ನಿಮ್ಮನ್ನು ಜನ ಹೆಚ್ಚಾಗಿ ಗಮನಿಸಬೇಕೆಂದು ಇಚ್ಛಿಸುತ್ತೀರಾ? ನಿಮ್ಮ ಸಾಮರ್ಥ್ಯದ ಬಗ್ಗೆ ಜನ ವಿಶ್ವಾಸವಿಡಬೇಕೇ? ಹೌದು, ಎಂದಾದರೆ ನೀವು ನಿಮ್ಮ ಲುಕ್ಸ್ ಬಗ್ಗೆ ಗಮನಕೊಡಬೇಕು. ಒಳ್ಳೆಯ ಮೇಕಪ್, ಆಕರ್ಷಕ ಡ್ರೆಸ್ ಮತ್ತು ಫ್ಯಾಷನೆಬಲ್ ಲುಕ್ಸ್ ನಿಮ್ಮದಾಗಿಸಿಕೊಂಡು ಜನರಲ್ಲಿ ನಿಮ್ಮ ಬಗ್ಗೆ ಇರುವ ದೃಷ್ಟಿಯನ್ನು ಬದಲಿಸಬಹುದು. ನಿಮ್ಮನ್ನು ಅಧಿಕ ಸಮರ್ಥರನ್ನಾಗಿ ಹಾಗೂ ವಿಶ್ವಸನೀಯರನ್ನಾಗಿ ಕಾಣುವಂತೆ ಮಾಡಬಹುದು.
ಅಮೆರಿಕಾದಲ್ಲಿ ಮಾಡಲಾದ ಒಂದು ಅಧ್ಯಯನದ ಪ್ರಕಾರ, ಕಾಸ್ಮೆಟಿಕ್ಸ್ ಮಹಿಳೆಯ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಚೆನ್ನಾಗಿ ಅಲಂಕರಿಸಿಕೊಳ್ಳುವ ಮಹಿಳೆಯರನ್ನು ಜನ ಹೆಚ್ಚು ಇಷ್ಟಪಡುತ್ತಾರೆ.
ಹಾರ್ವರ್ಡ್ ಯೂನಿವರ್ಸಿಟಿಯ ಮನೋವೈಜ್ಞಾನಿಕ ಪ್ರೊಫೆಸರ್ ನ್ಯಾನ್ಸಿ ಎಟ್ ಕಾಫ್‌ರ ನೇತೃತ್ವದಲ್ಲಿ ಒಂದು ಅಧ್ಯಯನ ನಡೆಸಲಾಯಿತು. ಅದರಲ್ಲಿ 20 ರಿಂದ 50 ವಯಸ್ಸಿನವರೆಗಿನ 25 ಮಹಿಳೆಯರನ್ನು ಆಯ್ಕೆ ಮಾಡಲಾಯಿತು. ಮೊದಲು ಮೇಕಪ್ ಇಲ್ಲದೆ ಅವರ ಫೋಟೋ ತೆಗೆಯಲಾಯಿತು. ನಂತರ ಬೇರೆ ಬೇರೆ ಮೇಕಪ್ ಮಾಡಿ ನ್ಯಾಚುರಲ್, ಪ್ರೊಫೆಶನಲ್ ಮತ್ತು ಗ್ಲಾಮರಸ್ ಇತ್ಯಾದಿ 3 ರೀತಿಯ ಲುಕ್ಸ್ ನಲ್ಲಿ ಅವರನ್ನು ಸಿದ್ಧಪಡಿಸಿ ಅವರ ಫೋಟೋ ತೆಗೆಯಲಾಯಿತು. ನಂತರ ಆ ಮಹಿಳೆಯರಿಗೆ ಕನ್ನಡಿಯಲ್ಲಿ ನೋಡಿಕೊಳ್ಳಲು ಅನುಮತಿ ನೀಡಲಾಯಿತು.
ನಂತರ 149 ಜನರಿಗೆ (61 ಪುರುಷರನ್ನು ಸೇರಿಸಿ) 250 ಮಿಲಿ ಸೆಕೆಂಡ್ ಅವರ ಫೋಟೋಗಳನ್ನು ತೋರಿಸಲಾಯಿತು. ನಂತರ 117 ಜನರಿಗೆ (30 ಪುರುಷರನ್ನು ಸೇರಿಸಿ) ಅವರಿಗೆ ಇಷ್ಟವಾದಷ್ಟು ಹೊತ್ತು ಫೋಟೋ ನೋಡಲು ಹೇಳಲಾಯಿತು.
ಈ ವ್ಯಕ್ತಿಗಳ ಜಡ್ಜ್ ಮೆಂಟ್ ಆಧಾರದಲ್ಲಿ ನಿರ್ಣಯಿಸಿದ್ದೇನೆಂದರೆ ಸ್ವಲ್ಪ ಹೊತ್ತು ನೋಡಲಿ ಅಥವಾ ಹೆಚ್ಚು ಹೊತ್ತು ನೋಡಲಿ, ಮೇಕಪ್ ಇಲ್ಲದರಿಗೆ ಹೋಲಿಸಿದರೆ ಮೇಕಪ್ ಮಾಡಿಕೊಂಡ ಮಹಿಳೆಯರು ಜನರಿಗೆ ಹೆಚ್ಚು ಆಕರ್ಷಕ ಹಾಗೂ ಸಮರ್ಥರಾಗಿ ಕಂಡುಬಂದರು.
ಹೆಚ್ಚಿದ ಆತ್ಮವಿಶ್ವಾಸ
ಮೇಕಪ್ ಮಾಡಿಕೊಳ್ಳುವುದು ಇತರರ ಮೇಲೆ ಒಳ್ಳೆಯ ಪ್ರಭಾವ ಬೀರುವುದಕ್ಕೆ ಮಾತ್ರವಲ್ಲ, ನಿಮಗೂ ಒಳ್ಳೆಯ ಅನುಭವ ನೀಡಲು ಹಾಗೂ ಆತ್ಮವಿಶ್ವಾಸ ಹೆಚ್ಚಿಸಲು ಅಗತ್ಯವಾಗಿದೆ. ನೀವು ಒಳ್ಳೆಯ ಬಟ್ಟೆ ಧರಿಸಿ, ಚೆನ್ನಾಗಿ ಮೇಕಪ್ ಮಾಡಿಕೊಂಡು ಮನೆಯಿಂದ ಹೊರಟಾಗ ನೋಡುವವರಿಂದ ಒಳ್ಳೆಯ ಕಾಂಪ್ಲಿಮೆಂಟ್ಸ್ ಸಿಗುತ್ತದೆ. ಜನ ಪ್ರಶಂಸಾಭರಿತ ದೃಷ್ಟಿಯಿಂದ ನಿಮ್ಮನ್ನು ನೋಡಿದಾಗ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ನಿಮ್ಮ ಮಹತ್ವ ನಿಮಗೆ ಅನುಭವವಾಗುತ್ತದೆ. ನಿಮ್ಮನ್ನು ನೀವು ಪ್ರೂವ್‌ಮಾಡಿಕೊಳ್ಳುವ ಪ್ರಯಾಸದಲ್ಲಿ ತೊಡಗುತ್ತೀರಿ. ಹೀಗೆ ಒಂದು ಸಕಾರಾತ್ಮಕ ಬದಲಾವಣೆ ನಿಮ್ಮಲ್ಲಿ ಬಂದು ಇಡೀ ವ್ಯಕ್ತಿತ್ವ ಕಾಂತಿಯುತವಾಗುತ್ತದೆ.
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ 52 ಸಾವಿರ ಜನರ ಮೇಲೆ ಒಂದು ಅಧ್ಯಯನ ನಡೆಸಿದಾಗ ಆಕರ್ಷಕ ಜನರು ಹೆಚ್ಚು ಬುದ್ಧಿವಂತರೆಂದು ತಿಳಿಯಲಾಯಿತು. ಇದರಿಂದ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಅವರು ಜೀವನದಲ್ಲಿ ಹೆಚ್ಚು ಸಫಲರಾಗುತ್ತಾರೆ. ಚಿಕ್ಕಂದಿನಲ್ಲಿ ಹೇಳಿಕೊಳ್ಳುವಂತಹ ಸೌಂದರ್ಯವಿಲ್ಲದಿದ್ದರು ದೊಡ್ಡವರಾದ ನಂತರ ಫ್ಯಾಷನೆಬಲ್ ಲುಕ್ಸ್, ಸ್ಟೈಲ್ ಮತ್ತು ಆತ್ಮವಿಶ್ವಾಸದ ಮೂಲಕ ತಮ್ಮದೇ ಪ್ರತ್ಯೇಕ ಐಡೆಂಟಿಟಿ ಪಡೆದುಕೊಂಡಿದ್ದಾರೆ.
1990ರ ದಶಕದ ಟಾಪ್ 3 ಪ್ರಸಿದ್ಧ ಮಾಡೆಲ್ ಗಳಲ್ಲಿ ಒಬ್ಬರಾದ ಸೂಪರ್ ಮಾಡೆಲ್ ನಾಓಮಿ ಕ್ಯಾಂಪ್‌ಬೆಲ್ ಲಂಡನ್ನಿನ ಒಂದು ವರ್ಕಿಂಗ್ ಕ್ಲಾಸ್ ಕುಟುಂಬದಲ್ಲಿ ಹುಟ್ಟಿದರು. ಶ್ಯಾಮಲ ವರ್ಣದ ನಾಓಮಿ 1988ರಲ್ಲಿ ಎಂತಹ ಬ್ಲ್ಯಾಕ್ ಮಾಡೆಲ್ ಆದರೆಂದರೆ ಅವರಿಗೆ ಫ್ಯಾಷನ್ ಮ್ಯಾಗಝೀನ್ `ಫ್ರೆಂಚ್ ವೇಗ್'ನ ಕವರ್ ಪೇಜ್ ನಲ್ಲಿ ಸ್ಥಾನ ದೊರೆಯಿತು. ಅವರ ಆತ್ಮವಿಶ್ವಾಸ ಮತ್ತು ಫ್ಯಾಷನ್ ಸೆನ್ಸ್ ಅವರನ್ನು ಸಫಲತೆಯ ಉನ್ನತಿಗೇರಿಸಿತು. ಇಷ್ಟೇ ಅಲ್ಲ, ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ಅವರು ಫ್ಯಾಷನ್ ಇಂಡಸ್ಟ್ರಿಯಲ್ಲಿ ಯಾವಾಗಲೂ ಬಣ್ಣ ಹಾಗೂ ಜಾತಿಯ ಬಗೆಗಿನ ಭೇದಭಾವದ ವಿರುದ್ಧ ದನಿಯೆತ್ತುತ್ತಿರುತ್ತಾರೆ.