ಹೈ ಬನ್, ನ್ಯೂಡ್ ಲಿಪ್ ಸ್ಟಿಕ್ ಹಾಗೂ ಸೈಡ್ ಕರ್ಲ್ಸ್..... 70ರ ದಶಕದಲ್ಲಿ ಹೆಚ್ಚು ಪ್ರಭಾವಶಾಲಿ ಎನಿಸಿದ್ದ ಈ ಫ್ಯಾಷನ್ ರೆಟ್ರೋ ಲುಕ್ಸ್ ಗಾಗಿ, ಈಗ ಮತ್ತೊಮ್ಮೆ ಫ್ಯಾಷನ್ ಪ್ರಪಂಚದಲ್ಲಿ ಪುನರಾವರ್ತನೆಯ ಗಾಳಿ ಬೀಸುತ್ತಿದೆ.
ಈ ಕುರಿತಾಗಿ ಇಂದಿನ ಆಧುನಿಕ ಸೌಂದರ್ಯ ತಜ್ಞೆಯರು ಹಾಗೂ ಫ್ಯಾಷನ್ ಸ್ಪೆಷಲಿಸ್ಟ್ ಹೇಳುವುದೆಂದರೆ, ``ಹಳೆಯ ಫ್ಯಾಷನ್ ಈಗ ಮತ್ತೊಮ್ಮೆ ಹೊಸ ರೂಪದಲ್ಲಿ ಮರಳಿ ಬಂದಿದೆ. ರೆಟ್ರೋ ಫ್ಯಾಷನ್ ಹಾಗೂ ಲುಕ್ಸ್ ಇದರಲ್ಲಿ ಪ್ರಮುಖ. ಇದನ್ನು ಬಳಸಿಕೊಳ್ಳಲು ಮೇಕಪ್ ಹಾಗೂ ಹೇರ್ ಸ್ಟೈಲ್ ಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ಥೀಮ್ ಅನುಸಾರ, ಹೈಬನ್ ಗೆ ದುಪಟ್ಟಾ ಹಾಗೂ ಕಂಗಳಿಗೆ ದಟ್ಟ ಕಾಡಿಗೆ ಹೆಚ್ಚು ಶೋಭಿಸುತ್ತದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಟೆಕ್ನಿಕ್ಸ್ ಗೊತ್ತಿರಬೇಕಷ್ಟೆ.''
ಮೇಕಪ್ ಗೆ ಮೊದಲು ನ್ಯೂಟ್ರಲೈಝರ್ ಬಳಸಿ :
ಮೇಕಪ್ ಗೆ ಮೊದಲು ಮುಖದ ಶುಚಿತ್ವ ಶುಭ್ರತೆಗಾಗಿ, ಹೆಚ್ಚಿನ ಮಹಿಳೆಯರು ಕ್ಲೆನ್ಸರ್ ಬಳಸುತ್ತಾರೆ. ಇದು ಆಯ್ಲಿ ಆದಕಾರಣ 1 ಅಥವಾ 2 ತಾಸಿನ ನಂತರ ಮೇಕಪ್ ಕೆಟ್ಟುಹೋಗಲು ಶುರುವಾಗುತ್ತದೆ. ಮೇಕಪ್ ನಲ್ಲಿ ಅಲ್ಲಲ್ಲಿ ಗೀಚುಗಳು ಕಾಣಿಸುತ್ತವೆ. ಆದ್ದರಿಂದ ಕ್ಲೆನ್ಸರ್ ಬಳಸುವ ಬದಲು ಮುಖವನ್ನು ಜೆಲ್ ಫೇಸ್ ವಾಶ್ ನಿಂದ ತೊಳೆಯಿರಿ, ನಂತರ ನ್ಯೂಟ್ರಲೈಝರ್ ಬಳಸಿರಿ.
ಚರ್ಮ ಡ್ರೈ ಅಥವಾ ಆಯ್ಲಿ ಆಗಿರಲಿ, ನ್ಯೂಟ್ರಲೈಝರ್ ಎಲ್ಲಾ ಬಗ್ಗೆಯ ಚರ್ಮಗಳನ್ನೂ 7-8 ತಾಸು ಸಮತೋಲನದಲ್ಲಿ ಇಡುತ್ತದೆ. ಇದರ ಬಳಕೆಯ ನಂತರ ಮೇಕಪ್ ಹಲವಾರು ತಾಸು ಹಾಗೆಯೇ ಉಳಿಯುತ್ತದೆ ಹಾಗೂ ಫ್ರೆಶ್ ನೆಸ್ ಸಹ ಹಾಗೆಯೇ ಚಿಮ್ಮುತ್ತಿರುತ್ತದೆ. ಆಯ್ಲಿ ತ್ವಚೆಗೆ ಕಾನ್ ಸನ್ ಟ್ರೇಟಿವ್ ನ್ಯೂಟ್ರಲೈಝರ್ ಹಾಗೂ ಶುಷ್ಕ ತ್ವಚೆಗೆ ಡೈಲ್ಯೂಟೆಡ್ ನ್ಯೂಟ್ರಲೈಝರ್‌ನ್ನೇ ಬಳಸಬೇಕು. ಇದನ್ನು ಬಳಸಿದ 10-15 ನಿಮಿಷಗಳ ನಂತರ ಮೇಕಪ್ ಮಾಡಿಕೊಳ್ಳಿ.
ಕಾಂಪ್ಲೆಕ್ಷನ್ ಕಡೆ ಗಮನವಿಡಿ
ಪ್ರತಿಯೊಬ್ಬರಿಗೂ ಒಂದೊಂದು ವಿಧದ ಬಣ್ಣ ಒಪ್ಪುತ್ತದೆ. ಹೀಗಾಗಿ ಮೇಕಪ್ ಮಾಡಿಕೊಳ್ಳುವ ಮುನ್ನ ನಿಮಗೆ ಯಾವ ತರಹದ ಶೇಡ್ ಚೆನ್ನಾಗಿ ಸೂಟ್ ಆಗುತ್ತದೆ ಎಂದು ಪರೀಕ್ಷಿಸಿ. ಮೊದಲು ರೆಟ್ರೋ ಮೇಕಪ್ ಮೂಲಕ ಪಿಂಕ್ ಟೋನ್ ಅಂದರೆ ಮೇಕಪ್ ನಲ್ಲಿ ಪಿಂಕ್ ಮತ್ತು ರೆಡ್ ಬಣ್ಣಗಳನ್ನು ಅಧಿಕ ಬಳಸಲಾಗುತ್ತಿತ್ತು. ಆದರೆ ಇಂದಿನ ಹೈ ಡೆಫ್ ನೇಷನ್ ಮೇಕಪ್ ನ ಕಾಲದಲ್ಲಿ ಯೆಲ್ಲೋ ಟೋನ್ ಹೆಚ್ಚು ಬಳಸಲ್ಪಡುತ್ತದೆ. ಯೆಲ್ಲೋ ಟೋನ್ ನಲ್ಲಿ ಸ್ಕಿನ್ ಮತ್ತು ಬ್ರೌನ್ ಬಣ್ಣಗಳು ಸುಲಭವಾಗಿ ಸಿಗುತ್ತವೆ.
ರೆಟ್ರೋ ಮೇಕಪ್ ಮಾಡುವ ಸಮಯದಲ್ಲಿ ಪಿಂಕ್ ಮತ್ತು ಯೆಲ್ಲೋ ಟೋನ್ ಬೆರೆಸಿ ಬಳಸಲಾಗುತ್ತದೆ. ಗೌರವರ್ಣದವರು ಯೆಲ್ಲೋ ಟೋನ್ ನ್ನು ಶೇ.70 ಹಾಗೂ ಪಿಂಕ್ ಟೋನ್ ನ್ನು ಶೇ.30 ರಷ್ಟು ಬಳಸಬೇಕು. ಅಧಿಕ ಪಿಂಕ್ ಟೋನಿನ ಬಳಕೆಯಿಂದ ಮೇಕಪ್ ಹೆವಿ ಎನಿಸಬಹುದು. ಶ್ಯಾಮಲ ವರ್ಣದವರು ಶೇ.70 ಪಿಂಕ್ ಹಾಗೂ ಶೇ.30ರಷ್ಟು ಯೆಲ್ಲೋ ಟೋನ್ ಬಳಸಬೇಕು. ಇದರಿಂದ ಅವರವರ ಫೀಚರ್ಸ್ ಹೆಚ್ಚು ಹೊಳೆಯುತ್ತದೆ. ಗೋಧಿ ಮೈಬಣ್ಣದವರು ಶೇ.40 ಯೆಲ್ಲೋ ಹಾಗೂ ಶೇ.60ರಷ್ಟು ಪಿಂಕ್‌ಟೋನ್ ಬಳಸಬೇಕು.