ಇಂದಿನ ಫ್ಯಾಷನ್ನಿನ ಟ್ರೆಂಡ್‌ ಎಂದರೆ ಎಲ್ಲರೂ ಸ್ಟೈಲಿಶ್‌ ಆಗಿ ಕಂಡುಬರಲು ಬಯಸುತ್ತಾರೆ ಹಾಗೂ ಅವರ ಈ ಬಯಕೆಯನ್ನು ಪೂರೈಸಲೆಂದೇ ಫ್ಯಾಷನ್‌ ಡಿಸೈನರ್‌ ನಿಕ್ಕಿ ಮಹಾಜನ್‌ ಫ್ಯಾಷನ್ನಿನ ಕುರಿತಾಗಿ ಕೆಲವು ವಿಶೇಷ ಟಿಪ್ಸ್ ನೀಡಿದ್ದಾರೆ.

  1. ಫ್ಯಾಷನ್ಮಾರುಕಟ್ಟೆಯಲ್ಲಿ ಮುಖ್ಯತಃ ಯಾವ ವರ್ಗವನ್ನು ಗಮನದಲ್ಲಿರಿಸಿಕೊಂಡು ಹೊಸ ಫ್ಯಾಷನ್ರೂಪಿಸಲಾಗುತ್ತದೆ?

ಹೊಸ ಸಂಗ್ರಹದ ಆರಂಭದಲ್ಲಿ ಹಲವಾರು ಮಹತ್ವಪೂರ್ಣ ವಿಷಯಗಳ ಕಡೆ ಒಟ್ಟಿಗೆ ಗಮನ ಕೊಡಬೇಕಾಗುತ್ತದೆ. ಹೊಸ ಸಂಗ್ರಹವನ್ನು ಮಾರುಕಟ್ಟೆಯಲ್ಲಿ ಲಾಂಚ್‌ ಮಾಡುವ ಸಂದರ್ಭದಲ್ಲಿ ಮಾರ್ಕೆಟ್‌ ರಿಸರ್ಚ್‌, ಗ್ರಾಹಕರ ಅಭಿರುಚಿ, ಉತ್ಪಾದನೆ, ಉತ್ಪನ್ನಗಳ ಪ್ಲೇಸ್‌ ಮೆಂಟ್‌, ಬ್ರ್ಯಾಂಡಿಂಗ್‌ ಹಾಗೂ ಮಾರ್ಕೆಟ್‌ ನೀತಿ…. ಇತ್ಯಾದಿಗಳ ಕಡೆ ಗಮನಹರಿಸಬೇಕು.

  1. ಸಾಮಾನ್ಯ ವರ್ಗದವರಿಗೆ ಫ್ಯಾಷನ್ಎಂದರೆ ಎಷ್ಟು ಮುಖ್ಯ ಎನಿಸುತ್ತದೆ? ವಾಸ್ತವದಲ್ಲಿ ಅವರಿಗೆ ಫ್ಯಾಷನ್ಎಂದರೆ ಎಷ್ಟು ಅರ್ಥವಾಗುತ್ತದೆ?

ಡ್ರೆಸ್ಸಿಂಗ್‌ ಸೆನ್ಸ್ ಎಂಬುದು ಪ್ರತಿಯೊಬ್ಬರ ವೈಯಕ್ತಿಕ ವಿಚಾರ, ಅವರು ಶಿಕ್ಷಕರಾಗಿರಬಹುದು ಅಥವಾ ಫ್ಯಾಷನ್‌ ಡಿಸೈನರ್‌. ಇತ್ತೀಚೆಗೆ ಫ್ಯಾಷನ್‌ ಪತ್ರಿಕೆಗಳು, ಟಿ.ವಿ.ಯ ಹೆಚ್ಚುತ್ತಿರುವ ಪ್ರಭಾವ ಬದಲಾಗುತ್ತಿರುವ ಫ್ಯಾಷನ್ನಿನ ಕುರಿತು ಜನರನ್ನು ಹೆಚ್ಚು ಜಾಗೃತಗೊಳಿಸಿವೆ. ಇಂದಿನ ಯುವ ಜನತೆಯಂತೂ ತಮ್ಮ ನೆಚ್ಚಿನ ನಟ, ನಟಿಯರು ಸೆಲೆಬ್ರಿಟೀಸ್‌ ಗಳ ಜಾಡನ್ನು ಅನುಸರಿಸಲು ಬಹಳ ಇಷ್ಟಪಡುತ್ತಾರೆ, ಅವರ ಫ್ಯಾಷನ್‌ ನ್ನು ಆರಾಧಿಸುತ್ತಾರೆ. ಆದರೆ ಇನ್ನುಳಿದ ಕೆಲವರ ಅಭಿರುಚಿ ಬಟ್ಟೆ ಧರಿಸುವ ವಿಷಯದಲ್ಲಿ ಇವರಿಗಿಂತ ವಿಭಿನ್ನವಾಗಿರುತ್ತದೆ.

  1. ಅಂದರೆ ದುಬಾರಿ ಹಾಗೂ ಡಿಸೈನರ್ಡ್ರೆಸೆಸ್ಮಾತ್ರವೇ ಫ್ಯಾಷನೆಬಲ್ ಅನಿಸುತ್ತದೆಯೇ?

ಖಂಡಿತಾ ಹಾಗೇನಿಲ್ಲ. ವಾಸ್ತವದಲ್ಲಿ ಕೆಲವು ಜನಪ್ರಿಯ ಫ್ಯಾಷನ್‌ ಟ್ರೆಂಡ್‌ ಸಾಮಾನ್ಯ ಜನರ ಮಧ್ಯದಿಂದಲೇ ರೂಪುಗೊಳ್ಳುತ್ತದೆ ಎನ್ನಬಹುದು. ಇಂದಿನ ಕಾಲಘಟ್ಟದಲ್ಲಿ ಫ್ಯಾಷನ್‌ಅನಿವಾರ್ಯವಾಗಿದೆ. 70-80ರ ದಶಕದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಕೆಲಸ ಮಾಡುವ ಕಾರ್ಮಿಕರಿಂದ ಡೆನಿಮ್ ಜೀನ್ಸ್ ನ್ನು ಫ್ಯಾಷನೆಬಲ್ ಗೊಳಿಸಲಾಯಿತು. 80ರ ದಶಕದಲ್ಲಿ ಯಾವುದು ಗ್ರ್ಯಾಂಡ್‌ ಲುಕ್ಸ್ ಎಂದು ಟ್ರೆಂಡ್‌ಬದಲಾಯಿತೋ, ಅದು ಆ ಕಾಲದ ಯುವಜನತೆಯ ಕಾರಣ  ಹೆಚ್ಚು ಜನಪ್ರಿಯವಆಯಿತು.

  1. ಫ್ಯಾಷನ್ನಿನಲ್ಲಿ ಯಾವುದು ಹೆಚ್ಚು ಇಂಪಾರ್ಟೆಂಟ್‌….. ಸ್ಟೈಲ್ ಅಥವಾ ಕಂಫರ್ಟೆಬಿಲಿಟಿ?

ಫ್ಯಾಷನ್‌ ನಲ್ಲಿ ಸ್ಟೈಲ್ ಹಾಗೂ ಕಂಫರ್ಟೆಬಿಲಿಟಿ ಎರಡೂ ಮಹತ್ವಪೂರ್ಣವಾದುದೇ! ನಾವು ಯಾವುದಾದರೂ ಒಂದರ ಜೊತೆ ಕಾಂಪ್ರಮೈಸ್‌ ಮಾಡಿಕೊಳ್ಳಬೇಕೆಂದರೆ, ಅದು ಆ ಕ್ಷಣವೇ ಫ್ಯಾಷನ್‌ ಡಿಸಾಸ್ಟರ್‌ ಎನಿಸಬಹುದು.

  1. ಬದಲಾಗುತ್ತಿರುವ ಫ್ಯಾಷನ್ನಿನ ಟ್ರೆಂಡ್ಗೆ ತಕ್ಕಂತೆ ಕಡಿಮೆ ಬಜೆಟ್ನಲ್ಲಿ ನಮ್ಮನ್ನು ನಾವು ಅಪ್ಡೇಟ್ಆಗಿರಿಸಿಕೊಳ್ಳುವುದು ಹೇಗೆ?

ಕಡಿಮೆ ಬಜೆಟ್‌ ನಲ್ಲಿ ಫ್ಯಾಷನೆಬಲ್ ಡ್ರೆಸೆಸ್‌ ಗಳ ಬಹಳಷ್ಟು ಸ್ಟೋರ್ಸ್‌ ಲಭ್ಯವಿವೆ. ಇನ್ನೊಂದು ಪರ್ಯಾಯವೆಂದರೆ, ನಿಮ್ಮ ಬಟ್ಟೆಗಳನ್ನು ನೀವೇ ಖುದ್ದು ನಿಂತು ಹೊಲಿಸಬಹುದು. ಹಾಗೇ ನೋಡಿದರೆ ಸಾಂಪ್ರದಾಯಿಕ ಉಡುಗೆಗಳನ್ನು ನಮ್ಮದಾಗಿ ಉಳಿಸಿಕೊಳ್ಳುವುದೇ ಉತ್ತಮ. ಏಕೆಂದರೆ ಇವು ಎವರ್‌ ಗ್ರೀನ್‌ ಎನಿಸಿವೆ.

  1. ನಿಮ್ಮ ದೃಷ್ಟಿಯಲ್ಲಿ ಫ್ಯಾಷನ್ಗಾಗಿ ಖರ್ಚು ಮಾಡುವುದೆಂದರೆ ಹಣ ಹಾಳು ಮಾಡುವುದೆಂದೇ ಅಥವಾ ಬೇಡಿಕೆಯೇ?

ಫ್ಯಾಷನ್‌ ಎಂಬುದು ನಮ್ಮ ಜೀವನದ ಪ್ರತಿ ಹಂತದಲ್ಲೂ ಹೊಂದಿಕೊಂಡಿದೆ. ಉದಾ: ನಾವು ನಮ್ಮ ಆಫೀಸ್‌ ಉಪಯೋಗಕ್ಕೆಂದು ಒಂದು ಸಾಧಾರಣ ಸಲ್ವಾರ್‌ ಕಮೀಜ್‌ ಆರಿಸುವ ಸಮಯದಲ್ಲೂ ಫ್ಯಾಷನ್‌ ನ್ನು ಗಮನದಲ್ಲಿರಿಸಿಕೊಳ್ಳುತ್ತೇವೆ. ಫ್ಯಾಷನ್‌ ಗಾಗಿ ಖರ್ಚು ಮಾಡುವುದೆಂದರೆ ಹಣ ಹಾಳು ಮಾಡಿದಂತೆ ಎಂದು ಭಾವಿಸಬಾರದು, ಆದರೆ ನಮ್ಮ ಫ್ಯಾಷನ್‌ ಬಲು ದುಬಾರಿ ಅಥವಾ ಅತಿ ಎನಿಸುವ ಹಾಗಿರಬಾರದು.

  1. ನಾವು ಸ್ಟೈಲಿಶ್ಆಗಿ ಕಂಡುಬರಲು ನಮ್ಮ ಸೌಂದರ್ಯ ಅಷ್ಟೇ ಮುಖ್ಯ ಅಂತೀರಾ?

ಸೌಂದರ್ಯ ಎಂಬುದು ಆಂತರಿಕ ವಿಷಯ. ಕೇಳಲು ಇದು ತುಸು ವಿಚಿತ್ರ ಎನಿಸಬಹುದು, ಆದರೆ ನೀವು ಆತ್ಮವಿಶ್ವಾಸ ಹೊಂದಿದ್ದರೆ, ನಿಮ್ಮಲ್ಲಿ ಖಂಡಿತಾ ಫೀಲ್ ಗುಡ್‌ ಭಾವ ಎದ್ದು ತೋರುತ್ತದೆ. ಇದೇ ಖುಷಿ ನಿಮ್ಮ ಮುಖದಲ್ಲೂ ತೇಲುತ್ತದೆ. ಒಬ್ಬ ಯುವತಿಯ ಮೊಗದಲ್ಲಿ ಮೃದು ಮಂದಹಾಸ ಮತ್ತು ಆತ್ಮವಿಶ್ವಾಸ ತುಂಬಿದ್ದರೆ ಅದಕ್ಕಿಂತ ಹೆಚ್ಚಿನ ಸೌಂದರ್ಯ ಇನ್ನೇನು ಬೇಕು? ಈಗ ಫ್ಯಾಷನ್‌ ಕುರಿತಾದ ನಿಮ್ಮ ಎಲ್ಲಾ ಸಮಸ್ಯೆ, ಸಂದೇಹಗಳಿಗೂ ಬಲು ಸಹಜವಾಗಿ ಪರಿಹಾರ ಪಡೆಯಬಹುದು. ಬಟ್ಟೆಗಳ ಸಂರಕ್ಷಣೆ, ಬಾಳಿಕೆಯಿಂದ ಹಿಡಿದು ಅವುಗಳ ಫ್ಯಾಬ್ರಿಕ್‌, ಕಲರ್‌, ಲೇಟೆಸ್ಟ್ ಸ್ಟೈಲ್ ‌ಮತ್ತು ಫ್ಯಾಷನ್‌ ಕುರಿತಾದ ಯಾವುದೇ ಪ್ರಶ್ನೆಗಳನ್ನು ನಮಗೆ ಇಮೇಲ್ ‌ಮೂಲಕ ಕಳುಹಿಸಿಕೊಡಿ. ನಿಮ್ಮ ಈ ಪ್ರಶ್ನೆಗಳಿಗೆ ನಮ್ಮ ಫ್ಯಾಷನ್‌ ಎಕ್ಸ್ ಪರ್ಟ್ಸ್ ಹಾಗೂ ಡಿಸೈನರ್ಸ್‌ ಪರಿಹಾರ ಒದಗಿಸುತ್ತಾರೆ.

ಪ್ರತಿ ದಿನವನ್ನೂ ಫ್ಯಾಷನೆಬಲ್ ಆಗಿಸಿ ಮ್ಯೂಸಿಕ್‌ ನಿಂದ ಪ್ರೇರಣೆ ಪಡೆದ ಹೊಚ್ಚ ಹೊಸ ಆಟಮ್ ಕಲೆಕ್ಷನ್ನಿನ ಜೊತೆ, ಈಗ ಎಲ್ಲಾ ಸ್ಟೋರ್ಸ್‌ ಗಳಲ್ಲೂ ಲಭ್ಯ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ