ಮಾನ್ಸೂನ್‌ ನಲ್ಲಿ ಕೂದಲಿನಲ್ಲಿ ಡ್ಯಾಂಡ್ರಫ್‌ ಉಂಟಾಗುವುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ದೇಹದಿಂದ ಆಯಿಲ್ ‌ಮತ್ತು ಬೆವರು ಹೊರಬರುವುದರಿಂದ ಹೀಗಾಗುತ್ತದೆ. ಇದಕ್ಕೆ ಚಿಕಿತ್ಸೆ ಅಗತ್ಯ. ಅನೇಕ ಬಾರಿ ನೆತ್ತಿಯ ಚರ್ಮ ಆಯ್ಲಿಯಾಗಿರುತ್ತದೆ, ಆದರೆ ಶುಷ್ಕ ಹಾಗೂ ನಿರ್ಜೀವವಾಗಿರುತ್ತದೆ. ಏಕೆಂದರೆ ನೆತ್ತಿಯ ಚರ್ಮ ರಂಧ್ರಗಳು ಮುಚ್ಚಿರುತ್ತವೆ. ಅದರಿಂದ ನ್ಯಾಚುರಲ್ ಆಯಿಲ್ ‌ನ್ನು ಸರಿಯಾಗಿ ಹಂಚುವಿಕೆಗೆ ತೊಂದರೆಯಾಗುತ್ತದೆ.

ಆಯಿಲ್ ಥೆರಪಿ

ಸ್ಟಿಕಿ ಡ್ಯಾಂಡ್ರಫ್‌ ಆಗಿದ್ದಾಗ ಹಾಟ್‌ ಆಯಿಲ್ ‌ಥೆರಪಿ ಲಾಭಕಾರಿಯಾಗಿದೆ. ಇದರಲ್ಲಿ ಎಳ್ಳೆಣ್ಣೆ ಅಥವಾ ಆಲಿವ್ ‌ಆಯಿಲ್ ‌ನ್ನು ಬಿಸಿ ಮಾಡಿ ಹತ್ತಿಯ ಸಹಾಯದಿಂದ ಉಜ್ಜುತ್ತಾ ನೆತ್ತಿಯ ಮೇಲೆ ಹಚ್ಚಿ. ನಂತರ ಬಿಸಿನೀರಿನಲ್ಲಿ ಟವೆಲ್ ‌ಅದ್ದಿ ಹಿಂಡಿಕೊಂಡು ತಲೆಗೆ ಸುತ್ತಿ. 5 ನಿಮಿಷಗಳ ನಂತರ ಆ ಟವೆಲ್ ‌ನ್ನು ಮತ್ತೆ ಬಿಸಿ ನೀರಿನಲ್ಲಿ ಅದ್ದಿ ಮತ್ತು ತಲೆಗೆ ಸುತ್ತಿಕೊಳ್ಳಿ. ಹೀಗೆ 3-4 ಬಾರಿ ಮಾಡಿ. ಇದರಿಂದ ಕೂದಲು ಹಾಗೂ ನೆತ್ತಿ ಎಣ್ಣೆಯನ್ನು ಚೆನ್ನಾಗಿ ಹೀರಿಕೊಳ್ಳುತ್ತವೆ. ಆಯಿಲ್ ‌ನ್ನು ಕೂದಲಿನಲ್ಲಿ ಇಡೀ ರಾತ್ರಿ ಹಾಗೆಯೇ ಬಿಡಿ. ಬೆಳಗ್ಗೆ ನೆತ್ತಿಗೆ ಲೆಮನ್‌ ಜ್ಯೂಸ್‌ ಹಚ್ಚಿ ಮತ್ತು 20 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ.

ಶ್ಯಾಂಪೂ ಬೇಗ ಬೇಗನೆ ಹಚ್ಚಿ

ಮಾನ್ಸೂನ್‌ ನಲ್ಲಿ ಕೂದಲಿಗೆ ವಿಶೇಷವಾಗಿ ಅದು ಆಯ್ಲಿ ಆಗಿದ್ದಾಗ, ಬೇಗ ಬೇಗನೆ ಶ್ಯಾಂಪೂ ಹಚ್ಚಿ. ಮೈಲ್ಡ್ ಹರ್ಬಲ್ ಶ್ಯಾಂಪೂ ಉಪಯೋಗಿಸಿ. ನಂತರ ಶ್ಯಾಂಪೂ ಸಂಪೂರ್ಣವಾಗಿ ಹೋಗುವಂತೆ ಕೂದಲನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ.

ಮೆಹೆಂದಿ ಹಚ್ಚುವುದೂ ಅಗತ್ಯ

ಪ್ರತಿವಾರ ಕೂದಲಿಗೆ ಮೆಹೆಂದಿ ಹಚ್ಚುವುದು ಲಾಭಕರ. ಮೆಹೆಂದಿಯಲ್ಲಿ 4 ಚಮಚ ಲೆಮನ್‌ ಜ್ಯೂಸ್‌, ಸ್ವಲ್ಪ ಕಾಫಿ, 2 ಮೊಟ್ಟೆ, 1 ಚಮಚ ಮೆಂತ್ಯದ ಪುಡಿ ಮತ್ತು 1 ಚಮಚ ಟೀ ಡಿಕಾಕ್ಷನ್‌ ಸೇರಿಸಿ ಗಟ್ಟಿಯಾದ ಪೇಸ್ಟ್ ಮಾಡಿ. ಅದನ್ನು ಕೂದಲಿಗೆ ಹಚ್ಚಿ 1 ಗಂಟೆಯ ನಂತರ ಚೆನ್ನಾಗಿ ತೊಳೆಯಿರಿ. ಮೊಟ್ಟೆ ಬೆರೆಸಲು ಇಷ್ಟವಿಲ್ಲದಿದ್ದರೆ ಟೀ ಡಿಕಾಕ್ಷನ್‌ ಕೊಂಚ ಹೆಚ್ಚು ಸೇರಿಸಿ.

ಎಸೆನ್ಸಿಯಲ್ ಆಯಿಲ್ ಮಿ.ಲಿ. ಗುಲಾಬಿ ಜಲಕ್ಕೆ ರೋಸ್‌ ಮೆರಿ ಎಸೆನ್ಶಿಯನ್‌ ಆಯಿಲ್ ‌ನ 5 ಹನಿಗಳನ್ನು ಸೇರಿಸಿ ಚೆನ್ನಾಗಿ ಕುಲುಕಿ, ಮುಚ್ಚಿದ ಬಾಟಲ್ ನಲ್ಲಿಡಿ. ಶ್ಯಾಂಪೂ ಮಾಡಿದ ನಂತರ ಇದನ್ನು ನೆತ್ತಿಗೆ ಹಚ್ಚಿ. ಸ್ವಲ್ಪ ಹೊತ್ತಿನ ನಂತರ ತಲೆಯನ್ನು ತೊಳೆಯಿರಿ.

ಹೆಲ್ದಿ ಸ್ಕಾಲ್ಪ್

dandruf-ko-kahain

2 ಮುಷ್ಟಿಯಷ್ಟು ಬೇವಿನ ಎಲೆಗಳನ್ನು 4 ಕಪ್‌ಬಿಸಿ ನೀರಿನಲ್ಲಿ ಹಾಕಿ ಇಡೀ ರಾತ್ರಿ ಇಡಿ. ಬೆಳಗ್ಗೆ ಈ ನೀರಿನಿಂದ ಕೂದಲನ್ನು ತೊಳೆಯಿರಿ. ಇದರಿಂದ ನವೆ ದೂರವಾಗುವುದು. ನೆತ್ತಿಯೂ ಹೆಲ್ದಿ ಮತ್ತು ಇನ್ಛೆಕ್ಷನ್‌ ಫ್ರೀ ಆಗಿರುತ್ತದೆ. ಇದಲ್ಲದೆ ಬೇವಿನೆಲೆಯ ಪೇಸ್ಟ್ ಮಾಡಿಕೊಂಡು ನೆತ್ತಿಗೆ ಹಚ್ಚಿ. ಅರ್ಧ ಗಂಟೆಯ ನಂತರ ತೊಳೆಯಿರಿ.

ಪ್ರಾಕೃತಿಕ ಕಂಡೀಶನರ್

ರಿಚ್‌ ಕಂಡೀಶನರ್‌ ಜಾಗದಲ್ಲಿ ಟೀ ಮತ್ತು ಲೆಮನ್‌ ರಿನ್ಸ್ ಗಳಂತಹ ಹರ್ಬಲ್ ಹೇರ್‌ ರಿನ್ಸ್ ಚೆನ್ನಾಗಿರುತ್ತದೆ. ಇದಕ್ಕಾಗಿ ಉಪಯೋಗಿಸಿದ ಟೀ ಪುಡಿಯನ್ನು ಹೆಚ್ಚು ನೀರಿನಲ್ಲಿ ಮತ್ತೊಮ್ಮೆ ಕುದಿಸಿ ಮತ್ತು ತಣ್ಣಗಾಗಲು ಬಿಡಿ. ಅದಕ್ಕೆ ಲೆಮನ್‌ ಜ್ಯೂಸ್ ಸೇರಿಸಿ. ಶ್ಯಾಂಪೂ ಮಾಡಿದ ನಂತರ ಈ ಮಿಶ್ರಣವನ್ನು ಲಾಸ್ಟ್ ರಿನ್ಸ್ ರೀತಿಯಲ್ಲಿ ಉಪಯೋಗಿಸಿ. ಇದರಿಂದ ಕೂದಲಿನ ಅಂಟುವಿಕೆ ದೂರವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ