ಇಂದು ಮಾರುಕಟ್ಟೆಯಲ್ಲಿ ಅನೇಕ ವೆರೈಟಿ ಹೇರ್ ಕಲರ್ ಗಳು ಬಂದಿದ್ದು, ಅವುಗಳ ಮೂಲಕ ನಿಮ್ಮ ಕೂದಲನ್ನು ನಿಮ್ಮ ಡ್ರೆಸ್ ಗೆ ಮ್ಯಾಚ್ ಮಾಡಬಹುದು. ಫಂಕಿ ಹೇರ್ ಕಲರ್ ಎಂದು ಕರೆಯಲಾಗುವ ಇಂತಹ ಮ್ಯಾಚಿಂಗ್ ಹಾಗೂ ಡಿಫರೆಂಟ್ ಸ್ಟೈಲ್ ನಿಮ್ಮನ್ನು ಇತರರಿಂದ ಪ್ರತ್ಯೇಕವಾಗಿಸುತ್ತದೆ ಮತ್ತು ನೀವು ಗುಂಪಿನಲ್ಲೂ ಎದ್ದು ಕಾಣುತ್ತೀರಿ.
ಇಂಡೋಲಾ ಹೇರ್ ಕೇರ್ ಕಂಪನಿಯ ತಾಂತ್ರಿಕ ಸಲಹೆಗಾರ ಮನುಕಿರಣ್ ಹೀಗೆ ಹೇಳುತ್ತಾರೆ, “ಫಂಕಿ ಹೇರ್ ಕಲರ್ ನ್ನು ನಿಮ್ಮ ಲುಕ್ಸ್ ನಲ್ಲಿ ಹೊಸ ಬದಲಾವಣೆ ತರಲು ಮಾಡಲಾಗುತ್ತದೆ. ಇದು ಈಗಿನ ಅವಶ್ಯಕತೆಯೂ ಹೌದು. ಇದರಿಂದ ತಾಜಾ ಹಾಗೂ ಹೊಸ ಲುಕ್ಸ್ ಸಿಗುತ್ತದೆ.”
ಫಂಕಿ ಹೇರ್ ಕಲರಿಂಗ್ ವಿಧಾನ
ಕೂದಲಿಗೆ ಯಾವುದೇ ಬಣ್ಣ ಹಚ್ಚುವ ಮೊದಲು ಶ್ಯಾಂಪೂನಿಂದ ಚೆನ್ನಾಗಿ ತೊಳೆಯಿರಿ. ಕಂಡೀಶನರ್ ಹಚ್ಚಬೇಡಿ. ಕಲರ್ ಹಚ್ಚಲು ಕೂದಲನ್ನು ಸಣ್ಣ ಸಣ್ಣ ಭಾಗಗಳನ್ನಾಗಿ ಮಾಡಿ. ಈಗ ಬ್ರಶ್ ನಿಂದ ಕಿವಿಯ ಎರಡೂ ಬದಿಯ ಕೂದಲಿನ ಕೆಳಗಿನ ತುದಿಗಳಿಗೆ ಪ್ರೀ ವೈಟಿಂಗ್ ವರ್ಟಿಕ್ ಸ್ಟೈಲ್ ನಲ್ಲಿ ಮಾಡಿ. ನಂತರ ಪ್ರೀ ವೈಟಿಂಗ್ ಕೂದಲನ್ನು ಅಲ್ಯೂಮಿನಿಯಂ ಫಾಯಿಲ್ ಮೇಲಿಡಿ ಮತ್ತು ಇನ್ನೊಂದು ಅಲ್ಯೂಮಿನಿಯಂ ಫಾಯಿಲ್ ನ್ನು ಆ ಕೂದಲಿನ ಮೇಲಿಟ್ಟು ಅಂಟಿಸಿ. ಈಗ ಪ್ರೀ ವೈಟಿಂಗ್ ಬ್ಲೆಂಡರ್ ಮತ್ತು ಡೆವಲಪರ್ 1+1ರ ಅನುಪಾತದಲ್ಲಿ ತೆಗೆದುಕೊಳ್ಳಿ. ಅದನ್ನು ಕೂದಲಿಗೆ ಹಾಕಿ 5 ನಿಮಿಷ ಬಿಡಿ. ನಂತರ ಕೂದಲನ್ನು ತೊಳೆಯಿರಿ. ಅದಕ್ಕೆ ರೆಡ್ ಕಲರ್ ಹಚ್ಚಿ.
ಕೂದಲಿಗೆ ಹೇನಾ ಹಚ್ಚಿದ್ದರೆ 100ನೇ ನಂಬರ್ ಡೆಲಪರ್ ಸೇರಿಸಿ. ಇದು 1+2ನ ಅನುಪಾತದಲ್ಲಿ ಇರುತ್ತದೆ. ಇದರಲ್ಲಿ ಇನ್ ಡೋಲಾದ 5.35+100+20 ಡೆವಲಪರ್ ಬೆರೆಸಿ ಎಲ್ಲ ಕೂದಲಿಗೆ ಬ್ರಶ್ ನಿಂದ ಹಚ್ಚಿ. ಅದು ಕೂದಲಿನ ಮೇಲೆ 40 ನಿಮಿಷ ಇರಲಿ. ನಂತರ ಮೈಲ್ಡ್ ಶ್ಯಾಂಪೂನಿಂದ ಚೆನ್ನಾಗಿ ತೊಳೆಯಿರಿ. ಈಗ ಕೂದಲಿಗೆ ಕಂಡೀಶನರ್ ಹಚ್ಚಿ ಮತ್ತು ತಣ್ಣೀರಿನಿಂದ ತೊಳೆಯಿರಿ. ಆಮೇಲೆ ಕೂದಲನ್ನು ಒಣಗಿಸಿ ಅವನ್ನು ಸ್ಟ್ರೇಟನಿಂಗ್ ಮೆಶಿನ್ ನಿಂದ ಸೆಟ್ ಮಾಡಿ.
ಹೀಗೆಯೇ ಬೇರೆ ಬೇರೆ ಬಣ್ಣಗಳನ್ನೂ ಉಪಯೋಗಿಸಬಹುದು. ಅಂದರೆ ಒಂದೇ ರೀತಿಯ ಕೂದಲಿನಲ್ಲಿ ಡಬಲ್ ಕಲರ್ ಅಥವಾ ಡ್ರೆಸ್ ಗೆ ಮ್ಯಾಚ್ ಆಗುವ ಕಲರ್ ಉಪಯೋಗಿಸಬಹುದು. ಇದರಲ್ಲಿ ಮುಂದಿನ ಕೂದಲಿನಲ್ಲಿ ಬೇರೆ ಕಲರ್ ಮಾಡಿ ಮತ್ತು ಎರಡೂ ಕಿವಿಯ ಕಡೆಯ ಕೂದಲಿಗೆ ಬೇರೆ ಕಲರ್ ಮಾಡಿ. ಇದರಲ್ಲಿ ನೀವು ಗುಂಗುರು ಕೂದಲಿಗೂ ಬೇರೆ ಬಣ್ಣ ಹಾಕಬಹುದು.
– ಪ್ರಭಾವತಿ