಧ ಪಕ್ಷಿಗಳ (ನವಿಲಿನಿಂದ ಹದ್ದಿನವರೆಗೂ) ರೆಕ್ಕೆಪುಕ್ಕಗಳನ್ನು ಬಳಸಬಹುದು. ಮೊದಲು ಸೌಂದರ್ಯ ತಜ್ಞೆಯಿಂದ ಮಾಡಿಸಿ, ನಂತರ ನೀವು ರೂಢಿಸಿಕೊಳ್ಳಿ.

ಫ್ಯಾಂಟಸಿ ಅಯ್ಸ್

ಫ್ಯಾಂಟಸಿ ಮೇಕಪ್‌ ನ ಇಡೀ ಚಮತ್ಕಾರ ಕಲಾವಿದನ ಕ್ರಿಯೇಟಿವಿಟಿಯನ್ನು ಆದರಿಸಿದೆ. ಕಲಾವಿದನ ಕಲ್ಪನೆ ಎಷ್ಟು ವಿಸ್ತೃತವಾಗಿರುತ್ತದೋ, ಅಷ್ಟೇ ಸೊಗಸಾದ ಮೇಕಪ್‌ ನಿಮ್ಮ ಕಣ್ಣಿಗೇರುತ್ತದೆ. ಫ್ಯಾಂಟಸಿ ಮೇಕಪ್‌ ನಲ್ಲಿ ಕಣ್ಣುರೆಪ್ಪೆಗಳ ಮೇಲ್ಭಾಗದಲ್ಲಿ ವಿಭಿನ್ನ ಸ್ಟೈಲ್ ‌ನ ಪೇಂಟಿಂಗ್‌ ಮಾಡಲಾಗುತ್ತದೆ. ಇದರಲ್ಲಿ ಮರ, ಚಿಟ್ಟೆ, ಹೂ, ಹಕ್ಕಿ ಇತ್ಯಾದಿಗಳನ್ನು ಬಿಡಿಸಬಹುದು. ಇದಕ್ಕಾಗಿ ಬಗೆಬಗೆಯ ಬಣ್ಣ, ಕ್ರಿಸ್ಟಲ್, ಸ್ಯಾಟಿನ್‌, ಸ್ಪಾರ್ಕ್‌, ಗ್ಲಿಟರ್‌ ಗಳ ಬಳಕೆಯಾಗುತ್ತದೆ. ಕಂಗಳ ಈ ತರಹದ ಮೇಕಪ್‌ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಅಷ್ಟೇ ಪರಿಣಾಮಕಾರಿಯೂ ಆಗಿರುತ್ತದೆ, ಫ್ಯಾಂಟಸಿ ಐ ಮೇಕಪ್‌ ಗಾಗಿ ಸುಮಾರು 2-3 ಗಂಟೆಗಳ ಕಾಲಾವಧಿ ಅತ್ಯಗತ್ಯ. ಆದರೆ ಇದಕ್ಕಾಗಿ ಹೆಚ್ಚಿನ ಖರ್ಚೇನೂ ಆಗದು ಎಂಬುದೊಂದು ವಿಶೇಷ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ