ಬನ್ನಿ, ನಿಮ್ಮ ಚರ್ಮಕ್ಕೆ ಇಂಥ ಸಮಸ್ಯೆಗಳಿದ್ದರೆ, ಅವನ್ನು ಸೂಕ್ತವಾಗಿ ಹೊಡೆದೋಡಿಸುವ ಉಪಾಯಗಳನ್ನು ತಿಳಿದುಕೊಳ್ಳೋಣ, ಇದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ.

tomato-halves-01

ಸುಲಭದ ಮನೆ ಮದ್ದು ಎಂದರೆ ಮನೆಯಲ್ಲೇ ಲಭ್ಯವಿರುವ ಮಾಗಿದ ಟೊಮೇಟೋಗಳನ್ನು ಮಸೆದು ಮುಖಕ್ಕೆ ಹಚ್ಚಿಕೊಳ್ಳಿ. ಹೀಗೆ ಹಚ್ಚಿಕೊಂಡ ನಂತರ 15 ನಿಮಿಷ ಹಾಗೇ ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

ananas-face--wash

ಆಯ್ಲಿ ಚರ್ಮಕ್ಕಾಗಿ 1 ಸಣ್ಣ ಬಟಾಣಿ ಕಾಳಿನಷ್ಟು ಕಾಚನ್ನು ಗುಲಾಬಿ ಜಲದಲ್ಲಿ ಹಾಗೂ ಶುಷ್ಕ ತ್ವಚೆಗಾಗಿ ಹಾಲಿನಲ್ಲಿ ನೆನೆಸಿಡಿ. ನಂತರ ಇದಕ್ಕೆ 1 ಚಮಚ ಚಂದನದಪುಡಿ ಬೆರೆಸಿ ಪೇಸ್ಟ್ ತಯಾರಿಸಿ, ಮುಖದ ಮೇಲೆ ಹಚ್ಚಬೇಕು. ಇದು ಚೆನ್ನಾಗಿ ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ.

ಅರ್ಧ ಚಮಚ ಕೋಲಿನ್‌ ಪೌಡರ್‌ ಗೆ ಒಂದು ಮೊಟ್ಟೆಯ ಬಿಳಿ ಭಾಗ ಬೆರೆಸಿಕೊಂಡು ಮುಖಕ್ಕೆ ನೀಟಾಗಿ ಹಚ್ಚಿಕೊಳ್ಳಿ. 15 ನಿಮಿಷಗಳ ನಂತರ ಒಣಗಿದಾಗ ತಣ್ಣೀರಿನಿಂದ ತೊಳೆಯಿರಿ.

1 ಚಮಚ ಕಡಲೆಹಿಟ್ಟಿಗೆ, 2 ಚಮಚ ಅನಾನಸ್‌ ಜೂಸ್‌, 1 ಚಮಚ ಎಳನೀರು ಬೆರೆಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಒಣಗಲು ಬಿಡಿ. 15 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

SOYA_BEAN

ಹಾಲು, ಮೊಸರು, ಬೇಳೆಕಾಳು, ಸೋಯಾಬೀನ್ಸ್, ಪನೀರ್‌ ಇತ್ಯಾದಿಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ದಿನ ಬಳಸುತ್ತಿರಬೇಕು. ಏಕೆಂದರೆ ವಿಟಮಿನ್‌ `ಈ' ಹಾಗೂ ಇವುಗಳ ಪ್ರೋಟೀನ್‌ ನಿಮಗೆ ಅತ್ಯಗತ್ಯ. ಆದಷ್ಟೂ ಕರಿದ ಹುರಿದ, ಖಾರದ ಮಸಾಲೆ ಖಾದ್ಯಗಳನ್ನು ದೂರವಿಡಿ.

ಪ್ರತಿದಿನ ಕನಿಷ್ಠ 10-12 ಗ್ಲಾಸ್‌ ತಣ್ಣೀರು ಕುಡಿಯಿರಿ, ಇದು ಬಲು ಲಾಭಕಾರಿ.

ಪ್ರತಿದಿನ 4-5 ಸಲ ಉತ್ತಮ ಸ್ಕಿನ್‌ ಟಾನಿಕ್‌ ಅಥವಾ ಆ್ಯಸ್ಟ್ರೆಜೆಂಟ್‌ ಲೋಶನ್‌ ನಿಂದ ನಿಮ್ಮ ಮುಖ ತೊಳೆಯಿರಿ, ಇದು ಹೆಚ್ಚಿನ ಕಾಂತಿ ತುಂಬುತ್ತದೆ.

cucumber-1

ಈ ಮೇಲಿನ ಉಪಾಯಗಳನ್ನು ಅನುಸರಿಸುವುದರಿಂದ, ಓಪನ್‌ ಪೋರ್ಸ್‌ ಸಮಸ್ಯೆ ದೂರವಾಗುತ್ತದೆ. ಜೊತೆಗೆ ಮುಖದಲ್ಲಿ ಉತ್ತಮ ಕಸುವು ತುಂಬಿಕೊಂಡು ಹೆಚ್ಚಿನ  ಕಾಂತಿಗೆ ಕಾರಣವಾಗುತ್ತದೆ.

- ಪ್ರಭಾವತಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ