ಕಳೆದ ವರ್ಷಗಳಲ್ಲಿ ಒಮೇಗಾ3ಯ ಬೇಡಿಕೆ ದಿನೇದಿನೇ ಹೆಚ್ಚುತ್ತಲೇ ಇದೆ. ಇದು ನಿಮ್ಮ ಮೆದುಳು, ಕಣ್ಣುಗಳು ಹಾಗೂ ಹೃದಯಕ್ಕೆ ಹೆಚ್ಚು ಲಾಭಕಾರಿ ಎಂದು ಹೇಳಲಾಗುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಕಂಡುಕೊಳ್ಳಲಾದ ಹೊಸ ವಿಷಯವೆಂದರೆ, ಒಮೇಗಾ3 ರಕ್ತಧಮನಿಗಳನ್ನು ಎಲ್ಡಿಎಲ್ ಕೊಲೆಸ್ಟ್ರಾಲ್ ನ ಹಾನಿಕಾರಕ ಪರಿಣಾಮವನ್ನು ತಪ್ಪಿಸಬಲ್ಲದಾಗಿದೆ.

ಒಮೇಗಾ3 ಎಲ್ಲೆಲ್ಲಿ ಲಭ್ಯ?

ಒಮೇಗಾ3 ಸಸ್ಯಾಹಾರಿ ಹಾಗೂ ಮಾಂಸಾಹಾರಿ ಎರಡೂ ಬಗೆಯ ಆಹಾರದಲ್ಲಿ ಲಭ್ಯವಿದೆ. ಸಸ್ಯಾಹಾರಿ ಫ್ಯಾಟಿ ಆ್ಯಸಿಡ್ಸ್ ನ್ನು ಅಲ್ಫಾ ಲೈನೋಲೆನಿಕ್‌ ಆ್ಯಸಿಡ್ಸ್ ಎಂದು ಗುರುತಿಸಲಾಗುತ್ತದೆ. ಇದು ಅಗಸೆ ಬೀಜ, ಅಖರೋಟು ಹಾಗೂ ಸೋಯಾಬೀನ್ಸ್ ಗಳಲ್ಲಿ ಹೇರಳವಾಗಿ ಸಿಗುತ್ತದೆ. ಇಷ್ಟು ಮಾತ್ರವಲ್ಲದೆ ಹಸಿರು ತರಕಾರಿ ಸೊಪ್ಪುಗಳಾದ ಪಾಲಕ್‌ ಸೊಪ್ಪು, ಹಸಿ ತರಕಾರಿಯ ಸಲಾಡ್‌ ಇತ್ಯಾದಿಗಳಲ್ಲೂ ಲಭ್ಯ. ಮಾಂಸಾಹಾರಿ ಪದಾರ್ಥಗಳಲ್ಲಿ ಒಮೇಗಾ3 ಮೀನಿನಲ್ಲಿ ಹೇರಳಲಾಗಿದೆ. ಆದರೆ ವಾಸ್ತವದಲ್ಲಿ ಸಸ್ಯಾಹಾರಿ ಮೂಲವಾದ ಆಹಾರ ಪದಾರ್ಥಗಳಲ್ಲಿರುವ ಒಮೇಗಾ3ಯನ್ನೇ ಸೇವಿಸಲು ವೈದ್ಯರು ಸೂಚಿಸುತ್ತಾರೆ. ಇದು ಮೀನೆಂದರೆ ಅಲರ್ಜಿ ಎಂದು ಭಾವಿಸುವವರಿಗೂ ಎಷ್ಟೋ ಲಾಭಕಾರಿ ವಿಷಯ ಎನಿಸಿದೆ.

ಒಮೇಗಾ3 ಎಂದರೆ ಆರೋಗ್ಯವರ್ಧಕ

ಒಮೇಗಾ3ಯನ್ನು ಆರೋಗ್ಯವರ್ಧಕ ಆಹಾರ ರೂಪದಲ್ಲಿ ಸೇವಿಸಲು ಸಲಹೆ ನೀಡಲಾಗುತ್ತದೆ. ಜನಪ್ರಿಯ ಬ್ಯೂಟಿಷನಿಸ್ಟ್ ಅಂಡ್ ಡಯೆಟಿಷಿಯನ್‌ ಕನ್ಸಲ್ಟೆಂಟ್‌ ಶಿಲ್ಪಾ ಜೋಶಿ ಹೇಳುವ ಪ್ರಕಾರ, ಸಮತೋಲನ ಆಹಾರಕ್ಕಾಗಿ ಒಮೇಗಾ3 ಅತ್ಯಗತ್ಯ ಘಟಕವಾಗಿದೆ. ಏಕೆಂದರೆ ಮಾನವ ದೇಹ ಒಮೇಗಾ3ಯನ್ನು ತಾನೇ ಉತ್ಪಾದಿಸಲಾಗದು. ಯಾರಿಗೆ ಕಾರ್ನರಿ ಹೃದ್ರೋಗವಿದೆಯೋ ಅಥವಾ ರೋಗ ಬರಲಿದೆಯೋ ಅಂಥವರು ಒಮೇಗಾ3ಯನ್ನು ತಮ್ಮ ಆಹಾರದಲ್ಲಿ ಬೆರೆಸಿಕೊಂಡು ದಿನನಿತ್ಯ ಸೇವಿಸಬೇಕೆಂದು ಸಲಹೆ ನೀಡಲಾಗುತ್ತದ. ಉತ್ತಮ ಆರೋಗ್ಯಕ್ಕಾಗಿ ಒಮೇಗಾ3 ಬೆರೆತ ಆಹಾರವನ್ನೇ ಸೇವಿಸಿ.

ಒಮೇಗಾ3ಯುಕ್ತ ನ್ಯೂಟ್ರಲೈಟ್ ಲಾಭಗಳು

ಒಮೇಗಾ3ಯುಕ್ತ ನ್ಯೂಟ್ರಲೈಟ್‌ ನ್ನು ಇಂದಿನ ಯುವಜನಾಂಗಕ್ಕೆಂದೇ ವಿಶೇಷವಾಗಿ ತಯಾರಿಸಲಾಗಿದೆ, ಏಕೆಂದರೆ ಇಂದಿನ ಪೀಳಿಗೆಗೆ ಆರೋಗ್ಯದ ಕಾಳಜಿ ಹೆಚ್ಚು. ಈ ಉತ್ಪನ್ನವನ್ನು ಹೇಗೆ ತಯಾರಿಸಲಾಗಿದೆ ಎಂದರೆ, ಇದು ಸೇವಿಸಲು ಬಲು ರುಚಿಕರ ಹೌದು ಹಾಗೂ ಆರೋಗ್ಯವರ್ಧಕ ಕೂಡ! ಜೈಡ್ಸ್ ವಿಲ್ ನೆಸ್‌ಲಿ.ನಿಂದ ತಯಾರಾದ ಈ ಉತ್ಪನ್ನ, ತನ್ನದೇ ಆದ ವಿಶಿಷ್ಟ ಪ್ರತ್ಯೇಕತೆ ಹೊಂದಿದೆ. ಜೈಡ್ಸ್ ವೆಲ್ ‌ನೆಸ್‌ ಹೆಲ್ತ್ ಕೇರ್‌ ಗಾಗಿ ಎಂದೇ ತನ್ನ ಕೆಲವು ಬ್ರ್ಯಾಂಡ್ಸ್ ಅಂದರೆ ಶುಗರ್‌ ಫ್ರೀ, ಆ್ಯಕ್ಟಿಲೈಫ್ ಹಾಗೂ ಎರ್‌ ಯೂಥ್‌ ನಿಂದ ಪ್ರಸಿದ್ಧವಾಗಿದೆ. ಒಮೇಗಾ3 ಜೊತೆ ನ್ಯೂಟ್ರಲೈಟ್‌ ಕೊಲೆಸ್ಟ್ರಾಲ್ ರಹಿತವಾಗಿದೆ ಹಾಗೂ ಟ್ರಾನ್ಸ್ ಫ್ಯಾಟ್‌ ನಿಂದಲೂ ಮುಕ್ತವಾಗಿದೆ. ಟ್ರಾನ್ಸ್ ಫ್ಯ್ಲಾಟ್‌ ಕಾರಣದಿಂದಲೇ ಕೊಲೆಸ್ಟ್ರಾಲ್ ಹಾಗೂ ಹೃದ್ರೋಗಗಳು ಹೆಚ್ಚುತ್ತವೆ. ಈ ಹೊಸ ನ್ಯೂಟ್ರಲೈಟ್‌ ನ ವೈಶಿಷ್ಟ್ಯ ಎಂದರೆ, ಇದು ಶುದ್ಧ ಸಸ್ಯಾಹಾರಿ ಒಮೇಗಾ3ಯಿಂದ ತಯಾರಾಗಿದೆ. ಇದು ಮೆದುಳು, ಹೃದಯ, ಕಣ್ಣುಗಳಿಗೆ ಲಾಭಪ್ರದ ಎಂದು ಸಾಬೀತಾಗಿದೆ. ಇದರ ಜೊತೆಯೇ ನ್ಯೂಟ್ರಲೈಟ್‌ ವಿಟಮಿನ್‌ ಎ, ಡಿ ಹಾಗೂ `ಈ’ಯುಕ್ತವಾಗಿದೆ. ಇದರ ಹೆಚ್ಚಿನ ರುಚಿಯನ್ನು ಸ್ಯಾಂಡ್‌ ವಿಚ್‌ ನಲ್ಲಿ ಪಡೆಯಬಹುದು, ಚಪಾತಿ ಪರೋಟ ತಯಾರಿಸುವಾಗಲೇ ಜೊತೆಗೆ ಸೇರಿಸಿಕೊಳ್ಳಬಹುದಾಗಿದೆ. ಜೊತೆಗೆ ಇದನ್ನು ನೀವು ಪಲ್ಯ ತಯಾರಿಸುವಾಗ ತರಕಾರಿಯನ್ನು ಬಾಡಿಸುವಾಗಲೇ ಬೆರೆಸಿಕೊಳ್ಳಬಹುದು. ಪಾವ್ ಭಾಜಿ, ಮಸಾಲೆ ದೋಸೆ, ಬಿರಿಯಾನಿ ಇತ್ಯಾದಿ ಅನೇಕ ವ್ಯಂಜನಗಳನ್ನು ತಯಾರಿಸುವಾಗ ಇದನ್ನು ಬೆರೆಸಿ ಅದನ್ನು ಮತ್ತಷ್ಟು ರುಚಿಕರ ಹಾಗೂ ಆರೋಗ್ಯಪೂರ್ಣ ಆಗಿಸಬಹುದು. ನ್ಯೂಟ್ರಲೈಟ್‌ ಒಮೇಗಾ3 ಏರ್‌ ಟೈಟ್ ಮುಚ್ಚಳಸಹಿತ ಆಕರ್ಷಕ 200 ಗ್ರಾಂ ಟಬ್‌ ಪ್ಯಾಕ್‌ ನಲ್ಲಿ ಬರುತ್ತದೆ ಹಾಗೂ ಇದು ಮೈಕ್ರೋವೇವ್ ‌ಪ್ರೂಫ್‌ ಕೂಡ ಆಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಚಿಂತೆಗಳನ್ನು ಗಮನದಲ್ಲಿರಿಸಿಕೊಂಡೇ ಹಾಗೂ ಊಟತಿಂಡಿಗಳ ಅಭ್ಯಾಸ ಗಮನಿಸಿಕೊಂಡೇ, ನ್ಯೂಟ್ರಲೈಟ್‌ ಒಮೇಗಾ3 ಒಂದು ಪರ್ಯಾಯ ಆಹಾರವಾಗಿದೆ, ಯಾರು ತಮ್ಮ ಆರೋಗ್ಯ ಹಾಗೂ ಹೃದಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವರೋ, ಸದಾ ಜಾಗೃತರಾಗಿರುವರೋ ಅವರಿಗೆ ಇದು ಹೆಚ್ಚು ಲಾಭಕಾರಿ! ಜೊತೆಗೆ ಆರೋಗ್ಯವರ್ಧಕ ಕೂಡ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ