ಈ ದಿನಗಳಲ್ಲಿ ಶರ್ಟ್ ಡ್ರೆಸ್ ಫ್ಯಾಷನ್ ಆಗಿದೆ. ಹಾಟ್ ಮತ್ತು ಎಲಿಗೆಂಟ್ ಲುಕ್ಸ್ ಪಡೆಯಲು ಈ ಡ್ರೆಸ್ ವಿಶೇಷವಾಗಿ ಸಹಾಯ ಮಾಡುತ್ತದೆ. ಮಾರ್ಕೆಟ್ ಕೂಡ ಈ ದಿನಗಳಲ್ಲಿ ಶರ್ಟ್ ಅಥವಾ ಟೀ ಶರ್ಟ್ ಗಳ ಹೊಸ ಫ್ಯಾಷನ್ ಟ್ರೆಂಡ್ ನೊಂದಿಗೆ ಅಲಂಕೃತವಾಗಿದೆ. ಈ ಡ್ರೆಸ್ ನೊಂದಿಗೆ ಸರಿಯಾದ ಆ್ಯಕ್ಸೆಸರೀಸ್ ಆಯ್ಕೆ ಮಾಡಿಕೊಂಡು ಇದರ ಆಕರ್ಷಣೆ ಇನ್ನಷ್ಟು ಹೆಚ್ಚಿಸಬಹುದು. ವಾರ್ಡ್ ರೋಬ್ ನ ಒಂದು ಮೂಲೆಯಲ್ಲಿದ್ದ ಶರ್ಟ್ ಡ್ರೆಸ್ ಬೇಸಿಗೆ ಶುರುವಾಗುತ್ತಲೆ ಮತ್ತೆ ಫ್ಯಾಷನ್ ಆಗಿಬಿಟ್ಟಿದೆ. ಕೆಲವು ಹುಡುಗಿಯರು ಇವನ್ನು ಜೀನ್ಸ್ ನೊಂದಿಗೆ ಧರಿಸಲು ಇಚ್ಛಿಸುತ್ತಾರೆ, ಕೆಲವರು ಲ್ಯಾಗಿಂಗ್ಸ್ ಜೊತೆ ಧರಿಸುತ್ತಾರೆ. ಒಳ್ಳೆಯ ಸಂಗತಿಯೆಂದರೆ ಇವನ್ನು ಧರಿಸಲು ಯಾವುದೇ ವಿಶೇಷ ಸಂದರ್ಭದ ಅಗತ್ಯವಿಲ್ಲ. ಇವನ್ನು ಎಲ್ಲಿಯೇ ಆದರೂ ಯಾವುದೇ ಸಂದರ್ಭದಲ್ಲಾದರೂ ಧರಿಸಬಹುದು. ಶರ್ಟ್ ಡ್ರೆಸ್ ಹೆಸರು ಕೇಳಲು ವಿಚಿತ್ರವೆನಿಸಿದರೂ ಇದರ ಲುಕ್ಸ್ ಬಹಳ ಅಟ್ರ್ಯಾಕ್ಟಿವ್ ಆಗಿದೆ. ಶರ್ಟ್ ಡ್ರೆಸ್ ನಲ್ಲಿ ಮೇಲಿನಿಂದ ಕೆಳಗೆ ಶರ್ಟ್ ನಲ್ಲಿರುವಂತೆ ಬಟನ್ ಗಳು ಇರುವುದರಿಂದ ಇದನ್ನು ಶರ್ಟ್ ಡ್ರೆಸ್ ಎಂದು ಹೇಳುತ್ತಾರೆ. ಇದು ವಿತೌಟ್ ಕಾಲರ್ ಅಥವಾ ವಿತ್ ಕಾಲರ್ ಇರುತ್ತದೆ. ಇದು ಥೈಸ್ ಮತ್ತು ನೀವರೆಗಿನ ಲೆಂತ್ ನಲ್ಲಿ ಲಭ್ಯವಿದೆ. ಇದರಲ್ಲಿ ಅಟ್ಯಾಚ್ ಮೆಂಟ್ ಗೆ ಬೆಲ್ಟ್ ಇರುತ್ತದೆ. ಇದರ ಸಾಫ್ಟ್ ಮೆಟೀರಿಯಲ್ ನಿಂದಾಗಿ ಬಹಳ ಕಂಫರ್ಟೆಬಲ್ ಆಗಿರುತ್ತದೆ. ಬೇಸಿಗೆಗೆ ಡಾರ್ಕ್ ಬ್ಲೂ, ಯೆಲ್ಲೋ, ಮ್ಯಾಂಗೋ, ಪಿಂಕ್, ಸ್ಯಾಲ್ಮನ್, ಓಲ್ಡ್ ರೋಸ್, ಮೈಲ್ಡ್ ಗ್ರೀನ್, ವೈಟ್ ನಂತಹ ಶೇಡ್ಸ್ ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಶೇಡ್ ಗಳು ಫ್ರೆಶ್, ವೈಟ್ ಮತ್ತು ಸ್ಮೂದಿಂಗ್ ಫೀಲಿಂಗ್ ಕೊಡುತ್ತವೆ. ಈ ಡ್ರೆಸ್ ನ್ನು ಧರಿಸಲು ಬಯಸಿದರೆ ಇದನ್ನು ಕಾಟನ್ ಅಥವಾ ಲೈಕ್ರಾ ಫ್ಯಾಬ್ರಿಕ್ ನಲ್ಲಿ ಸಾಲಿಡ್ ಕಲರ್ಸ್ ನಲ್ಲಿ ಟ್ರೈ ಮಾಡಿ.
ಇದರಲ್ಲಿ ಸಿಂಗಲ್ ಕಲರ್ ನೊಂದಿಗೆ ಕಾಂಟ್ರಾಸ್ಟ್ ಕಲರ್ ನ ಪ್ರಿಂಟಿಂಗ್ ಕೂಡ ಮಾಡಬಹುದು. ಫ್ಲೋರ್ ಪ್ರಿಂಟ್ಸ್, ಚೆಕ್ಸ್ ನೊಂದಿಗೆ ಪ್ಲೇನ್ ಡಿಸೈನ್ ನಲ್ಲೂ ಇದು ಸಿಗುತ್ತದೆ. ಶರ್ಟ್ ಡ್ರೆಸಿಸ್ ಅನೇಕ ರೀತಿಯ ಫ್ಯಾಬ್ರಿಕ್ ಗಳಲ್ಲಿ ಸಿಗುತ್ತವೆ. ಆದರೂ ಕಾಟನ್ ಮತ್ತು ಸಿಲ್ಕ್ ನಲ್ಲಿ ಹೆಚ್ಚು ಇಷ್ಟಪಡಲಾಗುತ್ತದೆ.
ರಾಶಿ ರಾಶಿ ಡಿಸೈನ್ಗಳು
ಇದರಲ್ಲಿ ಅನೇಕ ರೀತಿಯ ಡಿಸೈನ್ ಗಳು ಬರುತ್ತವೆ. ಆದರೆ ಬೆಲ್ಟ್ ಇರುವ ಶರ್ಟ್ ಡ್ರೆಸ್ ಬೇಸಿಗೆಯಲ್ಲಿ ಬಹಳ ಇಷ್ಟಪಡಲಾಗುತ್ತದೆ. ಇದರ ಕಾಲರ್ ಮತ್ತು ಸ್ಲೀವ್ ನಲ್ಲಿ ಬಟನ್ ಗಳು ಇರುತ್ತವೆ. ಈ ಡ್ರೆಸ್ ನೊಂದಿಗೆ ಡಾರ್ಕ್ ಅಥವಾ ಕಾಂಟ್ರಾಸ್ಟ್ ಬೆಲ್ಟ್ ಈ ಡ್ರೆಸ್ ನ್ನು ಆಕರ್ಷಕವಾಗಿಸುತ್ತದೆ. ಸಫಾರಿ ಡಿಸೈನ್ ನಲ್ಲಿ ಚೇನ್ ಬೆಲ್ಟ್ ಇರುತ್ತದೆ. ಮುಂದೆ 4 ಜೇಬುಗಳು ಮತ್ತು ಕಫ್ ನಲ್ಲಿ ದೊಡ್ಡ ಸೈಜಿನ ಬಟನ್ ಇರುತ್ತದೆ. ಇದು ಬೇಬಿ ಪಿಂಕ್, ಕ್ರೀಂ, ಲೆಮನ್ ಇತ್ಯಾದಿ ಲೈಟ್ ಕಲರ್ ಗಳಲ್ಲಿ ಇಷ್ಟಪಡಲಾಗುತ್ತದೆ. ಜಿ ಸ್ಟಾರ್ ಬೆಲ್ಟ್ ಶರ್ಟ್ ಲೈಟ್ ವೇಟ್ ಫ್ಯಾಬ್ರಿಕ್ ನಲ್ಲಿರುತ್ತದೆ. ಇದರಲ್ಲಿ ಮುಂದೆ ಅರ್ಧದವರೆಗೆ ಬಟನ್ ಮತ್ತು ಕೆಳಗೆ ಟ್ವಿನ್ ಜೇಬುಗಳು ಇರುತ್ತವೆ. ಇದಲ್ಲದೆ ಜರ್ಜಿ ಸ್ಟೈಲ್ ನ ಮಲ್ಟಿಕಲರ್ ಮತ್ತು ಪ್ರಿಂಟ್ ನಲ್ಲಿ ಬರುತ್ತದೆ. ಇದರಲ್ಲಿ ಚೇನ್ ಬೆಲ್ಟ್ ಅಳವಡಿಸಲಾಗಿದ್ದು ಕಫ್ ನಲ್ಲಿ ಬಟನ್ ಇರುತ್ತದೆ. ಉದ್ದ ಕಾಲರ್ ನ ಶರ್ಟ್ ನೊಂದಿಗೆ ಬೆಲ್ಟ್ ಬಹಳ ಗ್ಲಾಮರಸ್ ಆಗಿರುತ್ತದೆ. ಉದ್ದ ಜಾಸ್ತಿ ಅಂದರೆ ಥೈಸ್‌ವರೆಗೆ ಇದ್ದರೆ ಅದನ್ನು ಸ್ಕೀನೀ ಜೀನ್ಸ್ ಮತ್ತು ಶೂಸ್ ನೊಂದಿಗೆ ಧರಿಸಿ. ಲೈಕ್ರಾ ಫ್ಯಾಬ್ರಿಕ್ ನಿಂದ ತಯಾರಿಸಿದ ಟೀ ಶರ್ಟ್ ಡ್ರೆಸ್ ಜೀನ್ಸ್ ಅಥವಾ ಲ್ಯಾಂಗಿಂಗ್ಸ್ ನೊಂದಿಗೆ ಪಾರ್ಟಿ ವೇರ್ ನಂತೆ ಧರಿಸಬಹುದು. ವಿಶೇಷತೆಯೆಂದರೆ ಇದು ದೇಹಕ್ಕೆ ಒಳ್ಳೆಯ ಶೇಪ್ ಕೊಟ್ಟು ಪರ್ಸನಾಲಿಟಿಗೆ ಮೆರುಗು ಕೊಡುತ್ತದೆ. ನೀವು ಮೇಕಪ್ ಮತ್ತು ಕಾಸ್ಮೆಟಿಕ್ಸ್ ನೊಂದಿಗೆ ಈ ಸೀಸನ್ ನ ಡ್ರೆಸ್ ಗಳಲ್ಲಿ ಬದಲಾವಣೆ ಬಯಸಿದರೆ ಶರ್ಟ್ ಡ್ರೆಸ್ ನ ಟ್ರೆಂಡ್ ಫಾಲೋ ಮಾಡಬಹುದು. ಈ ಡ್ರೆಸ್ ಧರಿಸಲು ಸುಲಭ ಆರಾಮದಾಯಕ ಆಗಿದ್ದು ದೇಹಕ್ಕೆ ಒಳ್ಳೆಯ ಶೇಪ್ ಮತ್ತು ಲುಕ್ಸ್ ಸಹಾ ಕೊಡುತ್ತದೆ.